ಮತ್ತೊಂದು ದುಬಾರಿ ಬೆಲೆಯ BMW ಕಾರು ಖರೀದಿಸಿದ ಕ್ಯೂಟ್ ನಟಿ ಆಲಿಯಾ!
ಬಾಲಿವುಡ್ (Bollywood) ತಾರಾ ಜೋಡಿಗಳಲ್ಲಿ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಪ್ರಮುಖರು. ಈ ವರ್ಷದ ಆರಂಭದಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಇತ್ತೀಚೆಗೆ, ರಣಬೀರ್ ಕಪೂರ್ ಹೊಚ್ಚ ಹೊಸ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿಸಿದ್ದರು.
ಇದೀಗ, ಆಲಿಯಾ ಭಟ್ ಕೂಡ ದುಬಾರಿ ಬೆಲೆಯ ನೂತನ ಐಷಾರಾಮಿ ಬಿಎಂಡಬ್ಲ್ಯೂ ಎಕ್ಸ್7 (BMW X7) ಎಸ್‌ಯುವಿ ಕೊಂಡುಕೊಂಡಿದ್ದಾರೆ ಎಂದು ವರದಿಯಾಗಿದೆ. ಹೊಸ ಕಾರಿನ ವಿಡಿಯೋವನ್ನು 'ಕಾರ್ಸ್ ಫಾರ್ ಯೂ' ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ನಟಿ ಆಲಿಯಾ ಕಾರಿನಿಂದ ಇಳಿದು ಮನೆಯ ಒಳಗೆ ಹೋಗುತ್ತಿರುವುದನ್ನು ಕಾಣಬಹುದು.

ಹೊಸ ಬಿಎಂಡಬ್ಲ್ಯೂ ಎಕ್ಸ್7 ಕಾರಿನ ಬಗ್ಗೆ ಹೇಳುವುದಾದರೆ, ಇದು ರೂ.1.24 ಕೋಟಿಯಿಂದ ರೂ.1.26 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು, 3-ಲೀಟರ್, ಟ್ವಿನ್-ಟರ್ಬೊ ಇನ್‌ಲೈನ್ 6 ಪೆಟ್ರೋಲ್, ಡೀಸೆಲ್ ಎಂಜಿನ್ ಪಡೆದಿದ್ದು, ಕ್ರಮವಾಗಿ 381 PS ಪವರ್, 520 Nm ಪೀಕ್ ಟಾರ್ಕ್, 340 PS ಪವರ್, 700 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆಲ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪಡೆದಿದೆ.
ಆರು ಆಸನ ಆಯ್ಕೆಯನ್ನು ಪಡೆದಿರುವ ಬಿಎಂಡಬ್ಲ್ಯೂ ಎಕ್ಸ್7, 11.29 - 14.31 kmpl ಮೈಲೇಜ್ ನೀಡುವ ಸಾಮರ್ಥ್ಯ ಒಳಗೊಂಡಿದೆ. ಜೊತೆಗೆ ನಾಲ್ಕು ಡ್ರೈವಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ಕಂಫರ್ಟ್ (Comfort), ಎಫಿಷಿಯೆಟ್ (Efficient), ಸ್ಪೋರ್ಟ್ (Sport) ಹಾಗೂ ಸ್ಪೋರ್ಟ್ ಪ್ಲಸ್ (Sport Plus). ಇದರೊಟ್ಟಿಗೆ, ಕೇವಲ 5.9 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಪಡೆಯಲಿದೆ.

ಬಿಎಂಡಬ್ಲ್ಯೂ ಎಕ್ಸ್7, ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, 12.3 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 14.9 - ಇಂಚಿನ ಇನ್ಫೋಟೈನ್ಮೆಂಟ್ ಯುನಿಟ್, ಹೆಡ್ - ಅಪ್ ಡಿಸ್ಪ್ಲೇ, ಕನೆಕ್ಟ್ದ್ ಕಾರ್ ಟೆಕ್, ಡಿಜಿಟಲ್ ಕೀ, ಪನೋರಮಿಕ್ ಸನ್‌ರೂಫ್, 16 - ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಂ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.
ಸುರಕ್ಷತೆಯ ವಿಚಾರದಲ್ಲಿಯೂ ಬಿಎಂಡಬ್ಲ್ಯೂ ಎಕ್ಸ್7 ಅತ್ಯಾಧುನಿಕವಾಗಿದ್ದು, ಮಲ್ಟಿ ಏರ್‌ಬ್ಯಾಗ್ಸ್, 360 - ಡಿಗ್ರಿ ಕ್ಯಾಮೆರಾ, CBC (ಕಾರ್ನರ್ ಬ್ರೇಕ್ ಕಂಟ್ರೋಲ್), DSC (ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಡ್ರೈವರ್ ಡ್ರೆಸಿನೆಸ್ ಡಿಟೆಕ್ಷನ್ ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಇವೆ. ಈ ಕಾರಿಗೆ, ಆಡಿ ಕ್ಯೂ7 ಹಾಗೂ ವೋಲೊ XC90 ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಇನ್ನು, ಕೆಲವು ತಿಂಗಳ ಹಿಂದೆಯಷ್ಟೇ ಆಲಿಯಾ ಭಟ್ ಪತಿ, ನಟ ರಣಬೀರ್ ಕಪೂರ್ ಹೊಚ್ಚ ಹೊಸ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ್ದರು. ಆದರೆ, ಯಾವ ರೂಪಾಂತರವೆಂಬುದರ ಬಗ್ಗೆ ಮಾಹಿತಿ ಲಭ್ಯವಿರಲಿಲ್ಲ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿ, 5 ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ ರೂ.2.39 - 4.17 ಕೋಟಿ ಎಕ್ಸ್ ಶೋರೂಂ ದರವನ್ನು ಹೊಂದಿದೆ. 4, 5 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಸಿಗುವ ಈ ಕಾರು, ಅತ್ಯಾಧುನಿಕ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 13.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 1600 ಡಬ್ಲ್ಯೂ ಮೆರಿಡಿಯನ್ ಸೌಂಡ್ ಸಿಸ್ಟಮ್, ಅಮೆಜಾನ್ - ಅಲೆಕ್ಸಾ ಕನೆಕ್ಟಿವಿಟಿ, ಮಲ್ಟಿ ಜೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








