ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ದೇಶಾದ್ಯಂತ 45 ದಿನಗಳಿಗೂ ಹೆಚ್ಚು ಕಾಲದಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಕರೋನಾ ವೈರಸ್ ಹರಡುವ ಭೀತಿಯಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಲಾಕ್‌ಡೌನ್ ಅನ್ನು ಮತ್ತೆ ಮುಂದುವರೆಸುವ ಸಾಧ್ಯತೆಗಳಿವೆ.

ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ಅಗತ್ಯವಿಲ್ಲದೆ ಹೊರಬರುವ ವಾಹನಗಳನ್ನು ವಶಕ್ಕೆ ಪಡೆಯುವುದರ ಜೊತೆಗೆ ಅವುಗಳಿಗೆ ದಂಡ ವಿಧಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ಯುವಕನೊಬ್ಬ ತನ್ನ ಬಿಎಂಡಬ್ಲ್ಯು ಐಷಾರಾಮಿ ಕಾರಿನಲ್ಲಿ ಕೊಕೈನ್ ಖರೀದಿಸಲು ಸುಮಾರು 100 ಕಿ.ಮೀ ದೂರ ಸಂಚರಿಸಿದ್ದಾನೆ.

ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ಈ ಘಟನೆ ಉತ್ತರ ಪ್ರದೇಶದದಲ್ಲಿ ನಡೆದಿದೆ. ಲಾಕ್‌ಡೌನ್ ಕಾರಣಕ್ಕೆ ದೇಶದ ಬಹುತೇಕ ರಸ್ತೆಗಳು ನಿರ್ಜನವಾಗಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರವಲ್ಲದೇ ಪ್ರಮುಖ ನಗರಗಳ ರಸ್ತೆಗಳಲ್ಲೂ ವಾಹನಗಳ ಓಡಾಟವಿಲ್ಲ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ಈ ಸಂದರ್ಭವನ್ನು ಕೆಲವರು ಜಾಲಿ ರೈಡ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದು ಲಾಕ್‌ಡೌನ್ ಉದ್ದೇಶವನ್ನೇ ಹಾಳುಗೆಡವಲಿದೆ. ಜೊತೆಗೆ ಕರೋನಾ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ಈ ಘಟನೆಯಲ್ಲಿ ಸಿಕ್ಕಿಬಿದ್ದ ಯುವಕನು ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಎಕ್ಸ್ 7 ಎಕ್ಸ್‌ಟ್ರಿಮ್ 40 ಐ-ಎಂ ಸ್ಪೋರ್ಟ್ಸ್ ಕಾರಿನ ಬೆಲೆಯು ಎಕ್ಸ್ ಶೋ ರೂಂ ದರದಂತೆ ರೂ.1 ಕೋಟಿಗಳಾಗಿದೆ. ಈ ಯುವಕನು ಡ್ರಗ್ಸ್ ಖರೀದಿಸಲು ನೋಯ್ಡಾದಿಂದ ಮೀರತ್‌ಗೆ ಹೊರಟಿದ್ದಾನೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ಮೀರತ್‌ಗೆ ಹೋಗುವ ದಾರಿಯಲ್ಲಿದ್ದ ಬೆಕುಂಬುಲ್ ಚೌಕ್‌ನಲ್ಲಿ ಪೊಲೀಸರು ಈ ಯುವಕನ ತಪಾಸಣೆ ನಡೆಸಿದ್ದಾರೆ. ಪರಿಶೀಲನೆಯ ವೇಳೆಯಲ್ಲಿ ಅವನು ಡ್ರಗ್ಸ್ ಖರೀದಿಸಲು 100 ಕಿ.ಮೀ ದೂರ ಪ್ರಯಾಣಿಸಿರುವುದು ಕಂಡು ಬಂದಿದೆ.

ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ಪೊಲೀಸರ ವಿಚಾರಣೆಯಲ್ಲಿ ಯುವಕನು ನೋಯ್ಡಾದ ಉದ್ಯಮಿಯೊಬ್ಬರ ಮಗನೆಂದು ತಿಳಿದುಬಂದಿದೆ. ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ಯುವಕನಿಗೆ ಪೊಲೀಸರು ದಂಡ ವಿಧಿಸಿ, ವಾಪಸ್ ಕಳುಹಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ಆದರೆ ಈ ಘಟನೆಯಲ್ಲಿ ಯುವಕನಿಗೆ ಕೇವಲ ದಂಡ ವಿಧಿಸಲಾಗಿದೆ. ಪೊಲೀಸರು ಆ ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ: ಡ್ರಗ್ಸ್ ಖರೀದಿಗೆ 100 ಕಿ.ಮೀ ಸಾಗಿದ ಯುವಕ, ಮುಂದೆ ಆಗಿದ್ದೇನು?

ಮೀರತ್ ಹಾಗೂ ನೋಯ್ಡಾ ನಗರಗಳು ಉತ್ತರಪ್ರದೇಶದಲ್ಲಿವೆ. ಉತ್ತರಪ್ರದೇಶದ ಪಕ್ಕದಲ್ಲಿರುವ ದೆಹಲಿಯಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
BMW X7 busted for violating lockdown. Read in Kannada.
Story first published: Saturday, May 9, 2020, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X