ಕೋಟಿಯ BMW i7 ಖರೀದಿಸಿದ ತಮಿಳುಸ್ಟಾರ್ ವಿಜಯ್: ಸ್ಯಾಂಡಲ್‌ವುಡ್ ಹೀರೋಗಳ ಬಳಿಯೇ ಇಲ್ಲ
ನಿಮಗೆಲ್ಲಾ ತಿಳಿದಿರುವಂತೆ ತಮಿಳು ಸೂಪರ್‌ಸ್ಟಾರ್ ವಿಜಯ್, ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಮುಂಬರಲಿರುವ G.O.A.T ಎಂಬ ಚಿತ್ರಕ್ಕೆ ಸುಮಾರು ಇನ್ನೂರು ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಗಳು ಆಗಾಗ ಅಲ್ಲಲ್ಲಿ ಕೇಳಿ ಬರುತ್ತಿದೆ.
ಇದೀಗ ಇಳಯದಳಪತಿ ವಿಜಯ್ ಎಲ್ಲರ ನೆಚ್ಚಿನ ಬಹುಕೋಟಿ ಬೆಲೆಯ ಲಕ್ಷುರಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಹೌದು, ವಿಜಯ್ ಬಿಎಂಡಬ್ಲ್ಯೂ i7 xDrive 60 ಎಂಬ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದು, ಈ ಮೂಲಕ ಎಲ್ಲರ ಹುಬ್ಬೇಳಿಸಿದ್ದಾರೆ. ಈಗಾಗಲೇ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಕೆಲವರಷ್ಟೇ ಈ ಕಾರನ್ನು ಖರೀದಿ ಮಾಡುತ್ತಿದ್ದು, ಈ ಸಾಲಿಗೆ ಇದೀಗ ನಟ ವಿಜಯ್ ಸಹ ಸೇರಿಕೊಂಡಿದ್ದಾರೆ.

ಸುಮಾರು ಎರಡರಿಂದ ಎರಡೂವರೆ ಕೋಟಿ ರೂಪಾಯಿಗಳು ಬೆಲೆ ಬಾಳುವ ಈ ಕಾರು ಇತ್ತೀಚೆಗೆ ಎಲ್ಲರ ನೆಚ್ಚಿನ ಕಾರಾಗಿ ಬದಲಾಗುತ್ತಿದೆ. ಈ ಮೊದಲು ಹೇಳಿದಂತೆ ಭಾರತದಲ್ಲಿ ಕೆಲವರಷ್ಟೇ ಈ ಕಾರನ್ನು ಹೊಂದಿದ್ದಾರೆ. ಇದು ಮಾತ್ರವಲ್ಲದೇ ಇಳಯದಳಪತಿ ವಿಜಯ್ ಬಳಿ ಹಲವಾರು ಲಕ್ಷುರಿ ಎಕ್ಸೊಟಿಕ್ ಕಾರು ಕಲೆಕ್ಷನ್ ಇದ್ದು, ಇದರಲ್ಲಿ ರೋಲ್ಸ್‌ರಾಯ್ಸ್ ಸೇರಿದಂತೆ ಹಲವಾರು ದುಬಾರಿ ಕಾರುಗಳು ಸೇರಿದೆ.
ರೋಲ್ಸ್ ರಾಯ್ಸ್ ಘೋಸ್ಟ್: ಇಳಯದಳಪತಿ ಬಳಿ ಇರುವ ಕೆಲವು ಪ್ರಮುಖ ಕಾರುಗಳೆಂದರೆ, ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ನಟ ವಿಜಯ್ ಆವರು ಹೊಂದಿದ್ದಾರೆ. ದಕ್ಷಿಣ ಭಾರತದ ಕೆಲವೇ ನಟರಲ್ಲಿ ಈ ಕಾರು ಇವೆ. ಅದರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಈ ಕಾರಿನ ಬೆಲೆಯು ರೂ.2.5 ಕೋಟಿ ಗಳಾಗಿದೆ.

ಮಿನಿ ಕೂಪರ್ ಎಸ್: ನಟ ವಿಜಯ್ ಅವರ ಬಳಿ ಹೆಚ್ಚು ಕಾಂಪ್ಯಾಕ್ಟ್ ಮತ್ತು ಸ್ಪೋರ್ಟಿ ಮತ್ತು ಅಷ್ಟೇ ಐಷಾರಾಮಿ ಮಿನಿ ಕೂಪರ್ ಎಸ್ ಮಾದರಿಯನ್ನು ಕೂಡ ಹೊಂದಿದ್ದಾರೆ. ಈ ಹ್ಯಾಚ್‌ಬ್ಯಾಕ್ 2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 184 ಬಿಎಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಆಡಿ ಎ8: ಐಷಾರಾಮಿ ಸೆಡಾನ್, ಅವರ ದೈನಂದಿನ ಬಳಕೆಯ ಕಾರುಗಳಲ್ಲಿ ಒಂದಾಗಿದೆ, ಆಡಿ ಎ8 ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಇವರ ಬಳಿ ಇರುವುದು ಆಡಿ ಎ8 ಲಾಂಗ್ ವ್ಹೀಲ್ ಬೇಸ್ ಮಾದರಿಯಾಗಿದೆ. ಆಡಿ ಎ8 ಎಲ್ ಕಾರು 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಬಿಎಂಡಬ್ಲು ಎಕ್ಸ್5 ಮತ್ತು ಎಕ್ಸ್6: ಇಳಯದಳಪತಿ ವಿಜಯ್ ಬಿಎಂಡಬ್ಲು ಎಕ್ಸ್5 ಮತ್ತು ಎಕ್ಸ್6 ಎಸ್‍ಯುವಿಗಳನ್ನು ಹೊಂದಿದ್ದಾರೆ. ನಟ ವಿಜಯ್ ಅವರಿಗೆ ಬಿಎಂಡಬ್ಲ್ಯು ಕಾರುಗಳು ಅಂದರೆ ಅಚ್ಚು ಮೆಚ್ಚು, ಇವರು ಈ ಬಿಎಂಡಬ್ಲ್ಯು ಎಸ್‍ಯುವಿಗಳನು ಹೆಚ್ಚು ಬಳಸುತ್ತಾರೆ. ಇದರಲ್ಲಿ ಬಿಎಂಡಬ್ಲು ಎಕ್ಸ್5 ಎಸ್‍ಯುವಿಯು 5 3 ಲೀಟರ್, ಇನ್ಲೈನ್ 6 ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಇದರೊಮಂದಿಗೆ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications