ಬೆಂಗಳೂರಿನ ಈ ಮಾರ್ಗಗಳಲ್ಲಿ BMTC ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಎಸಿ ಬಸ್‌ಗಳು ಸಂಚಾರ?: ಮರುಕಳಿಸಲಿದೆ ನೆನಪುಗಳು..!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ - BMTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಲು ಹೊರಟಿದೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಡಬಲ್ ಡೆಕ್ಕರ್ ಬಸ್‌ಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ದಿನಗಳಲ್ಲಿ ಈ ಬಸ್‌ಗಳು ರಸ್ತೆಗಿಳಿಯಲಿವೆ.

ಈ ಬಗ್ಗೆ ಖಾಸಗಿ ಪತ್ರಿಕೆಯೊಂದಿಗೆ ಮಾತನಾಡಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಮಚಂದ್ರ ಆರ್ ಅವರು, ಒಟ್ಟು ವೆಚ್ಚದ ಒಪ್ಪಂದದ (Gross Cost Contract - GCC) ಮಾದರಿಯಲ್ಲಿ ಹೊಸ 10 ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಟೆಂಡರ್‌ಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.

Bengaluru: This Routes To Get Bmtc Electric Double-Decker Buses

1997ರಲ್ಲಿ ಬೆಂಗಳೂರು ನಗರದ ರಸ್ತೆಗಳಲ್ಲಿ ಕೊನೆಯ ಬಾರಿಗೆ ಡಬಲ್ ಡೆಕ್ಕರ್ ಬಸ್‌ಗಳು ಕಂಡುಬಂದಿದ್ದವು. ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳಿಂದ ಈ ಬಸ್‌ಗಳನ್ನು ಹಂತ ಹಂತವಾಗಿ ಸೇವೆಯಿಂದ ತೆಗೆದುಹಾಕಲಾಗಿತ್ತು. ಡಬಲ್ ಡೆಕ್ಕರ್ ಬಸ್ ಯೋಜನೆಗಾಗಿ ಬಿಎಂಟಿಸಿ ನಗರ ಭೂ ಸಾರಿಗೆ ನಿರ್ದೇಶನಾಲಯದ (Directorate of Urban Land Transport) ಅನುದಾನ ಉಪಯೋಗಿಸಲು ತೀರ್ಮಾನ ಮಾಡಿದೆ ಎಂದು ತಿಳಿದುಬಂದಿದೆ.

'ಕಳೆದ ವರ್ಷ ಬಿಎಂಟಿಸಿ ಈ ಡಬಲ್ ಡೆಕ್ಕರ್ ಬಸ್‌ಗಳನ್ನು ನೇರವಾಗಿ ಖರೀದಿ ಮಾಡಲು ಚಿಂತನೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರದ ನಿರ್ದೇಶನದ ಅನ್ವಯ, ಜಿಸಿಸಿ (GCC) ಮಾದರಿಯಲ್ಲಿ ಬಸ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲು ಹೊಸ ಟೆಂಡರ್‌ ಕರೆಯಲಾಗುತ್ತಿದೆ. ಪ್ರತಿ ಕಿ.ಮೀ ಆಧಾರದ ಮೇಲೆ ಬಸ್ ಸೇವೆ ಒದಗಿಸುವ ಖಾಸಗಿ ಸಂಸ್ಥೆಗೆ ಹಣವನ್ನು ಪಾವತಿಸಲಾಗುತ್ತದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Bengaluru: This Routes To Get Bmtc Electric Double-Decker Buses

