ಜನಪ್ರಿಯ ನಟಿಯ ಮನೆ ಸೇರಿತು ಕೋಟಿ ಬೆಲೆಯ BMW X7 ಕಾರು
ಬಾಲಿವುಡ್ ಎಂಬ ಕಲರ್ ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍ಗಳನ್ನು ಹೊಂದಿದ್ದಾರೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತ್ಯಂತ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚು ಇರುತ್ತದೆ.
ಇತ್ತೀಚೆಗೆ ನಟಿ ಯಾಮಿ ಗೌತಮ್ (Yami Gautam) ಅವರು ಹೊಸ BMW X7 ಕಾರನ್ನು ಖರೀದಿಸಿದ್ದಾರೆ. ಈ ಕಾರು ನೀಲಿ ಬಣ್ಣವನ್ನು ಹೊಂದಿದ್ದು, ಈ ಐಷಾರಾಮಿ ಕಾರಿನ ಮುಂದೆ ನಿಂತು ಪೋಸ್ ನೀಡುತ್ತಿರುವ ಫೋಟೋವನ್ನು ಶೇರ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಯಾಮಿ ಗೌತಮ್ 2009 ರಲ್ಲಿ ಟಿವಿ ಧಾರಾವಾಹಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ನಂತರ 2012ರಲ್ಲಿ ಯಾಮಿ ಗೌತಮ್ ಅವರ 2012ರಲ್ಲಿ ಮೊದಲ ಸಿನಿಮಾ ಕೂಡ ಹಿಟ್ ಆಗಿತ್ತು. ನಂತರ ಇವರು 2021 ರಲ್ಲಿ, ನಿರ್ದೇಶಕ ಆದಿತ್ಯ ಧರ್ ಅವರರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಟಿ ಯಾಮಿ ಗೌತಮ್ ಅವರು Audi A4 ಸೆಡಾನ್ ಮತ್ತು Audi Q7 ಎಸ್‍ಯುವಿಯನ್ನು ಹೊಂದಿದ್ದಾರೆ. ಇದೀಗ ಅವರ ಕಾರುಗಳ ಪಟ್ಟಿಗೆ BMW X7 ಹೊಸ ಸೇರ್ಪಡೆಯಾಗಿದೆ.
ಇದು ಅವರ ಬಳಿಯಿರುವ ಮೂರನೇ ಐಷಾರಾಮಿ ವಾಹನವಾಗಿದೆ. ಅಲ್ಲದೇ ಈ BMW X7 ಅವರ ಸಂಗ್ರಹಣೆಯಲ್ಲಿ ಅತ್ಯಂತ ದುಬಾರಿ ಕಾರು. ಈ BMW X7 ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.22 ಕೋಟಿಯಾಗಿದೆ. BMW X7 ಕಾರಿನ ನವೀಕರಿಸಿದ ಆವೃತ್ತಿಯನ್ನು ಭಾರತದಲ್ಲಿ ಪರಿಚಯಿಸಿದೆ. ಈ ಕಾರು ಎರಡು ರೂಪಾಂತರಗಳಲ್ಲಿ ಲಭ್ಯವಿದೆ.
ಈ BMW X7 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ Mercedes-Benz GLS ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಈ ಹೊಸ BMW X7 ಕಾರು ಮುಂಭಾಗದ ಕಿಡ್ನಿ ಗ್ರಿಲ್ ಬ್ಲುಆಕ್ ಫಿನಿಶ್ ಮತ್ತು ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಪಡೆದುಕೊಂಡಿದ್ದು ಅದು ಕಾರಿಗೆ ಆಧುನಿಕ ಲು ಅನ್ನು ನೀಡುತ್ತದೆ.
ಈ BMW X7 ಫೇಸ್‌ಲಿಫ್ಟ್ ಕಾರಿನ ಓಳಭಾಗ ಗ್ರಾಫಿಕ್ಸ್‌ನೊಂದಿಗೆ ಕ್ರೋಮ್-ಲೇಪಿತ ಏರ್ ವೆಂಟ್‌ಗಳು ಮತ್ತು 3D ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ. ಈ ಕಾರಿನ ಡಿಸ್ ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಮತ್ತು ಸ್ಕೈ ಲೌಂಜ್ ಪನೋರಮಿಕ್ ಗ್ಲಾಸ್ ಸನ್‌ರೂಫ್ ಅನ್ನು ಹೊಂದಿದೆ, ಇವೆಲ್ಲವೂ ಐಷಾರಾಮಿ ಮತ್ತು ದೃಷ್ಟಿಗೆ ಇಷ್ಟವಾಗುವ ಒಳಾಂಗಣಕ್ಕೆ ಕೊಡುಗೆ ನೀಡುತ್ತವೆ.
ಈ BMW X7 ಫೇಸ್‌ಲಿಫ್ಟ್ ಕಾರಿನಲ್ಲಿ 3.0-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಮತ್ತು ಡೀಸೆಲ್ ಮಿಲ್‌ಗಳನ್ನು ಹೊಂದಿವೆ. ಇದರಲ್ಲಿ ಡೀಸೆಲ್ ಎಂಜಿನ್ 335 bhp ಮತ್ತು 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಪೆಟ್ರೋಲ್ ಎಂಜಿನ್ 375 bhp ಮತ್ತು 52 0Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಕಾರಿನಲ್ಲಿ ಹೊಸ ಡ್ರೈವ್ ತಂತ್ರಜ್ಞಾನದೊಂದಿಗೆ ಬರುತ್ತದೆ, ಇದು ಆಲ್-ವೀಲ್ ಡ್ರೈವ್ ಸಿಸ್ಟಮ್ ಅನ್ನು ನೀಡುತ್ತದೆ.MW X7 ಫೇಸ್‌ಲಿಫ್ಟ್ ಕಾರು ಸಪೈರ್ ಮತ್ತು ಕಾರ್ಬನ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.


Click it and Unblock the Notifications








