ಬಿಎಂಡಬ್ಲ್ಯು 1 ಸಿರೀಸ್‌‍ನಲ್ಲಿ ಸಚಿನ್ ರೇಸಿಂಗ್ ಕಮಾಲ್

By Nagaraja

ಭಾರತ ಕ್ರಿಕೆಟ್ ತಂಡದ ಆರಾಧ್ಯ ದೈವ, ದಾಖಲೆಗಳ ಸರದಾರ, ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್, ಸದ್ಯ ಕ್ರಿಕೆಟ್ ಅಂಗಣದಿಂದ ದೂರವುಳಿದಿದ್ದು ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.

ಕ್ರಿಕೆಟ್ ಆಟವನ್ನು ಬಿಟ್ಟರೆ ಸಚಿನ್‌, ಅತ್ಯಾಕರ್ಷಕ ಕಾರಗಳನ್ನು ರೈಡ್ ಮಾಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಸ್ವತ: ಬಿಎಂಡಬ್ಲ್ಯು ಪ್ರಚಾರ ರಾಯಭಾರಿ ಕೂಡಾ ಆಗಿರುವ ಸಚಿನ್, ನೂತನ ಬಿಎಂಡಬ್ಲ್ಯು 1 ಸಿರೀಸ್ ಕಾರಿನಲ್ಲಿ ತಮ್ಮ ರೇಸಿಂಗ್ ಚಾಣಕ್ಷತೆಯನ್ನು ಮೆರೆದಿದ್ದಾರೆ.

ಇದಕ್ಕೆ ವಿಶ್ವದ ಪ್ರಖ್ಯಾತ ಎಫ್‌ಐಎ ಜಿಟಿಎ ಚಾಲಕ ಆರ್ಮನ್ ಇಬ್ರಾಹಿಂ ಕೂಡಾ ಸಾಥ್ ನೀಡಿದ್ದಾರೆ. ಸಚಿನ್ ಹಾಗೂ ಆರ್ಮನ್ ನಡುವಣ ಈ ಸೌಹಾರ್ತ ರೇಸಿಂಗ್ ನೂತನ ಬಿಎಂಡಬ್ಲ್ಯು 1 ಸಿರೀಸ್ ಉತ್ತಮ ಪ್ರಚಾರ ಗಿಟ್ಟಿಸುವಲ್ಲಿ ನೆರವಾಗಲಿದೆ.

ಅಗ್ಗದ ಐಷಾರಾಮಿ ಕಾರು

ಅಗ್ಗದ ಐಷಾರಾಮಿ ಕಾರು

ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ಸದ್ಯದಲ್ಲೇ, 1 ಸಿರೀಸ್ ಅಗ್ಗದ ಐಷಾರಾಮಿ ಕಾರನ್ನು ಭಾರತಕ್ಕೆ ಪರಿಚಯಿಸಲಿದೆ.

ಸೆಪ್ಟೆಂಬರ್‌ನಲ್ಲಿ ಲಾಂಚ್

ಸೆಪ್ಟೆಂಬರ್‌ನಲ್ಲಿ ಲಾಂಚ್

ಐದು ಡೋರಿನ ಬಿಎಂಡಬ್ಲ್ಯು 1 ಸಿರೀಸ್ ಲಗ್ಷುರಿ ಕಾರು ಮುಂಬರುವ ಸೆಪ್ಟೆಂಬರ್ 3ರಂದು ಭಾರತ ರಸ್ತೆಗಿಳಿಯಲಿದೆ.

ಆರ್ಮನ್ ಇಬ್ರಾಹಿಂ

ಆರ್ಮನ್ ಇಬ್ರಾಹಿಂ

ನೂತನ ಬಿಎಂಡಬ್ಲ್ಯು 1 ಸಿರೀಸ್, ಇದೀಗಷ್ಟೇ ಬಿಡುಗಡೆಗೊಂಡಿರುವ ಆಡಿ ಕ್ಯೂ3 ಎಸ್ ಸೇರಿದಂತೆ ಮರ್ಸಿಡಿಸ್ ಎ ಹಾಗೂ ಬಿ ಕ್ಲಾಸ್ ಹಾಗೂ ವೋಲ್ವೋ ವಿ40 ಕ್ರಾಸ್ ಕಂಟ್ರಿ ಆವೃತ್ತಿಗಳಿಗೆ ಕಠಿಣ ಪೈಪೋಟಿ ನೀಡಲಿದೆ.

ಸಚಿನ್ ಜತೆ ಆರ್ಮನ್

ಸಚಿನ್ ಜತೆ ಆರ್ಮನ್

ಚೆನ್ನೈನ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆಯಾಗಲಿರುವುದರಿಂದ ಬಿಎಂಡಬ್ಲ್ಯು 1 ಸಿರೀಸ್ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ನೆರವಾಗಲಿದೆ. ಚೆನ್ನೈನ ಇದೇ ಘಟಕದಲ್ಲಿ ಬಿಎಂಡಬ್ಲ್ಯು 3 ಸಿರೀಸ್, 5 ಸಿರೀಸ್, 7 ಸಿರೀಸ್, ಎಕ್ಸ್ ಹಾಗೂ ಎಕ್ಸ್3 ಡೀಸೆಲ್ ಕಾರುಗಳು ಸಹ ಜೋಡಣೆಯಾಗುತ್ತಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ನೂತನ ಬಿಎಂಡಬ್ಲ್ಯು 1 ಸಿರೀಸ್ 1.6 ಲೀಟರ್ ಪೆಟ್ರೋಲ್ ಹಾಗೂ 2.01 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಇವೆರಡು ಅನುಕ್ರಮವಾಗಿ 136 ಹಾಗೂ 143 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಆರ್ಮನ್ ಇಬ್ರಾಹಿಂ

ಆರ್ಮನ್ ಇಬ್ರಾಹಿಂ

ಬಿಎಂಡಬ್ಲ್ಯು ಕಾರುಗಳ ಪೈಕಿ ಅತಿ ಚೊಕ್ಕದಾಗಿರುವ ಹೊರತಾಗಿರುವ 1 ಸಿರೀಸ್, ಉತ್ತಮ ಸ್ಥಳಾವಕಾಶವನ್ನು ಹೊಂದಿರಲಿದೆ. ಇದರಲ್ಲಿ 360 ಲೀಟರ್ ಬೂಟ್ ಸ್ಪೇಸ್ ಇರಲಿದೆ. ಎಲ್ಲ ಬಿಎಂಡಬ್ಲ್ಯು ಕಾರುಗಳ ರೀತಿಯಲ್ಲಿಯೇ 1 ಸಿರೀಸ್ ಕೂಡಾ ಹೆಚ್ಚು ಶಕ್ತಿಶಾಲಿ ಹಾಗೂ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಬಿಎಂಡಬ್ಲ್ಯ 1 ಸಿರೀಸ್

ವೀಡಿಯೋ ವೀಕ್ಷಿಸಿ

More from DriveSpark

Article Published On: Tuesday, August 20, 2013, 11:35 [IST]
English summary
BMW 1 Series is gearing up to launch in India on September 3. Step-in to check-out a video of the cricketing legend Sachin Tendulkar smokin' the BMW 1 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+