ಅಪಘಾತಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್: ದುಬಾರಿ ಬೆಂಟ್ಲಿ ಪರಿಸ್ಥಿತಿ ನೋಡಿ!

ನಕಲಿ ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್‌ಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಇತ್ತೀಚಿನ ಈ ಘಟನೆಯೇ ಉತ್ತಮ ಉದಾಹರಣೆಯಾಗಿದೆ. ದುಬಾರಿ ಐಷಾರಾಮಿ ಬೆಂಟ್ಲೆ ಕಾರಿಗೆ ನಕಲಿ ಅಲಾಯ್ ವೀಲ್‌ಗಳನ್ನು ಅಳವಡಿಸಲಾಗಿದ್ದು, ಹೆದ್ದಾರಿಯಲ್ಲಿ ಕಾರು ಚಲಿಸುತ್ತಿರುವಾಗಲೇ ಕಳಚಿಕೊಂಡಿವೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್‌ಗಳು ಸುಧಾರಿತ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ನೀಡುತ್ತವೆ ಎಂದುಕೊಂಡರೆ ತಪ್ಪು. ಈ ಆಫ್ಟರ್ ಮಾರ್ಕೆಟ್ ವಸ್ತುಗಳ ಹಿಂದೆ ಅಪಾಯಗಳ ಸಮುದ್ರವೇ ಇದೆ ಎಂಬುದಕ್ಕೆ ಬೆಂಟ್ಲೆಯ ಇತ್ತೀಚಿನ ಘಟನೆ ಸಾಕ್ಷಿಯಾಗಿದೆ. ಹೆದ್ದಾರಿಯಲ್ಲಿ ಕಾರು ಚಲಿಸುತ್ತಿದ್ದಾಗ ಚಕ್ರಗಳು ಬೇರ್ಪಟ್ಟು ತೀವ್ರ ಹಾನಿಗೆ ಒಳಗಾಗಿದೆ. ಮುರಿದಿರುವ ರಿಮ್ ಅನ್ನು ನೀವು ಇಲ್ಲಿ ನೋಡಬಹುದು. ಅದೃಷ್ಟವಶಾತ್, ಬೆಂಟ್ಲೆ ನಿಯಂತ್ರಣವನ್ನು ಕಳೆದುಕೊಂಡು ಅಪಘಾತಕ್ಕೀಡಾಗಿಲ್ಲ. ಒಂದು ಚಕ್ರವಿಲ್ಲದೆ, ರಸ್ತೆಗೆ ಅಪ್ಪಳಿಸಿ ಕೆಳಭಾಗ ಹಾನಿಯಾಗಿದೆ. ಕಾರು ಮಾಲೀಕ ಇದನ್ನು ಆಡಿ ಎಸ್ 8 ನಂತಹ ನಕಲಿ (replica) ಅಲಾಯ್ ವೀಲ್‌ಗಳೊಂದಿಗೆ ಅಳವಡಿಸಿದ್ದಾರೆ ಎಂದು ತಿಳಿದುಬಂದಿದೆ.

bentley-aftermarket-alloy-wheel-that-caused-the-accident

ಮೂಲ ಎಸ್ 8 ವೀಲ್‌ಗಳನ್ನು ಹಗುರವಾಗಿ ಬಾಳಿಕೆ ಬರುವಂತೆ ಪಾಲಿಮರ್‌ಗಳಿಂದ ವಿನ್ಯಾಸಗೊಳಿಸಲಾಗಿದೆ. ಆದರೆ ಡೂಪ್ಲಿಕೇಟ್‌ಗಳು ಒಂದೇ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿರುವುದಿಲ್ಲ. ಆದ್ದರಿಂದ, ವಾಹನವು ಚಾಲನೆಯಲ್ಲಿರುವಾಗ ಹಬ್‌ನಿಂದ ಅಂಚು ಕತ್ತರಿಸಿಕೊಂಡು ಈ ವೈಫಲ್ಯ ಸಂಭವಿಸಿದೆ. ಸಾಮಾನ್ಯವಾಗಿ ನಿಜವಾದ ತಯಾರಕರು ಮಾಡುವ ಕಠಿಣ ಪರೀಕ್ಷೆ ಮತ್ತು ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ನಕಲು ಮಾಡುವವರು ಮಾಡುವುದಿಲ್ಲ. ಪರಿಣಾಮವಾಗಿ ಇಂತಹ ವೈಫಲ್ಯಳು ಆಗುತ್ತವೆ.

ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್‌ಗಳ ಕಳಪೆ ಗುಣಮಟ್ಟವು ಕಾಲಾನಂತರದಲ್ಲಿ ಗಾಳಿ ಸೋರಿಕೆಯಂತಹ ದೋಷಗಳಿಗೆ ಕಾರಣವಾಗಬಹುದು. ಕಡಿಮೆ ಬೆಲೆಯ ಟೈರ್ ವಾಹನ ನಿರ್ವಹಣೆ ಮತ್ತು ಸ್ಥಿರತೆಯ ಮೇಲೆ ಪರಿಣಾಮ ಬೀರುವುದಲ್ಲದೆ ಟೈರ್ ಸ್ಫೋಟಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಚಾಲಕ ಮತ್ತು ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುತ್ತದೆ.

bentley-aftermarket-alloy-wheel-that-caused-the-accident

ಹೊಸ ಅಲಾಯ್ ವೀಲ್‌ಗಳನ್ನು ಖರೀದಿಸುವ ಇವನ್ನು ಪರಿಗಣಿಸಿ: ಮೊದಲನೆಯದಾಗಿ, ಅಗ್ಗದ ಅಲಾಯ್ ವೀಲ್‌ಗಳಿಗೆ ಹೋಗಬೇಡಿ. ಕಡಿಮೆ ಬೆಲೆಗೆ ಮಾರಾಟವಾಗುವ ರಿಮ್‌ಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಿ, ಇವು ಕಡಿಮೆ-ಗುಣಮಟ್ಟದ ರಿಮ್‌ಗಳಾಗಿರುತ್ತವೆ. ಸಾಧ್ಯವಾದಾಗಲೆಲ್ಲಾ, ನೀವು ಮೂಲ ಸಲಕರಣೆ ತಯಾರಕ (ಒಇಎಂ) ರಿಮ್‌ಗಳನ್ನು ಆಯ್ಕೆ ಮಾಡಲು ಪ್ರಯತ್ನಿಸಬೇಕು. ಏಕೆಂದರೆ ಈ ಒಇಎಂ ಅಲಾಯ್ ವೀಲ್‌ಗಳು ಕಠಿಣ ಪರೀಕ್ಷೆಗೆ ಒಳಗಾಗುತ್ತವೆ, ಅವು ಗುಣಮಟ್ಟ ಮತ್ತು ಸುರಕ್ಷತೆಗಾಗಿ ಎಲ್ಲಾ ಉದ್ಯಮ ಮಾನದಂಡಗಳನ್ನು ಸಹ ಪೂರೈಸುತ್ತವೆ. ಇಲ್ಲಾ, ನಾವು ಆಫ್ಟರ್ ಮಾರ್ಕೆಟ್ ಬಯಸುವ ಉತ್ಸಾಹಿಗಳು, ನಮಗೆ ಅವೇ ಬೇಕು ಎಂದರೆ... ನಿಮ್ಮ ಬುದ್ಧಿವಂತ ಕ್ರಮವೆಂದರೆ ಪ್ರಸಿದ್ಧ ಮತ್ತು ವಿಶ್ವಾಸಾರ್ಹ ಆಫ್ಟರ್ ಮಾರ್ಕೆಟ್ ಬ್ರಾಂಡ್‌ನಲ್ಲಿ ಖರೀದಿಸಬೇಕು.

ಉತ್ತಮ ಗುಣಮಟ್ಟದ ರಿಮ್‌ಗಳನ್ನು ಮಾರಾಟ ಮಾಡುವ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಪ್ರತಿಷ್ಠಿತ ಅಂಗಡಿಗಳಿಂದ ಖರೀದಿಸಬೇಕು. ಆನ್‌ಲೈನ್ ಖರೀದಿಗೆ ಮುಂದಾದರೇ, ಖರೀದಿಗೂ ಮುನ್ನ ಮಾರಾಟಗಾರರ ವಿಮರ್ಶೆಗಳನ್ನು ಪರಿಶೀಲಿಸಬೇಕು. ಏಕೆಂದರೆ ಸಾಕಷ್ಟು ಅನುಮಾನಾಸ್ಪದ ಮಾರಾಟಗಾರರು ನಕಲಿ ಅಲಾಯ್ ವೀಲ್‌ಗಳನ್ನು ಒರಿಜಿನಲ್ ಎಂದು ನಂಬಿಸುತ್ತಾರೆ.

bentley-aftermarket-alloy-wheel-that-caused-the-accident

ಕೊನೆಯ ಮತ್ತು ಅತ್ಯಂತ ಪ್ರಮುಖ ಹಂತವೆಂದರೆ, ಹೊಸ ರಿಮ್‌ಗಳು ಹಳೆಯವುಗಳಿಗೆ ಹೊಂದಿಕೆಯಾಗುತ್ತವೆಯೇ ಎಂದು ಪರಿಶೀಲಿಸಬೇಕು. ಚೆಕ್ ಲಿಸ್ಟ್ ಗಾತ್ರ ಮತ್ತು ಪಿಸಿಡಿ (ಪಿಚ್ ಸರ್ಕಲ್ ಡಯಾಮೀಟರ್) ಅನ್ನು ಒಳಗೊಂಡಿರಬೇಕು. ಖರೀದಿ ಮಾಡುವ ಮೊದಲು ಒಮ್ಮೆ ಪರಿಶೀಲಿಸಿದರೆ, ಇದು ಹೊಂದಾಣಿಕೆಯ ಸಮಸ್ಯೆಗಳನ್ನು ತಡೆಯುತ್ತದೆ. ಜೊತಗೆ ಸುರಕ್ಷಿತ ವಾಹನ ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 13, 2024, 8:30 [IST]
English summary
Bentley aftermarket alloy wheel that caused the accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+