ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಬಾಲಿವುಡ್ ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿ ಇರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಇದರಲ್ಲಿ ಬಹುತೇಕ ನಟ, ನಟಿಯರಿಗೆ ಕಾರು ಹಾಗೂ ಬೈಕುಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಅದೇ ರೀತಿ ನಟ ಸಿದ್ಧಾಂತ್ ಚತುರ್ವೇದಿ ಅವರು ಬ್ರೇಕ್ ಕ್ರೇಜ್ ಅನ್ನು ಹೊಂದಿದ್ದಾರೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಗಲ್ಲಿ ಬಾಯ್ ಚಿತ್ರದಲ್ಲಿ ಭೂಗತ ರಾಪರ್ ಎಂಸಿ ಶೇರ್ ಪಾತ್ರಕ್ಕೆ ಹೆಸರುವಾಸಿಯಾದ ನಟ ಸಿದ್ಧಾಂತ್ ಚತುರ್ವೇದಿ ಅವರು 2022ರ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಅನ್ನು ಖರೀದಿಸಿದ್ದಾರೆ. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ನೊಂದಿಗಿನ ಚಿತ್ರಗಳನ್ನು ನಟ ಸಿದ್ಧಾಂತ್ ಚತುರ್ವೇದಿ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಸ್ಪೋರ್ಟ್‌ಸ್ಟರ್ ಎಸ್ ಅಮೇರಿಕನ್ ಮೋಟಾರ್‌ಸೈಕಲ್ ಮಾರ್ಕ್ಯೂಸ್ ಇಂಡಿಯಾ ಲೈನ್-ಅಪ್‌ಗೆ ಹೊಸ ಸೇರ್ಪಡೆಯಾಗಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಅನ್ನು ಬಿಡುಗಡೆ ಮಾಡಲಾಯಿತು. ಸಿದ್ಧಾಂತ್ 2022ರ ಹಾರ್ಲೆ-ಡೇವಿಡ್‌ಸನ್ ಸ್ಪೋರ್ಟ್‌ಸ್ಟರ್ ಎಸ್‌ನ ವಿವಿಡ್ ಬ್ಲ್ಯಾಕ್ ಶೇಡ್ ಅನ್ನು ಆರಿಸಿಕೊಂಡಿದ್ದಾರೆ. .ಪ್ರಸ್ತುತ ಭಾರತದಲ್ಲಿ ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ,15.51 ಲಕ್ಷವಾಗಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಈ ಹೊಸ ಇಸ್ಪೋರ್ಟ್‌ಸ್ಟರ್ ಎಸ್‌ನ ಅಂತಿಮ ಉತ್ಪಾದನಾ ಮಾದರಿಯು ಸುಮಾರು ನಾಲ್ಕು ವರ್ಷಗಳ ಹಿಂದೆ ಕಸ್ಟಮ್ ಕಾನ್ಸೆಪ್ಟ್ ಆಗಿ ಮೊದಲ ಬಾರಿಗೆ ಕಾಣಿಸಿಕೊಂಡಿತು ಮತ್ತು ಇನ್ನೂ ಹೆಚ್ಚು ಹೋಲುತ್ತದೆ. ಪ್ರೊಡಕ್ಷನ್-ಸ್ಪೆಕ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನ ಸಿಲೂಯೆಟ್ ಅನ್ನು ಬೀಫಿ ಟ್ವಿನ್-ಕ್ಯಾನ್ ಎಕ್ಸಾಸ್ಟ್‌ಗಳು, ದಪ್ಪನಾದ ಟೈರ್‌ಗಳು ಮತ್ತು ಸಿಂಗಲ್-ಪೀಸ್ ಸೀಟ್‌ನೊಂದಿಗೆ ಉಳಿಸಿಕೊಳ್ಳಲಾಗಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಇನ್ನು ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಕೆಳಗೆ ದೊಡ್ಡ ಸ್ಕಿಡ್ ಪ್ಲೇಟ್ ಮತ್ತು ಟ್ಯಾಂಕ್‌ನಿಂದ ಸೀಟ್ ಉತ್ತಮವಾದ ಫ್ಲಾಟ್ ಲೈನ್ ಅನ್ನು ಪಡೆಯುತ್ತದೆ ಆದರೆ ಬೃಹತ್ ಮುಂಭಾಗದ ಟೈರ್ ಮತ್ತು ಶಾರ್ಟ್ ಫೆಂಡರ್ ಇದಕ್ಕೆ ಕ್ಲಾಸಿಕ್ ಬಾಬರ್ ಲುಕ್ ಅನ್ನು ನೀಡುತ್ತದೆ. ಮುಂಚೂಣಿಯಲ್ಲಿ, ಸ್ಪೋರ್ಟ್‌ಸ್ಟರ್ ಎಸ್ ಕ್ಯಾಪ್ಸುಲ್-ಆಕಾರದ ಹೆಡ್‌ಲೈಟ್ ಅನ್ನು ಪ್ರದರ್ಶಿಸುತ್ತದೆ ಅದು ಸ್ವಲ್ಪ ಚಮತ್ಕಾರಿ ಲುಕ್ ನಲ್ಲಿ ಕಾಣುತ್ತದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಇತರ ಸ್ಟೈಲಿಂಗ್ ಮುಖ್ಯಾಂಶಗಳಾದ ಫ್ಲಾಟ್ ಟೈಲ್ ಸೆಕ್ಷನ್, ಒಂದು ಕೌಲ್, ಸಿಂಗಲ್-ಪೀಸ್ ಸ್ಯಾಡಲ್ ಮತ್ತು ಅಪ್‌ಸ್ವೆಪ್ಟ್ ಗೋಲ್ಡನ್-ಕಲರ್ ಎಕ್ಸಾಸ್ಟ್ ಮಫ್ಲರ್‌ಗಳು ಹಾರ್ಲೆ ಡೇವಿಡ್ಸನ್ XR750 ಫ್ಲಾಟ್ ಟ್ರ್ಯಾಕರ್‌ನಿಂದ ಸ್ಫೂರ್ತಿ ಪಡೆಯುತ್ತವೆ.ಮೆಗ್ನೀಸಿಯಮ್ ಎಂಜಿನ್ ಕವರ್‌ಗಳಲ್ಲಿ ಚಾಕೊಲೇಟ್ ಸ್ಯಾಟಿನ್ ಫಿನಿಶ್ ಅನ್ನು ಬಳಸುವುದರ ಮೂಲಕ ಪವರ್‌ಟ್ರೇನ್ ಅನ್ನು ಕೂಡ ಹೈಲೈಟ್ ಮಾಡಲಾಗಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಈ ಸ್ಟೋನ್ ವಾಶ್ಡ್ ವೈಟ್ ಪರ್ಲ್, ಮಿಡ್‌ನೈಟ್ ಕ್ರಿಮ್ಸನ್ ಮತ್ತು ವಿವಿಡ್ ಬ್ಲ್ಯಾಕ್ ಎಂಬ ಬಣ್ಣದ ಆಯ್ಕೆಗಳಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಕ್ರೂಸರ್ ಅನ್ನು ನೀಡಲಾಗುವುದು. ಒಟ್ಟಾರೆಯಾಗಿ, ಕ್ರೂಸರ್ ಅನ್ನು ಕಸ್ಟಮ್-ಬಿಲ್ಟ್ ಬೈಕ್‌ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಸುಧಾರಿತ ತಂತ್ರಜ್ಙಾನವನ್ನು ಹೊಂದಿರುವ ಪ್ರೀಮಿಯಂ ಕ್ರೂಸರ್ ಬೈಕ್ ಆಗಿದೆ. ಈ ಬೈಕಿನಲ್ಲಿ 1,1250 ಸಿಸಿ ಎಂಜಿನ ಅನ್ನು ಅಳವಡಿಸಲಾಗಿದೆ. ಇದನ್ನು ಹೊಸ ಸ್ಪೋರ್ಟರ್ ಎಸ್ ನಲ್ಲಿ ವಿಭಿನ್ನವಾಗಿ ಟ್ಯೂನ್ ಮಾಡಲಾಗಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಈ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಹಾರ್ಲಿಯ ರೆವಲ್ಯೂಷನ್ ಮ್ಯಾಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ 227.7 ಕೆಜಿ ತೂಕವನ್ನು ಹೊಂದಿದೆ. ಈ ಹೊಸ ಪ್ರೀಮಿಯಂ ಬೈಕ್ ಸ್ಪೋರ್ಟಿ ಲುಕ್ ಅನ್ನು ಒಳಗೊಂಡಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಇನ್ನು ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಶೋವಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಶೋವಾ ಪಿಗ್ಗಿಬ್ಯಾಕ್ ಪ್ರಿ ಲೊಡ್ ಸೆಟಪ್ ಅನ್ನು ಕೂಡ ಹೊಂದಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಇನ್ನು ಪ್ರಮುಖವಾಗಿ ಈ ಪ್ರೀಮಿಯಂ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್‌ನಿಂದ ಬ್ರೆಂಬೊ ರೇಡಿಯಲ್ 4-ಪಿಸ್ಟನ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ 2-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್‌ನೊಂದಿಗೆ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಹೊಸ ಲಿಕ್ವಿಡ್ ಕೂಲ್ಡ್ ರೆವಲ್ಯೂಷನ್ ಮ್ಯಾಕ್ಸ್ 1,1250 ಸಿಸಿ ವಿ-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಇನ್ನು ಈ ಐಷಾರಾಮಿ ಬೈಕಿನಲ್ಲಿ ರೋಡ್, ಸ್ಪೋರ್ಟ್ಸ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ. ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನಲ್ಲಿ ಕಾರ್ನೆರಿಂಗ್ ಡ್ರ್ಯಾಗ್-ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಂ, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಸಿ-ಎಬಿಎಸ್), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ( ಫ್ರಂಟ್-ವೀಲ್ ಲಿಫ್ಟ್ ತಗ್ಗಿಸುವಿಕೆ (ಎಫ್‌ಎಲ್‌ಎಂ) ಯೊಂದಿಗೆ ಟಿಪಿಎಂಎಸ್) ಮತ್ತು ಕಾರ್ನರಿಂಗ್ ಟ್ರ್ಯಾಕ್ಷನ್ ಕಂಟ್ರೋಲ್ (ಸಿ-ಟಿಸಿಎಸ್) ಅನ್ನು ಹೊಂದಿದೆ.

ಐಷಾರಾಮಿ Harley-Davidson ಬೈಕ್ ಖರೀದಿಸಿದ ಗಲ್ಲಿ ಬಾಯ್ ನಟ ಸಿದ್ಧಾಂತ್

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಹೊಸ ಬೈಕ್ ಅನ್ನು ಮುಂದಿನ ವರ್ಷ ಜನವರಿ 26 ರಂದು ತನ್ನ ಜಾಗತಿಕ ಪ್ರಥಮ ಪ್ರದರ್ಶನವನ್ನು ಮಾಡಲಿದೆ ಎಂದು ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಟೀಸರ್ ನಲ್ಲಿ "Further Faster" ಎಂಬ ಟ್ಯಾಗ್ ಲೈನ್ ಅನ್ನು ನೀಡಿದೆ. ಇದನ್ನು ಹೊರತುಪಡಿಸಿ ಕಂಪನಿಯು ಉಳಿದಂತೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲಿಲ್ಲ, ಮುಂಬರುವ ಹೊಸ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಾವುದೇ ಮಾದರಿಯ ರೂಪಾಂತರವಾಗಿರಬಹುದು ಅಥವಾ ಇದು ಸಂಪೂರ್ಣವಾಗಿ ಹೊಸ ಮಾದರಿಯಾಗಿರಬಹುದು.

More from DriveSpark

Article Published On: Tuesday, January 18, 2022, 20:01 [IST]
English summary
Bollywood actor siddhant chaturvedi buys new harley davidson sportster s details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+