ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿ 10 ಕೋಟಿ ಸಂಭಾವನೆ ಪಡೆಯುವ ನಟಿ: ಕಾರಿನ ಬೆಲೆ ಗೊತ್ತಾ?

ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಅದರಲ್ಲೂ ಬಾಲಿವುಡ್ ಸಿನಿಮಾರಂಗ ಕಲರ್ ಫುಲ್ ದುನಿಯಾದ ನಟಿಯರು ಐಷಾರಾಮಿ ಕಾರುಗಳ ಕ್ರೇಜ್ ಹೊಂದಿದ್ದಾರೆ. ಬಾಲಿವುಡ್ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇತ್ತೀಚೆಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ಹೊಚ್ಚಹೊಸ ಐಷಾರಾಮಿ ಎಸ್‍ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ. ದಿವಂಗತ ಖ್ಯಾತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಎಂಬ ಅರ್ಹತೆಯ ಮೇಲೆ ಅವರು ಚಿತ್ರರಂಗ ಪ್ರವೇಶಿಸಿದ್ದರೂ, ಇಲ್ಲಿ ತಮ್ಮದೇ ಆದ ಸ್ಥಾನವನ್ನು ಕಂಡುಕೊಳ್ಳಲು ನಟಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ನಟಿ ಜಾಹ್ನವಿ ಕಪೂರ್ (Janhvi Kapoor) ಕೆಲವೇ ಚಿತ್ರಗಳಲ್ಲಿ ನಟಿಸಿದ್ದರೂ, ಅದರಲ್ಲಿ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ನಟಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದರೂ, ಶ್ರೀದೇವಿ ಅವರ ಮಗಳು ಗಮನಾರ್ಹ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾಹ್ನವಿ ಕಪೂರ್ ಪ್ರಸ್ತುತ ಹಿಂದಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವ ನಟಿಯರಲ್ಲಿ ಒಬ್ಬರು.

Janhvi Kapoor

ವರದಿಗಳ ಪ್ರಕಾರ, ನಟ ಚಿತ್ರದಲ್ಲಿ ನಟಿಸಲು 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಜಾಹ್ನವಿ ಹೊಸ ತೆಲುಗು ಚಿತ್ರಕ್ಕೆ 7 ಕೋಟಿ ಮತ್ತು ರಾಮಚರಣ್ ಅಭಿನಯದ ಹೊಸ ಚಿತ್ರಕ್ಕೆ 10 ಕೋಟಿ ಸಂಭಾವನೆ ಪದೆದಿದ್ದಾರೆ ಎಂದು ವರದಿಯಾಗಿದೆ. ನಟಿ ಜಾಹ್ನವಿ ಕಪೂರ್ ಅವರು ಸಹೋದರ ಹಾಗೂ ಖ್ಯಾತ ನಟ ಅರ್ಜುನ್ ಕಪೂರ್ ಅವರ ಹುಟ್ಟುಹಬ್ಬದ ಪಾರ್ಟಿಗೆ ತಮ್ಮ ಐಷಾರಾಮಿ ಕಾರಿನಲ್ಲಿ ಬಂದಿದ್ದಾರೆ.

ನಟಿ ಜಾಹ್ನವಿ ಕಪೂರ್ ಹೊಸ ಕಾರು ಬಗ್ಗೆ ಹೇಳುವುದಾದರೆ, ಇದು ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಲ್ಯಾಂಡ್ ರೋವರ್‌ನ ಇತ್ತೀಚಿನ ರೇಂಜ್ ರೋವರ್ ಎಸ್‌ಯುವಿಯಾಗಿದೆ. ನಟಿ ಹೊಸ ಕಾರಿನಲ್ಲಿ ಪಾರ್ಟಿಗೆ ಆಗಮಿಸುವ ವಿಡಿಯೋ ಕಾರ್ಸ್ ಫಾರ್ ಯು ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿದೆ. ರೇಂಜ್ ರೋವರ್ ಡೀಸೆಲ್ ಎಚ್‌ಎಸ್‌ಇ ಎಲ್‌ಡಬ್ಲ್ಯೂಬಿ ರೂಪಾಂತರವು ಈ ಹಿಂದೆ 2.80 ಕೋಟಿ ರೂ.ಗಳಷ್ಟಿತ್ತು, ಈಗ 2.36 ಕೋಟಿ ರೂ.ಗಳ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Janhvi Kapoor

ಈ ರೇಂಜ್ ರೋವರ್ (Range Rover) ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೊಸ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ನೊಂದಿಗೆ ಇದು ಹೆಚ್ಚು ಹೊಳಪು ತೋರುತ್ತಿದೆ. ರೇಂಜ್ ರೋವರ್ ಎಸ್‍ಯುವಿಯಲ್ಲಿ ಸಮತಟ್ಟಾದ ಮೇಲ್ಮೈಗಳು ಕೇವಲ 0.30 ಸಿಡಿಯ ಪ್ರಭಾವಶಾಲಿ ಡ್ರ್ಯಾಗ್ ಅಂಶವವನ್ನು ಒಳಗೊಂಡಿದೆ. ಈ ಮಾದರಿಯು 23-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಆದರೆ ಇದರ ಸಣ್ಣ ಓವರ್‌ಹ್ಯಾಂಗ್‌ಗಳು ಬೃಹತ್ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದನ್ನು ಖಚಿತಪಡಿಸುತ್ತದೆ.

