50 ಲಕ್ಷ ರೂ. ಟೊಯೊಟಾ ಫಾರ್ಚುನರ್ ಖರೀದಿಸಿದ ಜನಪ್ರಿಯ ನಟ: ಇದು ಇವರ ಬಳಿಯಿರುವ ಅಗ್ಗದ ಕಾರು
ಬಾಲಿವುಡ್ (Bollywood) ಸಿನಿಮಾ ರಂಗ ಎಂಬ ಕಲರ್‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೂಪರ್ ಸ್ಟಾರ್‌ಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸಿ ಸುದ್ದಿಯಾಗುತ್ತಾರೆ.
ಸೂಪರ್ ಐಷಾರಾಮಿ ಮೇಬ್ಯಾಕ್ ಜಿಎಲ್‌ಎಸ್ 600 ಸೇರಿದಂತೆ ಎಸ್‌ಯುವಿಗಳ ದುಬಾರಿ ಸಂಗ್ರಹವನ್ನು ಹೊಂದಿರುವ ರಣವೀರ್ ಸಿಂಗ್ (Ranveer Singh) ಇತ್ತೀಚೆಗೆ ಟೊಯೊಟಾ ಫಾರ್ಚುನರ್ ಲೆಜೆಂಡರ್ ಖರೀದಿಸಿದ್ದಾರೆ. ಅವರು ಅನೇಕ ವರ್ಷಗಳಿಂದ ಒಡೆತನದ ಸಿಯಾಜ್ ಅನ್ನು ಮಾರಾಟ ಮಾಡಿರುವುದರಿಂದ ಇದು ಪ್ರಸ್ತುತ ಅವರ ಗ್ಯಾರೇಜ್‌ನಲ್ಲಿ ಅತ್ಯಂತ ಕೈಗೆಟುಕುವ ಕಾರು ಆಗಿದೆ. ರಣವೀರ್ ಸಿಂಗ್ ಅವರ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ ಎಸ್‍ಯುವಿ ನೋಂದಣಿ ನಂಬರ್ "6969" ಆಗಿದೆ.

ನಟ ರಣವೀರ್ ಸಿಂಗ್ ಅವರ ಟೊಯೊಟಾ ಫಾರ್ಚುನರ್ ಲೆಜೆಂಡರ್ (Toyota Fortuner Legender) ಎಸ್‍ಯುವಿಯು ಸಂಪೂರ್ಣ ಕಪ್ಪು ಬಣ್ಣದಲ್ಲಿದೆ. ಈ ಎಸ್‍ಯುವಿಯ ಬೆಲೆಯು ಮುಂಬೈನಲ್ಲಿ ಸುಮಾರು 50 ಲಕ್ಷ ರೂ. ಆಗಿದೆ. ನಟ ರಣವೀರ್ ಸಿಂಗ್ ಅವರ ಮೊದಲ ಐಷಾರಾಮಿ ಕಾರುಗಳಾದ ಜಾಗ್ವಾರ್ ಎಕ್ಸ್‌ಜೆ ಮತ್ತು ಆಸ್ಟನ್ ಮಾರ್ಟಿನ್ ರಾಪಿಡ್‌ನಿಂದ ಹಿಡಿದು ಮರ್ಸಿಡಿಸ್-ಮೇಬ್ಯಾಕ್ ಜಿಎಲ್‌ಎಸ್ 600 ಮತ್ತು ಲ್ಯಾಂಬೋಗಿನಿ ಉರಸ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಟೊಯೊಟಾ ಫಾರ್ಚುನರ್ ಲೆಜೆಂಡರ್ ಭಾರತೀಯ ಮಾರುಕಟ್ಟೆಯಲ್ಲಿ 2021 ಬಿಡುಗಡೆಗೊಂಡಿತು.ಇದು ಸ್ಟ್ಯಾಂಡರ್ಡ್ ಫಾರ್ಚುನರ್ ಮಾಡೆಲ್‌ಗಿಂತ ಗಮನಾರ್ಹವಾಗಿ ವಿಭಿನ್ನವಾಗಿ ಕಾಣುತ್ತದೆ ಮತ್ತು ಹೊರಗೆ ಮತ್ತು ಒಳಗಿನ ಎರಡೂ ಬದಲಾವಣೆಗಳೊಂದಿಗೆ ಬರುತ್ತದೆ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ.

