ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

By Nagaraja

ಅಮೆರಿಕದ ಬಹುರಾಷ್ಟ್ರೀಯ ವಿಮಾನಯಾನ ಸಂಸ್ಥೆ ಬೋಯಿಂಗ್ 2016 ಜುಲೈ 15ರಂದು 100 ವಸಂತಗಳನ್ನು ಪೂರ್ಣಗೊಳಿಸಿದೆ. ಕಳೆದ 100 ವರ್ಷಗಳ ಅವಧಿಯಲ್ಲಿ ವ್ಯೋಮಯಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ಸಲ್ಲಿಸಿರುವ ಬೋಯಿಂಗ್ ಸಂಸ್ಥೆಯು, ವಿಮಾನಗಳ ನಿರ್ಮಾಣ, ವಿನ್ಯಾಸದಲ್ಲಿ ವಿಶ್ವಕ್ಕೆ ಅಗ್ರಜನಾಗಿ ಬೆಳೆದು ನಂತಿದೆ.

ಬೋಯಿಂಗ್ ಐದು ಬಹು ಮುಖ್ಯ ವ್ಯವಹಾರ ಘಟಕಗಳಿಂದ ನಿರ್ವಹಿಸುತ್ತಿದೆ. ಬೋಯಿಂಗ್ ಕಮರ್ಷಿಯಲ್ ಏರ್ ಪ್ಲೆನ್ಸ್, ಬೋಯಿಂಗ್ ಡಿಫೆನ್ಸ್, ಸ್ಪೇಸ್ ಆಂಡ್ ಸೆಕ್ಯೂರಿಟಿ, ಎಂಜಿನಿಯರಿಂಗ್, ಓಪರೇಷನ್ಸ್, ಟೆಕ್ನಾಲಜಿ; ಬೋಯಿಂಗ್ ಕ್ಯಾಪಿಟಲ್ ಮತ್ತು ಬೋಯಿಂಗ್ ಶೇರ್ಡ್ ಸರ್ವೀಸ್ ಗ್ರೂಪ್.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಬೋಯಿಂಗ್ ಸಂಸ್ಥೆಯನ್ನು 1916ನೇ ಇಸವಿಯ ಜುಲೈ 15ರಂದು ವಾಷಿಂಗ್ಟನ್ ಸೀಟಲ್ ನಗರದಲ್ಲಿ ವಿಲಿಯಮ್ ಇ. ಬೋಯಿಂಗ್ ಎಂಬವರು ಸ್ಥಾಪಿಸಿದ್ದರು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಆರಂಭಿಕ ಕಾಲಘಟ್ಟದಲ್ಲಿ ಅಮೆರಿಕ ನೇವಿಯ ಎಂಜಿನಿಯರ್ ಆಗಿದ್ದ ಜಾರ್ಜ್ ಕೊನ್ರಾಡ್ ವೆಸ್ಟರ್ವೆಲ್ಟ್ ನೆರವಿನ ಜೊತೆಗೆ ಬಿ ಆಂಡ್ ಡಬ್ಲ್ಯು ಸಮುದ್ರ ವಿಮಾನಗಳನ್ನು ತಯಾರಿಸಲಾಗಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಒಂದನೇ ಮಹಾಯುದ್ಧ ಕಾಲಘಟ್ಟದಲ್ಲಿ ಬೋಯಿಂಗ್ ಮರದಿಂದ ನಿರ್ಮಿಸುತ್ತಿದ್ದ ಜಲವಿಮಾನಗಳಿಗೆ ನೇವಿಯಿಂದ ಬೇಡಿಕೆ ಬಂದಿತ್ತು. ಬಳಿಕ ಅಮೆರಿಕ ರಕ್ಷಣಾ ಇಲಾಖೆಯೊಂದಿಗೂ ಕೈಜೋಡಿಸಿಕೊಂಡಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1919 ಮಾರ್ಚ್ 01ರಂದು ಬಿಲ್ ಬೋಯಿಂಗ್ ಮತ್ತು ಎಡಿ ಹಬ್ಬಾರ್ಡ್, ಸಂಸ್ಥೆಯಿಂದ ನಿರ್ಮಿತ ಮೊದಲ ಬೋಯಿಂಗ್ ಮಾಡೆಲ್ ಸಿ ವಿಮಾನದಲ್ಲಿ ಸೀಟಲ್ ನಿಂದ ವ್ಯಾಂಕೋವರ್ ವರೆಗೆ ಚೊಚ್ಚಲ ಅಂತರಾಷ್ಟ್ರೀಯ ಪ್ರಯಾಣವನ್ನು ಹಮ್ಮಿಕೊಂಡಿದ್ದರು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಮೊದಲ ಆಧುನಿಕ ವಿಮಾನವೆಂದು ವಿಶ್ಲೇಷಿಸ್ಪಡುವ ಬೋಯಿಂಗ್ ಮಾಡೆಲ್ 247ಡಿ ವಿಮಾನವು 1930ರ ದಶಕದಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿ ಹಾರಾಟ ನೆಡಸಿತ್ತು. ಇದು ಟ್ವಿನ್ ಎಂಜಿನ್ ನಿಯಂತ್ರಿತ ಲೋಹದ ವಿಮಾನವಾಗಿದೆ.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಶೀಘ್ರ ವೇಗಿಯೂ, ಹೆಚ್ಚು ರಕ್ಷಣಾತ್ಮಕ ಮತ್ತು ಆರಾಮದಾಯಕ ಪ್ರಯಾಣವು ಬೋಯಿಂಗ್ ವಿಮಾನದ ವಿಶಿಷ್ಟತೆಯಾಗಿದೆ.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1933ರಲ್ಲಿ ಮೊದಲ ನೈಜ ಆಧುನಿಕ ಬೋಯಿಂಗ್ 247 ವಿಮಾನವನ್ನು ಪರಿಚಯಿಸಲಾಯಿತು. ಮೊತ್ತ ಮೊದಲ ಜೋಡಿ ಪ್ರಯಾಣಿಕ ವಿಮಾನ ಸಹ ಇದಾಗಿದೆ.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1934ರಲ್ಲಿ ಏರ್ ಮೇಲ್ ಕಾಯಿದೆಯು ವಿಮಾನಯಾನಗಳು ಮತ್ತು ತಯಾರಕರನ್ನು ಅದೇ ಕಾರ್ಪೋರೇಟ್ ನೆರಳಿನಡಿಯಲ್ಲಿರುವಾಗಿದ್ದರೂ ಅದನ್ನು ನಿಷೇಧಿಸಿತ್ತು. ಹಾಗಾಗಿ ಕಂಪನಿಯು ಮೂರು ಸಣ್ಣ ಸಂಸ್ಥೆಗಳಾಗಿ ಕವಲೊಡೆಯಿತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಅವುಗಳೇ ಬೋಯಿಂಗ್ ಏರೋಪ್ಲೇನ್ ಕಂಪನಿ, ಯುನೈಟೆಡ್ ಏರ್ ಲೈನ್ಸ್ ಮತ್ತು ಯುನೈಟೈಡ್ ಏರ್ ಕ್ರಾಫ್ಟ್ ಕಾರ್ಪೋರೇಷನ್. ಬಳಿಕವಿದು ಯುನೈಟೆಡ್ ಟೆಕ್ನಾಲಜೀಸ್ ಆಯಿತು. ಪರಿಣಾಮ ವಿಲಿಯಮ್ ಬೋಯಿಂಗ್ ತನ್ನೆಲ್ಲ ಶೇರುಗಳನ್ನು ಮಾರಾಟ ಮಾಡಿ ಕಂಪನಿ ತೊರೆದನು. ಬಳಿಕ ಕ್ಲೈರ್ ಈಗ್ಟ್ ವೆಡ್ಟ್ ಬೋಯಿಂಗ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿದರು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1938ರಲ್ಲಿ ಬಿಡುಗಡೆಯಾದ ಬೋಯಿಂಗ್ 314 ಕ್ಲಿಫ್ಟರ್ ಏರ್ ಕ್ರಾಫ್ಟ್ ಅಂದಿನ ಸಮಯದ ಅತ್ಯಂತ ದೊಡ್ಡ ನಾಗರಿಕ ವಿಮಾನವಾಗಿ ಗುರುತಿಸಿಕೊಂಡಿತ್ತು. ಇದು ಹಗಲು ವೇಳೆಯಲ್ಲಿ 90 ಪ್ರಯಾಣಿಕರನ್ನು ಮತ್ತು ರಾತ್ರಿ ಸಂಚಾರದಲ್ಲಿ 40 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1938ರಲ್ಲೇ ಬಿಡುಗಡೆಯಾದ ಮಾಡೆಲ್ 307 ಸ್ಟ್ರಾಟೋಲೈನರ್ ಹವಾಮಾನ ವೈಪರಿತ್ಯಗಿಂತಲೂ ಮೇಲ್ಪಟ್ಟದಲ್ಲಿ ಹಾರುವ ಸಾಮರ್ಥ್ಯ ಹೊಂದಿತ್ತು. ಇದು 20,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಬೋಯಿಂಗ್, ಅಸಂಖ್ಯಾತ ಸಂಖ್ಯೆಯಲ್ಲಿ ಬಿ-17 ಹಾಗೂ ಬಿ-29 ಬಾಂಬರ್ ಗಳನ್ನು ನಿರ್ಮಿಸಿತ್ತು. ಶತ್ರು ದಾಳಿಯನ್ನು ತಡೆಯಲು ವಿಮಾನ ತಯಾರಕ ಘಟಕಗಳ ಮೇಲ್ಛಾವಣಿಗೆ ಹಸಿರು ಮರ ಮತ್ತು ತೋಟದಿಂದ ಆವರಿಸಲಾಗಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1958ರಲ್ಲಿ ಅಮೆರಿಕದ ಮೊದಲ ಕಮರ್ಷಿಯಲ್ ಜೆಟ್ ಏರ್ ಲೈನರ್ ಬೋಯಿಂಗ್ 707 ವಿಮಾನದ ವಿತರಣೆಯನ್ನು ಆರಂಭಿಸಿತ್ತು. ಇದರ ಫಲಶ್ರುತಿಯೆಂಬಂತೆ ನಾಲ್ಕು ಎಂಜಿನ್, 156 ಪ್ರಯಾಣಿಕರ ಈ ವಿಮಾನಯಾನ ಸೇನೆಯಿಂದ ವಾಣಿಜ್ಯ ಜೆಟ್ ತಯಾರಿಕೆಯಲ್ಲಿ ಅಮೆರಿಕ ಅಧಿಪತಿಯಲ್ಲಿ ಶೋಭಿಸಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1960ರಲ್ಲಿ ವರ್ಟೊಲ್ ಏರ್ ಕ್ರಾಫ್ಟ್ ಕಾರ್ಪೋರೇಷನ್ ಬೋಯಿಂಗ್ ಸ್ವಾಧೀನಕ್ಕೊಳಗಾಯಿತು. ಇದು ಬಳಿಕ ಬೋಯಿಂಗ್ ನ ವರ್ಟೊಲ್ ಡಿವಿಜನ್ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿತ್ತು. 1961ರ ಅವಳಿ ರೋಟರ್ ಸಿಎಚ್-47 ಚಿನೂಕ್ ಇದರ ಮೊದಲ ಉತ್ಪಾದನೆಯಾಗಿದೆ.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಮಾಡೆಲ್ 747 ಗಳಂತಹ ಗಮನಾರ್ಹ ವಿಮಾನಗಳನ್ನು ನಿರ್ಮಿಸಿರುವ ಬೋಯಿಂಗ್, 1960ರ ದಶಕದಲ್ಲಿ ಸಮುದ್ರದಡಿಯಲ್ಲಿ ಕಾರ್ಯಾಚರಣೆ ನಡೆಸಬಲ್ಲ ಪರೀಕ್ಷಾರ್ಥ ಯುಎಸ್‌ಎಸ್ ಹೈ ಪಾಯಿಂಟ್ಸ್ ನೌಕೆಯನ್ನು ನಿರ್ಮಾಣಗೊಳಿಸಿತ್ತು. ಇದು ರಕ್ಷಣಾ ವ್ಯವಸ್ಥೆಯಲ್ಲಿ ಸೈನ್ಯ ಗಸ್ತು ತಿರುವಿಗೆ ನೆರವಾಗಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1970ರ ದಶಕದಲ್ಲಿ ಬೋಯಿಂಗ್ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿತ್ತು. ಇದರಿಂದಾಗಿ ವಿಮಾನಗಳ ನಿರ್ಮಾಣದಲ್ಲಿ ಭಾರಿ ವಿಳಂಬವುಂಟಾಗಿತ್ತು. ಬಳಿಕ ನಿರ್ಮಾಣವಾದ ನಾಲ್ಕು ಎಂಜಿನ್ ಗಳ ದೂರಗಾಮಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ 747 ವಿಮಾನವು ಚೇತರಿಕೆಯನ್ನು ತುಂಬಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1980ರ ದಶಕದಲ್ಲಿ ಬೋಯಿಂಗ್ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂತು. ವಾಣಿಜ್ಯ ವಿಮಾನಗಳ ಜೊತೆಗೆ ಮಿಲಿಟರಿ ವಿಮಾನಗಳ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವು. ಈ ವೇಳೆಯಲ್ಲಿ ಯುರೋಪ್ ನ ಏರ್ ಬಸ್ಸಿನಿಂದ ಕಠಿಣ ಸ್ಪರ್ಧೆಯು ಎದುರಾಗತೊಡಗಿದ್ದವು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಸ್ಪೇಸ್ ಷಟಲ್ ಯೋಜನೆಯು ಬೋಯಿಂಗ್ ನ ಮಗದೊಂದು ಗಮನಾರ್ಹ ಸಾಧನೆಯಾಗಿದೆ. ಇದಕ್ಕಾಗಿ ಅಪೊಲೊ ಯುಗದಲ್ಲಿ ಬೋಯಿಂಗ್ ತನ್ನ ಅನುಭವದ ಕೊಡುಗೆಯನ್ನು ನೀಡಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1990ರ ದಶಕದಲ್ಲಿ ಎಫ್-22 ರಾಪ್ಟಾರ್ ಗಳ ಅಭಿವೃದ್ಧಿಗಾಗಿ ಬೋಯಿಂಗ್ ಸಂಸ್ಥೆಯನ್ನು ಲಾಕ್ ಹೀಡ್ ಡಿಸೈನ್ ಆಯ್ಕೆ ಮಾಡಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

1994ರಲ್ಲಿ ಅಂದಿನ ಕಾಲದ ಅತ್ಯಾಧುನಿಕ ವಾಣಿಜ್ಯ ಜೆಟ್ ವಿಮಾನವಾಗಿರುವ ಟ್ವಿನ್ ಎಂಜಿನ್ ನಿಯಂತ್ರಿತ 777 ವಿಮಾನವನ್ನು ಬೋಯಿಂಗ್ ಪರಿಚಯಿಸಿತ್ತು. ಇದು 300ರಿಂದ 370 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಬೋಯಿಂಗ್ 777 ವಿಮಾನದಲ್ಲಿ ಫೈ-ಬೈ-ವೈರ್ ಮತ್ತು ಕಂಪ್ಯೂಟರ್ ಏಡಡ್ ಡಿಸೈನ್ ತಂತ್ರಜ್ಞಾನಗಳನ್ನು ಆಳವಡಿಸಿದ ಮೊದಲ ವಿಮಾನಯಾನ ಸಂಸ್ಥೆಯೆಂಬ ಖ್ಯಾತಿಗೂ ಬೋಯಿಂಗ್ ಪಾತ್ರವಾಗಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

21ನೇ ಶತಮಾನದಲ್ಲಿ ಉಪಗ್ರಹ ಸಂಪರ್ಕ ವಲಯದಲ್ಲೂ ತನ್ನ ಅಧಿಪತ್ಯವನ್ನು ವಿಸ್ತರಿಸಿದ ಬೋಯಿಂಗ್ ಹ್ಯುಗಸ್ ಸ್ಪೇಸ್ ಆಂಡ್ ಕಮ್ಯೂನಿಕೇಷನ್ ಸಂಸ್ಥೆಯನ್ನು ಖರೀದಿಸಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

2001ರಲ್ಲಿ ಬೋಯಿಂಗ್ ಸಂಸ್ಥೆಯು ತನ್ನ ಮುಖ್ಯ ಕಚೇರಿಯನ್ನು ಸೀಟಲ್ ನಿಂದ ಚಿಕಾಗೊಗೆ ವರ್ಗಾಯಿಸಿತ್ತು. ಇದೇ ಸಾಲಿನಲ್ಲಿ ತನ್ನ ಮುಖ್ಯ ಪ್ರತಿಸ್ಪರ್ಧಿ ಲಾಕ್ ಹೀಡ್ ಮಾರ್ಟಿನ್ ವಿರುದ್ಧದ ಜಾಯಿಂಟ್ ಸ್ಟ್ರೈಕ್ ಫೈಟರ್ ಮಲ್ಟಿ ಮಿಲಿಯನ್ ಡಾಲರ್ ಒಪ್ಪಂದ ಕಳೆದುಕೊಂಡಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಹಲವಾರು ದಶಕಗಳ ಯಶಸ್ಸಿನ ಬಳಿಕ ಬೋಯಿಂಗ್, 2003ರಲ್ಲಿ ವಿಮಾನ ಮಾರುಕಟ್ಟೆ ಮುಂದಾಳತ್ವದಲ್ಲಿ ಏರ್ ಬಸ್ ಮುಂದೆ ಸೋಲೊಪ್ಪಿಕೊಳ್ಳಬೇಕಾಯಿತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

2000ನೇ ಇಸವಿಯಲ್ಲಿ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಅತಿ ಹೆಚ್ಚಿನ ಬೇಡಿಕೆಗೆ ಗ್ರಾಸವಾಗಿತ್ತಲ್ಲದೆ ವಿವಿಧ ರಾಷ್ಟ್ರಗಳಿಂದಾಗಿ ದಾಖಲೆ ಸಂಖ್ಯೆಯ ಆರ್ಡರ್ ಗಳನ್ನು ಗಿಟ್ಟಿಸಿಕೊಂಡಿತ್ತು.

ಬೋಯಿಂಗ್ ಶತಮಾನೋತ್ಸವ; ಇತಿಹಾಸದತ್ತ ಹದ್ದುನೋಟ!

ಹೀಗೆ ಹಂತ ಹಂತವಾಗಿ ಯಶಸ್ಸಿನತ್ತ ದಾಪುಗಾಲನ್ನಿಟ್ಟಿರುವ ಬೋಯಿಂಗ್ ಇಂದು ಅಮೆರಿಕ ಮಾತ್ರವಲ್ಲದೆ ಇತರೆ ರಾಷ್ಟ್ರಗಳಲ್ಲೂ ವ್ಯೋಮಯಾನ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.

More from DriveSpark

Article Published On: Thursday, July 21, 2016, 13:55 [IST]
English summary
Boeing turns 100: A look back at aviation history
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+