ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಜಾರಿಗೊಳಿಸಲಾದ ಲಾಕ್‌ಡೌನ್ ಜನ ಜೀವನದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರಗಳ ಮೇಲೆ ನಿಷೇಧ ಹೇರಲಾಯಿತು.

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಇದರಿಂದಾಗಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಸೇರಿದಂತೆ ಹಲವರು ತಮ್ಮ ದಿನ ನಿತ್ಯದ ಆದಾಯವನ್ನು ಕಳೆದುಕೊಳ್ಳುವಂತಾಯಿತು. ಈಗ ಲಾಕ್‌ಡೌನ್ ಸಡಿಲಿಸಿದ್ದು, ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೆ ಸರ್ಕಾರವು ಅನುಮತಿಯನ್ನು ನೀಡಿದೆ. ಆದರೆ ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದಾಗಿ ಜನರು ಆಟೋ ಹಾಗೂ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದು, ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ.

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಇದರಿಂದಾಗಿ ಆಟೋ, ಟ್ಯಾಕ್ಸಿ ಚಾಲಕರ ಬದುಕು ಅತಂತ್ರವಾಗಿದೆ. ಹಲವರು ತಾತ್ಕಾಲಿಕವಾಗಿ ಆಟೋ ಹಾಗೂ ಟ್ಯಾಕ್ಸಿಗಳ ಚಾಲನೆಯನ್ನು ನಿಲ್ಲಿಸಿ ಇತರ ಉದ್ಯೋಗಗಳತ್ತ ಮುಖ ಮಾಡಿದ್ದಾರೆ. ಇನ್ನೂ ಕೆಲವರು ಆಟೋ ಹಾಗೂ ಟ್ಯಾಕ್ಸಿಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಆಟೋ ಹಾಗೂ ಟ್ಯಾಕ್ಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವರದಿಗಳಾಗಿವೆ. ಪ್ರಯಾಣಿಕರ ಕೊರತೆಯಿಂದಾಗಿ ಭೋಪಾಲ್‌ನಲ್ಲಿ ಸುಮಾರು 4,000ಕ್ಕೂ ಹೆಚ್ಚು ಆಟೋಗಳನ್ನು ಮಾರಾಟ ಮಾಡಲಾಗಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಭೋಪಾಲ್ ಆರ್‌ಟಿಒ ಕಚೇರಿಗಳಲ್ಲಿ ಸುಮಾರು 10,00ಕ್ಕೂ ಹೆಚ್ಚು ಆಟೋಗಳನ್ನು ನೋಂದಾಯಿಸಲಾಗಿದೆ. ಈ ಪೈಕಿ 4,000 ಆಟೋಗಳನ್ನು ಮಾರಾಟ ಮಾಡಲಾಗಿದೆ. ಆಟೋ ಡ್ರೈವರ್ ಗಳು ಎಷ್ಟು ಸಂಕಷ್ಟಕ್ಕೀಡಾಗಿದ್ದಾರೆ ಎಂಬುದು ಈ ಸುದ್ದಿಯಿಂದ ಸ್ಪಷ್ಟವಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಕ್ಷಯ್ ಜೈನ್ ಎಂಬ ಆಟೋ ಚಾಲಕ ರೈಲು ಹಾಗೂ ವಿಮಾನ ಸಂಚಾರಗಳು ಇಲ್ಲದೇ ಇರುವುದು ಹಾಗೂ ಭಾನುವಾರಗಳಂದು ಜಾರಿಗೊಳಿಸಲಾಗುತ್ತಿರುವ ಲಾಕ್‌ಡೌನ್ ನಮ್ಮ ಜೀವನವನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದ್ದಾರೆ.