ಈ ಎಸ್‍ಯುವಿಯ ಟರ್ನ್ ಇಂಡಿಕೇಟರ್‌ಗಳನ್ನು ಸಂಯೋಜಿಸುವ ಟೈಲ್‌ಗೇಟ್‌ನಲ್ಲಿನ ಬ್ಲ್ಯಾಕ್ ಅಸ್ಸೆಂಟ್ ಗಳನ್ನು ಸಂಪರ್ಕಗೊಂಡಿರುವ ಹಿಂಭಾಗದ ಸ್ಪೋರ್ಟ್ಸ್ ಬ್ಲ್ಯಾಕ್ಡ್-ಔಟ್ ಟೈಲ್‌ಲೈಟ್‌ಗಳಾಗಿವೆ. ರೇಂಜ್ ರೋವರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 13.7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರ ಸೆಂಟರ್ ಕನ್ಸೋಲ್ ದೊಡ್ಡ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಹೊಂದಿದೆ.

Janhvi Kapoor

ಇನ್ನು ಹಿಂಭಾಗದಲ್ಲಿ ಪ್ರಯಾಣಿಕರು 11.4-ಇಂಚಿನ ಮನರಂಜನಾ ಡಿಸ್ ಪ್ಲೇಯನ್ನು ಪಡೆಯುತ್ತಾರೆ. ಅದನ್ನು ಮುಂಭಾಗದ ಸೀಟ್‌ಬ್ಯಾಕ್‌ಗಳಿಗೆ ಜೋಡಿಸಲಾಗಿದೆ. ಎಕ್ಸಿಕ್ಯುಟಿವ್ ಕ್ಲಾಸ್ ಹಿಂಬದಿಯ ಸೀಟುಗಳೊಂದಿಗೆ, ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ 8.0-ಇಂಚಿನ ಟಚ್‌ಸ್ಕ್ರೀನ್ ಕೂಡ ಇದೆ. ಇದರೊಂದಿಗೆ ರೇಂಜ್ ರೋವರ್ 1600-ವ್ಯಾಟ್, 35-ಸ್ಪೀಕರ್ ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ.

ಆದರೆ ಆಟೋಬಯೋಗ್ರಫಿ ಟ್ರಿಮ್ ಹೆಡ್‌ರೆಸ್ಟ್‌ನಲ್ಲಿ ಎಂಬೆಡ್ ಮಾಡಲಾದ ವಿಶ್ವದ ಮೊದಲ ಆಕ್ಟಿವ್ ಸ್ಪೀಕರ್‌ಗಳನ್ನು ಹೊಂದಿದೆ. ರೇಂಜ್ ರೋವರ್ ಎಸ್‍ಯುವಿಯಲ್ಲಿ 3 ಎಂಜಿನ್ ಆಯ್ಕೆಗಳಲ್ಲಿ ನೀಡಲಾಗಿದೆ. ಇದು 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್, 3.0-ಲೀಟರ್ ಟರ್ಬೊ-ಡೀಸೆಲ್ ಮತ್ತು 4.4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಗಳಾಗಿವೆ. ಇದರಲ್ಲಿ 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ 394 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟರ್ಬೊ-ಡೀಸೆಲ್ ಎಂಜಿನ್ 346 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಟ್ವಿನ್-ಟರ್ಬೊ ವಿ8 ಎಂಜಿನ್ 523 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯು 5.3 ಸೆಕೆಂಡ್‌ಗಳಲ್ಲಿ 0-100 ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು ಸುಮಾರು 80 ಕಿ.ಮೀ ರೇಂಜ್ ಹೊಂದಿರಲಿದೆ. ಎಲ್ಲಾ ಮಾದರಿಗಳು ಆಲ್-ವೀಲ್ ಡ್ರೈವ್ ಮತ್ತು ಸಕ್ರಿಯ-ಲಾಕಿಂಗ್ ರಿಯರ್ ಡಿಫರೆನ್ಷಿಯಲ್ ಜೊತೆಗೆ ಸ್ಟ್ಯಾಂಡರ್ಡ್ ಬರುತ್ತವೆ.

More from DriveSpark

Article Published On: Thursday, June 27, 2024, 13:41 [IST]
English summary
Bollywood actress janhvi kapoor spotted in new range rover suv details
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+