ಅಮೆರಿಕದಲ್ಲಿ ಸೇತುವೆಗೆ ಹಡಗು ಡಿಕ್ಕಿ: ಜೀವ ಹಾನಿ ತಪ್ಪಿಸಿದ ಭಾರತೀಯ ಸಿಬ್ಬಂದಿಗಳು
ಸಾವಿರಾರು ಟನ್ ತೂಕದ ಸರಕು ಸಾಮಗ್ರಿಗಳನ್ನು ಹೊತ್ತ ಬೃಹತ್ ಗಾತ್ರದ ಹಡಗು (ship) ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಸೇತುವೆಗೆ (Bridge) ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಸೇತುವ ಕುಸಿದು ಬಿದ್ದ ದುರಂತ ಘಟನೆ ಸಂಭವಿಸಿದೆ. ಈ ಹಡಗಿನಲ್ಲಿ 22 ಭಾರತೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ.
ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆದ ಘಟನೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಈ ಹಡಗಿನ ಮಾಲೀಕರು ಫೆಡರಲ್ ಮತ್ತು ರಾಜ್ಯ ಸರ್ಕಾರದೊಂದಿಗೆ ಸಹಕರಿಸುವುದಾಗಿ ಹೇಳಿಕೊಂಡಿದ್ದಾರೆ. ಸಿಂಗಾಪುರದ ಕಂಟೈನರ್ ಹಡಗಿನಲ್ಲಿದ್ದ ಎಲ್ಲಾ 22 ಸಿಬ್ಬಂದಿ ಭಾರತೀಯರು ಎಂದು ಹಡಗು ನಿರ್ವಹಣಾ ಕಂಪನಿ ಸಿನರ್ಜಿ ಮರೈನ್ ಗ್ರೂಪ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ವರದಿಗಳ ಪ್ರಕಾರ, ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಡಾಲಿ ಹೆಸರಿನ ಈ ಕಂಟೈನರ್ ಹಡಗು ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ಸೋಮವಾರ ಮಧ್ಯರಾತ್ರಿ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರ ನಂತರ ಹಡಗು ನೀರಿನಲ್ಲಿ ಮುಳುಗಿ ಹೋಗಿದೆ. 47 ವರ್ಷದ ಹಳೆಯ ಬಾಲ್ಟಿಮೋರ್ ಸೇತುವೆ (Baltimore Bridge_ ಸಂಪೂರ್ಣವಾಗಿ ಕುಸಿದು ನದಿಗೆ ಬಿದ್ದಿತು.
ಸುಮಾರು 3 ಕಿಲೋಮೀಟರ್ ಉದ್ದದ ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ 1972 ರಲ್ಲಿ ನಿರ್ಮಾಣವಾದರೆ 1977 ರಲ್ಲಿ ಸಂಚಾರಕ್ಕೆ ತೆರೆಯಲಾಗಿದೆ. ಈ ಸೇತುವೆ ಮೂಲಕ ಪ್ರತಿ ವರ್ಷ ಸರಾಸರಿ 1.1 ಕೋಟಿ ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುತ್ತವೆ. ಈ ಸೇತುವೆಯನ್ನು ಕೀ ಸೇತುವೆ ಎಂದೂ ಕರೆಯಲಾಗುತ್ತಿತ್ತು.

ಅಪಘಾತದ ನಂತರ, ಅಮೆರಿಕದನಲ್ಲಿನ ಭಾರತೀಯ ರಾಯಭಾರ ಕಚೇರಿಯು ತನ್ನ ಸಂತಾಪವನ್ನು ಸೂಚಿಸಿದೆ. ಹಡಗು ಸೇತುವೆಗೆ ಢಿಕ್ಕಿ ಹೊಡೆಯುವ ಮುನ್ನಹಡಗಿನಲ್ಲಿ ಇದ್ದ ಭಾರತೀಯ ಸಿಬ್ಬಂದಿಗಳು ದುರಂತದ ಹಲವರ ಜೀವವನ್ನು ರಕ್ಷಿಸಲು ಹರ ಸಾಹಸವನ್ನು ಮಾಡಿದ್ದಾರೆ. ಉಕ್ಕಿನ ಸೇತುವೆಗೆ ಹಡಗು ಡಿಕ್ಕಿ ಹೊಡೆಯುವ ಮುನ್ನ ಭಾರತೀಯ ಸಿಬ್ಬಂದಿ ಅಮೆರಿಕದ ಸ್ಥಳೀಯ ಆಡಳಿತಕ್ಕೆ ಮೇ ಡೇ ಕರೆ ಕೊಟ್ಟಿತ್ತು.
ಇದರಿಂದ ಸೇತುವೆಯ ಎರಡೂ ಬದಿಯಲ್ಲಿ ವಾಹನ ಸಂಚಾರವನ್ನು ತಡೆ ಹಿಡಿದರು. ಸೇತುವೆಯಲ್ಲಿ ವಾಹನಗಳ ಸಂಚಾರ ಇಲ್ಲವಾಗಿದ್ದ ಕಾರಣ ಹಲವರು ಜೀವ ಕಳೆದುಕೊಳ್ಳುವಂತಹ ದೊಡ್ಡದೊಂದು ಅನಾಹುತ ತಪ್ಪಿತು. ಹಡಗು ಸೇತುವೆಗೆ ಡಿಕ್ಕಿ ಹೊಡೆದ ರಭಸಕ್ಕೆ ಇಡೀ ಸೇತುವೆಯೇ ನೀರು ಪಾಲಾಗಿದೆ. ಸೇತುವೆಯ ಒಂದು ಭಾಗ ಹಡಗಿನ ಮೇಲೆ ಬಿದ್ದಿದೆ. ಇದು ಆತಂಕವನ್ನು ಮತ್ತಷ್ಟು ಹಚ್ಚಿಸಿತ್ತು.

ಹಡಗಿನಲ್ಲಿ ಪೈಲಟ್ ಸೇರಿದಂತೆ ಎಲ್ಲಾ 22 ಮಂದಿ ಸಿಬ್ಬಂದಿಯೂ ಭಾರತೀಯರೇ ಇದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಸೇತುವೆ ಬಳಿ ಇದ್ದ 6 ಮಂದಿ ನೀರು ಪಾಲಾದ ಘಟನೆ ನಡೆದಿದೆ. ಹಡಗಿನಲ್ಲಿ ಇದ್ದ ಭಾರತೀಯ ಸಿಬ್ಬಂದಿ ಅಪಘಾತವನ್ನು ಮೊದಲೇ ಊಹಿಸಿ ಸ್ಥಳೀಯ ಆಡಳಿತಕ್ಕೆ ಮೇ ಡೇ ಕರೆ ಕೊಟ್ಟಿದ್ದ ಕಾರಣದಿಂದ ಇಷ್ಟು ದೊಡ್ಡ ಸೇತುವೆ ಧ್ವಂಸವಾದರೂ ಹೆಚ್ಚಿನ ಮಟ್ಟದಲ್ಲಿ ಜೀವ ಹಾನಿ ಸಂಭವಿಸಿಲ್ಲ ಎಂದು ಅಮೆರಿಕದ ಆಡಲಿತ ಮಡಳಿ ವ್ಯಕ್ತಪಡಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications