ಬಿಗ್ ಬಾಸ್ ಟ್ರೋಫಿ ಗೆದ್ದ ಸ್ಟ್ಯಾಂಡಪ್ ಕಾಮಿಡಿಯನ್‌ಗೆ 50 ಲಕ್ಷ ನಗದು, ಹೊಸ ಕಾರು ಬಹುಮಾನ
ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಹಿಂದಿ ಸೀಸನ್ 17' ('Bigg Boss 17) ಭಾನುವಾರ ಮುಕ್ತಾಯಗೊಂಡಿದೆ. ಬಿಗ್ ಬಾಸ್ ಸೀಸನ್ 17ರ ಟ್ರೋಫಿ ಎತ್ತಿ ಯಾರು ಹಿಡಿಯುತ್ತಾರೆ ಎಂಬ ಕುತೂಹಲ ಮೂಡಿತ್ತು. ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರುಕಿ (Munawar Faruqui) ಅವರು ನಟ, ನಟಿಯರನ್ನು ಸೋಲಿಸಿ ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಆಯೋಜಿಸಿದ್ದ 'ಲಾಕ್ ಅಪ್' ಮೊದಲ ಸೀಸನ್ ಗೆದ್ದ ನಂತರ, ಮುನಾವರ್ ಫಾರೂಕಿ ಅವರು ನಟ ಅಭಿಷೇಕ್ ಕುಮಾರ್ ಅವರನ್ನು ಸೋಲಿಸುವ ಮೂಲಕ 'ಬಿಗ್ ಬಾಸ್ 17' ಅನ್ನು ಗೆದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 15 ವಾರಗಳ ಕಾಲ ಯಶಸ್ವಿಯಾಗಿ ಉಳಿದುಕೊಂಡಿರುವ ಸ್ಟಾರ್ 50 ಲಕ್ಷ ರೂಪಾಯಿ ಬಹುಮಾನವನ್ನು ಮನೆಗೆ ತೆಗೆದುಕೊಂಡರು. 50 ಲಕ್ಷ ನಗದು ಬಹುಮಾನದ ಜೊತೆಗೆ ಹ್ಯುಂಡೈ ಕ್ರೆಟಾ ಎಸ್‌ಯುವಿಯನ್ನು ಕೂಡ ಪಡೆದಿದ್ದಾರೆ.

ಇತರ ಅಂತಿಮ ಸ್ಪರ್ಧಿಗಳು ಅಂಕಿತ್ ಲೋಖಂಡೆ, ಮನ್ನಾರಾ ಚೋಪ್ರಾ ಮತ್ತು ಅಭಿಷೇಕ್. ಮುನಾವರ್ ಫಾರೂಕಿ ಮೊದಲಿನಿಂದಲೂ 'ಬಿಗ್ ಬಾಸ್ 17' ಮನೆಯೊಳಗಿನ ಅತ್ಯಂತ ಗಮನಾರ್ಹ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅವರು ಮೊದಲಿನಿಂದಲೂ ಪ್ರೇಕ್ಷಕರ ಗಮನವನ್ನು ಸೆಳೆದರು ಆದರೆ ಅವರ ಹಿಂದಿನ ಆಯೇಶಾ ಖಾನ್ ಆಗಮನದೊಂದಿಗೆ ಜನಪ್ರಿಯತೆ ಕಡಿಮೆಯಾಗಿತ್ತು.
ಕಾರ್ಯಕ್ರಮದಲ್ಲಿ ಮುನಾವರ್ ವಿರುದ್ಧ ಆಯೇಷಾ ಹಲವು ಆರೋಪಗಳನ್ನು ಎತ್ತಿದ್ದರು. ಆದರೆ ಮುನಾವರ್ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಭಾರಿ ಮತಗಳ ಬೆಂಬಲದೊಂದಿಗೆ ಕಾರ್ಯಕ್ರಮದ ವಿಜೇತರಾದರು. 'ಬಿಗ್ ಬಾಸ್' ವಿನ್ನರ್‌ಗಳ ಜನಪ್ರಿಯತೆ ಹೆಚ್ಚುತ್ತಿರುವಂತೆಯೇ ಅವರಿಗೆ ಹೆಚ್ಚಿನ ಅವಕಾಶಗಳು ಬರುತ್ತಿವೆ. ನಟಿಯರಾದ ಮನ್ನಾರಾ ಚೋಪ್ರಾ, ಅಂಕಿತಾ ಲೋಖಂಡೆ ಮತ್ತು ಯೂಟ್ಯೂಬರ್ ಅರುಣ್ ಶ್ರೀಕಾಂತ್ ಮಹಾಶೆಟ್ಟಿ ಅವರು ಫೈನಲ್‌ನಲ್ಲಿ ಬಿಗ್ ಬಾಸ್ ಟ್ರೋಫಿಗಾಗಿ ಸ್ಪರ್ಧಿಸುತ್ತಿದ್ದ ಇತರ ಸ್ಪರ್ಧಿಗಳು.

