viral video: ಕೇವಲ ಒಂದೇ ಸೆಕೆಂಡ್‌! ಬೈಕ್ ಸವಾರನ ಕೃತ್ಯ ಡ್ಯಾಶ್ ಕ್ಯಾಮ್‌ನಲ್ಲಿ ಸೆರೆ

ಬಜಾಜ್ ಪಲ್ಸರ್ ಮೋಟಾರ್‌ಸೈಕಲ್ ನಲ್ಲಿ ಸವಾರನೊಬ್ಬ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ದೃಶ್ಯ ಕಾರಿನ ಹಿಂಬದಿಯ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಪಂಜಾಬ್‌ನ ಲುಧಿಯಾನದಲ್ಲಿ ಅಪಘಾತ ಸಂಭವಿಸಿದೆ.

ವಿಡಿಯೋ ಗಮನಿಸಿದ್ರೆ, ಬಜಾಜ್ ಪಲ್ಸರ್ ಮೋಟಾರ್‌ಸೈಕಲ್‌ನಲ್ಲಿ ಬೈಕ್ ಸವಾರನೊಬ್ಬ ರಸ್ತೆಯ ಬಲ ಭಾಗದ ಲೇನ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ರಸ್ತೆ ಕಿರಿದಾಗುತ್ತಾ ಸಂಚಾರ ದಟ್ಟಣೆ ಹೆಚ್ಚಾದಂತೆ ಕಾರು ಮತ್ತು ಬೈಕ್ ಎರಡೂ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದವು. ಕಾರು ಗಂಟೆಗೆ ಸುಮಾರು 30 ರಿಂದ 35 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಏಕಾಏಕಿ ಕಾರಿನ ಚಾಲಕ ಬ್ರೇಕ್ ಹಾಕಿದ್ದು, ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾನೆ.

bike-rider-crashes-car-viral-video

ಇಲ್ಲಿ ಯಾರದ್ದೂ ತಪ್ಪಿಲ್ಲ ಎನಿಸಬಹುದು, ಆದರೆ ವಿಡಿಯೋ ಪರೀಶಿಲಿಸಿದ ಬಳಿಕ ಬೈಕ್ ಸವಾರನ ತಪ್ಪು ಬೆಳಕಿಗೆ ಬಂದಿದೆ. ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅವಶ್ಯಕ. ಬೈಕ್ ಸವಾರ ಅದೇ ವೇಗವನ್ನು ಕಾಯ್ದುಕೊಂಡು ಮುಂದೆ ಇದ್ದ ಕಾರಿನಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿದ್ದ. ಆದರೂ ಡಿಕ್ಕಿಯಾಗುವ ಕೆಲವು ಸೆಕೆಂಡುಗಳ ಮೊದಲು ಆತ ಮಾಡಿದ್ದೇ ಬೇರೆ.

ಬೈಕು ಇನ್ನೂ ಚಲಿಸುತ್ತಿರುವಾಗ ತನ್ನ ಗ್ಲೌಸ್‌ಗಳನ್ನು ತೆಗೆದುಹಾಕಲು ಬೈಕರ್ ಹ್ಯಾಂಡಲ್‌ಬಾರ್‌ನಿಂದ ತನ್ನ ಬಲಗೈಯನ್ನು ತೆಗೆದಿದ್ದಾನೆ. ಅಷ್ಟರಲ್ಲಿ ಎದುರಿಗಿದ್ದ ಕಾರು ವೇಗ ಸಂಪೂರ್ಣ ಕಡಿಮೆ ಮಾಡಿ ನಿಂತಿತು. ಒಮ್ಮೆಲೆ ವೇಗ ಕಡಿಮೆಯಾಗಿ ನಿಂತ ಕಾರನ್ನು ಕಂಡು ಸವಾರನಿಗೆ ಹ್ಯಾಂಡಲ್‌ಬಾರ್‌ನ ನಿಯಂತ್ರಣವನ್ನು ಮರಳಿ ಪಡೆಯಲು ಮತ್ತು ಬ್ರೇಕ್‌ಗಳನ್ನು ಅನ್ವಯಿಸಲು ಸಾಕಷ್ಟು ಸಮಯವಿರಲಿಲ್ಲ. ಹಾಗಾಗಿ ನೇರವಾಗಿ ಕಾರನ್ನು ಗುದ್ದಿದ್ದಾನೆ.

bike-rider-crashes-car-viral-video

ಅದೃಷ್ಟವಶಾತ್ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಯಾವುದೇ ಗಾಯಗಳಾಗಿಲ್ಲ. ಬಜಾಜ್ ಪಲ್ಸರ್ ಸವಾರನ ಹಿಂದೆ ಇದ್ದ ಇತರ ಕಾರುಗಳು ಮತ್ತು ಬೈಕ್ ಸವಾರರು ಸಹ ಬಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಮಯಕ್ಕೆ ವೇಗವನ್ನು ಕಡಿಮೆ ಮಾಡಿ ಬ್ರೇಕ್ ಹಾಕಿದ್ದಾರೆ. ಇದರಲ್ಲಿ ಕಾರ್ ಡ್ರೈವರ್‌ನ ತಪ್ಪು ಇಲ್ಲ, ಬೈಕ್ ಸವಾರ ಎಚ್ಚರ ತಪ್ಪಿದ್ದರಿಂದಲೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.

ಎದುರಿನ ಕಾರುಗಳು ನಿಧಾನಗೊಂಡಿದ್ದರಿಂದ ಕಾರು ಚಾಲಕ ಬ್ರೇಕ್ ಹಾಕಬೇಕಾಯಿತು. ಸವಾರ ತನ್ನ ಬೈಕನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ, ತನ್ನ ರೈಡಿಂಗ್ ಗ್ಲೌಸ್‌ಗಳನ್ನು ತೆಗೆದು, ನಂತರ ತನ್ನ ಪ್ರಯಾಣವನ್ನು ಮುಂದುವರಿಸಬಹುದಿತ್ತು. ಆದ್ರೆ ಚಾಲನೆಯಲ್ಲಿದ್ದಾಗಲೇ ಹೀಗೆ ಮಾಡಿರುವುದು ಅಪಘಾತಕ್ಕೆ ಕಾರಣವಾಗಿದೆ. ಬೈಕ್ ಸವಾರ ಎಚ್ಚರಿಕೆ ವಹಿಸಿದ್ದರೆ ಈ ಅಪಘಾತವನ್ನು ಸುಲಭವಾಗಿ ತಪ್ಪಿಸಬಹುದಿತ್ತು.

bike-rider-crashes-car-viral-video

ಅದು ಬೈಕ್ ಆಗಿರಲಿ ಅಥವಾ ಕಾರ್ ಆಗಿರಲಿ, ಒಮ್ಮೆ ನಾವು ಅದನ್ನು ಓಡಿಸಲು ಪ್ರಾರಂಭಿಸಿದಾಗ, ಸಂಪೂರ್ಣ ಗಮನವು ರಸ್ತೆಯ ಮೇಲಿರಬೇಕು. ವ್ಯವಧಾನ ಇರಬಾರದು. ಒಂದು ಸೆಕೆಂಡ್ ಮೈಮರೆತರೂ ಕೂಡ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೇ ಇಂತಹ ಅಪಘಾತಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಇದೇ ಉತ್ತಮ ಉದಾಹರಣೆಯಾಗಿದೆ.

ನಿಲ್ಲಿಸದೆ ಹೊರಟ ಕಾರು ಚಾಲಕ: ಈ ವಿಡಿಯೋದಲ್ಲಿ ಕಾಣುವಂತೆ ಅಪಘಾತದ ನಂತರ ಕಾರು ಚಾಲಕ ಕಾರನ್ನು ನಿಲ್ಲಿಸದೆ ತೆರಳಿದ್ದಾನೆ. ಬೈಕ್ ಸವಾರನಿಗೆ ಏನಾಗಿರಬಹುದು ಎಂಬ ಕಾಳಜಿ ಕೂಡ ಆತನಿಗಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಅಪಘಾತಗಳು ಸಂಭವಿಸಿದಾಗ, ಅವುಗಳಿಗೆ ನಾವು ಜವಾಬ್ದಾರರಲ್ಲದಿದ್ದರೂ, ಸಂತ್ರಸ್ತರಿಗೆ ಸಹಾಯ ಮಾಡುವುದು ನಮ್ಮ ಮಾನವೀಯತೆಯನ್ನು ಎತ್ತಿತೋರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, August 28, 2023, 19:22 [IST]
English summary
Bike rider crashes car viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+