ಬೇಸರ ತರಿಸುತ್ತಿದೆ ಬೆಂಗಳೂರು ದಟ್ಟಣೆ: ಟ್ರಾಫಿಕ್‌ನಲ್ಲೇ ಮಹಿಳೆ ಜೂಮ್ ಮೀಟಿಂಗ್!
ಬೆಂಗಳೂರು ನಗರ ಭಾರತದ ಐಟಿ ಹಬ್ ಆಗಿರುವುದರಿಂದ ಎಲ್ಲಾ ಟೆಕ್ಕಿಗಳಿಗೆ ಕನಸಿನ ನಗರವಾಗಿದೆ. ತಂಪಾದ ಹವಾಮಾನಕ್ಕೆ ಎಷ್ಟೂ ಹೆಸರುವಾಸಿಯಾಗಿದೆಯೋ, ಟ್ರಾಫಿಕ್ ಜಾಮ್‌ಗೂ ಅಷ್ಟೇ ಜನಪ್ರಿಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಬೆಂಗಳೂರು ಟ್ರಾಫಿಕ್ ಜಾಮ್ ಕುರಿತು ಹಲವು ಟ್ರೋಲ್ ವಿಡಿಯೋಗಳು ವೈರಲ್ ಆಗಿದ್ದವು, ಇದೀಗ ಮತ್ತೊಂದು ವಿಡಿಯೋ ಹರಿದಾಡುತ್ತಿದೆ.
ಬೆಂಗಳೂರಿನ ಜನ ಟ್ರಾಫಿಕ್‌ನಲ್ಲಿ ತಮ್ಮ ದೀರ್ಘ ಕಾಯುವ ಸಮಯಕ್ಕೆ ಬೇಸತ್ತು ಇತರ ಮನೆಗೆಲಸ, ಆಫೀಸ್ ಕೆಲಸಗಳನ್ನು ರಸ್ತೆಗಳಲ್ಲೇ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ತೀವ್ರ ಟ್ರಾಫಿಕ್‌ನಲ್ಲಿ ಮಹಿಳೆಯೊಬ್ಬರು ಸ್ಕೂಟರ್ ಚಾಲನೆ ಮಾಡುವಾಗ ಆನ್‌ಲೈನ್ ಮೀಟಿಂಗ್‌ಗೆ ಹಾಜರಾಗುವ ವೀಡಿಯೋ ಸದ್ಯ ವೈರಲ್ ಆಗುತ್ತಿದೆ. ಕೆಲಸ ಮಾಡುವ ಮಹಿಳೆಯ ವೀಡಿಯೊವನ್ನು X (ಟ್ವಿಟರ್)ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ, ಮಹಿಳೆ ಬೆಂಗಳೂರಿನಲ್ಲಿ ಟ್ರಾಫಿಕ್ ಬಿಡುವುದಕ್ಕೆ ಕಾಯದೇ ತನ್ನ ಫೋನ್‌ನಲ್ಲಿ ಜೂಮ್ ಮೀಟಿಂಗ್ ಮಾಡಿದ್ದಾರೆ. "ಟ್ರಾಫಿಕ್‌ನಲ್ಲೇ ಕೆಲಸ ಮಾಡಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಬೆಂಗಳೂರಿನ ಸಾಮಾನ್ಯ ದೃಶ್ಯ ಎಂಬ ಟ್ಯಾಗ್ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಬಟಾಣಿ ಸಿಪ್ಪೆ ಸುಲಿದ ಮಹಿಳೆ: ಬೆಂಗಳೂರಿನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಾಗ, ಸಿಪ್ಪೆ ಸುಲಿಯಲು ತನ್ನೊಂದಿಗೆ ತರಕಾರಿಗಳನ್ನು ಕೊಂಡೊಯ್ದ ಚಿತ್ರಗಳು ವೈರಲ್ ಆಗಿದ್ದವು. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಾಗ, ಸಿಪ್ಪೆ ಸುಲಿಯಲು ಕೆಲವು ತರಕಾರಿ ಖರೀದಿಸಿ ಸಿಪ್ಪೆ ಸುಲಿದು X (ಹಿಂದೆ ಟ್ವಿಟರ್) ಪೋಸ್ಟ್ ಮಾಡಿದ್ದರು.
