ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಕರ್ನಾಟಕ ಮೂಲದ ಬಿ.ಆರ್.ಶೆಟ್ಟಿ (ಬಾವಾಗುತು ರಘುರಾಮ್ ಶೆಟ್ಟಿ) ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ಐವರು ಶ್ರೀಮಂತ ಭಾರತೀಯರಲ್ಲಿ ಒಬ್ಬರು. ಅವರು ಭಾರತವನ್ನು ತೊರೆದು ಅರಬ್ ದೇಶದಲ್ಲಿ ನೆಲೆಸಿದ್ದಾರೆ.

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಅಲ್ಲಿ ಅವರು ಹಲವಾರು ಯಶಸ್ವಿ ಕಂಪನಿಗಳನ್ನು ನಡೆಸುತ್ತಿದ್ದಾರೆ. ಅವರು ಅಬುಧಾಬಿಯಲ್ಲಿ ಎನ್‌ಎಂಸಿ (ನ್ಯೂ ಮೆಡಿಕೇರ್ ಸೆಂಟರ್) ಎಂಬ ಅತಿದೊಡ್ಡ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. 1970ರಲ್ಲಿ ಸ್ಥಾಪನೆಯಾದ ಈ ಆಸ್ಪತ್ರೆಗಳ ಸಮೂಹವು ಸದ್ಯಕ್ಕೆ 19 ದೇಶಗಳಲ್ಲಿ 194 ಆಸ್ಪತ್ರೆಗಳನ್ನು ಹೊಂದಿದೆ. ಇದರ ಜೊತೆಗೆ ಬಿಆರ್ ಶೆಟ್ಟಿ ಷೇರು ಮಾರುಕಟ್ಟೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಈ ಕಾರಣಕ್ಕೆ ಶೆಟ್ಟಿರವರ ಕಂಪನಿಯ ಷೇರುಗಳು ವಿಶ್ವದ ಅನೇಕ ದೇಶಗಳಲ್ಲಿವೆ. ಅವರ ಕಂಪನಿಯ ಷೇರುಗಳನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿಯೂ ಪಟ್ಟಿ ಮಾಡಲಾಗಿದೆ. ಬಿಆರ್ ಶೆಟ್ಟಿಯವರ ಕಂಪನಿಯು ಈ ಷೇರುಗಳ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಕೆಲವು ತಿಂಗಳ ಹಿಂದೆ ದೂರುಗಳು ಕೇಳಿ ಬಂದಿದ್ದವು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಹೀಗಾಗಿ ಅವರ ಕಂಪನಿಯ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಬ್ರಿಟಿಷ್ ನ್ಯಾಯಾಲಯದ ಮೇಲ್ವಿಚಾರಣೆಗೆ ತರಲಾಗಿದೆ. ಇದರ ಜೊತೆಗೆ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ಲಕ್ಷಾಂತರ ಡಾಲರ್ ಸಾಲ ನೀಡಿದ್ದು, ಸಾಲವನ್ನು ಮರುಪಾವತಿಸಿಲ್ಲ ಎಂದು ಆರೋಪಿಸಿದೆ.

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಈ ಬ್ಯಾಂಕ್ ಮಾತ್ರವಲ್ಲದೇ ಅರಬ್ ನಲ್ಲಿರುವ ಹಲವಾರು ಬ್ಯಾಂಕುಗಳಿಂದ ಬಿಆರ್ ಶೆಟ್ಟಿ ಸಾಲ ಪಡೆದು ಅವುಗಳನ್ನು ಮರುಪಾವತಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಹೀಗಾಗಿ ಸದ್ಯ ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈಗ ಅವರು ಯಾವ ದೇಶದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಹೊಸ ಬ್ಯಾಂಕಿಂಗ್ ವಂಚನೆಯ ಕಿಂಗ್‌ಪಿನ್ ಕಾರುಗಳ ಬಗ್ಗೆ ವಿಪರೀತ ಕ್ರೇಜ್ ಹೊಂದಿದ್ದರು ಎಂದು ಹೇಳಲಾಗಿದೆ. ಬಿಆರ್ ಶೆಟ್ಟಿ ಭಾರತದಲ್ಲಿ ಹಾಗೂ ಅರಬ್ ನಲ್ಲಿ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿಯಿದ್ದ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

1961 ಮೋರಿಸ್ ಮೈನರ್ 1000

ಬಿಆರ್ ಶೆಟ್ಟಿ ಇನ್ನೂ ಸಹ ಅನೇಕ ವಿಂಟೇಜ್ ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ 1961 ಮೋರಿಸ್ ಮೈನರ್ 1000 ಸಹ ಒಂದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಕೆಲವು ಸಂದರ್ಶನಗಳಲ್ಲಿ ಅವರು ಈ ವಿಂಟೇಜ್ ಕಾರಿಗೆ ತಮ್ಮ ಬಳಿಯಿರುವ ದುಬಾರಿ ಕಾರುಗಳಿಗಿಂತ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದರು. ಅವರ ಹೆಚ್ಚಿನ ವಿಂಟೇಜ್ ಕಾರುಗಳು ಭಾರತದಲ್ಲಿವೆ.