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಭೋಪಾಲ್‌ನಲ್ಲಿರುವ ಹಬೀಬ್‌ಗಂಜ್ ರೈಲ್ವೆ ನಿಲ್ದಾಣದಲ್ಲಿ ಕೇವಲ 20%ನಷ್ಟು ಪ್ರಯಾಣಿಕರು ಮಾತ್ರ ಸಂಚರಿಸುತ್ತಿದ್ದಾರೆ. ಆಟೋಗಳ ಸಂಚಾರವು ಸಹ 50%ನಷ್ಟು ಕಡಿಮೆಯಾಗಿದೆ. ಲಾಕ್‌ಡೌನ್ ಗೂ ಮುನ್ನ ಹಬೀಬಗಂಜ್ ರೈಲ್ವೆ ನಿಲ್ದಾಣದಲ್ಲಿ 150ಕ್ಕೂ ಹೆಚ್ಚು ಆಟೋಗಳಿದ್ದವು. ಈಗ ಇವುಗಳ ಸಂಖ್ಯೆ 80ಕ್ಕೆ ಇಳಿದಿದೆ ಎಂದು ಅಕ್ಷಯ್ ಜೈನ್ ಹೇಳಿದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಮತ್ತೊಬ್ಬ ಆಟೋ ಚಾಲಕ ರಹಮಾನ್ ಎಂಬುವವರು ಮಾತನಾಡಿ, ಆಟೋ ಚಾಲಕರಿಗೆ ಯಾವುದೇ ಆದಾಯವಿಲ್ಲದ ಕಾರಣಕ್ಕೆ ಆಟೋಗಳನ್ನು ಮಾರಾಟ ಮಾಡಿ ತರಕಾರಿ ಮಾರಾಟ ಸೇರಿದಂತೆ ಇನ್ನಿತರ ಉದ್ಯೋಗಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಟ್ಯಾಕ್ಸಿ ಚಾಲಕ ಅರ್ಜುನ್ ಸಿಂಗ್ ಎಂಬುವವರು ಮಾತನಾಡಿ ಲಾಕ್‌ಡೌನ್ ಗೂ ಮೊದಲು, ಭೋಪಾಲ್ ವಿಮಾನ ನಿಲ್ದಾಣಕ್ಕೆ ತೆರಳುವ ಗ್ರಾಹಕರಿಂದ ಬೇಡಿಕೆ ಹೆಚ್ಚಾದ ಕಾರಣ ನಾನು ಮತ್ತೊಂದು ಟ್ಯಾಕ್ಸಿ ಖರೀದಿಸಿದೆ. ಈಗ ಪರಿಸ್ಥಿತಿ ಬದಲಾಗಿದ್ದು, ಕಳೆದ ವಾರ ಒಂದು ಟ್ಯಾಕ್ಸಿಯನ್ನು ಮಾರಾಟ ಮಾಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾನು ಇರುವ ಟ್ಯಾಕ್ಸಿಯನ್ನು ಮಾರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಜನರು ಆಟೋ ಹಾಗೂ ಟ್ಯಾಕ್ಸಿಗಳ ಬಳಕೆಯನ್ನು ಕಡಿಮೆಗೊಳಿಸುವುದರಿಂದ ಇವುಗಳನ್ನೇ ನಂಬಿಕೊಂಡಿದ್ದವರ ಜೀವನ ಸಂಕಷ್ಟಕ್ಕೀಡಾಗಿದೆ. ಆದರೆ ಪ್ರಯಾಣಿಕರು ಸ್ವಂತ ವಾಹನಗಳಿಗೆ ಆದ್ಯತೆ ನೀಡುತ್ತಿರುವುದರಿಂದ ವಾಹನಗಳ ಮಾರಾಟ ಸಂಖ್ಯೆ ಹೆಚ್ಚಾಗಿದೆ.

ಕರೋನಾ ವೈರಸ್ ತಂದಿಟ್ಟ ಸಂಕಷ್ಟ, ಆಟೋಗಳ ಮಾರಾಟಕ್ಕೆ ಮುಂದಾದ ಆಟೋ ಚಾಲಕರು

ಮುಂಬರುವ ದಿನಗಳಲ್ಲಿ ಕಾರು ಮಾರಾಟ ಪ್ರಮಾಣವು ಹೆಚ್ಚಾಗುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ದೀಪಾವಳಿ ಹಬ್ಬದ ವೇಳೆಗೆ ಕಾರುಗಳ ಮಾರಾಟವು ಹೆಚ್ಚಾಗುವ ಸಾಧ್ಯತೆಯಿದೆ. ದ್ವಿಚಕ್ರ ವಾಹನಗಳ ಮಾರಾಟವೂ ಏರಿಕೆಯಾಗಬಹುದೆಂದು ಆಟೋಮೊಬೈಲ್ ಉದ್ಯಮದ ತಜ್ಞರು ಹೇಳಿದ್ದಾರೆ.

ಸೂಚನೆ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Auto drivers selling autos due to Covid 19 lockdown. Read in Kannada.
Story first published: Monday, August 31, 2020, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X