ದೊಡ್ಡ ಕಂಪನಿಗಳಿಗೆ ಶಾಕ್! ಶಾಲಾ ಮಕ್ಕಳಿಗಾಗಿ ಅಗ್ಗದ ಇ-ಬೈಕ್ ತಯಾರಿಸಿದ ಮೆಕ್ಯಾನಿಕ್: ಬೆಲೆ ಇಷ್ಟೇನಾ?

ಪ್ರಸ್ತುತ ಭಾರತದಲ್ಲಿ ಸೈಕಲ್ ಖರೀದಿಸಲು ಕೂಡ ಶಕ್ತಿಯಿಲ್ಲದ ಹಲವು ಬಡ ಕುಟುಂಬಗಳಿವೆ, ಮುಖ್ಯವಾಗಿ ಹಳ್ಳಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ನಡೆದು ಶಾಲೆಗಳನ್ನು ತಲುಪುವ ಅದೇಷ್ಟೋ ಮಂದಿ ವಿದ್ಯಾರ್ಥಿಗಳಿದ್ದಾರೆ. ಇವೆರಲ್ಲರಿಗು ಕೈಗೆಟುಕುವ ಬೆಲೆಯಲ್ಲಿ ಒಂದು ಇ-ಬೈಕ್ ಖರೀದಿಸುವ ಅವಕಾಶ ಶೀಘ್ರದಲ್ಲೆ ಸಿಗಲಿದೆ. ಸದ್ಯಕ್ಕೆ ಒಂದು ಸಾಮಾನ್ಯ ಸೈಕಲ್ ಬೆಲೆ 5 ರಿಂದ 8 ಸಾವಿರ ರೂ. ಇದ್ದರೇ, ಇ-ಬೈಕ್ ಬೆಲೆ ಸುಮಾರು 50,000 ರಿಂದ 60,000 ರೂ. ಇದೆ. ಇಂತಹ ಇ-ಬೈಕ್ ಕೇವಲ 25 ಸಾವಿರ ರೂ.ಗೆ ಸಿಗುವ ಸಾಧ್ಯತೆಗಳಿವೆ ಎಂದು ನಾವು ಅಂದಾಜಿಸಿದ್ದೇವೆ.

ಹೌದು, ಬಿಹಾರದ ಚಾರ್ಪೋಖಾರಿ ಬ್ಲಾಕ್‌ನ ಪಸೌರ್ ಗ್ರಾಮದ ನಿವಾಸಿ ಮನೋತೋಷ್ ಶರ್ಮಾ ಎಂಬಾತ, ಶಾಲಾ ಮಕ್ಕಳಿಗಾಗಿ ಸಾಮಾನ್ಯ ಸೈಕಲ್‌ಗಳನ್ನು ಇ-ಬೈಕ್‌ಗಳಾಗಿ ಮಾರ್ಪಡಿಸಿದ್ದಾರೆ. ವೆಲ್ಡಿಂಗ್ ಮೆಕ್ಯಾನಿಕ್ ಆಗಿರುವ ಮನೋತೋಷ್, ಎಲ್ಲಾ ಇ-ಬೈಕ್‌ಗಳಂತೆಯೇ ಈ ಸೈಕಲ್‌ನಲ್ಲಿ ಕೂಡ ಬ್ಯಾಟರಿ ಹಾಗೂ ಮೋಟಾರ್‌ ಅಳವಡಿಸಿ ಆರು ತಿಂಗಳು ಶ್ರಮಿಸಿ ನಿರ್ಮಿಸಿದ್ದಾರೆ. ಅವರ ಕಠಿಣ ಪರಿಶ್ರಮವು ಗ್ರಾಮಸ್ಥರಿಂದ ಮೆಚ್ಚುಗೆಯನ್ನು ಗಳಿಸಿದೆ.

bihar-mechanic-built-affordable-e-bike-for-students

ಇ-ಬೈಕ್ ವಿಶೇಷತೆಗಳು: ಇ-ಬೈಕ್ ಅನ್ನು ಸಾಮಾನ್ಯ ಸೈಕಲ್‌ನಂತೆ ಪಡೆಲ್ ಮೂಲಕ ಓಡಿಸಬಹುದು ಹಾಗೂ ಅವಶ್ಯಕತೆ ಇದ್ದಾಗ ಮೋಟಾರು ಮೋಡ್ ಆನ್ ಮಾಡುವ ಮೂಲಕ ಬೈಕ್‌ನಂತೆ ಓಡಿಸಬಹುದು. ನಾಲ್ಕು ಗಂಟೆಗಳ ಕಾಲ ಬ್ಯಾಟರಿ ಚಾರ್ಜ್ ಮಾಡಿದರೆ 45 ರಿಂದ 50 ಕಿ.ಮೀ ಪ್ರಯಾಣಿಸಬಹುದು, ಗರಿಷ್ಠ ವೇಗ ಗಂಟೆಗೆ 30-35 ಕಿ.ಮೀ ಇದೆ. ಈ ವೇಗಕ್ಕೆ ಹೊಂದಿಕೆಯಾಗುವಂತೆ ಬ್ರೇಕ್ ಗಳನ್ನು ವಿನ್ಯಾಸಗೊಳಿಸಲಾಗಿದೆ.

ಇದರಲ್ಲಿ ಇಬ್ಬರು ಕುಳಿತು ಆರಾಮವಾಗಿ ಪ್ರಯಾಣಿಸಬಹುದು. ಬ್ಯಾಟರಿ ಮತ್ತು ಚಾರ್ಜರ್‌ಗಾಗಿ ವಿಶೇಷವಾಗಿ ಒಂದು ಪೆಟ್ಟಿಗೆಯನ್ನು ಸಹ ಇದರಲ್ಲಿ ರಚಿಸಲಾಗಿದೆ. ಇ-ಬೈಕ್ ನಿರ್ಮಾಣಕ್ಕೆ ಬೇಕಾದ ಫ್ರೇಮ್ ಹಾಗೂ ಮೋಟಾರ್, ಬ್ಯಾಟರಿ, ಹಾರ್ನ್, ಇಂಡಿಕೇಟರ್ ಮತ್ತು ಆಕ್ಸಿಲರೇಟರ್ ಸೇರಿದಂತೆ ಅಗತ್ಯವಿರುವ ಎಲ್ಲಾ ಭಾಗಗಳನ್ನು ಸಂಗ್ರಹಿಸಲು ಸುಮಾರು 22,000 ರೂ. ಖರ್ಚಾಗಿದೆ. ಹತ್ತಿರದ ಪ್ರದೇಶಗಳ ನೂರಾರು ಜನರು ಖರೀದಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಮನೋತೋಷ್ ಹೇಳಿದ್ದಾರೆ.

ಪವರ್‌ಫುಲ್ ಮತ್ತು ಅಗ್ಗದ ಇ-ಬೈಕ್ ಏಕೆ ನಿರ್ಮಿಸಬಾರದು?: ಸುಡುವ ಬಿಸಿಲಿನಲ್ಲಿ ಮಕ್ಕಳು ಶಾಲೆಗೆ ನಡೆದು ಹೋಗುವುದನ್ನು ನೋಡಿ, ಇ-ಬೈಕ್ ನಿರ್ಮಿಸಲು ನಿರ್ಧರಿಸಿದ್ದೆ. ಮಕ್ಕಳ ಪ್ರಯಾಣ ಸುಲಭ ಮತ್ತು ಹೆಚ್ಚು ಕೈಗೆಟುಕುವಂತೆ ಮಾಡುವುದು ನನ್ನ ಮುಖ್ಯ ಉದ್ದೇಶ. ಆರು ತಿಂಗಳ ಕಠಿಣ ಪರಿಶ್ರಮದ ನಂತರ ಇ-ಬೈಕ್ ಪೂರ್ಣಗೊಂಡಿದೆ. ಗ್ರಾಮಸ್ಥರು ನನ್ನ ಆವಿಷ್ಕಾರಕ್ಕೆ ಪ್ರಭಾವಿತರಾಗಿದ್ದಾರೆ. ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ಅಧಿಕಾರಿಗಳು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಮನೋತೋಷ್ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಇದೇ ರೀತಿಯ ಇ-ಬೈಕ್‌ಗಳ ಬೆಲೆ 50,000 ರಿಂದ 60,000 ರೂ.ಗಳ ನಡುವೆ ಇದ್ದರೂ, ತಮ್ಮ ಇ-ಬೈಕ್ ತುಂಬಾ ಅಗ್ಗವಾಗಿದೆ ಎಂದು ಮನೋತೋಷ್ ಶರ್ಮಾ ಒತ್ತಿ ಹೇಳಿದ್ದಾರೆ. ಅವರ ಕೆಲಸವು ಸ್ಥಳೀಯ ನಾವೀನ್ಯತೆಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಮತ್ತು ಹೆಚ್ಚಿನ ಜನರಿಗೆ ಖರೀದಿಸಬಹುದಾದ ಸಾರಿಗೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವೆಲ್ಡಿಂಗ್ ಮೆಕ್ಯಾನಿಕ್ ಆಗಿದ್ದರು ಮಕ್ಕಳ ಭವಿಷ್ಯವು ಆರಂಭದಲ್ಲಿಯೇ ನಿಂತುಹೋಗಲು ಇಂತಹ ಸಣ್ಣಪುಟ್ಟ ಕಾರಣಗಳು ಅಡ್ಡಿಯಾಗಬಾರದು ಎಂಬ ಮನೋತೋಷ್ ಅವರ ಸಂಕಲ್ಪವು ಹಲವರನ್ನು ಮೆಚ್ಚಿಸಿದೆ. ಅವರ ಕಠಿಣ ಪರಿಶ್ರಮವು ಗ್ರಾಮಸ್ಥರಿಂದ ಹೆಚ್ಚಿನ ಮೆಚ್ಚುಗೆಯನ್ನು ಗಳಿಸಿದೆ. ಈಗ ಈ ವ್ಯಕ್ತಿ ಭಾರತದಾದ್ಯಂತ ನಿಧಾನವಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಇವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: https://www.news18.com/viral/bihar-mechanic-builds-affordable-e-cycle-to-help-school-going-children-9091478.html

Article Published On: Monday, October 21, 2024, 10:38 [IST]
English summary
Bihar mechanic built affordable e bike for students
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+