ಫಾರ್ಚುನರ್ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಲೆಜೆಂಡರ್ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಡಿಆರ್‌ಎಲ್‌ಗಳು ಹೊಂದಿದೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್‌ಎಲ್‌ಗಳು ಎಂದು ಕರೆಯಲಾಗುತ್ತದೆ.ಈ ಎಸ್‍ಯುವಿ ಹೆಡ್‌ಲ್ಯಾಂಪ್‌ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ. ಇನ್ನು ಡೈನಾಮಿಕ್ ಟರ್ನ್ ಸಿಗ್ನಲ್ ಇಂಡೀಕೆಟರ್ ಗಳಿವೆ. ಫಾರ್ಚೂನರ್ ಲೆಜೆಂಡರ್ ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ.
ಇನ್ನು ಇದರ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಇದರಲ್ಲಿ 18 ಇಂಚಿನ ಮೆಷಿನ್-ಕಟ್ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ಇನ್ನು ಡೋರಿನ ಹ್ಯಾಂಡಲ್‌ಗಳಲ್ಲಿ ಕೆಲವು ಕ್ರೋಮ್ ಇದೆ ಮತ್ತು ಉದ್ದಕ್ಕೂ ಸ್ಟ್ರಿಪ್ ಅನ್ನು ಸಹ ಕ್ರೋಮ್‌ನಿಂದ ಮಾಡಲಾಗಿದೆ. ಈ ಟೊಯೊಟಾ ಲೆಜೆಂಡರ್ ಮಾದರಿಯ ಹಿಂಭಾಗದಲ್ಲಿ ನಯವಾದ-ಕಾಣುವ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ.
ಇದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದು ಬ್ಲ್ಯಾಕ್ ಸ್ಟ್ರಿಪ್ ಸಹ ಪಡೆಯುತ್ತದೆ, ಅದು ಎರಡೂ ಟೈಲ್ ಲೈಟ್‌ಗಳನ್ನು ಅದರ ಉದ್ದಕ್ಕೂ 'ಫೋರ್ಟೂನರ್' ಬ್ರ್ಯಾಂಡಿಂಗ್‌ನೊಂದಿಗೆ ಸಂಪರ್ಕಗೊಂಡಿದೆ, ಲೆಜೆಂಡರ್ ವೆರಿಯೆಂಟ್ ಒಳಭಾಗದಲ್ಲಿಯು ಕೆಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಫಾರ್ಚೂನರ್ ಲೆಜೆಂಡರ್ ಇಂಟಿರಿಯರ್ ಅಥವಾ ಒಳಭಾಗದಲ್ಲಿ ಡ್ಯುಯಲ್-ಟೋನ್ (ಬ್ಲ್ಯಾಕ್ ಮತ್ತು ಮರೂನ್) ಅಂಶಗಳನ್ನು ಹೊಂದಿದೆ.
ಈ ಎಸ್‍ಯುವಿಯ ಸುತ್ತಲೂ ವೈಟ್ ಅಬೈಂಡ್ ಲೈಟ್ ಅನ್ನು ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಒಳಗೊಂಡಿರುವ ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಂ ಹೊಂದಿದೆ. ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ನಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಬ್ರೇಕ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ ಮತ್ತು ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಹೊಂದಿದೆ.
ಇದರೊಂದಿಗೆ ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟಡ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ (ಆಟೋ ಎಮರ್ಜೆನ್ಸಿ ಅನ್‌ಲಾಕ್) ಮತ್ತು ಎಮರ್ಜನ್ಸಿ ಬ್ರೇಕ್ ಸಿಗ್ನಲ್‌ನಂತಹ ಸಾಕಷ್ಟು ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ. ಫಾರ್ಚುನರ್ ಎಸ್‍ಯುವಿಯಲ್ಲಿ 2.7-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 164 Bhp ಪವರ್ ಮತು 245 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ರೂಪಾಂತರಗಳು 2.8-ಲೀಟರ್ V-GD ಎಂಜಿನ್ ಅನ್ನು ಹೊಂದಿದೆ.


Click it and Unblock the Notifications








