ಬೆಂಗಳೂರು-ಧಾರವಾಡ ವಂದೇ ಭಾರತ್ ಟಿಕೆಟ್ ದರ ಇಳಿಕೆ... ಹೊಸ ಬೆಲೆಗಳು ಹೀಗಿವೆ
ಭಾರತದ ರೈಲ್ವೆ ವಲಯವನ್ನು ಸ್ಮಾರ್ಟ್ ಹಾಗೂ ಐಷಾರಾಮಿಯಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಂದೇ ಭಾರತ್ ರೈಲುಗಳು ಈಗ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿವೆ. ಕಳೆದ ಮಂಗಳವಾರ ಪ್ರಧಾನಿ ಮೋದಿಯವರು ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯ ರೈಲುಗಳಿಗಿಂತ ವಂದೇ ಭಾರತ್ ರೈಲುಗಳು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೆಚ್ಚಿನ ವೇಗದಲ್ಲಿ ಚಲಿಸಲಿವೆ. ಹಾಗೆಯೇ ಪ್ರಯಾಣ ಸಮಯವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕವಾಗಿವೆ. ಹಾಗಾದ್ರೆ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರು ತಿಳಿಯಬೇಕಾದ ಟಾಪ್ ವಿಶೇಷತೆಗಳ ಜೊತೆಗೆ ಈಗ ಮಾಡಲಾದ ಪ್ರಯಾಣ ದರದ ಪರಷ್ಕರಣೆಯನ್ನು ಇಲ್ಲಿ ನೋಡೋಣ.

ಮೊದಲು ಬೆಂಗಳೂರು-ಧಾರವಾಡ ವಂದೇ ಭಾರತ್ ಟಿಕೆಟ್ ದರವು ಎಸಿ ಚೇರ್ ಕಾರಿನಲ್ಲಿ ಪ್ರಯಾಣಿಸಲು 1,165 ರೂ. ಮತ್ತು ಎಕ್ಸಿಕ್ಯೂಟಿವ್ ವರ್ಗಕ್ಕೆ 2,210 ರೂ. ಟಿಕೆಟ್ ಬೆಲೆಯಿತ್ತು. ರಿಟರ್ನ್ ಟ್ರಿಪ್ 230 ರೂಪಾಯಿಗಳಷ್ಟು ದುಬಾರಿಯಾಗಿತ್ತು. ಏಕೆಂದರೆ ಈ ಪ್ರಯಾಣದಲ್ಲಿ ಊಟ ಮತ್ತು ತಿಂಡಿಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಈಗ ಪ್ರಯಾಣ ದರದಲ್ಲಿ ಪರಿಷ್ಕರಣೆ ಮಾಡಲಾಗಿದೆ.
ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ಇದೇ ನಿಲ್ದಾಣಗಳ ನಡುವೆ ಸಂಚರಿಸಲು ಈ ಮೊದಲು ನಿಗದಿ ಮಾಡಿದ್ದ ರೂ. 545 ಬದಲು ರೂ. 690 ಗೆ ಹೆಚ್ಚಿಸಲಾಗಿದೆ. ಜತೆಗೆ ಪ್ರತಿ ನಿಲ್ದಾಣಗಳ ನಡುವಿನ ಪ್ರಯಾಣದ ದರವನ್ನು 20 ರೂ. ಹೆಚ್ಚಿಸಲಾಗಿದೆ. ಇದು ಕೇವಲ ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ಮಾತ್ರ ಅನ್ವಯವಾಗುತ್ತದೆ. ಎಸಿ ಕಾರ್‌ಚೇರ್‌ನಲ್ಲಿ ದರಗಳು ಇಳಿಕೆಯಾಗಿವೆ.

ಬೆಂಗಳೂರು-ಧಾರವಾಡ ರೂ. 1185, ಬೆಂಗಳೂರು- ಹುಬ್ಬಳ್ಳಿ ರೂ.1155, ಬೆಂಗಳೂರು- ದಾವಣಗೆರೆ ರೂ.935, ಯಶವಂತಪುರ-ದಾವಣಗೆರೆ ರೂ.920, ಯಶವಂತಪುರ-ಹುಬ್ಬಳ್ಳಿ ರೂ.1155, ಯಶವಂತಪುರ-ಧಾರವಾಡ ರೂ.1185, ದಾವಣಗೆರೆ-ಧಾರವಾಡ ರೂ.555, ದಾವಣಗೆರೆ-ಹುಬ್ಬಳ್ಳಿ ರೂ.520, ಹುಬ್ಬಳ್ಳಿಯಿಂದ ಧಾರವಾಡಕ್ಕೆ ರೂ.365 ಇದ್ದು, ಇವು ಈಗಿನ ಪರಿಷ್ಕರಿಸಲಾದ ಟಿಕೆಟ್ ದರಗಳಾಗಿವೆ.
ಎಕ್ಸಿಕ್ಯೂಟಿವ್ ಕ್ಲಾಸ್: ಬೆಂಗಳೂರು- ಧಾರವಾಡ ರೂ.2265, ಬೆಂಗಳೂರು- ಹುಬ್ಬಳ್ಳಿ ರೂ.2200, ಬೆಂಗಳೂರು-ದಾವಣಗೆರೆ ರೂ.1760, ಯಶವಂತಪುರ- ಧಾರವಾಡ ರೂ.2265, ಯಶವಂತಪುರ- ಹುಬ್ಬಳ್ಳಿ ರೂ.2200, ಯಶವಂತಪುರ- ದಾವಣಗೆರೆ ರೂ.1730, ದಾವಣಗೆರೆ- ಹುಬ್ಬಳ್ಳಿ ರೂ.1005, ದಾವಣಗೆರೆ- ಧಾರವಾಡ ರೂ.1075, ಹುಬ್ಬಳ್ಳಿ -ಧಾರವಾಡ ರೂ.690 ಇವು ಏರಿಕೆಯಾದ ದರಗಳಿವೆ.

ಪ್ರಧಾನಿಯವರು ಚಾಲನೆ ನೀಡಿದ ಮೊದಲ ದಿನ ಅಂತಿಮ ನಿಲ್ದಾಣವನ್ನು ತಲುಪುವ ಮೊದಲು ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ಅಮ್ಮಸಂದ್ರ, ತುಮಕೂರು, ದೊಡ್ಡಬೆಲೆ, ಚಿಕ್ಕಬಾಣಾವರ ಮತ್ತು ಯಶವಂತಪುರದಲ್ಲಿ ನಿಲುಗಡೆ ನೀಡಲಾದ ಕಾರಣ ಮೊದಲ ದಿನ ರೈಲು 7.31ಕ್ಕೆ ಬೆಂಗಳೂರು ತಲುಪಿತು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ, ರೈಲು ಮಧ್ಯಾಹ್ನ 1.15 ಕ್ಕೆ ಹೊರಟು ರಾತ್ರಿ 7.45 ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಇದು ಕರ್ನಾಟಕದ ಎರಡನೇ ವಂದೇ ಭಾರತ್ ರೈಲು. ಮೊದಲನೆಯದು ಬೆಂಗಳೂರು ಮೂಲಕ ಮೈಸೂರು ಮತ್ತು ಚೆನ್ನೈ ನಡುವೆ ಓಡುತ್ತಿದೆ.


Click it and Unblock the Notifications








