ರೂ.3.5 ಕೋಟಿ ಮೌಲ್ಯದ ತಮ್ಮ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ನಟಿ ಕಂಗನಾ ರಣಾವತ್

ಕಾರುಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತದೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳ ನಡುವೆ ಒಂದು ಟ್ರೆಂಡ್ ಆಗಿದೆ

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಕೂಡ ಅಗಾಗ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕಂಗನಾ ರಣಾವತ್ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ನಟಿ. ಸಿನಿಮಾ ಸುದ್ದಿಗಳಿಗೆ ಹೊರತಾಗಿ ನಟಿ ಕಂಗನಾ ರಣಾವತ್ ಸುದ್ದಿಯಲ್ಲಿರಲು ಬಯಸುತ್ತಾರೆ. ನೆಗಟಿವ್ ವಿಚಾರಗಳಿಗೆ ಹೆಚ್ಚಾಗಿ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಕಂಗನಾ ರಣಾವತ್ ಅವರು ಈ ತಮ್ಮ ಮರ್ಸಿಡಿಸ್ ಮೇಬ್ಯಾಕ್ S680 (ercedes Maybach S680) ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

Kangana Ranaut

ನಟಿಯ ಈ ಐಷಾರಾಮಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.6 ಕೋಟಿಯಾಗಿದೆ. ಈ ಕಾರು ಮೇಬ್ಯಾಕ್ ಎಸ್-ಕ್ಲಾಸ್ ಸರಣಿಯಲ್ಲಿ ಟಾಪ್ ಮಾಡೆಲ್ ಆಗಿದೆ. ನಟಿ ಬಹುಕೋಟಿ ಮೌಲ್ಯದ ಐಷಾರಾಮಿ ಕಾರಿನ ಒಡತಿ. ನಟಿ ಕಂಗನಾ ಬಳಿ ಈಗಾಗಲೇ ಹಲವಾರು ಐಷಾರಾಮಿ ಕಾರುಗಳಿದ್ದು, ಇದರಲ್ಲಿ ದುಬಾರಿ ಮಾದರಿ ಮರ್ಸಿಡಿಸ್ ನಿರ್ಮಾಣದ ಮೇಬ್ಯಾಕ್ ಎಸ್-ಕ್ಲಾಸ್ ಆಗಿದೆ.

ಮೇಬ್ಯಾಕ್ ಎಸ್-ಕ್ಲಾಸ್ ಐಷಾರಾಮಿ ಕಾರು ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಮೇಬ್ಯಾಕ್ ಎಸ್-ಕ್ಲಾಸ್ ಎಸ್580 ಮತ್ತು ಮೇಬ್ಯಾಕ್ ಎಸ್-ಕ್ಲಾಸ್ ಎಸ್680 ವೆರಿಯೆಂಟ್ ಹೊಂದಿದೆ. 7ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಕಾರು ಮಾದರಿಯು ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಮಾದರಿಯಂತೆಯೇ ಹೊರನೋಟವನ್ನು ಹೊಂದಿದ್ದರೂ ಮೇಬ್ಯಾಕ್ ಎಸ್-ಕ್ಲಾಸ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಸೌಲಭ್ಯಗಳನ್ನು ನೀಡಲಾಗಿದೆ.

Kangana Ranaut

ಹೊಸ ಕಾರು ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಮಾದರಿಗಿಂತಲೂ 180 ಎಂಎಂ ಹೆಚ್ಚುವರಿ ಉದ್ದಳತೆ ಹೊಂದಿದೆ. ಈ ಕಾರು ಒಟ್ಟು 5,469 ಎಂಎಂ ಉದ್ದಳತೆಯೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತೂ ವಿಭಿನ್ನವಾಗಿ ಗುರುತಿಸಲು ಹೊಸ ಕಾರಿನಲ್ಲಿ ಕಂಪನಿಯು ಡ್ಯುಯಲ್ ಟೋನ್ ಪೇಟಿಂಗ್ ಮತ್ತು ಆಕರ್ಷಕವಾದ ಸಿ ಪಿಲ್ಲರ್‌ ವಿನ್ಯಾಸದಲ್ಲಿ ಮೇಬ್ಯಾಕ್ ಬ್ಯಾಜ್ಡ್ ಬಳಸಿರುವುದು ಆಕರ್ಷಕವಾಗಿದೆ.

ಇದಕ್ಕಿಂತಲೂ ಮುಖ್ಯವಾಗಿ ಈ ಹೊಸ ಕಾರಿನಲ್ಲಿ ಕಂಪನಿಯು ವಿಶೇಷ ತಂತ್ರಜ್ಞಾನ ಪ್ರೇರಿತ ಇ-ಆಕ್ಟಿವ್ ಬಾಡಿ ಕಂಟ್ರೋಲ್ 48 ವೊಲ್ಟ್ ಆಕ್ಟಿವಾ ರೋಲ್ ಬಳಕೆ ಮಾಡಿದೆ.ಇದು ಚಾಲನೆ ವೇಳೆ ಹಂಪ್ ಮತ್ತು ರಸ್ತೆ ಗುಂಡಿಗಳಲ್ಲಿ ಕಾರಿನ ಅಂಡರ್ ಬಾಡಿ ಪ್ಯಾನೆಲ್‌ಗೆ ಹಾನಿಯಾಗದಂತೆ ತಡೆಯುತ್ತದೆ. ಹೊಸ ಕಾರಿನ ಒಳಭಾಗವು ಸಹ ಹೊಸ ವಿನ್ಯಾಸದೊಂದಿಗೆ ವಿಶ್ವದರ್ಜೆ ಸೌಲಭ್ಯಗಳನ್ನು ನೀಡಿದೆ.

Kangana Ranaut

ಹೊಸ ಕಾರಿನಲ್ಲಿ ಬಳಸಲಾಗಿರುವ ಲೆದರ್ ಕೂಡಾ ಮೇಬ್ಯಾಕ್ ಎಕ್ಸ್‌ಕ್ಲೂಸಿವ್ ನಪ್ಪಾ ಲೆದರ್ ಮಾದರಿಯಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಕೇವಲ ನಾಲ್ಕು ಆಸನಗಳ ಸೌಲಭ್ಯವಿದೆ. ವಿಸ್ತರಿತವಾಗಿ ಸೆಂಟರ್ ಕನ್ಸೊಲ್ ಹಿಂಬದಿಯ ಸವಾರಿಗೆ ಹೆಚ್ಚಿನ ಮಟ್ಟದ ಸವಾರಿ ಅನುಭವ ನೀಡಲು ಇದನ್ನು ಅಭಿವೃದ್ದಿಗೊಳಿಸಲಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಅಡಾಪ್ಟಿವ್ ಡಿಜಿಟಲ್ ಎಲ್ಇಡಿ ಹೆಡ್‌ಲೈಟ್ಸ್, ಹಿಂತೆಗೆದುಕೊಳ್ಳಬಹುದಾದ ಡೋರ್ ಹ್ಯಾಂಡಲ್‌, ಫಿಂಗರ್‌ಪ್ರಿಂಟ್ ರೀಡರ್ ಮತ್ತು ಪನೋರಮಿಕ್ ಸನ್‌ರೂಫ್ ಹೊಂದಿದೆ

ಮರ್ಸಿಡಿಸ್ ಕಂಪನಿಯು ಬರ್ಮೆಸ್ಟರ್‌ 4ಡಿ ಸರೌಂಡ್ ಸೌಂಡ್ ಸಿಸ್ಟಂ ಜೊತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಿದ್ದು, ಮೇಬ್ಯಾಕ್ ಎಸ್-ಕ್ಲಾಸ್‌ನಲ್ಲಿ ಒಟ್ಟು 13 ಏರ್‌ಬ್ಯಾಗ್‌ಗಳು, ಲೆವೆಲ್-2 ಅಟೋನಮಸ್ ಡ್ರೈವಿಂಗ್ ಟೆಕ್ನಾಲಜಿ ಹೊಂದಿದೆ. ಲೆವೆಲ್-2 ಅಟೋನಮಸ್ ಡ್ರೈವಿಂಗ್ ಟೆಕ್ನಾಲಜಿಯಲ್ಲಿ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಮೊದಲ ಬಾರಿಗೆ 'ಎವೇಸಿವ್ ಸ್ಟೀರಿಂಗ್ ಅಸಿಸ್ಟ್' ಮತ್ತು 'ಕ್ರಾಸ್ ಟ್ರಾಫಿಕ್ ಫಂಕ್ಷನ್' ಜೊತೆಗೆ ಆಕ್ಟಿವ್ ಬ್ರೇಕ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ.

ಈ ಕಾರಿನಲ್ಲಿ ಎರಡು ಎಂಜಿನ್ ಆಯ್ಕೆಗಳಿದ್ದು, ಎಸ್580 ಮಾದರಿಯಲ್ಲಿ 4.0-ಲೀಟರ್ ವಿ8 ಎಂಜಿನ್ ಮತ್ತು ಎಸ್680 ಮಾದರಿಯಲ್ಲಿ 6.0-ಲೀಟರ್ ವಿ12 ಎಂಜಿನ್ ಜೋಡಿಸಲಾಗಿದೆ. 4.0-ಲೀಟರ್ ವಿ8 ಎಂಜಿನ್ ಮಾದರಿಯು 48 ವೊಲ್ಟ್ ಇಕ್ಯೂ ಬೂಸ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 496 ಬಿಎಚ್‌ಪಿ ಮತ್ತು 700 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ ಎಸ್680 ಮಾದರಿಯಲ್ಲಿರುವ 6.0-ಲೀಟರ್ ವಿ12 ಎಂಜಿನ್ ಮಾದರಿಯು 612 ಬಿಎಚ್‌ಪಿ ಮತ್ತು 900 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Tuesday, October 10, 2023, 13:39 [IST]
English summary
Bollywood actress kangana ranaut spotted in mercedes maybach s680 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+