ಕೋಟಿ ಬೆಲೆಯ ಕಾರು ಬಿಟ್ಟು ಸಾಮನ್ಯರಂತೆ ಮೆಟ್ರೋ ಪ್ರಯಾಣ! ಸೆಲ್ಫಿಗೆ ಮುಗಿಬಿದ್ದ ಜನ... ಯಾರೀತ?

ಭಾರತದ ಪ್ರಮುಖ ನಗರಗಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ಸೆಲೆಬ್ರಿಟಿಗಳು, ಉದ್ಯಮಿಗಳು ಪರದಾಡುತ್ತಿದ್ದಾರೆ. ಸಾಮಾನ್ಯವಾಗಿ ಇವರೆಲ್ಲ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ತುರ್ತು ಪರಿಸ್ಥಿತಿಗಳು' ಶ್ರೀಮಂತರನ್ನು ಕೂಡ ಸಾಮನ್ಯರನ್ನಾಗಿಸುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಇತ್ತೀಚೆಗೆ ಬಾಲಿವುಡ್ ನಟ ಟ್ರಾಫಿಕ್‌ ಜಾಮ್‌ನಿಂದಾಗಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 'ಕಾರ್ತಿಕ್ ಆರ್ಯನ್' ಅವರನ್ನು ಗುರುತಿಸಿದ ಕೆಲವರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡಬಹುದು. ಮುಂಬೈನಲ್ಲಿ ಭಾರಿ ದಟ್ಟಣೆಯಿಂದ ಪಾರಾಗಲು ಕಾರ್ತಿಕ್ ಆರ್ಯನ್ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ" ಎಂದು ಬಾಲಿವುಡ್‌ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಬರೆಯಲಾಗಿದೆ. ಇದು ಸಾಕಷ್ಟು ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಕಾರ್ತಿಕ್ ಆರ್ಯನ್ ಮುಖಕ್ಕೆ ಮಾಸ್ಕ್ ಧರಿಸಿ ಬಾಗಿಲ ಬಳಿ ನಿಂತಿದ್ದಾರೆ. ವೀಡಿಯೊದಲ್ಲಿ, ಸ್ಟೇಷನ್ ಬರುತ್ತಿದೆ, ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಅಭಿಮಾನಿಗಳು ಹೇಳುವುದನ್ನು ಕೇಳಬಹುದು.

bollywood-actor-kartik-aaryan-took-the-metro-to-avoid-traffic-jam

ಯಾವಾಗಲೂ ದುಬಾರಿ ಲ್ಯಾಂಬೊರ್ಗಿನಿ ಕಾರಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾರ್ತಿಕ್ ಆರ್ಯನ್, ಸಾಮಾನ್ಯ ನಾಗರಿಕರಂತೆ ಮೆಟ್ರೋದಲ್ಲಿ ಕಾಣಿಸಿಕೊಂಡಾಗ ಜನರು ಬೆರಗಾಗಿದ್ದಾರೆ. ಮುಂಬೈ ನಗರದ ಭಾರಿ ದಟ್ಟಣೆಯಿಂದಾಗಿ ಕಾರ್ತಿಕ್ ಆರ್ಯನ್ ಮಾತ್ರವಲ್ಲ, ಈ ಹಿಂದೆ ಅನೇಕ ನಟರು, ಉದ್ಯಮಿಗಳು ಮೆಟ್ರೋದಲ್ಲಿ ಪ್ರಯಾಣಿಸಿದ ಉದಾಹರಣೆಗಳಿವೆ. ಅಕ್ಷಯ್ ಕುಮಾರ್, ಹೃತಿಕ್ ರೋಷನ್ ಮುಂತಾದವರು ಈ ಹಿಂದೆ ಮೆಟ್ರೋದಲ್ಲಿ ಪ್ರಯಾಣಿಸಿದ್ದರು.

ಈ ಹಿಂದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೆಟ್ರೋದಲ್ಲಿ ಪ್ರಯಾಣಿಸಿದ್ದರಾದರೂ, ಕಾರ್ತಿಕ್ ಆರ್ಯನ್ ವಿಷಯದಲ್ಲಿ ಸಂಭವಿಸಿದಂತೆ ಅಭಿಮಾನಿಗಳು ಸೆಲ್ಫಿಗಳಿಗೆ ಮುಗಿಬಿದ್ದಿಲ್ಲ. ಏಕೆಂದರೆ ಅವರು ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಟೋಪಿ ಧರಿಸಿದ್ದರು. ಆದ್ದರಿಂದ ಯಾರೂ ಅವರನ್ನು ಹೆಚ್ಚು ಗುರುತಿಸಲಿಲ್ಲ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಹೃತಿಕ್ ರೋಷನ್ ಕೂಡ ದುಬಾರಿ ಕಾರುಗಳನ್ನು ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದ ಘಟನೆ ಈ ಹಿಂದೆ ಬೆಳಕಿಗೆ ಬಂದಿತ್ತು. ಇದಲ್ಲದೆ, ಅನಿಲ್ ಕಪೂರ್, ಕಿಯಾರಾ ಅಡ್ವಾಣಿ ಮತ್ತು ವರುಣ್ ಧವನ್ ಕೂಡ ಮೆಟ್ರೋದಲ್ಲಿ ಪ್ರಯಾಣಿಸಿದ್ದ ವಿಡಿಯೋಗಳು ವೈರಲ್ ಆಗಿದ್ದವು.

bollywood-actor-kartik-aaryan-took-the-metro-to-avoid-traffic-jam

ಕಳೆದ ವರ್ಷ ನಟಿ ಹೇಮಾ ಮಾಲಿನಿ ಕೂಡ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಸೆಲೆಬ್ರಿಟಿಗಳು ಮಾತ್ರವಲ್ಲ, ಅನೇಕ ರಾಜಕಾರಣಿಗಳು ಸಹ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಸೆಲೆಬ್ರಿಟಿಗಳು ಟ್ರಾಫಿಕ್‌ನಿಂದ ಮೆಟ್ರೋವನ್ನು ಆಯ್ಕೆ ಮಾಡಿಕೊಂಡರೆ, ಸಾಮನ್ಯ ಜನರು ಆರಾಮದಾಯಕ ಪ್ರಯಾಣ ಹಾಗೂ ವೇಗವಾಗಿ ಗಮ್ಯ ಸ್ಥಳವನ್ನು ತಲುಪಲು ಮೆಟ್ರೋವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಹಾಗೆಯೇ ವಿಪರೀತ ಬಿಸಿಲಿನಿಂದಾಗಿ ದ್ವಿಚಕ್ರವಾಹನಗಳನ್ನು ಮನೆಯಲ್ಲೇ ಬಿಟ್ಟು ಹವಾನಿಯಂತ್ರಿತ ಕಂಪಾರ್ಟ್ಮೆಂಟ್‌ನಲ್ಲಿ ಪ್ರಯಾಣಿಸಲು ಜನರು ಮುಂದಾಗುತ್ತಿದ್ದಾರೆ. ಈಗ ಮೆಟ್ರೋದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಸ್ಥಳೀಯ ರೈಲುಗಳನ್ನು ಮುಂಬೈನ ಜೀವನಾಡಿ ಎಂದು ಕರೆಯಲಾಗುತ್ತದೆ. ಆದರೆ ಆಧುನಿಕ ಮೆಟ್ರೋ ಉತ್ತಮ ಪ್ರಯಾಣದ ಅನುಭವವನ್ನು ಒದಗಿಸುವ ಮೂಲಕ ಲೋಕಲ್ ರೈಲುಗಳುಗೆ ಸದ್ಯ ಬೇಡಿಕೆ ಕಡಿಮೆಯಾಗಿದೆ.

ಇದು ಕೇವಲ ಮುಂಬೈನಲ್ಲಿ ಮಾತ್ರವಲ್ಲ, ಬೆಂಗಳೂರು ನಗರ ಕೂಡ ತೀವ್ರ ಟ್ರಾಪಿಕ್ ಜಾಮ್ ಹೊಂದಿರುತ್ತದೆ. ಆದ್ರೆ ಇಲ್ಲಿ ಸೆಲೆಬ್ರಿಟಿಗಳು ಮೆಟ್ರೋದಲ್ಲಿ ಕಾಣಿಸಿಕೊಂಡ ಉದಾಹರಣೆಗಳು ತೀರಾ ಕಡಿಮೆ. ಒಟ್ಟಾರೆ ದೇಶದಲ್ಲಿ ಪ್ರಮುಖ ನಗರಗಳ ಟ್ರಾಫಿಕ್ ಸಮಸ್ಯೆಗೆ ಮೆಟ್ರೋ ಬೆಸ್ಟ್ ಆಯ್ಕೆಯಾಗುತ್ತಿದೆ ಎಂಬುದಕ್ಕೆ ಈ ವಿಡಿಯೋಗಳು ಸಾಕ್ಷಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, May 12, 2024, 1:00 [IST]
English summary
Bollywood actor kartik aaryan took the metro to avoid traffic jam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+