ಮುನಾವರ್ ಬಿಗ್ ಬಾಸ್ ಟ್ರೋಫಿ ಗೆದ್ದರೆ, ನಟ ಅಭಿಷೇಕ್ ಕುಮಾರ್ ರನ್ನರ್ ಅಪ್ ಆಗಿದ್ದಾರೆ. ನಟ ಮನ್ನಾರಾ ಚೋಪ್ರಾ ಮೂರನೇ ಸ್ಥಾನ ಪಡೆದರು ಮತ್ತು ನಟಿ ಅಂಕಿತಾ ಲೋಖಂಡೆ ನಾಲ್ಕನೇ ಸ್ಥಾನ ಪಡೆದರು. ಹಾಗೆಯೇ ಟಾಫ್ ಫೈವ್‌ನಲ್ಲಿ ಯೂಟ್ಯೂಬರ್ ಅರುಣ್ ಮಹಾಶೆಟ್ಟಿ ಕೂಡ ಇದ್ದರು. ಇನ್ನು ಬಾಸ್ ವಿನ್ನರ್ ಎಂಬ 17ರ ಪಟ್ಟ ಗೆದ್ದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಟ್ರೋಫಿ ಜತೆ ತಮ್ಮ ಮೊದಲ ಫೋಟೋವನ್ನು ಮುನಾವರ್ ಹಂಚಿಕೊಂಡಿದ್ದಾರೆ.
ಮುನಾವರ್ ಫಾರುಕಿ ಅವರಿಗೆ ಸಿಕ್ಕ ಹ್ಯುಂಡೈ ಕ್ರೆಟಾ (Hyundai creta) ಕಾರಿನ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯು ಏಳು ವಿಭಿನ್ನ ಟ್ರಿಮ್‌ಗಳಲ್ಲಿ ಹೊಂದಿದ್ದು, ಇದರ ಮೂಲ E ವೇರಿಯೆಂಟ್‌ಗೆ 10,99,900 ಮತ್ತು SX(O) ಟಾಪ್-ಎಂಡ್ ಮಾದರಿಗೆ ರೂ. 17,23,800 (ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ) ಬೆಲೆಯಿದೆ. ಈ ಎಸ್‍ಯುವಿಯಲ್ಲಿ ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಗಳನ್ನು ಒಳಗೊಂಡಿದೆ. ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ನೀಡಲಾಗಿದೆ.

ಪ್ರಯಾಣಿಕರ ಬದಿಯ ಡ್ಯಾಶ್‌ಬೋರ್ಡ್‌ನ ಮೇಲಿನ ಈಗ ಪಿಯಾನೋ ಬ್ಲಾಕ್ ಪ್ಯಾನಲ್ ನೀಡಲಾಗಿದೆ. ಹೊಸ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯ ಹೊರತಾಗಿ, ಕ್ರೆಟಾ ಫೇಸ್‌ಲಿಫ್ಟ್ ಅನ್ನು ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಡ್ಯುಯಲ್-ಜೋನ್ AC ಯೊಂದಿಗೆ ಒದಗಿಸಲಾಗಿದೆ. ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಅನ್ನು ನೀಡಲಾಗಿದೆ.
ಸುರಕ್ಷತೆಯ ವಿಷಯದಲ್ಲಿ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯನ್ನು ಒಳಗೊಂಡಿದೆ. ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಮತ್ತು ದುಬಾರಿ ಪ್ಯಾಕೇಜ್ ಜೊತೆಗೆ, ಹೊಸ ಹುಂಡೈ CRETA ಒಳಭಾಗವು ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ.
ಈ ಎಸ್‍ಯುವಿಯಲ್ಲಿ ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಇದರಲ್ಲಿ 6-speed MT, CVT ಹಾಗೂ 7-speed DCT ಮತ್ತು 6-speed MT, 6-speed AT ಆಯ್ಕೆಯನ್ನು ನೀಡಲಾಗಿದೆ.


Click it and Unblock the Notifications