ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಹಿಮಾಚಲ ಪ್ರದೇಶದಲ್ಲಿರುವ ಬಹುನಿರೀಕ್ಷಿತ ಅಟಲ್ ಸುರಂಗವನ್ನು ಅಕ್ಟೋಬರ್ 3ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಉದ್ಘಾಟನೆಯಾದ ಕೇವಲ ಮೂರು ದಿನಗಳಲ್ಲಿ ಈ ಅಟಲ್ ಸುರಂಗದಲ್ಲಿ ಮೂರು ಅಪಘಾತಗಳು ಸಂಭವಿಸಿವೆ.

ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಅಟಲ್ ಸುರಂಗದಲ್ಲಿ ಸಂಭವಿಸಿದ ಮೂರು ಅಪಘಾತಗಳಲ್ಲಿಯೂ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ. ಚಾಲಕರು ಯದ್ವಾ ತದ್ವಾ ವಾಹನ ಚಾಲನೆ ಮಾಡಿದ ಕಾರಣಕ್ಕೆ ಈ ಮೂರು ಅಪಘಾತಗಳು ಸಂಭವಿಸಿವೆ ಎಂದು ವರದಿಗಳು ತಿಳಿಸಿವೆ. ಅಟಲ್ ಸುರಂಗದೊಳಗೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಅಪಘಾತಗಳ ದೃಶ್ಯಗಳು ಸೆರೆಯಾಗಿವೆ.

ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಅಟಲ್ ಸುರಂಗದೊಳಗೆ ವಾಹನಗಳು ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ಮಾತ್ರ ಚಲಿಸುವಂತೆ ನಿರ್ಬಂಧ ಹೇರಲಾಗಿದೆ. ಆದರೆ ವಾಹನ ಸವಾರರು ಈ ವೇಗದ ಮಿತಿಯನ್ನು ಕಡೆಗಣಿಸಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಈ ಸುರಂಗದಲ್ಲಿ ಸಂಚರಿಸುವ ಕೆಲವರು ವಾಹನಗಳನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಹ ಬೆಳಕಿಗೆ ಬಂದಿದೆ. ಸುರಂಗದೊಳಗೆ ವೇಗವಾಗಿ ಚಲಿಸುತ್ತಿದ್ದ ವಾಹನವು ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಈ ಸುರಂಗದೊಳಗೆ ಓವರ್ ಟೇಕ್ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಈ ಘಟನೆಯಲ್ಲಿ ಚಾಲಕನು ನಿಷೇಧವನ್ನು ಉಲ್ಲಂಘಿಸಿ ವೇಗವಾಗಿ ಚಲಿಸಿ ಓವರ್ ಟೇಕ್ ಮಾಡಿದ್ದಾನೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಈ ಅಪಘಾತಗಳಿಂದಾಗಿ ಅಧಿಕಾರಿಗಳು ಅಟಲ್ ಸುರಂಗದಲ್ಲಿ ಕೆಲ ಕಾಲದವರೆಗೆ ವಾಹನಗಳ ಸಂಚಾರವನ್ನು ನಿಲ್ಲಿಸಿದ್ದರು ಎಂದು ವರದಿಯಾಗಿದೆ.

ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಇದು ಮಾತ್ರವಲ್ಲದೇ ಅಟಲ್ ಸುರಂಗದಲ್ಲಿ ಮತ್ತೊಂದು ಸಮಸ್ಯೆ ಉದ್ಭವಿಸುತ್ತಿದೆ. ಕೆಲವರು ಅಟಲ್ ಸುರಂಗದೊಳಗೆ ವಾಹನಗಳ ಜೊತೆಗೆ ಓಡುತ್ತಿದ್ದಾರೆಂದು ಹೇಳಲಾಗಿದೆ. ಈ ಸುರಂಗದೊಳಗೆ ವಾಹನಗಳೊಂದಿಗೆ ಓಡುವುದು ಕಾನೂನುಬಾಹಿರವಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಈ ರೀತಿಯ ಘಟನೆಗಳು ಅಧಿಕಾರಿಗಳಲ್ಲಿ ಆತಂಕವನ್ನುಂಟು ಮಾಡಿವೆ. ಈ ಕಾರಣಕ್ಕೆ ಸುರಂಗದೊಳಗಿನ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಉದ್ಘಾಟನೆಯಾದ ಮೂರೇ ದಿನಗಳಲ್ಲಿ ಮೂರು ಅಪಘಾತಗಳಿಗೆ ಸಾಕ್ಷಿಯಾದ ಅಟಲ್ ಸುರಂಗ

ಅಟಲ್ ಸುರಂಗದಲ್ಲಿ ಸಾಗುವ ವಾಹನ ಸವಾರರಿಗೆ ವೇಗ ನಿಯಂತ್ರಣವನ್ನು ಪಾಲಿಸುವುದರ ಜೊತೆಗೆ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಅಟಲ್ ಸುರಂಗವು ಮಿಲಿಟರಿ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದು ಗಮನಾರ್ಹವಾಗಿದೆ.

Most Read Articles

Kannada
English summary
Atal tunnel witnesses three accidents in three days. Read in Kannada.
Story first published: Tuesday, October 6, 2020, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X