ನಮ್ಮ ಮೆಟ್ರೋಗಾಗಿ ಬೆಂಗಳೂರಿನ ಕಂಪನಿಯಿಂದಲೇ ಚಾಲಕ ರಹಿತ ರೈಲು ತಯಾರಿಕೆ: ಸಂಚಾರ ಯಾವಾಗ?

ನಮ್ಮ ಮೆಟ್ರೋ (Namma Metro) ಬೆಂಗಳೂರಿನ ಜೀವನಾಡಿಯಾಗಿದೆ. ನೀಲಿ (Blue) ಹಾಗೂ ಗುಲಾಬಿ (Pink) ಮಾರ್ಗಗಳಿಗಾಗಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಮೆಟ್ರೋ ರೈಲುಗಳನ್ನು ಪೂರೈಸಲಿದೆ. ಈ ಸಂಬಂಧ ಕೋಚ್‌ಗಳ ಉತ್ಪಾದನೆ ಕಾರ್ಯವನ್ನು ಶುರು ಮಾಡಿದೆ. ಬಿಇಎಂಎಲ್ ಕಚೇರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್ ಹಾಗೂ ಬಿಇಎಂಎಲ್ ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಅವರ ಉಪಸ್ಥಿತಿಯಲ್ಲಿ ತಯಾರಿಕಾ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

2023ರ ಆಗಸ್ಟ್‌ನಲ್ಲಿ ಚಾಲಕ ರಹಿತ ಮೆಟ್ರೋ ರೈಲನ್ನು ಪೂರೈಸಲು ಬಿಎಂಆರ್‌ಸಿಎಲ್‌ನಿಂದ (ನಮ್ಮ ಮೆಟ್ರೋ) ಬಿಇಎಂಎಲ್ ಟೆಂಡರ್ ಪಡೆದುಕೊಂಡು, ರೂ.3,177 ಕೋಟಿ ಮೊತ್ತದ ಬೃಹತ್ ಒಪ್ಪಂದ ಮಾಡಿಕೊಂಡಿತ್ತು. ಈ ಒಡಂಬಡಿಕೆಯ ಭಾಗವಾಗಿ ಬಿಇಎಂಎಲ್ 318 ಕೋಚ್‌ಗಳನ್ನು (53 ಮೆಟ್ರೋ ರೈಲುಗಳು) ಸಿದ್ಧಪಡಿಸಲಿದೆ. ಜೊತೆಗೆ 15 ವರ್ಷಗಳವರೆಗೆ ನಿರ್ವಹಣೆಯನ್ನು ಮಾಡಬೇಕಾಗಿದೆ.

Bengaluru Base BEML Starts Production Driverless Metro Trains For Namma Metro

ನಮ್ಮ ಮೆಟ್ರೋ (Namma Metro) ಗುಲಾಬಿ ಮಾರ್ಗ (ಕಾಳೇನ ಅಗ್ರಹಾರ ಹಾಗೂ ನಾಗವಾರ ನಡುವೆ) 21.76 ಕಿಲೋಮೀಟರ್ ಉದ್ದವಿದೆ. 2025ರ ಡಿಸೆಂಬರ್ ಅಂತ್ಯದೊಳಗೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಬಿಇಎಂಎಲ್ ತಯಾರಿಸುವ 16 ಮೆಟ್ರೋ ರೈಲುಗಳನ್ನು (96 ಕೋಚ್‌ಗಳು) ನಿಯೋಜಿಸಲಾಗುತ್ತದೆ.

ನಮ್ಮ ಮೆಟ್ರೋ (Namma Metro) ನೀಲಿ ಮಾರ್ಗವು (ರೇಷ್ಮೆ ಮಂಡಳಿ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಧ್ಯೆ) ಎರಡು ಹಂತದಲ್ಲಿ ನಿರ್ಮಾಣಗೊಳ್ಳುತ್ತಿದ್ದು, 58.19 ಕಿಲೋಮೀಟರ್ ಉದ್ದವಿದೆ. 2026ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಮಾರ್ಗದ ಸಂಚಾರಕ್ಕಾಗಿ ಬಿಇಎಂಎಲ್ 21 ಮೆಟ್ರೋ ರೈಲುಗಳನ್ನು (126 ಕೋಚ್‌ಗಳು) ಪೂರೈಸಲಿದೆ.