ಈ ಚಿತ್ರದಲ್ಲಿ ಮಹಿಳೆಯು ಡ್ರೈವರ್ ಪಕ್ಕದ ಸೀಟ್ ನಲ್ಲಿ ಕುಳಿತು ಟ್ರಾಫಿಕ್‌ನಲ್ಲೇ ಹಸಿರು ಬಟಾಣಿಯ ಸಿಪ್ಪೆ ಸುಲಿಯುವುದನ್ನು ತೋರಿಸಿದ್ದರು. ಈ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದವು. "ಹೆಚ್ಚು ಟ್ರಾಫಿಕ್ ಸಮಯದಲ್ಲಿ ಉತ್ಪಾದಕರಾಗಿರುವುದು" ಎಂದು ಮಹಿಳೆ ಫೋಟೋದೊಂದಿಗೆ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು.

ಊಟ ಮುಗಿಸಿದ್ದ ಡ್ರೈವರ್: ಈ ಹಿಂದೆ ಬೆಂಗಳೂರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಾಗ, ಡ್ರೈವರ್ ತಮ್ಮ ಸೀಟಿನಲ್ಲಿ ಊಟ ಮಾಡಿ ಮುಗಿಸಿರುವ ವೀಡಿಯೊ ಕೂಡ ವೈರಲ್ ಆಗಿತ್ತು. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸೆರೆಹಿಡಿದ ವಿಡಿಯೋವನ್ನು ಸಾಯಿಚಂದ್ ಶಬರೀಶ್ ಎಂಬ ವ್ಯಕ್ತಿ ಇನ್ಸ್ಟಾಗ್ರಾಮ್ನಲ್ಲಿ ಅಪ್‌ಲೋಡ್ ಮಾಡಿದ್ದರು. ಬಿಎಂಟಿಸಿ ಬಸ್ ಡ್ರೈವರ್ ಊಟ ಮಾಡುವ ವೀಡಿಯೊ ಸಖತ್ ವೈರಲ್ ಆಗಿತು. ಬೆಂಗಳೂರಿನ ಟ್ರಾಫಿಕ್ ಬಗ್ಗೆ ನೆನೆಯುವಾಗ ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲಿಯೂ ಬಸ್ ಚಾಲಕರ ಪರಿಸ್ಥಿತಿ ಹೇಳೋದೆ ಬೇಡ. ಇನ್ನು ಬೆಂಗಳೂರಿನಲ್ಲಿ ಬಸ್‌ನಲ್ಲಿ ಪ್ರಯಾಣಿಸವವರು ಸುಸ್ತಾಗಿಬಿಡುತ್ತಾರೆ. ಇದರಿಂದ ಬೇಸತ್ತು ಹಲವರು ದ್ವಿಚಕ್ರ ವಾಹನಗಳ ಮೊರೆ ಹೋಗುತ್ತಾರೆ.
ಮಿತಿ ಮೀರಿದ ವಾಹನಗಳು: ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಇತ್ತೀಚೆಗೆ, ಸಂಚಾರ ದಟ್ಟಣೆ, ಸಂಚಾರ ವಿಳಂಬ, ದಟ್ಟಣೆ ಮತ್ತು ಸಿಗ್ನಲ್ ನಿಲುಗಡೆಗಳಿಂದಾಗಿ ಸಮಯ ನಷ್ಟ, ಇಂಧನ ನಷ್ಟ ಮತ್ತು ಸಂಬಂಧಿತ ಅಂಶಗಳಿಂದಾಗಿ ಬೆಂಗಳೂರು ವಾರ್ಷಿಕವಾಗಿ ಅಂದಾಜಿನ ಪ್ರಕಾರ ರೂ. 19,725 ಕೋಟಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮತ್ತು ಅವರ ತಂಡ ಲೆಕ್ಕಾಚಾರ ಹಾಕಿದೆ.

ಬೆಂಗಳೂರು ನಗರದ ಟ್ರಾಫಿಕ್ ನಿಯಂತ್ರಣಕ್ಕೆ ಮೆಟ್ರೋವನ್ನು ಪರಿಚಯಿಸಲಾಗಿದೆಯಾದ್ರೂ, ಹಲವೆಡೆ ಈ ಮೆಟ್ರೋ ಕಾಮಗಾರಿಗಳಿಂದಲೇ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ನಗರವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಜಾಮ್ ನಿಮಗೂ ಇಂತಹ ಕಹಿ ಅನುಭವಗಳನ್ನು ನೀಡಿದ್ದರೆ ಅದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








