Vande Bharat: ಶೀಘ್ರದಲ್ಲೇ ಬೆಂಗಳೂರಿನಿಂದ ಈ ರಾಜ್ಯದ ಪ್ರಮುಖ ನಗರಕ್ಕೆ ಹೊಸ ವಂದೇ ಭಾರತ್
ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್ ಕುರಿತ ಆಸಕ್ತಿಕರ ಮಾಹಿತಿಗೆ ಎದುರುನೋಡುತ್ತಿರುವ ಪ್ರಯಾಣಿಕರಿಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ಪ್ರಯಾಣಿಕರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ವಂದೇ ಭಾರತ್ ರೈಲುಗಳ ಹಂಚಿಕೆಯನ್ನು ವೇಗಗೊಳಿಸದೆ. ಇದೀಗ ಬೆಂಗಳೂರಿನಿಂದ ತಮಿಳುನಾಡಿನ ಈ ನಗರಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಲು ಸಜ್ಜಾಗಿದೆ.
ವಿಷಯಕ್ಕೆ ಬಂದರೆ ಬೆಂಗಳೂರು ಮತ್ತು ಕೊಯಂಬತ್ತೂರ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ. ಈ ಮಾರ್ಗಕ್ಕೆ ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಕೊಯಂಬತ್ತೂರು ಸ್ಥಳೀಯ ಶಾಸಕರೊಬ್ಬರು ಖಚಿತಪಡಿಸಿದ್ದು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು ಮತ್ತು ಕೊಯಂಬತ್ತೂರು ಮಾರ್ಗದಲ್ಲಿ ಯಾವಾಗ ಪ್ರಾರಂಭಿಸಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಮಾರ್ಗದಲ್ಲಿ ಈಗಾಗಲೇ ಸಾಮಾನ್ಯ ಎಕ್ಸ್‌ಪ್ರೆಸ್ ಆದ CBE SBC (ದಕ್ಷಿಣ ಬೆಂಗಳೂರು ನಗರ) UDAY ಎಕ್ಸ್‌ಪ್ರೆಸ್ (22666) ಮಂಗಳವಾರ ಹೊರತುಪಡಿಸಿ ಎಲ್ಲಾ ವಾರದ ದಿನಗಳಲ್ಲಿ ಬೆಳಿಗ್ಗೆ 5.45 ಕ್ಕೆ ಹೊರಡುತ್ತದೆ.
ತಿರುಪ್ಪೂರ್, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಕುಪ್ಪಂ, ಕೃಷ್ಣರಾಜಪುರಂ ಮತ್ತು ಬೆಂಗಳೂರು ನಗರದಲ್ಲಿ ನಿಲುಗಡೆಯೊಂದಿಗೆ ಆರು ಗಂಟೆ 45 ನಿಮಿಷಗಳಲ್ಲಿ ಗಮ್ಯಸ್ಥಾನವನ್ನು ತಲುಪುತ್ತದೆ. ಈ ಮಾರ್ಗದಲ್ಲಿನ ಈ ಎಕ್ಸ್‌ಪ್ರೆಸ್ ರೈಲಿನ ಜೊತೆಗೆ ಪ್ರಯಾಣಿಕರ ಬೇಡಿಕೆಯಿಂದಾಗಿ ಹೊಸ ವಂದೇ ಭಾರತ್ ಅನ್ನು ಶೀಘ್ರದಲ್ಲೇ ಪರಿಚಯಿಸಲಿದ್ದಾರೆ. ಈ ಮೂಲಕ ಪ್ರಯಾಣ ಸಮಯ ಕೂಡ ಕಡಿಮೆಯಾಗಿಲಿದೆ.

ಈ ಬಗ್ಗೆ ಭಾರತೀಯ ಜನತಾ ಪಕ್ಷದ ಕೊಯಂಬತ್ತೂರು ದಕ್ಷಿಣ ಶಾಸಕ ವನತಿ ಶ್ರೀನಿವಾಸನ್ ಮಾತನಾಡಿ, "ರೈಲ್ವೆ ಮಂಡಳಿಯಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಶೀಘ್ರವಾಗಿ ಪ್ರಾರಂಭಿಸುವ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು" ಎಂದು ಹೇಳಿದ್ದಾರೆ. ಈ ರೈಲು ರಾತ್ರಿ ಸಂಚಾರದ ಬಗ್ಗೆ ಕೂಡ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆಯೂ ಶೀಘ್ರದಲ್ಲೆ ಘೋಷಣೆಯಾಗಲಿದೆ.
ರೈಲ್ವೆ ಹಾಗೂ ಪ್ರಮುಖ ನಾಯಕರ ನಿರ್ಧಾರದ ಬಳಿಕ ವಂದೇ ಭಾರತ್ ರೈಲು ರಾತ್ರಿ ಸೇವೆಯಾಗಲಿದೆಯೇ ಎಂಬುದು ಖಚಿತವಾಗಲಿದೆ. ಇನ್ನು ಈ ಮಾರ್ಗದಲ್ಲಿ ಇದು ಪ್ರಯಾಣಿಕರ ಬಹುಕಾಲದ ಬೇಡಿಕೆಯಾಗಿದೆ. ಹೊಸ ವಂದೇ ಭಾರತ್ ರೈಲು ಕೊಯಂಬತ್ತೂರು - ಚೆನ್ನೈ ಸೆಂಟ್ರಲ್ ಮಾರ್ಗದಲ್ಲಿ ಕಾರ್ಯನಿರ್ವಹಿಸಿದ ನಂತರ ಕೊಯಂಬತ್ತೂರಿಗೆ ಇದು ಎರಡನೇ ವಂದೇ ಭಾರತ್ ರೈಲು ಆಗಿರುತ್ತದೆ ಎಂಬುದನ್ನು ಗಮನಿಸಬೇಕು.

ಇಲ್ಲಿಯವರೆಗೆ, ಉದಯ್ ಎಕ್ಸ್‌ಪ್ರೆಸ್ ಎರಡು ನಗರಗಳ ನಡುವಿನ ಪ್ರಯಾಣಿಕರ ಪ್ರಯಾಣ ಅಗ್ಯತಗಳನ್ನು ಪೂರೈಸುತ್ತಿದೆ. ಇದೀಗಗ ಹೊಸ ಸೆಮಿ ಹೈಸ್ಪೀಡ್ ವಂದೇ ಭಾರತ್ ಬಂದರೆ ಕೊಯಂಬತ್ತೂರಿನಿಂದ ಬೆಂಗಳೂರಿಗೆ ಎರಡನೇ ಎಕ್ಸ್‌ಪ್ರೆಸ್ ರೈಲು ಆಗಿರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದ ಬಳಿಕ ಸಮಯ, ದಿನಾಂಕ, ಮಾರ್ಗ ಕುರಿತ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








