ಈ ವರ್ಷ ಜನಪ್ರಿಯ ನಟಿಯರು ಖರೀದಿಸಿದ ಕಾರುಗಳು: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಬಾಲಿವುಡ್ ಎಂಬ ಕಲರ್ ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳನ್ನು ಹೊಂದಿದ್ದಾರೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತ್ಯಂತ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಐಷಾರಾಮಿ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚು ಇರುತ್ತದೆ.

ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳ ನಡುವೆ ಒಂದು ಟ್ರೆಂಡ್ ಆಗಿದೆ. ಅದರಲ್ಲಿಯೂ ಬಾಲಿವುಡ್ ನಟಿಯರು (Bollywood Actress) ಆಗ್ಗಾಗ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವರ್ಷ ಬಾಲಿವುಡ್ ನಟಿಯರು ಖರೀದಿಸಿದ ಕಾರುಗಳ (Cars) ಬಗ್ಗೆ ಮಾಹಿತಿ ಇಲ್ಲಿದೆ.

Bollywood Actress Cars

ಶ್ರದ್ಧಾ ಕಪೂರ್: ಇತ್ತೀಚೆಗೆ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ (Shraddha Kapoor) ಭಾರತದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೊಚ್ಚಹೊಸ ಲ್ಯಾಂಬೋರ್ಗಿನಿ ಹುರಾಕನ್ ಖರೀದಿಸಿದ್ದಾರೆ. ಶ್ರದ್ಧಾ ಕಪೂರ್ ಅವರು 4.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿ ಮಾದರಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರು ಕೆಂಪು ಬಣ್ಣ ಮಾದರಿಯಾಗಿದೆ. ಈ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಸ್ಪೋರ್ಟ್ಸ್ ಕಾರ್ ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಯಿತು.

ಸ್ಟ್ಯಾಂಡರ್ಡ್ EVO ಮಾದರಿಯು ಹೋಲಿಸಿದರೆ ಹೆಚ್ಚು ಶಕ್ತಿಶಾಲಿ ಆವೃತ್ತಿಯಾಗಿದೆ. ಆದರೆ ಟ್ರ್ಯಾಕ್-ಫೋಕಸ್ಡ್ STO ರೂಪಾಂತರವು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಇದು ಮಾರಾಟದಲ್ಲಿರುವ ಅತ್ಯಂತ ಶಕ್ತಿಶಾಲಿ ಹುರಾಕನ್ ಅಲ್ಲ.ಈ ಲ್ಯಾಂಬೋರ್ಗಿನಿಯ ಹುರಾಕನ್ ಟೆಕ್ನಿಕಾ ಕಾರು (Lamborghini Huracan Tecnica) ಕಾರು ಅನಾವರಣಗೊಳಿಸಿತು. ಸಿಯಾನ್ ಹೈಬ್ರಿಡ್ ಹೈಪರ್‌ಕಾರ್‌ನಿಂದ ಪ್ರೇರಿತವಾದ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ, ಮುಂಭಾಗ ಮತ್ತು ಹಿಂಭಾಗದ ಫಾಸಿಕದಲ್ಲಿ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ.

Bollywood Actress Cars

ಪೂಜಾ ಹೆಗ್ಡೆ: ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಸಿನಿರಂಗದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಪೂಜಾ ಹೆಗ್ಡೆ (Pooja Hegde), ರೂ.4 ಕೋಟಿ ಮೌಲ್ಯದ ಹೊಚ್ಚ ಹೊಸ ಐಷಾರಾಮಿ ರೇಂಜ್ ರೋವರ್ ಎಸ್‌ಯುವಿಯನ್ನು ತಿಂಗಳ ಹಿಂದೆ ಖರೀದಿಸಿದ್ದಾರೆ. ಪೂಜಾ ಹೆಗ್ಡೆ ಖರೀದಿಸಿರುವ ಕಾರಿನ ನಿಖರವಾದ ರೂಪಾಂತರದ ಬಗ್ಗೆ ಮಾಹಿತಿಯಿಲ್ಲ. ಭಾರತದ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಎಸ್ಇ, ಹೆಚ್ಎಸ್ಇ, ಆಟೋಬಯೋಗ್ರಫಿ ಹಾಗೂ ಫಸ್ಟ್ ಎಡಿಷನ್ ವೇರಿಯೆಂಟ್ ಆಯ್ಕೆಯಲ್ಲಿ ಸಿಗುತ್ತದೆ.

ಈ ಕಾರು, ಮೂರು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ, 3 - ಲೀಟರ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್, 400 PS ಗರಿಷ್ಠ ಪವರ್ ಹಾಗೂ 550 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು, 3 - ಲೀಟರ್ ಡೀಸೆಲ್ ಎಂಜಿನ್, 351 PS ಪವರ್, 700 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ.

Bollywood Actress Cars

ರಾಕುಲ್ ಪ್ರೀತ್ ಸಿಂಗ್: ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಮರ್ಸಿಡಿಸ್ ಮರ್ಸಿಡಿಸ್ GLS600 ಎಸ್‍ಯುವಿಯನ್ನು ಈ ವರ್ಷ ಖರೀದಿಸಿದ್ದಾರೆ. ಇದೇ ಬಹುಕೊಟಿ ಬೆಲೆಯ ಕಾರು ದೀಪಿಕಾ ಪಡುಕೋಣೆ, ಕೃತಿ ಸನನ್, ಮತ್ತು ಅಜಯ್ ದೇವಗನ್ ಮತ್ತು ಅರ್ಜುನ್ ಕಪೂರ್‌ನಂತಹ ಹಲವಾರು ಸ್ಟಾರ್ ನಟ, ನಟಿಯರು ಹೊಂದಿದ್ದಾರೆ.

ಜಾಕ್ವೆಲಿನ್ ಫೆರ್ನಾಂಡಿಸ್: ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಇತ್ತೀಚೆಗೆ 2.03 ಕೋಟಿ ರೂ.ಗಳ ಬೆಲೆಯ BMW i7 ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಅನ್ನು ಹೊಂದಿದ್ದಾರೆ. ಈ BMW ಕಾರು ಅತ್ಯುತ್ತಮ ಪ್ರೀಮಿಯಂ ಎಲೆಕ್ಟ್ತಿಕ್ ಸೆಡಾನ್ ಆಗಿದೆ. ಈ ದುಬಾರಿ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು 592.5 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

Bollywood Actress Cars

ಆಲಿಯಾ ಭಟ್: ಈ ವರ್ಷ ದೇಶಾದ್ಯಂತ ಗಮನ ಸೆಳೆದ ನಟಿ ಆಲಿಯಾ ಭಟ್ ಎಂದು ಹೇಳಬಹುದು. ಈ ವರ್ಷ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಆಲಿಯಾ ಭಟ್, ಹೊಚ್ಚ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಲಾಂಗ್-ವೀಲ್-ಬೇಸ್ ಐಷಾರಾಮಿ ಎಸ್‌ಯುವಿ ಖರೀದಿಸಿದ್ದರು. ಅವರು ಖರೀದಿಸಿದ ಬೂದು ಬಣ್ಣದ ರೇಂಜ್ ರೋವರ್ ಕಾರು ರೂ.3 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದೆ.

More from DriveSpark

Article Published On: Thursday, December 14, 2023, 17:44 [IST]
English summary
Bollywood actress who added new luxury cars in 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+