ಇಲ್ಲಿವೆ ನೋಡಿ ಕೋಟಿ ಬೆಲೆಬಾಳುವ ಜಾನ್ ಅಬ್ರಹಾಂ ಬೈಕ್‍‍ಗಳು

ಬಾಲಿವುಡ್ ನಟ ಜಾನ್ ಅಬ್ರಹಾಂರವರು ನಿನ್ನೆ ತಮ್ಮ ಬೈಕ್ ಗ್ಯಾರೇಜಿನ ಬಗ್ಗೆ ಚಿಕ್ಕ ವೀಡಿಯೊವೊಂದನ್ನು ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಅಪ್‍‍ಲೋಡ್ ಮಾಡಿದ್ದರು. ಬಾಲಿವುಡ್‍‍ನ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ಜಾನ್ ಅಬ್ರಾಹಂರವರು ಹಲವಾರು ಪ್ರಿಮೀಯಂ ಲೀಟರ್ ಕ್ಲಾಸ್ ಬೈಕುಗಳನ್ನು ತಮ್ಮ ಗ್ಯಾರೇಜಿನಲ್ಲಿ ಹೊಂದಿದ್ದಾರೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಈ ಬೈಕುಗಳಲ್ಲಿ ಕವಾಸಕಿ ಝಡ್‍ಎಕ್ಸ್ 14 ಆರ್, ಎಪ್ರಿಲಿಯಾ ಆರ್‍ಎಸ್‍‍ವಿ4 ಆರ್‍ಎಫ್, ಯಮಹಾ ವಿ-ಮ್ಯಾಕ್ಸ್, ಯಮಹಾ ವೈ‍‍ಝಡ್‍ಎಫ್ ಆರ್ 1, ಡುಕಾಟಿ ವಿ4 ಪ್ಯಾನಿಗಲ್ ಹಾಗೂ ಎಂವಿ ಅಗಸ್ಟಾ ಎಫ್3 800 ಬೈಕುಗಳು ಸೇರಿವೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಜಾನ್ ಅಬ್ರಹಾಂರವರು ಬೈಕ್ ಪ್ರಿಯರಾಗಿದ್ದು, ತಮ್ಮ ಗ್ಯಾರೇಜಿನಲ್ಲಿ ದುಬಾರಿ ಬೆಲೆಯ ಐಷಾರಾಮಿ ಬೈಕುಗಳನ್ನು ಹೊಂದಿದ್ದಾರೆ. ಜಾನ್ ಅಬ್ರಹಾಂರವರು ತಮ್ಮ ಗ್ಯಾರೇಜಿನಲ್ಲಿ ಯಾವ ಬೈಕುಗಳನ್ನು ಹೊಂದಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಕವಾಸಕಿ ಝಡ್‍ಎಕ್ಸ್ - 14 ಆರ್

ಈ ಬೈಕ್ ಕವಾಸಕಿ ಕಂಪನಿಯು ತಯಾರಿಸಿರುವ ದೊಡ್ಡ ಎಂಜಿನ್ ಹೊಂದಿರುವ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿ 1,441 ಸಿಸಿಯ ಲಿಕ್ವಿಡ್ ಕೂಲ್, 4 ಸ್ಟ್ರೋಕ್, ಇನ್ ಲೈನ್ 4 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಈ ಎಂಜಿನ್ 10,000 ಆರ್‍‍ಪಿ‍ಎಂನಲ್ಲಿ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 7,500 ಆರ್‍‍ಪಿ‍ಎಂನಲ್ಲಿ 158 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಕವಾಸಕಿ ಝಡ್‍ಎಕ್ಸ್ 14 ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.19.7 ಲಕ್ಷಗಳಾಗಿದೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಎಪ್ರಿಲಿಯಾ ಆರ್‍ಎಸ್‍‍ವಿ4 - ಆರ್‍ಎಫ್

ಆರ್‍ಎಸ್‍‍ವಿ4 - ಆರ್‍ಎಫ್ ಜಾನ್ ಅಬ್ರಹಾಂರವರ ಗ್ಯಾರೇಜಿನಲ್ಲಿರುವ ಸ್ಪೋರ್ಟಿ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿ 999 ಸಿಸಿಯ, 4 ಸಿಲಿಂಡರ್, 4 ಸ್ಟ್ರೋಕ್, ಲಿಕ್ವಿಡ್ ಕೂಲ್ ಎಂಜಿನ್ ಅಳವಡಿಸಲಾಗಿದೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಈ ಎಂಜಿನ್ 13,000 ಆರ್‍‍ಪಿ‍ಎಂನಲ್ಲಿ 201 ಬಿ‍‍ಹೆಚ್‍‍ಪಿ ಪವರ್ ಹಾಗೂ 10,500 ಆರ್‍‍ಪಿ‍ಎಂನಲ್ಲಿ 115 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಪ್ರಿಲಿಯಾ ಆರ್‍ಎಸ್‍‍ವಿ4 - ಆರ್‍ಎಫ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.22.81 ಲಕ್ಷಗಳಾಗುತ್ತದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಯಮಹಾ ವೈ‍‍ಝಡ್‍ಎಫ್ ಆರ್1

ಯಮಹಾ ಆರ್1 ಜಾನ್ ಅಬ್ರಹಾಂರವರ ನೆಚ್ಚಿನ ಬೈಕುಗಳಲ್ಲಿ ಒಂದಾಗಿದೆ. ಈ ಕಾರಣಕ್ಕಾಗಿ ಅವರು ಹೊಸ ಆರ್ 1 ಬೈಕ್ ಅನ್ನು ಖರೀದಿಸಿದ್ದಾರೆ. ಹೊಸ ಆರ್ 1 ಬೈಕಿನಲ್ಲಿ 4 ಸಿಲಿಂಡರಿನ ಲಿಕ್ವಿಡ್ ಕೂಲ್, 998 ಸಿಸಿಯ ಎಂಜಿನ್ ಅಳವಡಿಸಲಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಈ ಎಂಜಿನ್ 13,500 ಆರ್‍‍ಪಿ‍ಎಂನಲ್ಲಿ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 11,500 ಆರ್‍‍ಪಿ‍ಎಂನಲ್ಲಿ 112.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಯಮಹಾ ವೈ‍‍ಝಡ್‍ಎಫ್ ಆರ್ 1 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.20.39 ಲಕ್ಷಗಳಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಡುಕಾಟಿ ವಿ4 ಪ್ಯಾನಿಗಲ್

ಜಾನ್ ಅಬ್ರಹಾಂರವರ ಬಳಿಯಿರುವ ಮತ್ತೊಂದು ಬೈಕ್ ಡುಕಾಟಿ ವಿ4 ಪ್ಯಾನಿಗಲ್ ಆಗಿದೆ. ಈ ಬೈಕಿನಲ್ಲಿ 1,103 ಸಿಸಿಯ 4 ಸಿಲಿಂಡರ್, ಲಿಕ್ವಿಡ್ ಕೂಲ್ ಎಂಜಿನ್ ಅಳವಡಿಸಲಾಗಿದೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಈ ಎಂಜಿನ್ 13,000 ಆರ್‍‍ಪಿ‍ಎಂನಲ್ಲಿ 211 ಬಿ‍‍ಹೆಚ್‍‍ಪಿ ಪವರ್ ಹಾಗೂ 10,000 ಆರ್‍‍ಪಿ‍ಎಂನಲ್ಲಿ 124 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಡುಕಾಟಿ ಪ್ಯಾನಿಗಲ್ ವಿ4 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.20.53 ಲಕ್ಷಗಳಾಗಿದೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಎಂವಿ ಅಗಸ್ಟಾ ಎಫ್3 800

ಎಂವಿ ಅಗಸ್ಟಾ ಎಫ್3 800 ಜಾನ್ ಅಬ್ರಹಾಂರವರ ಬಳಿಯಿರುವ ಆಕರ್ಷಕವಾದ ಹಾಗೂ ಸ್ಟೈಲಿಶ್ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಈ ಬೈಕಿನಲ್ಲಿ 798ಸಿಸಿಯ 3 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

View this post on Instagram

My babies !! . . #superbikes

A post shared by John Abraham (@thejohnabraham) on

ಈ ಎಂಜಿನ್ 148 ಬಿ‍‍ಹೆಚ್‍‍ಪಿ ಪವರ್ ಹಾಗೂ 88 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂವಿ ಅಗಸ್ಟಾ ಎಫ್3 800 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.21.99 ಲಕ್ಷಗಳಾಗಿದೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಯಮಹಾ ವಿ-ಮ್ಯಾಕ್ಸ್

ಜಾನ್ ಅಬ್ರಹಾಂರವರ ಗ್ಯಾರೇಜಿನಲ್ಲಿರುವ ಯಮಹಾ ವಿ-ಮ್ಯಾಕ್ಸ್ ಸ್ಪೋರ್ಟ್ಸ್ ಬೈಕ್ ಅಲ್ಲ ಬದಲಿಗೆ ಬಲಶಾಲಿಯಾದ ಕ್ರೂಸರ್ ಆಗಿದೆ. ವಿ-ಮ್ಯಾಕ್ಸ್ ದೂರ ಪ್ರಯಾಣದ ಕ್ರೂಸರ್ ಆಗಿದೆ. ಈ ಬೈಕಿನಲ್ಲಿ 1679 ಸಿಸಿಯ ಲಿಕ್ವಿಡ್ ಕೂಲ್, 4 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಇದೇ ನೋಡಿ ಜಾನ್ ಅಬ್ರಹಾಂ ಬೈಕ್ ಗ್ಯಾರೇಜ್..!

ಈ ಎಂಜಿನ್ 9,000 ಆರ್‍‍ಪಿ‍ಎಂನಲ್ಲಿ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 6,500 ಆರ್‍‍ಪಿ‍ಎಂನಲ್ಲಿ 167 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಯಮಹಾ ವಿ-ಮ್ಯಾಕ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.26.95 ಲಕ್ಷಗಳಾಗಿದೆ.

Article Published On: Friday, November 22, 2019, 15:53 [IST]
English summary
Bollywood actor john abraham bike garage - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+