ಜಗತ್ತಿನ ಅತಿದೊಡ್ಡ ಬೋಯಿಂಗ್ ವಿಮಾನ ಲಾಂಚ್
ಕಳೆದ ದಿನವಷ್ಟೇ ಬೋಯಿಂಗ್ ಪ್ರತಿಸ್ಪರ್ಧಿ ಏರ್ ಬಸ್ ವಿಮಾನವನ್ನು ನಾವು ಪರಿಚಯಿಸಿದ್ದೇವೆ. ಈ ಸುದ್ದಿ ಮಾಸುವ ಮುನ್ನವೇ ವಿಶ್ವದ ಅತಿದೊಡ್ಡ ವಿಮಾನ ತಯಾರಕ ಕಂಪನಿಯಾದ ಬೋಯಿಂಗ್‌ನಿಂದ ಅತ್ಯಂತ ದೊಡ್ಡದಾದ ಡ್ರೀಮ್ ಲೈನರ್ ವಿಮಾನ ಪ್ರದರ್ಶನಗೊಂಡಿದೆ.
ಪ್ರಸ್ತುತ ಸಾಗುತ್ತಿರುವ ಪ್ಯಾರಿಸ್ ಏರ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಬೋಯಿಂಗ್ 787-10 ಡ್ರೀಮ್ ಲೈನರ್, 2017ನೇ ಇಸವಿಯಲ್ಲಿ ಖರೀದಿಗಾರರಿಗೆ ಹಸ್ತಾಂತರವಾಗುವ ನಿರೀಕ್ಷೆಯಿದೆ.
ಮುಂದಿನ ಜನಾಂಗದ 787 ಡ್ರೀಮ್‌ಲೈನರ್ ಎಂದೇ ಖ್ಯಾತಿ ಪಡೆದಿರುವ ಬೋಯಿಂಗ್ 787-10 ವಿಮಾನ ತನ್ನ ಹಿಂದಿನ ಪೀಳೆಗೆಯ ಎಲ್ಲ ವಿಮಾನಗಳನ್ನು ಹಿಂದಿಕ್ಕಿ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಆಗಮನವಾಗುತ್ತಿದೆ. ಹೆಚ್ಚಿನ ಮಾಹಿತಿ ಆಕರ್ಷಕ ಚಿತ್ರಣ, ವೀಡಿಯೋಗಾಗಿ ಫೋಟೊ ಫೀಚರ್ ತಿರುವಿರಿ...

ಕಂಪನಿಯ ಪ್ರಕಾರ ಬೋಯಿಂಗ್ 787-10 ವಿಮಾನಕ್ಕಾಗಿ ಈಗಾಗಲೇ ಯುನೈಟೆಡ್ ಏರ್‌ಲೈನ್ಸ್, ಸಿಂಗಾಪುರ ಏರ್‌ಲೈನ್ಸ್, ಬ್ರಿಟಿಷ್ ಏರ್‌ವೇಸ್‌ಗಳಿಂದ ಕೋರಿಕೆ ಬಂದಿದೆ.

ಹಿಂದಿನ ಡ್ರೀಮ್‌ಲೈನರ್‌ಗಳಿಗೆ ಹೋಲಿಸಿದರೆ ನೂತನ 787-10 ಬೋಯಿಂಗ್ ವಿಮಾನ ದೊಡ್ಡದಾಗಿರಲಿದೆ.

ಸಿಂಗಾಪುರ ಏರ್‌ಲೈನ್ಸ್ ಹಾಗೂ ಎಎಲ್‌ಸಿಗಳಿಂದ ಅತಿ ಹೆಚ್ಚು ಬೇಡಿಕೆ ಕಂಡುಬಂದಿದ್ದು, ತಲಾ 30ರಷ್ಟು ವಿಮಾನಗಳಿಗಾಗಿ ಕೋರಿಕೆ ಸಲ್ಲಿಸಲಾಗಿದೆ. ಉಳಿದಂತೆ ಅಮೆರಿಕ 20 ಹಾಗೂ ಬ್ರಿಟನ್ 12 ಯುನಿಟ್‌ಗಳಿಗೆ ಕೋರಿದೆ.

ಪ್ರಸ್ತುತ ಪ್ಯಾರಿಸ್ ಏರ್ ಶೋದಲ್ಲಿ ಬೋಯಿಂಗ್ ಹಾಗೂ ಏರ್ ಬಸ್ ನಡುವೆ ನಿಕಟ ಪೈಪೋಟಿ ಕಂಡುಬರುತ್ತಿದ್ದು, ಇದು ವಾಹನ ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಕಂಪನಿಯ ಪ್ರಕಾರ ನೂತನ 787-10 ಡ್ರೀಮ್ ಲೈನರ್, ಗರಿಷ್ಠ ಇಂಧನ ಕ್ಷಮತೆಯ ವಿಮಾನವಾಗಿರಲಿದೆ. ಇದು ವಿಮಾನ ಮಾರುಕಟ್ಟೆಯಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಲಿದೆ ಎಂದಿದೆ.

ನೂತನ 787-10 ಬೋಯಿಂಗ್ ವಿಮಾನ, 300ರಿಂದ 330 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ಜಗತ್ತಿನ ಅತಿದೊಡ್ಡ ಬೋಯಿಂಗ್ ವಿಮಾನ ಲಾಂಚ್

Dreamliner 787-10

Dreamliner 787-10

Dreamliner 787-10

Dreamliner 787-10

Dreamliner 787-10

Dreamliner 787-10
Dreamliner 787-10
ವೀಡಿಯೋ ವೀಕ್ಷಿಸಿ


Click it and Unblock the Notifications








