ಬಡ ಕುಟುಂಬದಿಂದ ಬಂದ ತುಕಾಲಿ ಸಂತೋಷ್ ಕನಸು ಕೊನೆಗೂ ನನಸು: ಹೊಸ ಕಾರು ಖರೀದಿ

ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Kannada 10) ಸ್ಪರ್ಧಿ ತುಕಾಲಿ ಸಂತೋಷ್ (Tukali Santhosh) ಅವರು ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಹೊಸ ಕಾರನ್ನು ಖರೀದಿಸಬೇಕೆಂಬ ತುಕಾಲಿ ಸಂತೋಷ್ ಬಹುದಿನಗಳ ಕನಸು ನನಸಾಗಿದೆ. ಈ ಹೊಸ ಕಾರಿನ ವಿಡಿಯೋವನ್ನು ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅತ್ಯಂತ ಬಡ ಕುಟುಂಬದಿಂದ ಬಂದ ತುಕಾಲಿ ಸಂತೋಷ್ ಕಾಮಿಡಿ ಶೋಗಳಲ್ಲಿ ತೊಡಗಿಸಿಕೊಂಡು ತಮ್ಮ ಹಾಸ್ಯದಿಂದಲೇ ರಾಜ್ಯಾದ್ಯಂತ ಜನಪ್ರಿಯತೆಗಳಿಸಿದರು. ಬಿಗ್‌ಬಾಸ್‌ ಸೀಸನ್ 10ಕ್ಕೆ ಆಯ್ಕೆಯಾದರು. ಇಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಗದಿದ್ದರೂ ಉತ್ತಮ ಆಟವಾಡಿ ಇಡೀ ರಾಜ್ಯದ ಜನರ ಪ್ರೀತಿಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್ ಬಾಸ್ ಶೋ ಮುಗಿದ್ಮೇಲೆ ಹಲವರ ಬದುಕು ಬದಲಾಗಿದೆ. ತುಕಾಲಿ ಸಂತೋಷ್ ಲೈಫ್‌ನಲ್ಲಿಯೂ ಕೂಡ ಹೊಸ ಜರ್ನಿ ಶುರುವಾಗಿದೆ. ರಿಯಾಲಿಟಿ ಶೋ ಮಧ್ಯೆ ಸಿನಿಮಾ ಅವಕಾಶಗಳು ಬರುತ್ತಿದೆ.

Bigg Boss Tukali Santhosh

ಕಾಮಿಡಿ ಮೂಲಕ ಖ್ಯಾತಿ ಗಳಿಸಿದ ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಪುನಃ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕಾಮಿಡಿ ಶೋಗಳಲ್ಲಿ ಅವರ ಪತ್ನಿ ಮಾನಸ ಕೂಡ ಭಾಗವಹಿಸುತ್ತಿದ್ದಾರೆ. ಬಿಗ್ ಬಾಸ್ ಫಿನಾಲೆವರೆಗೆ ಇದ್ದ ಅವರು ನಾಲ್ಕನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ದೊಡ್ಮನೆಯಿಂದ ಬಂದ ಸಂಭಾವನೆಯಿಂದ ಅವರು ಕಾರು ಖರೀದಿ ಮಾಡಿದ್ದಾರೆ. ಈ ವೇಳೆ, ಅವರ ಪತ್ನಿ ಮಾನಸಾ ಕೂಡ ಇದ್ದರು.

ತುಕಾಲಿ ಸಂತೋಷ್ ಖರೀದಿಸಿದ ಕಾರು ಬಗ್ಗೆ ಹೇಳುವುದಾದರೆ, ಇದು ಕಿಯಾ ಸೆಲ್ಟೋಸ್ (kia seltos) ಆಗಿದೆ. ಕಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಇತ್ತೀಚೆಗೆ ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು ಕಿಯಾ ಸೆಲ್ಟೋಸ್ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿ ಸುನಾಮಿ ಎಬ್ಬಿಸಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.

Bigg Boss Tukali Santhosh

ಭಾರತದ ಗ್ರಾಹಕರು ಹೊಸ ಸೆಲ್ಟೋಸ್ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ.ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮಾಡೆಲ್ ಅದರ ಸ್ಪೋರ್ಟಿ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಎಸ್‍ಯುವಿಯ ಒಳಭಾಗವು ಅದರ ಹೊಸ ಡ್ಯುಯಲ್-ಸ್ಕ್ರೀನ್ ವಿನ್ಯಾಸದೊಂದಿಗೆ ಹೆಚ್ಚು ಹೈಟೆಕ್ ಆಗಿ ಕಾಣುತ್ತದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬಗ್ಗೆ ಹೇಳುವುದಾದರೆ, ಪ್ರಮುಖ ಅಂಶವೆಂದರೆ ಈಗ ಲೆವೆಲ್-2 ADAS ತಂತ್ರಜ್ಞಾನವನ್ನು ಹೊಂದಿದೆ. ಈ ಲೆವೆಲ್-2 ADAS ತಂತ್ರಜ್ಞಾನವು ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಲೇನ್-ಕೀಪಿಂಗ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ. ಈ ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ಎಸ್‍ಯುವಿಗೆ HTE, HTK, HTK+ ಮತ್ತು HTX ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್, 6-ಸ್ಪೀಡ್ ಐಎಂಟಿ ಯುನಿಟ್, ಸಿವಿಟಿ ಯುನಿಟ್, ಸಿವಿಟಿ ಯುನಿಟ್, 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಮತ್ತು 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿವೆ.

ಇನ್ನು ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 113bhp ಮತ್ತು 144Nm ಪೀಕ್ ಟಾರ್ಕ್‌ನೊಂದಿಗೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಗೇರ್‌ಬಾಕ್ಸ್ ಅಥವಾ CVT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್‌ನಲ್ಲಿಯೂ 1.5-ಲೀಟರ್, ಟರ್ಬೋಚಾರ್ಜ್ಡ್, ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

1.5-ಲೀಟರ್, ಟರ್ಬೋಚಾರ್ಜ್ಡ್, ಡೀಸೆಲ್ ಎಂಜಿನ್ 114bhp ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಯುನಿಟ್‌ನೊಂದಿಗೆ ಜೋಡಿಸಬಹುದು. ಇನ್ನು ಕೊನೆಯದಾಗಿ, ಹೊಸದಾಗಿ ಪರಿಚಯಿಸಲಾದ 1.5-ಲೀಟರ್, ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 158 bhp ಪವರ್ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

More from DriveSpark

Article Published On: Monday, March 4, 2024, 10:45 [IST]
English summary
Bigg boss tukali santhosh buys new kia seltos suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+