ಸದ್ಯ, ಬಿಎಂಟಿಸಿಯಲ್ಲಿ ಕಾರ್ಯಾಚರಣೆ ನಡೆಸುವ ಸಾಮಾನ್ಯ ಬಸ್‌ಗಳು 33 - 40 ಆಸನಗಳನ್ನು ಹೊಂದಿವೆ. ಅದೇ ರೀತಿಯಲ್ಲಿ ಹೊಸ ಡಬಲ್ ಡೆಕ್ಕರ್ ಬಸ್‌ಗಳು ಸುಮಾರು 65 ಆಸನಗಳನ್ನು ಪಡೆದಿರಲಿವೆ. ಬಿಎಂಟಿಸಿ, ಡಬಲ್ ಡೆಕ್ಕರ್ ಬಸ್‌ಗಳ ಕಾರ್ಯಾಚರಣೆಗೆ ಅನುಕೂಲವಾಗುವ ಸಲುವಾಗಿ ಪ್ರಮುಖ 3 ಮಾರ್ಗಗಳನ್ನು ಗುರುತಿಸಿದೆ. ಅವುಗಳೆಂದರೆ, ಮೆಜೆಸ್ಟಿಕ್‌ನಿಂದ (ಕೆಂಪೇಗೌಡ ಬಸ್ ನಿಲ್ದಾಣ) ಶಿವಾಜಿನಗರ, ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಮತ್ತು ವಿಜಯನಗರದಿಂದ ಕಲಾಸಿಪಾಳ್ಯ.

ಬಹುತೇಕ ಈ ಮಾರ್ಗದಲ್ಲಿ ಮಾತ್ರ ಬಿಎಂಟಿಸಿ ಡಬಲ್ ಡೆಕ್ಕರ್ ಬಸ್‌ಗಳ ಸೇವೆಯಿರಲಿದೆ ಎನ್ನಲಾಗಿದೆ. ಹಲವರಿಗೆ ನಗರದ ಹೆಚ್ಚಿನ ಜನದಟ್ಟಣೆಯಿರುವ ರಸ್ತೆಗಳಲ್ಲಿಯೂ ಈ ಬಸ್‌ಗಳು ಓಡಾಟ ನಡೆಸಬಹುದು ಅಲ್ಲವೇ ಎಂಬ ಪ್ರಶ್ನೆಗಳು ಏಳಬಹುದು. ಆದರೆ ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, 'ಭಾರೀ ಜನದಟ್ಟಣೆಯನ್ನು ತಪ್ಪಿಸಲು ಡಬಲ್ ಡೆಕ್ಕರ್ ಬಸ್‌ಗಳು ಹೆಚ್ಚು ಅತ್ಯಗತ್ಯ. ಆದಾಗ್ಯೂ ಹಲವು ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್‌ಗಳನ್ನು ನಿಲುಗಡೆಗೊಳಿಸಲು ಸಾಧ್ಯವಿಲ್ಲ' ಎನ್ನುತ್ತಾರೆ.

ಮತ್ತೊಂದು ಕಾರಣವೆಂದರೆ, ಕಳೆದ 25 ವರ್ಷಗಳಲ್ಲಿ ಬೆಂಗಳೂರು ವೇಗವಾಗಿ ಬೆಳವಣಿಗೆಯಾಗಿದೆ. ನಗರದ ರಸ್ತೆಗಳಲ್ಲಿ 42 ಮೇಲ್ಸೇತುವೆ 28 ಅಂಡರ್‌ಪಾಸ್‌ಗಳನ್ನು ಒಳಗೊಂಡಿವೆ. ಜೊತೆಗೆ ನೂರಾರು ಸ್ಕೈವಾಕ್‌ಗಳಿವೆ. ಇಂತಹ ಕಡೆಗಳಲ್ಲಿ ಡಬಲ್ ಡೆಕ್ಕರ್ ಬಸ್‌ಗಳು ಕಾರ್ಯಾಚರಣೆ ನಡೆಸುವುದು ಕಷ್ಟವೇ ಸರಿ. ಅಲ್ಲದೆ, ಅಂಡರ್‌ಪಾಸ್‌ಗಳಲ್ಲಿ ಸಾಮಾನ್ಯ ಬಸ್ ಅಥವಾ ಟ್ರಕ್‌ಗಳೇ ಸಿಲುಕಿಕೊಳ್ಳುವಾಗ ಎತ್ತರವಿರುವ ಡಬಲ್ ಡೆಕ್ಕರ್ ಬಸ್‌ಗಳ ಸಂಚಾರ ಹೇಗೆ ಎಂಬುದು ಪ್ರಶ್ನೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, February 6, 2024, 10:11 [IST]
English summary
Bengaluru this routes to get bmtc electric double decker buses
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+