106 ಕೋಟಿಯ ಕಾರು ಸೇಲ್ ಮಾಡಿದ ಸೇಲ್ಸ್ ವುಮನ್

Posted By:

ಹೆಸರಲ್ಲೇ ಸೂಚಿಸಿರುವಂತೆಯೇ ಸೇಲ್ಸ್ ವುಮನ್ ಅಥವಾ ಮಾರಾಟಗಾರ್ತಿ ಪ್ರಮುಖವಾಗಿಯೂ ಸೇಲ್ ಮಾಡುವುದರಲ್ಲಿ ಗಮನ ಕೇಂದ್ರಿತವಾಗಿರುತ್ತಾರೆ. ಇಂದಿನ ಆಧುನಿಕ ಯುಗದಲ್ಲಂತೂ ತಮ್ಮ ಮೈಮಾಟದ ಮೂಲಕ ಹೆಚ್ಚು ಮಾರಾಟವನ್ನು ಕುದುರಿಸಿಕೊಳ್ಳುವ ತಂತ್ರ ಅನುಸರಿಸುತ್ತಾರೆ.

ಇನ್ನು ಕಾರು, ಬೈಕ್‌ಗಳನ್ನು ಸೇಲ್ ಮಾಡಬೇಕೆಂದರೆ ಅಂದೊಂದು ಜಾಣತನದ ಕೆಲಸವಾಗಿರುತ್ತದೆ. ಗ್ರಾಹಕರಿಗೆ ನಿರ್ದಿಷ್ಟ ವಾಹನಗಳನ್ನು ಖರೀದಿಸುವಂತೆ ಮನವೊಳಿಸಲು ಸೇಲ್ ವುಮನ್‌ಗಳಿಗೆ ಹೆಚ್ಚಿನ ಕೌಶಲ್ಯದ ಅಗತ್ಯವಿರುತ್ತದೆ.

ಇನ್ನು ಮುಂದಕ್ಕೆ ಯೋಚಿಸುತ್ತಾ ಸಾಗಿದರೆ ದುಬಾರಿ ಕಾರುಗಳನ್ನು ಮಾರಾಟ ಮಾಡಲು ಹೆಚ್ಚು ಚಾತುರ್ಯದ ಅಗತ್ಯವಿರುತ್ತದೆ. ಇದೇ ರೀತಿಯ ಮಹಿಳೆಯೊಬ್ಬಕೆಯನ್ನು ನಾವಿಂದು ಪರಿಚಯಿಸಿಕೊಡಲಿದ್ದೇವೆ.

ಈಕೆ ಲಂಡನ್ ಮೂಲದ ಸೇಲ್ಸ್ ವುಮನ್ ಅನಿತಾ ಕ್ರಿಜ್ಸಾನ್ (anita krizsan). ಮೇಫೇರ್ ಡೀಲರ್‌ಶಿಪ್‌ಗಾಗಿ ಕೆಲಸ ಮಾಡುತ್ತಿರುವ ಈಕೆ ವರ್ಷವೊಂದರಲ್ಲಿ 11 ಬುಗಾಟಿ ವೆರೊನ್ ಹೈಪರ್ ಕಾರುಗಳನ್ನು ಸೇಲ್ ಮಾಡುವ ಮೂಲಕ ನೂತನ ದಾಖಲೆ ಸ್ಥಾಪಿಸಿದ್ದಾರೆ.

ಒಟ್ಟು 13 ಮಿಲಿಯನ್ ಪೌಂಡ್ ಮೌಲ್ಯದ ವಾಹನಗಳನ್ನು ಅನಿತಾ ಸೇಲ್ ಮಾಡಿದ್ದಾರೆ. ಅಂದರೆ ಬರೋಬ್ಬರಿ 106 ಕೋಟಿ ರು.ಗಳ ಸೂಪರ್ ಕಾರುಗಳನ್ನು ಮಾರಾಟ ಮಾಡಿದ್ದಾರೆ. ಅಷ್ಟಕ್ಕೂ ಸೇಲ್ಸ್ ವುಮನ್ ಏನು ಮೋಡಿ ಮಾಡಿದರು? ಬನ್ನಿ ತಿಳಿಯೋಣ...

Best Auto Saleswoman Ever!

ವಿಶ್ವದ ಅತಿ ವೇಗದ ಸೂಪರ್ ಕಾರುಗಳಲ್ಲಿ ಒಂದಾಗಿರುವ ಬುಗಾಟಿ ವೆರೊನ್ ಪ್ರತಿ ಗಂಟೆಗೆ 267 ಕೀ. ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

Best Auto Saleswoman Ever!

39ರ ಹರೆಯದ ಹಂಗೇರಿ ಮೂಲದ ಅನಿತಾ ಇದೀಗ ವಿಶ್ವದ ಅತಿಶ್ರೇಷ್ಠ ಡೀಲರ್ ಎನಿಸಿಕೊಂಡಿದ್ದಾರೆ. ಈಕೆ ಸೇಲ್ ಮಾಡಿರುವ ಪ್ರತಿಯೊಂದು ಕಾರಿನ ದರ ಒಂದು ಕೋಟಿಗಿಂತಲೂ ಮೀರಿದ್ದಾಗಿದೆ.

Best Auto Saleswoman Ever!

ವೆರೊನ್ ಗ್ರಾಂಡ್ ಸ್ಪೋರ್ಟ್, ವೆರೊನ್ ಗ್ರಾಂಡ್ ಸ್ಪೋರ್ಟ್ ವಿಟೆಸ್ಸೆ ಹಾಗೂ ವೆರೊನ್ ಸೂಪರ್ ಕಾರುಗಳನ್ನು ಸೇಲ್ಸ್ ವುಮನ್ ಮಾರಾಟ ಮಾಡಿದ್ದಾರೆ.

Best Auto Saleswoman Ever!

ಪ್ರಸ್ತುತ ಅನಿತಾ ಅವರನ್ನು 'ದಿ 15 ಮಿಲಿಯನ್ ವುಮನ್' ಎಂಬ ಅಕ್ಕರೆಯ ಹೆಸರಿನಿಂದ ಕರೆಯಲಾಗುತ್ತಿದೆ.

Best Auto Saleswoman Ever!

ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬುಗಾಟಿ ಸೂಪರ್ ಕಾರುಗಳನ್ನು ಖರೀದಿಸಬೇಕೆಂಬ ಹಂಬಲವನ್ನು ಅನಿತಾ ಹೊಂದಿದ್ದಾರೆ.

Anita Krizsan

Anita Krizsan

Anita Krizsan

Anita Krizsan

English summary
A luxury car saleswoman has been hailed as one of the world's best after it emerged she had sold more than £13million worth of Bugatti Veyrons in a single year.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more