ಭಾರತದಲ್ಲಿ ಡೀಸೆಲ್ ಚಾಲಿತ ಕಾರು ಸೇರಿದಂತೆ ಎಲ್ಲ ವಾಹನಗಳು ಬ್ಯಾನ್? ಶಿಫಾರಸು
ದೇಶದಲ್ಲಿ ತಾಪಮಾನ ಏರಿಕೆ ಹಾಗೂ ವಾಯುಮಾಲಿನ್ಯವನ್ನು ತಡೆಯಲು ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ವಿವಿಧ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರಮುಖವಾಗಿ ಎಲೆಕ್ಟ್ರಿಕ್ ವಾಹನ ಖರೀದಿಸುವುದಕ್ಕೆ ಸಬ್ಸಿಡಿಯನ್ನು ಘೋಷಿಸಿವೆ. ಕೆಲವೇ ವರ್ಷಗಲ್ಲಿ ನಮ್ಮ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸಂಚರಿಸಿದ್ರು ಅಚ್ಚರಿ ಇಲ್ಲ.
ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುವ ನಗರಗಳಲ್ಲಿ 2027ರ ವೇಳೆಗೆ ಡೀಸೆಲ್ ಚಾಲಿತ ನಾಲ್ಕು ಚಕ್ರದ ವಾಹನಗಳನ್ನು ನಿಷೇಧಿಸಲು ತೈಲ ಸಚಿವಾಲಯ (oil ministry) ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ತರುಣ್ ಕಪೂರ್ ನೇತೃತ್ವದ ಸಮಿತಿಯು 2024ರಿಂದಲೇ ಡೀಸೆಲ್ ಚಾಲಿತ ಬಸ್‌ಗಳನ್ನು ಬಳಸದಿದ್ರೆ, ನಗರ ಪ್ರದೇಶಗಳ ಸಾರ್ವಜನಿಕ ಸಾರಿಗೆಯು ಮುಂದಿನ 10 ವರ್ಷಗಳಲ್ಲಿ ಸಂಪೂರ್ಣವಾಗಿ ಶುದ್ಧ ಇಂಧನ (clean fuel)ದಲ್ಲಿ ಚಲಿಸುವಂತಾಗುತ್ತದೆ ಎಂದು ತಿಳಿಸಿದೆ.

ಜೊತೆಗೆ ಮೆಟ್ರೋ ರೈಲುಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳನ್ನು ಸಂಖ್ಯೆಯನ್ನು ಹೆಚ್ಚಿಸಿ, ಡೀಸೆಲ್ ಚಾಲಿತ ವಾಹನಗಳ ಅವಲಂಬನೆಯನ್ನು ಕಡಿಮೆ ಮಾಡಬೇಕು. ದೂರದ ಪ್ರಯಾಣಕ್ಕೆ ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಹೊಂದಿರುವ ಎಲೆಕ್ಟ್ರಿಕ್ ಅಥವಾ ಸಿಎನ್‌ಜಿ/ಎಲ್‌ಎನ್‌ಜಿ ಚಾಲಿತ ಬಸ್‌ಗಳನ್ನು ಬಳಸಬೇಕು ಎಂದು ಹೇಳಿದೆ. ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸೆಪ್ಟೆಂಬರ್ 2022ರಲ್ಲಿ ನೀಡಿದ ವರದಿ ಪ್ರಕಾರ, ವಿವಿಧ ಸಾರಿಗೆಗಳಿಂದ ಶೇಕಡ 20% ವಾಯುಮಾಲಿನ್ಯ ಉಂಟಾಗುತ್ತಿದೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಪ್ರೋತ್ಸಾಹವಾಗಿ FAME (ಫಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್) ಯೋಜನೆಯನ್ನು ವಿಸ್ತರಿಸಬೇಕು. ಜೊತೆಗೆ IEC ಚಾಲಿತ ಬೈಕ್, ಸ್ಕೂಟರ್ ಹಾಗೂ ತ್ರಿಚಕ್ರದ ವಾಹನಗಳ ಬಳಕೆಯನ್ನು 2035ರ ವೇಳೆಗೆ ಹಂತ-ಹಂತವಾಗಿ ಸ್ಥಗಿತಗೊಳಿಸಬೇಕು. 