ASKA Flying Car: ಪರವಾನಗಿ ಪಡೆಯಿತು ವಿಶ್ವದ ಮೊದಲ ಹಾರುವ ಕಾರು
ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳಂತೆ ಹಾರುವ ಕಾರುಗಳು ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿವೆ. ಈ ಕನಸು ನನಸಾಗುವುದು ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಜನರನ್ನು ಕಾಡುತ್ತಿದೆ. ಆದರೆ ಸದ್ಯಕ್ಕೆ ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಯಶಸ್ವಿಯಾಗಿ ನಿರ್ಮಿಸಿ ಮೊದಲ ಪರೀಕ್ಷೆಯನ್ನು ಕೂಡ ಮುಗಿಸಿವೆ.
ಇನ್ನು ಕೆಲವೇ ವರ್ಷಗಳಲ್ಲಿ ಗಾಳಿಯಲ್ಲಿ ಒಂದನ್ನಾದರೂ ನೋಡುವುದರಲ್ಲಿ ಆಶ್ಚರ್ಯವೇನಿಲ್ಲ. ಇದೀಗ ಅಸ್ಕಾ A5 (ASKA Flying Car) ಎಂಬ ಏರೋಡೈನಾಮಿಕ್, ನಾಲ್ಕು-ಆಸನಗಳ ಡ್ರೈವ್ ಮತ್ತು ಫ್ಲೈ eVTOL (ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್) ವಾಹನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಾಸ್ತವವಾಗಿ, ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಲು ಪರವಾನಗಿ ಪಡೆದ ವಿಶ್ವದ ಮೊದಲ ಹಾರುವ ಕಾರು ಎಂದು ಇದೀಗ ವರದಿಯಾಗಿದೆ.

ಇದು 250 ಮೈಲುಗಳು ಅಥವಾ 400 ಕ್ಕೂ ಹೆಚ್ಚು ಕಿ.ಮೀ. ವರೆಗಿನ ಹಾರಾಟದ ವ್ಯಾಪ್ತಿಯನ್ನು ಹೊಂದಿದೆ. ಈ ಹಾರುವ ಕಾರು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ನಿಂದ ದೃಢೀಕರಣದ ಪ್ರಮಾಣಪತ್ರ ಮತ್ತು ವಿಶೇಷ ಏರ್‌ವರ್ತಿನೆಸ್ ಪ್ರಮಾಣೀಕರಣವನ್ನು ಸಹ ಪಡೆದುಕೊಂಡಿದೆ. ಈ ಪ್ರಮಾಣೀಕರಣವು ಈ ವಿಮಾನದ ವಾಣಿಜ್ಯ ಮಾರಾಟವನ್ನು ಅನುಮತಿಸದಿದ್ದರೂ, ಪರೀಕ್ಷೆ ಮತ್ತು ಅಭಿವೃದ್ಧಿಗಾಗಿ ಮೂಲಮಾದರಿಯನ್ನು ಹಾರಿಸಲು ಅನುಮತಿ ನೀಡಿದೆ.
ಒಟ್ಟಾರೆ ಈ ಫ್ಲೈಯಿಂಗ್ ಕಾರಿನ ಮಾರಾಟ ಹೊರತುಪಡಿಸಿ ಮೂಲ ಮಾದರಿಯನ್ನು ಹಾರಿಸುವುದು ಖಚಿತವಾಗಿದೆ. ಇದಕ್ಕಾಗಿ ಯುನೈಟೆಡ್ ಸ್ಟೇಟ್ಸ್ (US) ಮೋಟಾರು ವಾಹನಗಳ ಇಲಾಖೆ (DMV) ಯಿಂದ ಅಧಿಕಾರವನ್ನು ನೀಡಲಾಗಿದೆ. DMV ನಂಬರ್ ಪ್ಲೇಟ್‌ನೊಂದಿಗೆ ಸಿಲಿಕಾನ್ ವ್ಯಾಲಿಯ ಸುತ್ತ 480 ಕಿ.ಮೀ.ಗೂ ಹೆಚ್ಚು ರಸ್ತೆ ಪರೀಕ್ಷೆಯನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿರುವುದಾಗಿ ಕಂಪನಿ ಹೇಳಿದೆ.

ಕ್ಯಾಲಿಫೋರ್ನಿಯಾದ ಸ್ಥಳೀಯ ರಸ್ತೆಗಳಲ್ಲಿ ಡ್ರೈವಿಂಗ್ ಟೆಸ್ಟ್‌ಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ನಮ್ಮದು. ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಡೆವಲಪರ್ ಆಗಿ ರಸ್ತೆಯ ಮತ್ತು ಸುರಕ್ಷತೆಗೆ ಒತ್ತು ನೀಡುವ ಇವಿಟಿಒಎಲ್ ಅನ್ನು ಅಭಿವೃದ್ಧಿಪಡಿಸುವ ನಮ್ಮ ಪ್ರಯತ್ನಗಳನ್ನು ಮೌಲ್ಯೀಕರಿಸುತ್ತದೆ" ಎಂದು ನ್ಯೂ ಅಟ್ಲಾಸ್‌ನ ಕಂಪನಿಯ ಅಧ್ಯಕ್ಷ ಮತ್ತು ಸಿಒಒ ಮಕಿ ಕಪ್ಲಿನ್ಸ್ಕಿ ಹೇಳಿದ್ದಾರೆ.
ಕಂಪನಿಯು ಈಗಾಗಲೇ 60 ಕ್ಕೂ ಹೆಚ್ಚು ಪ್ರೀ- ಆರ್ಡರ್‌ಗಳ ಮೂಲಕ $50 ಮಿಲಿಯನ್ ಸ್ವೀಕರಿಸಿದೆ. ಕಂಪನಿಯ ವೆಬ್‌ಸೈಟ್ ಪ್ರಕಾರ, A5 "2026 ವಾಣಿಜ್ಯೀಕರಣದ ಗುರಿಯನ್ನು ಹೊಂದಿದೆ, ಪ್ರಮಾಣೀಕರಣ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ರಸ್ತೆಯಲ್ಲಿ ಡ್ರೈವ್ ಮೋಡ್‌ನಲ್ಲಿ ಇರುವಾಗ, SUV ಗಾತ್ರಕ್ಕೆ ಪರಿವರ್ತನೆಗೊಂಡು ಸಂಚರಿಸುತ್ತದೆ. ವಾಸ್ತವವಾಗಿ, ಇದು SUV ಯಂತೆಯೇ ಹೆಚ್ಚಿನ ಚಾಲನಾ ಸ್ಥಾನವನ್ನು ಸಹ ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

ಚಾಲಕನಿಗೆ ಉತ್ತಮ ಗೋಚರತೆಯನ್ನು ಹೊಂದಲು ಅನುವು ಮಾಡಿಕೊಡುತ್ತದೆ, ಮತ್ತು ಶಾರ್ಟ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (STOL) ಮೋಡ್‌ಗೆ ಸಾಕಷ್ಟು ಗ್ರೌಂಡ್ ಕ್ಲಿಯರೆನ್ಸ್ ಕೂಡ ನೀಡಲಾಗಿದೆ. ಇದೊಂದೆ ಅಲ್ಲದೇ ವಿಶ್ವದಾದ್ಯಂತ ಹಲವು ಹಾರುವ ಕಾರು ಕಂಪನಿಗಳು ಈಗಾಗಲೇ ಯಶಸ್ವಿಯಾಗಿ ತಮ್ಮ ಪರೀಕ್ಷೆಗಳನ್ನು ಮುಗಿಸಿವೆ. ಅವು ಕೂಡ ಮಾರುಕಟ್ಟೆಗೆ ಇಳಿಯುವ ದಿನಗಳು ದೂರವೇನಿಲ್ಲ.
ಇತ್ತೀಚೆಗೆ, ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಎಕ್ಸ್‌ಪೆಂಗ್ ತನ್ನ ಎಲೆಕ್ಟ್ರಿಕ್ ಹಾರುವ ಕಾರಿನ ಮೊದಲ ಸಾರ್ವಜನಿಕ ಪರೀಕ್ಷಾ ಹಾರಾಟವನ್ನು ಮುಗಿಸಿದೆ. 2030 ರ ವೇಳೆಗೆ ಲಂಡನ್ ಮತ್ತು 2035 ರ ವೇಳೆಗೆ ಅಮೆರಿಕಾದಲ್ಲಿ ಎಲ್ಲಾ ಡೀಸೆಲ್ ಕಾರುಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತದೆ, ಇದಕ್ಕೆ ಪರ್ಯಾಯವಾಗಿ ಶೇ 30 ರಷ್ಟು ಹಾರುವ ಕಾರುಗಳು ಬರಲಿವೆ ಎಂದು ಹೇಳಲಾಗುತ್ತಿದೆ.

ಇದನ್ನು ಕಾರ್ಯರೂಪಕ್ಕೆ ತರಲು ವಿಶ್ವದ ಜನಪ್ರಿಯ ಕಂಪನಿಗಳಿಂದ ಹಿಡಿದು ಸ್ಟಾರ್ಟ್ ಅಪ್‌ಗಳವರೆಗೆ ಹಲವು ಕಂಪನಿಗಳು ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಎಲ್ಲ ಅಂದುಕೊಂಡಂತೆ ಆದರೆ ಇನ್ನು ನಾಲ್ಕು ವರ್ಷಗಳಲ್ಲಿ ಹಾರುವ ಕಾರುಗಳನ್ನು ರಸ್ತೆಗಳಲ್ಲಿ ನೋಡಬಹುದಾಗಿದೆ. ಆದ್ರೆ ಇವುಗಳ ಬೆಲೆ ಕೂಡ ಸಾಮಾನ್ಯ ಕಾರುಗಳಿಂತ ನಾಲ್ಕೈದು ಪಟ್ಟು ಹೆಚ್ಚಾಗಿರುವುದರಲ್ಲಿ ಅನುಮಾನವಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications