ಲಾಕ್‌ಡೌನ್ ಎಫೆಕ್ಟ್: ಅಗತ್ಯ ವಸ್ತು ಖರೀದಿಗಾಗಿ ಹೊರಬಂದ ಬಾಲಿವುಡ್ ನಟ
ಭಾರತದಲ್ಲಿ ವಿಧಿಸಲಾಗಿದ್ದ 21 ದಿನಗಳ ಲಾಕ್‌ಡೌನ್ ಅವಧಿ ಪೂರ್ಣಗೊಂಡಿದ್ದು, ಈಗ ಲಾಕ್‌ಡೌನ್ 2.0 ಜಾರಿಗೊಳಿಸಲಾಗಿದೆ. ಏಪ್ರಿಲ್ 14ರ ಬೆಳಿಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿರವರು ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದ್ದಾರೆ.

ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಇದರಲ್ಲಿ ಮೇ 1ಕಾರ್ಮಿಕ ದಿನ, ಮೇ 2ರ ಶನಿವಾರ ಹಾಗೂ ಮೇ 3ರ ಭಾನುವಾರಗಳು ಸೇರಿವೆ. ಈ ಲಾಕ್‌ಡೌನ್‌ನಿಂದಾಗಿ ಜನರ ಕೈ ಕಟ್ಟಿ ಹಾಕಿದಂತಾಗಿದೆ. ಮತ್ತೆ ಲಾಕ್‌ಡೌನ್ ವಿಧಿಸಿರುವ ಬಗ್ಗೆ ಜನರು ಚಿಂತಿತರಾಗಿದ್ದಾರೆ. ಇದು ಬಡವರ ಹಾಗೂ ಕೂಲಿ ಕಾರ್ಮಿಕರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.

ಈ ಲಾಕ್‌ಡೌನ್ ಬಡವರ ಮೇಲೆ ಮಾತ್ರವಲ್ಲದೆ ಶ್ರೀಮಂತರು ಹಾಗೂ ಸೆಲೆಬ್ರಿಟಿಗಳ ಮೇಲೂ ಪರಿಣಾಮ ಬೀರಿದೆ. ಈ ಹಿಂದೆ ಯಾವುದಾದರೂ ಸಭೆ, ಸಮಾರಂಭಗಳಿಗಾಗಿ ಮಾತ್ರ ಹೊರಬರುತ್ತಿದ್ದ ಸೆಲೆಬ್ರಿಟಿಗಳು ಈಗ ಅಗತ್ಯ ವಸ್ತುಗಳ ಖರೀದಿಗಾಗಿ ಹೊರಬರುತ್ತಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಾಲಿವುಡ್‌ನ ಜನಪ್ರಿಯ ನಟ ಫರ್ಹಾನ್ ಅಖ್ತರ್‌ರವರು ಸಹ ಇದರಿಂದ ಹೊರತಾಗಿಲ್ಲ. ಲಾಕ್‌ಡೌನ್‌ನಿಂದಾಗಿ ಅವರ ಮನೆಗೆಲಸದವರು ಕೆಲಸಕ್ಕೆ ಬರುತ್ತಿಲ್ಲ. ಈ ಕಾರಣಕ್ಕೆ ಅವರು ತಮ್ಮ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 350 ಡಿ ಕಾರಿನಲ್ಲಿ ಹೊರಬಂದು ತಮ್ಮ ಕುಟುಂಬಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಿದ್ದಾರೆ.

ಈ ಕಾರಿನ ಬೆಲೆ ರೂ.1.02 ಕೋಟಿಗಳಾಗಿದೆ. ಇದು ಐಷಾರಾಮಿ ಎಸ್‌ಯುವಿಯಾಗಿದೆ. ಈ ಕಾರಿನಲ್ಲಿ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ಇದರ ಬಗ್ಗೆ ಗಾಯಕ ಸಿಬಾನಿ ದಂತೇಕರ್‌ರವರು ವರದಿ ಮಾಡಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಹೊರಬಂದಾಗ ಫರ್ಹಾನ್‌ರವರು ಸ್ನೀಕ್ಸ್ ಹಾಗೂ ಆಂಟಿಸೆಪ್ಟಿಕ್‌ಗಳನ್ನು ಖರೀದಿಸಿದ್ದಾರೆ ಎಂದು ಸಿಬಾನಿರವರು ವರದಿ ಮಾಡಿದ್ದಾರೆ. ಇದರ ಜೊತೆಗೆ ಅಡುಗೆಗಾಗಿ ಕೆಲ ಪದಾರ್ಥಗಳನ್ನು ಖರೀದಿಸಿದ್ದಾರೆ. ಇದರ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

ಈ ಫೋಟೋಗಳಲ್ಲಿ ದುಬಾರಿ ಐಷಾರಾಮಿ ಎಸ್‌ಯುವಿಯ ಜೊತೆಗೆ ನಮ್ಮ ಗಮನ ಸೆಳೆಯುವುದು, ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಗ್ಲೌಸ್ ಹಾಗೂ ಮಾಸ್ಕ್‌ಗಳನ್ನು ಧರಿಸಿರುವುದು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಗ್ಲೌಸ್ ಹಾಗೂ ಮಾಸ್ಕ್‌ಗಳನ್ನು ಧರಿಸುವಂತೆ ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳು ಒತ್ತಾಯಿಸುತ್ತಿವೆ. ಕರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಇವುಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಅಗತ್ಯ ಕಾರ್ಯಗಳಿಗಾಗಿ ಹೊರಬರುವ ಎಲ್ಲರೂ ಮಾಸ್ಕ್ ಧರಿಸುವಂತೆ ಹೇಳಲಾಗಿದೆ.

ಮಾಸ್ಕ್‌ಗಳನ್ನು ಧರಿಸದ ವಾಹನ ಚಾಲಕರಿಗೆ ದಂಡ ವಿಧಿಸುವಂತೆ ರಾಜ್ಯ ಸರ್ಕಾರಗಳು ಆದೇಶ ನೀಡಿವೆ. ತಮಿಳುನಾಡಿನಲ್ಲಿಯೂ ಮಾಸ್ಕ್ ಧರಿಸದೇ ವಾಹನ ಚಾಲನೆ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ.
ಮೂಲ: ಹಿಂದೂಸ್ತಾನ್ ಟೈಮ್ಸ್


Click it and Unblock the Notifications