ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಭಾರತ ಮೂಲದ ಟಾಟಾ ಕಂಪನಿಯು ಗುಣಮಟ್ಟದ ಸುರಕ್ಷಿತ ಕಾರುಗಳನ್ನು ತಯಾರಿಸುವುದರಲ್ಲಿ ಎತ್ತಿದ ಕೈ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ನೆಕ್ಸಾನ್ ಕಾರು. ಟಾಟಾ ನೆಕ್ಸಾನ್ ಕ್ರಾಶ್ ಟೆಸ್ಟಿಂಗ್ ಏಜೆನ್ಸಿಯಾದ ಗ್ಲೋಬಲ್ ಎನ್‍‍ಸಿ‍ಎ‍‍ಪಿ ನಡೆಸುವ ಟೆಸ್ಟ್ ನಲ್ಲಿ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದ ಭಾರತದ ಮೊದಲ ಕಾರ್ ಆಗಿದೆ.

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಟಾಟಾ ನೆಕ್ಸಾನ್ ಸುರಕ್ಷತೆಗಾಗಿ 5 ಸ್ಟಾರ್ ಪಡೆದ ಭಾರತದ ಏಕೈಕ ಕಾರ್ ಸಹ ಆಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಟಾಟಾ ನೆಕ್ಸಾನ್ ಸಾಕಷ್ಟು ಜನಪ್ರಿಯವಾಗಿದೆ. ಟಾಟಾ ನೆಕ್ಸಾನ್ ಕಾರುಗಳನ್ನು ಖರೀದಿಸಿರುವ ಗ್ರಾಹಕರು ಅದರಲ್ಲಿರುವ ಗುಣಮಟ್ಟ ಹಾಗೂ ಸುರಕ್ಷಾ ಫೀಚರ್‍‍ಗಳನ್ನು ಶ್ಲಾಘಿಸಿದ್ದಾರೆ.

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಟಾಟಾ ನೆಕ್ಸಾನ್ ರಸ್ತೆ ಅಪಘಾತಕ್ಕೊಳಗಾದಾಗ ಅದರಲ್ಲಿದ್ದ ಪ್ರಯಾಣಿಕರನ್ನು ಸಾವಿನಂಚಿನಿಂದ ಪಾರು ಮಾಡಿದೆ. ಕಾರಿನಲ್ಲಿದ್ದವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಟಾಟಾ ನೆಕ್ಸಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಟಾಟಾ ನೆಕ್ಸಾನ್ ಕಾರು ಭೀಕರ ರಸ್ತೆ ಅಪಘಾತವಾದರೂ ಪ್ರಾಣಾಪಾಯದಿಂದ ಪಾರು ಮಾಡಿದೆ.

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ದಿಲ್‍‍ಪ್ರೀತ್ ಸಿಂಗ್ ಎಂಬುವವರೇ ಆ ಅದೃಷ್ಟವಂತ ಪ್ರಯಾಣಿಕರು. ಇವರು ಟಾಟಾ ನೆಕ್ಸಾನ್ ಕಾರ್ ಅನ್ನು ಹೊಂದಿದ್ದಾರೆ. ಇತ್ತೀಚಿಗೆ ಮಧ್ಯರಾತ್ರಿಯಲ್ಲಿ ದೆಹಲಿಯಲ್ಲಿ ತಮ್ಮ ಟಾಟಾ ನೆಕ್ಸಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ತಮ್ಮ ಟಾಟಾ ನೆಕ್ಸಾನ್ ಕಾರಿನಲ್ಲಿ ಚಿಕ್ಕ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ದಿಲ್‍ಪ್ರೀತ್ ಸಿಂಗ್‍‍ರವರ ಎದುರಿಗೆ ಬೇರೆ ವಾಹನವೊಂದು ಬಂದಿದೆ. ಚಿಕ್ಕ ರಸ್ತೆಯಾದ ಕಾರಣ ಎದುರುಗಡೆಯಿಂದ ಬಂದ ವಾಹನದಲ್ಲಿದ್ದ ಚಾಲಕನಿಗೆ ತನ್ನ ವಾಹನದ ಮೇಲೆ ನಿಯಂತ್ರಣ ಸಿಕ್ಕಿಲ್ಲ.

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ದಿಲ್‍‍ಪ್ರೀತ್ ಸಿಂಗ್‍‍ರವರು ತಮ್ಮ ಕಾರು ಎದುರಿಗಿದ್ದ ವಾಹನಕ್ಕೆ ಗುದಿಯುವುದನ್ನು ತಪ್ಪಿಸಲು ರಸ್ತೆ ಬದಿಯಲ್ಲಿದ್ದ ರಾಯಲ್ ಟ್ರೀಗೆ ಗುದ್ದಿದ್ದಾರೆ. ಆ ವೇಳೆಯಲ್ಲಿ ಟಾಟಾ ನೆಕ್ಸಾನ್ ಕಾರು ಯಾವ ವೇಗದಲ್ಲಿ ಚಲಿಸುತ್ತಿತ್ತು ಎಂಬುದು ಸ್ವತಃ ದಿಲ್‍‍ಪ್ರೀತ್‍‍ರವರಿಗೆ ಖಚಿತವಾಗಿ ತಿಳಿದಿಲ್ಲ.

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಆದರೆ ದಿಲ್‍‍ಪ್ರೀತ್ ಸಿಂಗ್‍‍ರವರ ಅಂದಾಜಿನ ಪ್ರಕಾರ ಕಾರು ಪ್ರತಿ ಗಂಟೆಗೆ ಸುಮಾರು 55ರಿಂದ 60 ಕಿ.ಮೀ ವೇಗದಲ್ಲಿತ್ತು ಎಂಬುದಾಗಿ ಹೇಳಿದ್ದಾರೆ. ಅಪಘಾತದ ಸಮಯದಲ್ಲಿ ಈ ವೇಗವು ಜಾಸ್ತಿಯಾಯಿತು ಎಂಬುದನ್ನು ಗಮನಿಸಬೇಕು. ಇದರ ಜೊತೆಗೆ ಮಧ್ಯರಾತ್ರಿಯ ಸಮಯವಾದ್ದರಿಂದ ಅಲ್ಲಿ ಸಹಾಯಕ್ಕೆ ಯಾರೊಬ್ಬರೂ ಇರಲಿಲ್ಲ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಟಾಟಾ ನೆಕ್ಸಾನ್‍‍ನಲ್ಲಿದ್ದ ಏರ್‍‍ಬ್ಯಾಗ್‍‍ಗಳು ಸಮಯಕ್ಕೆ ಸರಿಯಾಗಿ ತೆರೆದುಕೊಂಡಿವೆ. ಇದರಿಂದಾಗಿ ದಿಲ್‍‍ಪ್ರೀತ್‍‍ರವರ ಜೀವ ಉಳಿದಿದೆ. ಅಲ್ಲದೇ ಅವರಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಈ ಕಾರಣಕ್ಕೆ ತಮ್ಮ ಟಾಟಾ ನೆಕ್ಸಾನ್ ಕಾರಿಗೆ ಧನ್ಯವಾದ ಹೇಳಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಅಪಘಾತವಾದಾಗ ದಿಲ್‍‍ಪ್ರೀತ್‍‍ರವರನ್ನು ಹೊರಗೆಳೆಯಲು ಸ್ಥಳದಲ್ಲಿ ಯಾರೊಬ್ಬರೂ ಇರಲಿಲ್ಲ. ಸ್ವತಃ ದಿಲ್‍‍ಪ್ರೀತ್ ಸಿಂಗ್‍‍ರವರೇ ಮುಂಭಾಗದ ಪ್ರಯಾಣಿಕರ ಬಳಿಯಿರುವ ಡೋರ್ ಒಡೆದು ಹೊರ ಬಂದಿದ್ದಾರೆ. ಚಾಲಕನ ಕಡೆಯಿರುವ ಫೆಂಡರ್ ಹಾಗೂ ರೂಫ್‍‍ಗಳು ನಾಶವಾಗಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಆಶ್ಚರ್ಯಕರ ಸಂಗತಿಯೆಂದರೆ ಕಾರಿನ ಪಿಲ್ಲರ್‍‍ಗೆ ಯಾವುದೇ ಹಾನಿಯಾಗಿಲ್ಲ. ಅಪಘಾತಕ್ಕೊಳಗಾದ ಟಾಟಾ ನೆಕ್ಸಾನ್‍‍ನ ಈ ಕಾರ್ ಅನ್ನು 2018ರ ನವೆಂಬರ್‍‍ನಲ್ಲಿ ಖರೀದಿಸಲಾಗಿತ್ತೆಂದು ದಿಲ್‍‍ಪ್ರೀತ್ ಸಿಂಗ್ ತಿಳಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಈ ಕಾರು 4 ಸ್ಟಾರ್ ರೇಟಿಂಗ್ ಹೊಂದಿದೆ.

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

2018ರ ನವೆಂಬರ್‍‍ಗೆ ಮುಂಚೆ ತಯಾರಾದ ಟಾಟಾ ಕಾರುಗಳು ಗ್ಲೋಬಲ್ ಎನ್‍‍ಸಿ‍ಎ‍‍ಪಿಯಿಂದ 4 ಸ್ಟಾರ್ ರೇಟಿಂಗ್ ಅನ್ನು ಮಾತ್ರ ಪಡೆದಿದ್ದವು. ಅದಾದ ನಂತರ ತನ್ನ ಕಾರುಗಳಲ್ಲಿನ ಸುರಕ್ಷತೆಯನ್ನು ಹೆಚ್ಚಿಸಿದ ಟಾಟಾ 5 ಸ್ಟಾರ್ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಯಿತು.

ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

4 ಸ್ಟಾರ್ ರೇಟಿಂಗ್ ಹೊಂದಿದ್ದರೂ ಸಹ ಈ ಟಾಟಾ ನೆಕ್ಸಾನ್ ಕಾರು ಅದರಲ್ಲಿದ್ದ ಪ್ರಯಾಣಿಕರನ್ನು ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿಯಾಗದಂತೆ ರಕ್ಷಿಸಿದೆ. ಅಂದ ಹಾಗೆ ಟಾಟಾ ನೆಕ್ಸಾನ್ ರಸ್ತೆ ಅಪಘಾತವಾದಾಗ ಅದರಲ್ಲಿದ್ದ ಪ್ರಯಾಣಿಕರ ಪ್ರಾಣಕ್ಕೆ ತೊಂದರೆಯಾಗದಂತೆ ರಕ್ಷಿಸುತ್ತಿರುವುದು ಇದೇ ಮೊದಲ ಸಲವೇನಲ್ಲ. ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಪ್ರಯಾಣಿಕರ ಜೀವ ಉಳಿಸಿತ್ತು.

More from DriveSpark

Article Published On: Friday, November 8, 2019, 10:55 [IST]
English summary
Big accident tata nexon saves owner - Read in Kannada
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+