2024ರಿಂದ ನಗರದ ನೋಂದಣಿಯಾಗುವ ಪ್ರತಿಯೊಂದು ಡೆಲಿವರಿ ವಾಹನಗಳು ಎಲೆಕ್ಟ್ರಿಕ್ ಆಗಿರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಇದಿಷ್ಟೇ ಅಲ್ಲದೆ, 2030ರ ವೇಳೆಗೆ ದೇಶದ 25% ಕುಟುಂಬಗಳು ತಮ್ಮ ದಿನನಿತ್ಯದ ಆಹಾರ ತಯಾರಿಕೆಗೆ 'ವಿದ್ಯುತ್' ಉಪಯೋಗ ಮಾಡುವುದು ಸೇರಿದಂತೆ ಇತರೆ ಸಲಹೆಗಳನ್ನು ಸಮಿತಿ ನೀಡಿದೆ. ಇದು ಪೆಟ್ರೋಲಿಯಂ ಉತ್ಪನ್ನಗಳ ಅವಲಂಬನೆಯನ್ನು ಕಡಿಮೆ ಮಾಡಿ, ದೇಶದ ಸುಸ್ಥಿರ ಅಭಿವೃದ್ಧಿಗೆ ನೆರವಾಗುತ್ತದೆ. ಜೊತೆಗೆ ವಾಯುಮಾಲಿನ್ಯವನ್ನು ದೊಡ್ಡಮಟ್ಟದಲ್ಲಿ ತಡೆಯುವ ಮೂಲಕ ಶುದ್ಧ ಪರಿಸರ ನಿರ್ಮಾಣ ಮಾಡಲು ಸಹಾಯವಾಗುತ್ತದೆ.
ಮಾಲಿನ್ಯ ರಹಿತ ಹಸಿರು ಪರಿಸರ (green mobility) ನಿರ್ಮಾಣ ಮಾಡುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ, 2070ರ ವೇಳೆಗೆ ದೇಶದ ರಸ್ತೆಗಳಲ್ಲಿ ಶೂನ್ಯ ಹೊರಸೂಸುವಿಕೆ ವಾಹನಗಳು ಇರಬೇಕೆಂದು ಬಯಸಿದೆ. ಅದಕ್ಕಾಗಿ ಈ ಬಾರಿಯ ತನ್ನ ಬಜೆಟ್ ನಲ್ಲೂ ಪ್ರಮುಖ ಕೊಡುಗೆ ನೀಡಿತ್ತು. ಅದೇನೆಂದರೆ, ಜನರು ಎಲೆಕ್ಟ್ರಿಕ್ ವಾಹನ (ಇವಿ)ಗಳನ್ನು ಖರೀದಿಸಲು ಉತ್ತೇಜಿಸಲು ಅವುಗಳ ಬೆಲೆಯನ್ನು ಕಡಿಮೆ ಮಾಡಿತ್ತು.
ಇನ್ನು, ಸಮಿತಿಯು ಶಿಫಾರಸ್ಸು ಮಾಡಿರುವಂತೆ ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ವೇಗವಾಗಿ ಅಳವಡಿಸಿಕೊಳ್ಳುವುದು ಅಷ್ಟೊಂದು ಸುಲಭವಾಗಲ್ಲ. ಚಾರ್ಜಿಂಗ್ ಮೂಲಸೌಕರ್ಯ ಹಾಗೂ ಹಣಕಾಸಿನ ಸಮಸ್ಯೆಯನ್ನು ರಾಜ್ಯ ಸಾರಿಗೆ ನಿಗಮಗಳು ಎದುರಿಸಬೇಕಾಗಬಹುದು. ಸದ್ಯ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುತ್ತಿರುವ ಬ್ಯಾಟರಿ ಪ್ಯಾಕ್ ಅನ್ನು ಇನ್ನಷ್ಟು ರೇಂಜ್ ನೀಡುವಂತೆ ಕಂಪನಿಗಳು ಅಭಿವೃದ್ಧಿಪಡಿಸಬೇಕಾಗಿದ್ದು, ಆಗ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇವಿಗಳ ಕಡೆ ಮುಖಮಾಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications