ಜಗತ್ತಿನ 25 ಅತಿದೊಡ್ಡ ವಿಹಾರ ನೌಕೆಗಳು

By Nagaraja

ನೀವು ಎಂದಾದರೂ ಸಮುದ್ರದಲ್ಲಿ ವಿಹಾರ ಯಾನ ಮಾಡಿದ್ದೀರಾ? ಖಂಡಿತವಾಗಿಯೂ ಜೀವನದಲ್ಲಿ ಒಂದು ಬಾರಿಯಾದರೂ ಸಮುದ್ರ ಪಯಣ ಕೈಗೊಳ್ಳಿರಿ. ಇದು ನಿಮಗೆ ವಿಭಿನ್ನ ಅನುಭವ ನೀಡಲಿದೆ.

ಇಲ್ಲಿ ಜಗತ್ತಿನ 25 ಅತಿದೊಡ್ಡ ವಿಹಾರ ನೌಕೆಗಳ ಬಗ್ಗೆ ವಿವರಣೆಯನ್ನು ಕೊಡಲಾಗಿದೆ. ಇಂತಹ ಹಡಗುಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಹಾಗಿದ್ದರೆ ಬನ್ನಿ ವಿಶ್ವದ ಸರ್ವಶ್ರೇಷ್ಠ ವಿಹಾರ ನೌಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳೋಣವೇ...

ಜಗತ್ತಿನ 25 ಅತಿದೊಡ್ಡ ವಿಹಾರ ನೌಕೆಗಳು

ಮುಂದಿನ ಸ್ಲೈಡರ್ ಕ್ಲಿಕ್ಕಿಸುತ್ತಾ ವಿಶ್ವದ ಮುಂಚೂಣಿಯ ವಿಹಾರ ನೌಕೆಗಳು ಹಾಗೂ ಅವುಗಳ ಬಗೆಗಿನ ಚುಟುಕು ವಿವರಗಳನ್ನು ಪಡೆದುಕೊಳ್ಳಿರಿ.

MS Allure of the Seas (2010)

MS Allure of the Seas (2010)

ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ಕ್ರೂಸ್ ಶಿಪ್ ಆಗಿರುವ ಎಂಎಸ್ ಎಲ್ಯೂರ್ ಆಫ್ ದಿ ಸೀಸ್, ಜಗತ್ತಿನ ಅತಿದೊಡ್ಡ ಪ್ರಯಾಣಿಕ ಹಡಗಾಗಿದೆ. 225,282 ಟನ್ ಭಾರದ ಈ ಹಡಗಿನಲ್ಲಿ 5400 ಮಂದಿ ಪ್ರಯಾಣಿಸಬಹುದಾಗಿದೆ.

MS Allure of the Seas

MS Allure of the Seas

ಇದರಲ್ಲಿ ಐಷಾರಾಮಿ ಸೌಲಭ್ಯಗಳು ಲಭ್ಯವಿರುವ ಎಲ್ಯೂರ್ ಹಡಗನ್ನು, ಪ್ರೊಜೆಕ್ಟ್ ಜೆನಿಸಿಸ್ ಹೆಸರಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಡ್ಯಾನ್ಸ್ ಹಾಲ್, ಥಿಯೇಟರ್, ಐಸ್ ಸ್ಕೇಟಿಂಗ್, ಡೈನಿಂಗ್ ಹಾಲ್, ಸ್ಟಾರ್‌ಬಕ್ಸ್ ಕಾಫಿ ಶಾಪ್, ಶಾಪಿಂಗ್ ಮಾಲ್ ಮುಂತಾದ ಸೌಲಭ್ಯಗಳಿವೆ.

 Oasis of the Seas (2009)

Oasis of the Seas (2009)

ಮಗದೊಂದು ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ಮಾಲಿಕತ್ವದ ಹಡಗಾಗಿರುವ ಓಯಸೀಸ್ ಆಫ್ ದಿ ಸೀಸ್, 6000 ಪ್ರಯಾಣಿಕರನ್ನು ಹೊತ್ತೊಯ್ಯುವ ಮೂಲಕ ಹೊಸ ದಾಖಲೆ ಸ್ಥಾಪಿಸಿತ್ತು.

Oasis of the Seas

Oasis of the Seas

ಇದರಲ್ಲಿ ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡಿಸ್ಕೊ, ಕಾಮೆಡಿ ಪಾರ್ಟಿ ಮಾಲ್‌ಗಳನ್ನು ನೋಡಬಹುದಾಗಿದೆ.

Norwegian Epic (2010)

Norwegian Epic (2010)

ನಾರ್ವೇಜಿಯನ್ ನಿರ್ಮಾಣವಾದ ಸಂದರ್ಭದಲ್ಲಿ ವಿಶ್ವದ ಮೂರನೇ ಅತಿದೊಡ್ಡ ವಿಹಾರ ನೌಕೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು ನಾರ್ವೇಜಿಯನ್ ಕ್ರೂಸ್ ಲೈನ್‌ಗೆ ಸೇರಿದ ಹಡಗಾಗಿದೆ.

Norwegian Epic

Norwegian Epic

ಮೂಲತ: ಇದು ಸೈಲಿಂಗ್ 7 ನೈಟ್ ಈಸ್ಟರ್ನ್ ಕೆರೆಬಿಯನ್ ಕ್ರೂಸ್ ಮಿಯಾಮಿ ತಲಹದಿಯಲ್ಲಿ ನಿರ್ಮಾಣವಾಗಿದೆ. ಇದು ಡೀಸೆಲ್ ಎಲೆಕ್ಟ್ರಿಕ್ ಘಟಕದಿಂದ ನಿಯಂತ್ರಿಸಲ್ಪಟ್ಟಿದೆ.

Freedom of the Seas (2006)

Freedom of the Seas (2006)

ಫ್ರೀಡಂ ಆಫ್ ಸೀಸ್, ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್‌ಗೆ ಸೇರಿದ ಹಡಗಾಗಿದೆ. ಇದರಲ್ಲಿ 3634 ಪ್ರಯಾಣಿಕರ ಜತೆಗೆ 1300 ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Freedom of the Seas

Freedom of the Seas

ಇದರ ವಿನ್ಯಾಸದ ಎರಡನೇ ಜನಾಂಗದ ವೋವೆಜರ್ ಕ್ಲಾಸ್ ಹಡಗುಗಳಿಗೆ ಸಾಮ್ಯತೆ ಪಡೆದುಕೊಂಡಿದೆ. ಇದರಲ್ಲಿ 24 ಗಂಟೆಗೂ ಮೀಸಲಾಗಿರುವ ಪಿಜ್ಜಾ ಸೆಂಟರಿದೆ.

Liberty of the Seas (2007)

Liberty of the Seas (2007)

ಲಿಬರ್ಟಿ ಆಫ್ ದಿ ಸೀಸ್ ಎಂಬುದು ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ಫ್ರೀಡಂ ಕ್ಲಾಸ್ ಕ್ರೂಸ್ ಶಿಪ್ ಆಗಿದೆ. ಇದು 2007 ಮೇ ತಿಂಗಳಲ್ಲಿ ಸಾಮಾನ್ಯ ಸೇವೆ ಆರಂಭಿಸಿತ್ತು.

Liberty of the Seas

Liberty of the Seas

ಆರಂಭದಲ್ಲಿ ಎಂಡ್ಯೂವರ್ ಆಫ್ ದಿ ಸೀಸ್ ಎಂದು ಅರಿಯಲ್ಪಟ್ಟಿದ್ದ ಈ ಹಡಗಿನ ಹೆಸರನ್ನು ಬಳಿಕ ಬದಲಾಯಿಸಿತ್ತು. ಇದು 3634 ಪ್ರಯಾಣಿಕರ ಜತೆ 1360 ಸಿಬ್ಬಂದಿಗಳನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ.

Independence of the Seas (2008)

Independence of the Seas (2008)

ರಾಯಲ್ ಕೆರಿಬಿಯನ್ ಹಡಗಾಗಿರುವ ಇಂಡಿಪೆನಂಡ್ಸ್ ಆಫ್ ದಿ ಸೀಸ್ ತನ್ನ ಪ್ರಥಮ ಸೇವೆಯನ್ನು 2008ನೇ ಇಸವಿಯಲ್ಲಿ ಆರಂಭಿಸಿತ್ತು. ಈ 15 ಡೆಕ್ ಶಿಪ್, 4,370 ಪ್ರಯಾಣಿಕರನ್ನು ಹಾಗೂ 1360 ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

 Independence of the Seas

Independence of the Seas

ಸಾಮಾನ್ಯವಾಗಿ ಇದು ಬೇಸಿಗೆ ಕಾಲಘಟ್ಟದಲ್ಲಿ ಇಂಗ್ಲೆಂಡ್‌ನ ಸೌಂಥಪ್ಟನ್ ಹಾಗೂ ಚಳೀಗಾಲದಲ್ಲಿ ಫೋರ್ಟ್ ಲಾಡರ್ ಡೇಲ್‌ನಿಂದ ಪಯಣ ಆರಂಭಿಸುತ್ತದೆ. ಇದರಲ್ಲಿ ವಾಟರ್ ಪಾರ್ಕ್, ಬಾಸ್ಕೆಟ್ ಬಾಲ್ ಹಾಗೂ ವಾಲಿಬಾಲ್‌ಗಾಗಿ ಸ್ಪೋರ್ಟ್ಸ್ ಪೂಲ್ ಸೌಲಭ್ಯವಿರುತ್ತದೆ.

Queen Mary 2 (2004)

Queen Mary 2 (2004)

ಕ್ಯೂಎಂ2 ಎಂದು ಅರಿಯಲ್ಪಡುವ ಕ್ಯೂನ್ ಮೇರಿ 2 ಹಡಗನ್ನು ಕನಾರ್ಡ್ ಲೈನ್ ನಿರ್ವಹಿಸುತ್ತಿದೆ. ಇದು 2004ರಲ್ಲಿ ಇಂಗ್ಲೆಂಡ್‌ನ ಮಹಾರಾಣಿ ಕ್ವೀನ್ ಎಲಿಜಬೆತ್ II ನಾಮಕರಣ ಪಡೆದಿತ್ತು.

Queen Mary 2

Queen Mary 2

ಗಂಟೆಗೆ 56 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಕ್ವೀನ್ ಮೇರಿ 2, ಹಡಗಿನಲ್ಲಿ 2620 ಪ್ರಯಾಣಿಕರ ಜತೆಗೆ 1253 ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ.

Norwegian Breakaway (2013)

Norwegian Breakaway (2013)

ನಾರ್ವೇಜಿಯನ್ ಬ್ರೇಕ್‌ವೇ, ಒಂದು ನಾರ್ವೇಜಿಯನ್ ಕ್ರೂಸ್ ಲೈನ್ ನಿರ್ವಹಣೆಯ ವಿಹಾರ ನೌಕೆಯಾಗಿದೆ. ಇದರ ನಿರ್ಮಾಣವು 2011ರಲ್ಲಿ ಆರಂಭಇಸಿತ್ತು.

 Norwegian Breakaway

Norwegian Breakaway

ಬಹಮಾಸ್ ದಾಖಲಾತಿ ಹೊಂದಿರುವ ಈ ಹಡಗಿನಲ್ಲಿ 4500 ಪ್ರಯಾಣಿಕರು ಹಾಗೂ 1600 ಸಿಬ್ಬಂದಿ ವರ್ಗದವರು ಪಯಣಿಸಬಹುದಾಗಿದೆ.

Royal Princess (2013)

Royal Princess (2013)

ಪ್ರಿನ್ಸಸ್ ಕ್ರೂಸಸ್ ನಿರ್ವಹಣೆಯ ಹಡಗಾಗಿರುವ ಎಎಸ್ ರಾಯಲ್ ಪ್ರಿನ್ಸಸ್, ಈ ನಾಮಕರಣದಡಿಯಲ್ಲಿ ಸಂಚರಿಸುತ್ತಿರುವ ಮೂರನೇ ಹಡಗು ಎಂದು ಗುರುತಿಸಿಕೊಂಡಿದೆ. ಇದು ಇಟಲಿಯಲ್ಲಿ ನಿರ್ಮಾಣವಾಗಿತ್ತು.

Royal Princess

Royal Princess

2013ರಲ್ಲಿ ಮೆಡಿಟೇರಿಯನ್‌ನ ಮೈಕೋನಾಸ್‌ನಿಂದ ನ್ಯಾಪಲ್ಸ್‌ಗೆ ಸಂಚರಿಸುತ್ತಿರುವ ವೇಳೆ ವಿದ್ಯುತ್ ಸಮಸ್ಯೆವುಂಟಾಗಿತ್ತು. ವಿದ್ಯುತ್ ಮೋಟಾರು ಕೆಟ್ಟು ಹೋಗಿರುವುದು ರಾಯಲ್ ಪಯಣವನ್ನು ವಿಳಂಬವಾಗಿಸಿತ್ತು.

MSC Divina (2012)

MSC Divina (2012)

ಎಂಎಸ್‌ಸಿ ಕ್ರೂಸಸ್ ಮಾಲಿಕತ್ವ ಹಾಗೂ ನಿರ್ವಹಣೆಯ ಎಂಎಸ್‌ಸಿ ದಿವೈನಾ ಹಡಗನ್ನು, 2010-12ನೇ ಸಾಲಿನಲ್ಲಿ ನಿರ್ಮಿಸಲಾಗಿತ್ತು.

MSC Divina

MSC Divina

ನಟಿ ಸೋಫಿಯಾ ಲೋರೆನ್ ಗೌರವಾರ್ಥ ಇದಕ್ಕೆ ದಿವೈನಾ ಹೆಸರಿಡಲಾಗಿದೆ. ಪನಾಮಾ ಬಂದರಿನಲ್ಲಿ ಕಾರ್ಯಾಚರಿಸುವ ಈ ಹಡಗಿನಲ್ಲಿ 3959 ಪ್ರಯಾಣಿಕರಿಗೆ ಸಂಚರಿಸಬಹುದಾಗಿದೆ.

MSC Preziosa (2013)

MSC Preziosa (2013)

ಎಂಎಸ್‌ಸಿ ಕ್ರೂಸಸ್ ಮಾಲಿಕತ್ವದ ಮಗದೊಂದು ಹಡಗು ಇದಾಗಿದೆ. ಈಕೆ 2013 ಮಾರ್ಚ್‌ನಲ್ಲಿ ತನ್ನ ಸೇವೆ ಆರಂಭಿಸಿದ್ದರು.

 MSC Preziosa

MSC Preziosa

333.3 ಮೀಟರ್ ಉದ್ದ ಹಾಗೂ 38 ಮೀಟರ್ ಅಗಲ ಹೊಂದಿರುವ ಈ ಹಡಗು ಗಂಟೆಗೆ ಗರಿಷ್ಠ 23.7 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇದರಲ್ಲಿ 3959 ಪ್ರಯಾಣಿಕರು ಸಂಚರಿಸಬಹುದಾಗಿದೆ.

Navigator of the Seas (2002)

Navigator of the Seas (2002)

ನೇವಿಗೇಟರ್ ಆಫ್ ದಿ ಸೀಸ್, ನಾಲ್ಕನೇ ವೋವೇಜರ್ ಕ್ಲಾಸ್ ಕ್ರೂಸ್ ಶಿಪ್ ಆಗಿದ್ದು, ರಾಯಲ್ ಕೆರೆಬಿಯನ್ ಇಂಡರ್‌ನ್ಯಾಷನಲ್ ನಿರ್ವಹಿಸುತ್ತಿದೆ.

Navigator of the Seas

Navigator of the Seas

ಇದು ತನ್ನ ಉಗಮದ ಸಂದರ್ಭದಲ್ಲಿ ಎರಡನೇ ಜನಾಂಗದ ವೋವೇಜರ್ ಕ್ಲಾಸ್ ಶಿಪ್ ಎನಿಸಿಕೊಂಡಿತ್ತು. ಫಿನ್‌ಲ್ಯಾಂಡ್‌ನಲ್ಲಿ ನಿರ್ಮಿಸಲಾಗಿರುವ ಈ ಹಡಗಿನಲ್ಲಿ 3114 ಮಂದಿ ಪ್ರಯಾಣಿಸಬಹುದಾಗಿದೆ.

Mariner of the Seas (2003)

Mariner of the Seas (2003)

ಐದು ವೋವೆಜರ್ ಕ್ಲಾಸ್ ಕ್ರೂಸ್ ಶಿಪ್‌ಗಳ ಪೈಕಿ ಮರೈನರ್ ಆಫ್ ದಿ ಸೀಸ್ ಒಂದಾಗಿದೆ. ಇದನ್ನು ಸಹ ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ನಿರ್ವಹಿಸುತ್ತಿದೆ.

Mariner of the Seas

Mariner of the Seas

ತನ್ನದೇ ಆದ ವಿಶಿಷ್ಟ ವಿನ್ಯಾಸ ಹೊಂದಿರುವ ಮರೈನರ್ ಆಫ್ ದಿ ಸೀಸ್ ಹಡಗಿನಲ್ಲಿ 4252 ಪ್ರಯಾಣಿಕರನ್ನು ಹೊತ್ಯೊಯ್ಯಬಹುದಾಗಿದೆ.

MSC Fantasia (2008)

MSC Fantasia (2008)

ಇಟಲಿಯ ಫಾಂಟಸಿಯಾ ಕ್ಲಾಸ್ ಕ್ರೂಸ್ ಶಿಪ್ ಆಗಿರುವ ಎಂಎಸ್‌ಸಿ ಫಾಂಟಸಿಯಾ ವಿಹಾರ ಹಡಗಿನ ನಿರ್ವಹಣೆಯನ್ನು ಎಂಎಸ್‌ಸಿ ಕ್ರೂಸಸ್ ಹೊಂದಿದೆ. ಇದು 2008 ಡಿಸೆಂಬರ್‌ನಲ್ಲಿ ಆಗಮನವಾಗಿತ್ತು.

MSC Fantasia

MSC Fantasia

2009ನೇ ಇಸವಿಯಲ್ಲಿ ಬಲವಾಗಿ ಬೀಸಿದ ಗಾಳಿಯಿಂದಾಗಿ ಫಾಂಟಸಿಯಾಗೆ ಅವಘಡ ಸಂಭವಿಸಿತ್ತು. ಇದರಿಂದಾಗಿ ಕೆಲವು ಪ್ರಯಾಣಿಕರು ನೀರಿಗೆ ಬಿದ್ದ ಘಟನೆ ಸಂಭವಿಸಿತ್ತು. ಆದರೆ ಎಲ್ಲರೂ ಸಹ ಪ್ರಾಣಪಾಯದಿಂದ ಪಾರಾಗಿದ್ದರು.

MSC Splendida (2009)

MSC Splendida (2009)

ಇಂದೊಂದು ಫಾಂಟಸಿಯಾ ಕ್ರೂಸ್ ಶಿಪ್ ಮಾಲಿಕತ್ವದ ಹಾಗೂ, ಎಂಎಂಸ್‌ಸಿ ಕ್ರೂಸಸ್ ನಿರ್ವಹಣೆಯ ಹಡಗಾಗಿದೆ. ಇದು ತನ್ನ ಮೊದಲ ಯಾನವನ್ನು 2009ನೇ ಇಸವಿಯಲ್ಲಿ ಆರಂಭಿಸಿತ್ತು.

MSC Splendida

MSC Splendida

ಗಂಟೆಗೆ ಗರಿಷ್ಠ 39 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಸ್ಲ್ಪೆಂಡಿಡಾದಲ್ಲಿ 3900 ಪ್ರಯಾಣಿಕರು ಸಂಚರಿಸಬಹುದಾಗಿದೆ.

Explorer of the Seas (2000)

Explorer of the Seas (2000)

ವೋವೆಜರ್ ಕ್ಲಾಸ್ ಕ್ರೂಸ್ ಶಿಪ್ ವಿಭಾಗಕ್ಕೆ ಸೇರಿದ ಹಡಗಾಗಿರುವ ಎಕ್ಸ್‌ಪ್ಲೋರರ್ ಆಫ್ ದಿ ಸೀಸ್ ನಿರ್ವಹಣೆ ಹಾಗೂ ಮಾಲಿಕತ್ವವನ್ನು ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ಹೊಂದಿದೆ. ಇದನ್ನು 1999ನೇ ಇಸವಿಯಲ್ಲಿ ನಿರ್ಮಿಸಲಾಗಿತ್ತು.

Explorer of the Seas

Explorer of the Seas

ಇದರಲ್ಲಿ ವಿಜ್ಞಾನಿಗಳು ಸೇರಿದಂತೆ 3000 ಆತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಿಕೊಡಲಾಗಿದೆ. ಇದು ಸಮುದ್ರಶಾಸ್ತ್ರೀಯ ಪ್ರಯೋಗಾಲಯ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

Voyager of the Seas (1999)

Voyager of the Seas (1999)

ಹೆಸರಲ್ಲೇ ಸೂಚಿಸಿರುವಂತೆಯೇ ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್‌ಗೆ ಸೇರಿದ ಹಡಗಾಗಿರುವ ವೋವೆಜರ್ ಆಫ್ ದಿ ಸೀಸ್, ವೋವೆಜರ್ ಕ್ಲಾಸ್ ಕ್ರೂಸ್ ಶಿಪ್‌ಗೆ ಸೇರಿದ ವಿಹಾರ ನೌಕೆಯಾಗಿದೆ.

Voyager of the Seas

Voyager of the Seas

ಸೌಲಭ್ಯಗಳು: ರಾಯಲ್ ವಾಯುವಿಹಾರ, ತ್ರಿ ಸ್ಟೋರಿ ಮೈನ್ ಡೈನಿಂಗ್ ರೂಂ, ರೆಸ್ಟೋರೆಂಟ್, ಬಾರ್, ಡೇ ಸ್ಪಾ, ಫಿಟ್‌ನೆಸ್ ಸೆಂಟರ್, ವೆಡ್ಡಿಂಗ್ ಚಾಪೆಲ್, ಲೈಬ್ರರಿ, ಈಜುಕೊಳ, ನೈಟ್ ಕ್ಲಬ್

Adventure of the Seas (2001)

Adventure of the Seas (2001)

ಅಡ್ವೆಂಚರ್ ಆಫ್ ದಿ ಸೀಸ್, ಮೂರನೇ ಜನಾಂಗದ ವೋವೆಜರ್ ಕ್ಲಾಸ್ ಕ್ರೂಸ್ ಶಿಪ್ ಹಡಗಾಗಿದ್ದು, ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ನಿಯಂತ್ರಣದಲ್ಲಿದೆ.

Adventure of the Seas

Adventure of the Seas

ಗಂಟೆಗೆ ಗರಿಷ್ಠ 41.7 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಹಡಗಿನಲ್ಲಿ 3114 ಮಂದಿ ಸಂಚರಿಸಬಹುದಾಗಿದೆ.

Disney Fantasy (2012)

Disney Fantasy (2012)

ಡಿಸ್ನಿ ಫಾಂಟಸಿ ನಿಮಗೆಲ್ಲರಿಗೂ ಚಿರಪರಿಚಿತವಾಗಿರುವ ಪದವಾಗಿದೆ. ಇದೊಂದು ವಿಹಾರ ನೌಕೆಯಾಗಿದ್ದು, ಅಮೆರಿಕದ ಸಮುದ್ರ ವಿಹಾರ ನೌಕೆಯಾಗಿರುವ ಡಿಸ್ನಿ ಕ್ರೂಸ್ ಲೈನ್ ಅಧೀನತೆಯಲ್ಲಿದೆ.

Disney Fantasy

Disney Fantasy

ವಾಲ್ಟ್ ಡಿಸ್ನಿ ಕಂಪನಿಯ ಭಾಗವಾಗಿರುವ ಡಿಸ್ನಿ ಫಾಂಟಸಿ ವಿನ್ಯಾಸವು ಡಿಸ್ನಿ ಡ್ರೀಮ್ ಜತೆ ಸಾಮತ್ಯ ಹೊಂದಿದೆ.

Disney Dream (2011)

Disney Dream (2011)

ಡಿಸ್ನಿ ಡ್ರೀಮ್, ಡಿಸ್ನಿ ಕ್ರೂಸ್ ಲೈನ್ ಕಾರ್ಯಾಚರಣೆಯಲ್ಲಿ ಮೂರನೇ ವಿಹಾರ ನೌಕೆಯಾಗಿದೆ. ಇದು 2011ನೇ ಇಸವಿಯಲ್ಲಿ ಸೇವೆ ಆರಂಭವಾಗಿತ್ತು.

Disney Dream

Disney Dream

ಡಿಸ್ನಿ ಮ್ಯಾಜಿಕ್ ಹಾಗೂ ಡಿಸ್ನಿ ವಂಡರ್ ಹಡಗುಗಳನ್ನು ಹೋಲಿಸಿ ನೋಡಿದಾಗ ಡಿಸ್ನಿ ಡ್ರೀಮ್ ಶೇಕಡಾ 40ರಷ್ಟು ದೊಡ್ಡದಾದ ಗಾತ್ರವನ್ನು ಪಡೆದುಕೊಂಡಿದೆ. ಇದರಲ್ಲಿ ಗರಿಷ್ಠ 4000 ಪ್ರಯಾಣಿಕರು ಪಯಣಿಸಬಹುದಾಗಿದೆ.

Carnival Breeze (2012)

Carnival Breeze (2012)

ಡ್ರೀಮ್ ಕ್ಲಾಸ್ ಕ್ರೂಸ್ ಶಿಪ್ ಆಗಿರುವ ಕಾರ್ನಿವಲ್ ಬ್ರೇಜ್ ಸೇವೆಯು 2012ರಲ್ಲಿ ಆರಂಭವಾಗಿತ್ತು. ಇದು ಪನಾಮ ಬಂದರಿನ ರಿಜಿಸ್ಟ್ರೇಷನ್ ಹೊಂದಿದೆ.

Carnival Breeze

Carnival Breeze

ಕಾರ್ನಿವಲ್ ಕ್ರೂಸ್ ಲೈನ್ಸ್‌ಗೆ ಸೇರಿದ ಹಡಗಾಗಿರುವ ಕಾರ್ನಿವಲ್ ಬ್ರೀಜ್‌ನಲ್ಲಿ 3690 ಮಂದಿ ಪಯಣಿಸಬಹುದಾಗಿದೆ. ಇದರಲ್ಲಿ 4ಡಿ ಎಂದ ಥ್ರಿಲ್ ಥಿಯೇಟರ್ ಸೌಲಭ್ಯ ಕೂಡಾ ಇದೆ.

Carnival Dream (2009)

Carnival Dream (2009)

ಹೆಸರಲ್ಲೇ ಇರುವಂತೆಯೇ ಕಾರ್ನಿವಲ್ ಡ್ರೀಮ್ ಎಂಬುದು ಡ್ರೀಮ್ ಕ್ಲಾಸ್ ಕ್ರೂಸ್ ಹಡಗಾಗಿದೆ. ಇದು ಕಾರ್ನಿವಲ್ ಕ್ರೂಸ್ ಲೈನ್ಸ್‌ನಿಂದ ನಿರ್ಮಿಸಲ್ಪಟ್ಟ ಅತಿದೊಡ್ಡ ಕ್ರೂಸ್ ಶಿಪ್ ಆಗಿದೆ.

Carnival Dream

Carnival Dream

2012 ಜೂನ್ 3ರಂದು ಲಗ್ಗೆಯಿಟ್ಟಿದ್ದ ಕಾರ್ನಿವಲ್ ಡ್ರೀಮ್ ಹಡಗು 3652 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Carnival Magic (2011)

Carnival Magic (2011)

ಕಾರ್ನಿವಲ್ ಕ್ರೂಸ್ ಲೈನ್ಸ್ ನಿರ್ವಹಣೆಯಲ್ಲಿರುವ ತಾಜಾ ಡ್ರೀಮ್ ಕ್ಲಾಸ್ ಕ್ರೂಸ್ ಶಿಪ್ ಇದಾಗಿದೆ. ಇದು ಕಾರ್ನಿವಲ್ ಪ್ರೈಡ್ ಬದಲಿಯಾಗಿ ಲಗ್ಗೆಯಿಟ್ಟಿತ್ತು.

Carnival Magic

Carnival Magic

ಪ್ರಸ್ತುತ ಕಾರ್ನಿವಲ್ ಮ್ಯಾಜಿಕ್ ಹಡಗು 1367 ಸಿಬ್ಬಂದಿಗಳ ಜತೆಗೆ 3720 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

Celebrity Reflection (2012)

Celebrity Reflection (2012)

ಸೆಲೆಬ್ರಿಟಿ ರಿಫ್ಲೆಕ್ಷನ್, ಐದನೇ ಹಾಗೂ ಕೊನೆಯ ಸೋಲ್‌ಸ್ಟೈಸ್ ಕ್ಲಾಸ್ ಕ್ರೂಸ್ ಶಿಪ್ ಆಗಿದೆ. ಸೆಲೆಬ್ರಿಟಿ ರಿಫ್ಲೇಕ್ಷನ್ ನಿರ್ವಹಣೆ ಹಾಗೂ ಮಾಲಿಕತ್ವವನ್ನು ಸೆಲೆಬ್ರಿಟಿ ಕ್ರೂಸಸ್ ಹೊಂದಿದೆ.

Celebrity Reflection

Celebrity Reflection

ಗಂಟೆಗೆ 44 ಕೀ.ಮೀ. ವೇಗತೆಯಲ್ಲಿ ಸಂಚರಿಸುತ್ತಿರುವ ಸೆಲೆಬ್ರಿಟಿ ರಿಫ್ಲೆಕ್ಷನ್ ಹಡಗಿನಲ್ಲಿ 3,046 ಮಂದಿ ಸಂಚರಿಸಬಹುದಾಗಿದೆ.

Celebrity Silhouette (2011)

Celebrity Silhouette (2011)

ಸೆಲೆಬ್ರಿಟಿ ಶಿಲೌಟ್, ಮಗದೊಂದು ಸೋಲ್‌ಸ್ಟೈಸ್ ಕ್ಲಾಸ್ ಕ್ರೂಸ್ ಶಿಪ್ ಆಗಿದೆ. ಇದರ ಮಾಲಿಕತ್ವ ಹಾಗೂ ನಿರ್ವಹಣೆಯನ್ನು ಸೆಲೆಬ್ರಿಟಿ ಕ್ರೂಸಸ್ ಹೊಂದಿದೆ.

 Celebrity Silhouette

Celebrity Silhouette

ಪ್ರಸ್ತುತ ಹಡಗು, 2886 ಪ್ರಯಾಣಿಕರು ಹಾಗೂ 1500 ಸಿಬ್ಬಂದಿ ವರ್ಗದವರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X