ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಕರೋನಾ ವೈರಸ್‌ ಹರಡಬಹುದೆಂಬ ಭೀತಿಯಿಂದ ಜನರು ಬಸ್‌, ಆಟೋ ಹಾಗೂ ಕ್ಯಾಬ್‌ಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಜನರು ಸಾರ್ವಜನಿಕ ಸಾರಿಗೆಗೆ ಬದಲು ದ್ವಿಚಕ್ರ ವಾಹನ ಸೇರಿದಂತೆ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಇದರಿಂದ ಕಾರು ಹಾಗೂ ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಾಗಬಹುದೆಂದು ಹಲವು ಅಧ್ಯಯನಗಳಲ್ಲಿ ಹೇಳಲಾಗಿದೆ. ಭಾರತದ ಹಲವು ನಗರಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಕರೋನಾ ವೈರಸ್‌ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜನರು ಹೊಸ ಕಾರುಗಳನ್ನು ಖರೀದಿಸುವ ಬದಲು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಮತ್ತೊಂದೆಡೆ ಆಟೋ ಹಾಗೂ ಕ್ಯಾಬ್ ಚಾಲಕರ ಆರ್ಥಿಕ ಪರಿಸ್ಥಿತಿಯು ಹದಗೆಡುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಬಾರದ ಹಿನ್ನೆಲೆಯಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು ಬೇರೆ ವೃತ್ತಿಗಳತ್ತ ಮುಖ ಮಾಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕ್ಯಾಬ್ ಗಳಿಗಿಂತ ಆಟೋಗಳಲ್ಲಿಯೇ ಹೆಚ್ಚಿನ ಸಂಖೆಯ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಕರೋನಾ ವೈರಸ್ ಬಿಕ್ಕಟ್ಟು ತಲೆದೋರುವ ಮೊದಲು ಪ್ರಯಾಣಿಕರು ಮೊಬೈಲ್ ಆಪ್ ಆಧಾರಿತ ಕ್ಯಾಬ್ ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಜನರು ಕ್ಯಾಬ್ ಗಳ ಬದಲು ಆಟೋ ರಿಕ್ಷಾಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಬೆಂಗಳೂರಿನ ಜನರು ಕ್ಯಾಬ್ ಗಳ ಬದಲು ಆಟೋರಿಕ್ಷಾಗಳಿಗೆ ಆದ್ಯತೆ ನೀಡಲು ಕಾರಣವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಆಟೋಗಳಲ್ಲಿ ಕ್ಯಾಬ್‌ಗಳಿಗಿಂತ ಉತ್ತಮ ಗಾಳಿಯಾಡುತ್ತದೆ ಎಂಬುದು ಜನತೆ ನೀಡುತ್ತಿರುವ ಪ್ರಮುಖ ಕಾರಣ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಈ ಬಗ್ಗೆ ಮಾತನಾಡಿರುವ ಕೋರಮಂಗಲದ ಸ್ವಾತಿ ಎಂಬುವವರು ನಾನು ಈ ಮೊದಲು ಕ್ಯಾಬ್ ಹಾಗೂ ಶೇರ್ ರೈಡ್ ಮೂಲಕ ಪ್ರಯಾಣಿಸುತ್ತಿದ್ದೆ. ಆದರೆ ಈಗ ಆಟೋಗಳು ಸುರಕ್ಷಿತವೆಂದು ಅನಿಸುತ್ತಿದೆ. ಆಟೋಗಳಲ್ಲಿ ಎರಡೂ ಕಡೆ ಗಾಳಿಯಾಡುತ್ತದೆ. ಕ್ಯಾಬ್ ಗಳಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಅವರು ಹೇಳಿದರು.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಸಿ.ವಿ.ರಾಮನ್ ನಗರದ ನಿವಾಸಿ ಅನಿತಾ ಕೃಷ್ಣನ್ ಎಂಬುವವರು ಸಹ ಬಹುತೇಕ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆಟೋಗಳು ಸುರಕ್ಷಿತವೆಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವು ಆಟೋ ಒಳಗೆ ಹೋಗಲು ಡೋರುಗಳನ್ನು ಮುಟ್ಟಬೇಕಿಲ್ಲ ಎಂದು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಆದಾಯದ ಬಗ್ಗೆ ಅನಿಶ್ಚಿತತೆ ಎದುರಾಗಿರುವ ಈ ಸಮಯದಲ್ಲಿ ಆಟೋಗಳಲ್ಲಿ ಕಡಿಮೆ ಬೆಲೆಯಲ್ಲಿ ಪ್ರಯಾಣಿಸಬಹುದು ಎಂಬುದು ಮುರುಗೇಶ್ ಪಾಳ್ಯದ ಸ್ನೇಹ ಅವರ ಅಭಿಪ್ರಾಯ. ನನ್ನ ವೇತನದಲ್ಲಿ ಕಡಿತ ಉಂಟಾಗುತ್ತಿದೆ. ಹೀಗಾಗಿ ನಾನು ಸಾರಿಗೆ ವೆಚ್ಚವನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದೇನೆ. ಕ್ಯಾಬ್‌ಗಳಿಗಿಂತ ಕಡಿಮೆ ವೆಚ್ಚದಲ್ಲಿ ಆಟೋಗಳಲ್ಲಿ ಪ್ರಯಾಣಿಸಬಹುದು ಎಂದು ಅವರು ಹೇಳಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಆಟೋಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಓಲಾ ಕಂಪನಿಯೇ ವರದಿ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ. ಓಲಾ ಕಂಪನಿಯ ಅಧಿಕಾರಿಗಳ ಪ್ರಕಾರ ದೊಡ್ಡ ಹಾಗೂ ಸಣ್ಣ ನಗರಗಳಲ್ಲಿ ಸಣ್ಣ ಪ್ರಯಾಣಗಳಿಗೆ ಆಟೋಗಳು ಜನಪ್ರಿಯವಾಗಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಅನ್ ಲಾಕ್ ನಂತರ ಸೇವೆ ಲಭ್ಯವಿರುವ 120ಕ್ಕೂ ಹೆಚ್ಚು ನಗರಗಳಲ್ಲಿ ಆಟೋಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಟೊಗಳಿಗೆ ಬೇಡಿಕೆ ಹೆಚ್ಚಿರುವ ಟಾಪ್ 3 ನಗರಗಳಲ್ಲಿ ಬೆಂಗಳೂರು ನಗರ ಸಹ ಒಂದು.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಆಟೋಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆಟೋ ಚಾಲಕರು ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆಟೋ ಚಾಲಕರ ಸಂಘದ ಸದಸ್ಯ ರಾಘವೇಂದ್ರ ತಿಳಿಸಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್ ಬದಲು ಆಟೋಗಳಿಗೆ ಜೈ ಎಂದ ಬೆಂಗಳೂರು ಜನ

ಹೆಚ್ಚಿನ ಸಂಖ್ಯೆಯ ಆಟೋ ಡ್ರೈವರ್‌ಗಳು ತಮ್ಮ ಆಟೋಗಳಲ್ಲಿ ಸೇಫ್ಟಿ ಸ್ಕ್ರೀನ್ ಗಳನ್ನು ಅಳವಡಿಸಿದ್ದಾರೆ. ಪ್ರತಿ ಟ್ರಿಪ್ ನಂತರ ಸೋಂಕುನಿವಾರಕಗನ್ನು ಸಿಂಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ಇಟಿ ಆಟೋ ವರದಿ ಮಾಡಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Bangalore people prefer to travel by autos instead of cabs. Read in Kannada.
Story first published: Monday, September 14, 2020, 8:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X