Bengaluru Base BEML Starts Production Driverless Metro Trains For Namma Metro

ಈ ಚಾಲಕ ರಹಿತ ಮೆಟ್ರೋ ರೈಲಿನ ಎಲ್ಲ ಕೋಚ್‌ಗಳು ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್‌ನ್ನು (ಸಿಬಿಟಿಸಿ) ಹೊಂದಿವೆ. ಇದೊಂದು ಸಿಗ್ನಲಿಂಗ್ ಸಿಸ್ಟಮ್ ಆಗಿದ್ದು, ಲೋಕೋ ಪೈಲಟ್‌ಗಳಿಲ್ಲದೆ ರೈಲುಗಳು ಚಲಿಸಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ಐಪಿ ಆಧಾರಿತ ಪ್ಯಾಸೆಂಜರ್ ಅನೌನ್ಸ್ಮೆಂಟ್, ಪ್ಯಾಸೆಂಜರ್ ಇನ್ಫಾರ್ಮಶನ್ ಸಿಸ್ಟಮ್, ಎಲ್‌ಸಿಡಿ ಡೈನಾಮಿಕ್ ರೌಟ್ ಮ್ಯಾಪ್ ಡಿಸ್ಪ್ಲೇಯನ್ನು ಪಡೆದಿರಲಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಆಟೋಮೆಟಿಕ್ ಡೋರ್‌ಗಳನ್ನು ಒಳಗೊಂಡಿರಲಿದೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್), ಮೆಟ್ರೋ ರೈಲುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಸ್ವದೇಶಿ ನಿರ್ಮಿತ ಈ ರೈಲುಗಳು ವಿಶ್ವದರ್ಜೆಯ ಗುಣಮಟ್ಟದ ವಿನ್ಯಾಸವನ್ನು ಹೊಂದಿವೆ. ಜುಲೈ (2024) ಹೊತ್ತಿಗೆ ದೆಹಲಿ, ಜೈಪುರ, ಕೋಲ್ಕತ್ತಾ, ಬೆಂಗಳೂರು ಮತ್ತು ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಬಿಇಎಂಎಲ್ ಸರಿ ಸುಮಾರು 2,000 ಮೆಟ್ರೋ ಕೋಚ್‌ಗಳನ್ನು ರವಾನಿಸಿದೆ.

ಕಳೆದ ಫೆಬ್ರವರಿಯಲ್ಲಿ ಹಳದಿ ಮಾರ್ಗದಲ್ಲಿ (Yellow Line) ಕಾರ್ಯಚರಣೆ ನಡೆಸಲು ಚೀನಾದಿಂದ ಬೆಂಗಳೂರಿನ ಹೆಬ್ಬಗೋಡಿಯ ನಮ್ಮ ಮೆಟ್ರೋ (Namma Metro) ಡಿಪೋಗೆ ಮೊದಲ ಚಾಲಕ ರಹಿತ ಮೆಟ್ರೋ ರೈಲು ಆಗಮಿಸಿತ್ತು. 2019ರಲ್ಲಿ ಅಲ್ಲಿನ ಸ್ವಾಮ್ಯದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್, ಬಿಎಂಆರ್‌ಸಿಎಲ್‌ಗೆ 216 ಮೆಟ್ರೋ ಕೋಚ್‌ಗಳನ್ನು ಪೂರೈಸಲು ರೂ.1,578 ಕೋಟಿ ಮೊತ್ತದ ಬೃಹತ್ ಒಪ್ಪಂದ ಮಾಡಿಕೊಂಡಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 3, 2024, 12:29 [IST]
English summary
Bengaluru base beml starts production driverless metro trains for namma metro
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+