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಲ್ಯಾಂಡ್ ರೋವರ್ ರೇಂಜ್ ರೋವರ್

ಅನೇಕ ದುಬಾರಿ ಕಾರುಗಳು ಬಿ.ಆರ್.ಶೆಟ್ಟಿಯವರ ಬೆಂಗಳೂರು ಮನೆಯಲ್ಲಿವೆ. ಅವುಗಳಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಸಹ ಸೇರಿದೆ. ಭಾರತಕ್ಕೆ ಬಂದಾಗ ಅವರು ಈ ಕಾರನ್ನು ಬಳಸುತ್ತಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಮರ್ಸಿಡಿಸ್ ಎಎಂಜಿ ಜಿಟಿ

ಬಿಆರ್ ಶೆಟ್ಟಿಯವರ ಮಗ ಬಿನಯ್ ಶೆಟ್ಟಿ ಈ ಕಾರನ್ನು ಬಳಸುತ್ತಾರೆ. ಅವರು ಬಿಆರ್ ಶೆಟ್ಟಿಯವರ ಹಲವಾರು ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಬಿನಯ್ ಕೂಡ ದೊಡ್ಡ ಕಾರು ಪ್ರೇಮಿ. ಬಿನಯ್ ಮರ್ಸಿಡಿಸ್ ಎಎಮ್‌ಜಿ ಜಿಟಿ ಕಾರನ್ನು ಟ್ರ್ಯಾಕ್ ಹಾಗೂ ರೇಸಿಂಗ್ ಗಾಗಿ ಬಳಸುತ್ತಾರೆ.

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ರೋಲ್ಸ್ ರಾಯ್ಸ್ ಫ್ಯಾಂಟಮ್

ರೋಲ್ಸ್ ರಾಯ್ಸ್ ಫ್ಯಾಂಟಮ್, ಬಿಆರ್ ಶೆಟ್ಟಿಯವರ ಬಳಿಯಿರುವ ಅತ್ಯಂತ ದುಬಾರಿ ಸೆಡಾನ್ ಕಾರ್ ಆಗಿದೆ. ಇದು ಅವರ ನೆಚ್ಚಿನ ಕಾರು ಸಹ ಹೌದು. ಅದಕ್ಕಾಗಿಯೇ ಅವರು ಈ ಕಾರನ್ನು ಹೆಚ್ಚು ಬಳಸುತ್ತಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಈ ಪ್ರಪಂಚದ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಈ ಕಾರಣಕ್ಕೆ ಬಿಆರ್ ಶೆಟ್ಟಿ ಈ ಕಾರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದು ತನ್ನ ನೆಚ್ಚಿನ ಕಾರು ಎಂದು ಅವರು ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ.

ಬ್ಯಾಂಕಿಂಗ್ ಹಗರಣದ ಆರೋಪಿ ಬಿ.ಆರ್.ಶೆಟ್ಟಿ ಬಳಿಯಿರುವ ದುಬಾರಿ ಕಾರುಗಳಿವು

ಮರ್ಸಿಡಿಸ್ ಮೇಬ್ಯಾಕ್ ಎಸ್ 600 ಲಿಮೋಸಿನ್

ಭಾರತದಂತಹ ಕೆಲವು ದೇಶಗಳಲ್ಲಿ ಮರ್ಸಿಡಿಸ್ ಮೇಬ್ಯಾಕ್ ಎಸ್ 600 ಲಿಮೋಸಿನ್ ಕಾರನ್ನು ರಾಷ್ಟ್ರಪತಿಗಳಂತಹ ದೇಶದ ಪ್ರಮುಖ ನಾಯಕರು ಬಳಸುತ್ತಾರೆ. ಈ ಕಾರನ್ನು ಬಿಆರ್ ಶೆಟ್ಟಿ ಸುರಕ್ಷಿತ ಪ್ರಯಾಣಕ್ಕಾಗಿ ಬಳಸುತ್ತಾರೆ. ಈ ಬುಲೆಟ್ ಪ್ರೂಫ್ ಕಾರು ಹೆಚ್ಚು ಸುರಕ್ಷಿತವಾಗಿದೆ. ವೈಯಕ್ತಿಕ ಬಳಕೆಗಾಗಿ ಈ ಕಾರನ್ನು ಬಳಸುತ್ತಿರುವ ವಿಶ್ವದ ಮೊದಲ ವ್ಯಕ್ತಿ ಬಿಆರ್ ಶೆಟ್ಟಿ.

Most Read Articles

Kannada
English summary
Banking scam accused BR Shetty's luxury car collection. Read in Kannada.
Story first published: Wednesday, October 7, 2020, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X