ವಿಶ್ವದ ಅತಿದೊಡ್ಡ ಕಾರು ಮಾಲ್ ಯಾವುದು? ಎಲ್ಲಿದೆ?
ವಿಶ್ವದ ಅತಿದೊಡ್ಡ ಶಾಪಿಂಗ್ ಮಾಲ್‌ಗಳ ಬಗ್ಗೆ ನಿಮಗೆ ಮಾಹಿತಿಯಿರಬಹುದು. ಆದರೆ ಆಟೋ ರಂಗದಲ್ಲಿ ಗಮನಾರ್ಹವಾಗಿರುವ ವಿಶ್ವದ ಅತಿದೊಡ್ಡ ಆಟೋ ಮಾಲ್ ಯಾವುದು? ಎಲ್ಲಿದೆ? ಎಂಬ ಬಗ್ಗೆ ಮಾಹಿತಿಯಿದೆಯೇ?
ಹೌದು, 'ಆಟೋಪಿಯಾ ಯುರೋಪಿಯಾ' (Autopia Europia) ವಿಶ್ವದ ಅತಿದೊಡ್ಡ ಕಾರು ಮಾಲ್ ಆಗಿದೆ. ಹೆಸರಲ್ಲೇ ಸೂಚಿಸಿರುವುವಂತೆಯೇ ಇಲ್ಲಿ ಅತ್ಯಾಧುನಿಕ ಕಾರುಗಳೇ ತುಂಬಿಕೊಂಡಿದೆ. ಟರ್ಕಿಯ ಇಸ್ತಾಂಬುಲ್ ಎಂಬಲ್ಲಿ ಸ್ಥಿತಗೊಂಡಿರುವ ಪ್ರಸ್ತುತ ಕಾರು ಮಾಲ್ ಈಗಲೂ ನಿರ್ಮಾಣ ಹಂತದಲ್ಲಿದೆ.
ಹಾಗಿದ್ದರೆ ವಿಶ್ವದ ಅತಿದೊಡ್ಡ ಕಾರು ಮಾಲ್ ವಿನ್ಯಾಸ ಹಾಗೂ ವ್ಯಾಪ್ತಿ ಬಗ್ಗೆ ಹೆಚ್ಚು ಮಾಹಿತಿ ಪಡೆಯೋಣವೇ...

ವಿಶ್ವದ ಅತಿದೊಡ್ಡ ಕಾರು ಮಾಲ್ ನಿಮಗಾಗಿ ಡ್ರೈವ್ ಸ್ಪಾರ್ಕ್ ಪ್ರಸ್ತುತಪಡಿಸುತ್ತಿದ್ದು, ನೋಡಿ ಆನಂದಿಸಿರಿ...

ಒಟ್ಟು ಐದು ಮಹಡಿ ಹೊಂದಿರುವ ಈ ಕಾರು ಮಾಲ್ 216,000 ಸ್ಕ್ವೇರ್ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

ಇಲ್ಲಿ ವಿಶೇಷತೆ ಏನೆಂದರೆ ಈ ಐದು ಮಾಲ್‌ಗಳ ಪೈಕಿ ಎರಡು ಶೋ ರೂಂಗಳು ಭೂಮಿಯ ಕೆಳಭಾಗದಲ್ಲಿದೆ. ಈ ಪ್ರದೇಶ 30,000 ಸ್ಕ್ವೇರ್ ಮೀಟರ್ ವ್ಯಾಪ್ತಿಯನ್ನು ಹೊಂದಿದೆ.

ಹೊಸ ಕಾರಿನೊಂದಿಗೆ ಬಳಕೆಯಾದ ಕಾರಿನ ಪ್ರದರ್ಶನವು ಇಲ್ಲಿ ಲಭ್ಯ. ಒಟ್ಟು 56 ವಿಭಾಗಗಳಿದ್ದು, 48 ಖಾಸಗಿ ಕಾರು ಸರ್ವೀಸ್ ಸ್ಟೇಷನ್ ಹಾಗೂ 24 ಬ್ಯಾಂಕ್ ಸೇವೆಗಳಿವೆ.

ಸಹಜವಾಗಿಯೇ ಕಾರು ವಿಮಾ ಕಂಪನಿಗಳ ಸೌಲಭ್ಯ ಇಲ್ಲಿ ಲಭ್ಯವಿರುತ್ತದೆ. 74 ವ್ಯಾಪಾರ ಕಂಪನಿಗಳ ಜತೆಗೆ 42 ವಿಮಾ ಕಂಪನಿಗಳಿವೆ.

ಇತರ ಶೋ ರೂಂಗಳಿಗಿಂತಲೂ ಭಿನ್ನವಾಗಿರುವ ಆಟೋಪಿಯಾ ಯುರೋಪಿಯಾ ಕಾರ್ ಮಾಲ್‌ನ ಸುತ್ತಲೂ ಕಾರು ಡ್ರೈವಿಂಗ್ ಮಾಡಬಹುದಾಗಿದೆ. ಒಟ್ಟು ಏಳು ಕೀ.ಮೀ. ನಡೆದಾಡುವ ಪ್ರದೇಶವನ್ನು ಇದು ಹೊಂದಿದೆ.

ವರ್ಷಂಪ್ರತಿ 60 ಲಕ್ಷ ಗ್ರಾಹಕರು ಕಾರು ಮಾಲ್‌ಗೆ ಭೇಟಿ ಕೊಡುವುದಾಗಿ ಅಂದಾಜಿಸಲಾಗಿತ್ತಿದ್ದು, 900 ಕಾರುಗಳಿಗೆ ವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಶೋ ರೂಂ ಆರಂಭವಾದ ಬಳಿಕ ಇಲ್ಲಿ 200 ಆಟೋ ಗ್ಯಾಲರಿ, 443 ಕಾರು ಬ್ರಾಂಡ್‌ಗಳು ಹಾಗೂ 2,526 ವಿವಿಧ ತರಹದ ಕಾರುಗಳ ಪ್ರದರ್ಶನವಾಗಲಿದೆ.

ಲಾಸ್ಟ್ ಬಟ್ ಲೀಸ್ಟ್ ಅನ್ನುವಂತೆಯೇ ಆಟೋಪಿಯಾ ಯುರೋಪಿಯಾ ಮೇಲ್ಭಾಗದಲ್ಲಿ ರೇಸ್ ಟ್ರ್ಯಾಕ್ ಹೊಂದಿದೆ. ಇದರಲ್ಲಿ ಟೆಸ್ಟ್ ಡ್ರೈವಿಂಗ್ ಸೌಲಭ್ಯ ಕೂಡಾ ಲಭ್ಯವಿರುತ್ತದೆ.

ಆಟೋಪಿಯಾ ಯುರೋಪಿಯಾ ಹೆಚ್ಚಿನ ಚಿತ್ರಗಳಿಗಾಗಿ ಫೋಟೊ ಫೀಚರ್ ತಿರುವುತ್ತಾ ಮುಂದಕ್ಕೆ ಸಾಗಿರಿ...















Click it and Unblock the Notifications








