ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿ ಪರಿಸರ ಪ್ರೇಮ ಮರೆದ ಜನಪ್ರಿಯ ನಟ, ನಟಿಯರು
ಬಾಲಿವುಡ್ ಎಂಬ ಕಲರ್ ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍ಗಳನ್ನು ಹೊಂದಿದ್ದಾರೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತ್ಯಂತ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಐಷಾರಾಮಿ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚು.
ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳ ನಡುವೆ ಒಂದು ಟ್ರೆಂಡ್ ಆಗಿದೆ. ಅದರಲ್ಲಿಯೂ ಬಾಲಿವುಡ್ ನಟಿಯರು (Bollywood Actress) ಆಗ್ಗಾಗ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಜೊತೆಗೆ ಹಲವಾರು ಸೆಲೆಬ್ರಿಟಿಗಳು ಎಲೆಕ್ಟ್ರಿಕ್ ಕಾರುಗಳನ್ನು (Electric Cars) ಖರೀದಿಸಿದ್ದಾರೆ. ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಟಿ ರೇಖಾ: ಹಿರಿಯ ನಟಿ ರೇಖಾ ಅವರು BMW i7 ಎಲೆಕ್ಟ್ರಿಕ್ ಕಾರನ್ನು ಹೊಂದಿದ್ದಾರೆ. ಈ ಎಲೆಕ್ಟ್ರಿಕ್ ಕಾರು ಆಕ್ಸೈಡ್ ಗ್ರೇ ಮೆಟಾಲಿಕ್ ಬಣ್ಣವನ್ನು ಹೊಂದಿದೆ. ಈ ಕಾರಿನಲ್ಲಿ ಮುಂಭಾಗದಲ್ಲಿ ಡ್ಯುಯಲ್ ಸ್ಕ್ರೀನ್‌ಗಳು, ಎಕ್ಸಿಕ್ಯೂಟಿವ್ ಲೌಂಜ್ ಸೀಟುಗಳು, ಮಸಾಜ್ ಮಾಡುವ ಸೀಟುಗಳು, ಹಿಂಬದಿ ಸೀಟ್ ಥಿಯೇಟರ್ ಸ್ಕ್ರೀನ್, ಬೋವರ್ಸ್ ಮತ್ತು ವಿಲ್ಕಿನ್ಸ್ ಡೈಮಂಡ್ ಆಡಿಯೊ ಸಿಸ್ಟಮ್ ಅನ್ನು ಹೊಂದಿದೆ.
ಶಾರುಖ್ ಖಾನ್: ಭಾರತದಲ್ಲಿ ಹ್ಯುಂಡೈನ ದೀರ್ಘಕಾಲದ ಬ್ರಾಂಡ್ ಅಂಬಾಸಿಡರ್ ಆಗಿರುವ ಶಾರುಖ್ ಖಾನ್ ಅವರಿಗೆ ಇತ್ತೀಚೆಗೆ ಗ್ರ್ಯಾವಿಟಿ ಗೋಲ್ಡ್ ಮ್ಯಾಟ್‌ನ ಬಣ್ಣದ ಹುಂಡೈ ಐಯೊನಿಕ್ 5 ಕಾರನ್ನು ಉಡುಗೊರೆಯಾಗಿ ನೀಡಲಾಯಿತು. ಹ್ಯುಂಡೈ Ioniq 5 ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.45.95 ಲಕ್ಷವಾಗಿದೆ.ಈ ಹ್ಯುಂಡೈ Ioniq 5 ಎಲೆಕ್ಟ್ರಿಕ್ ಎಸ್‍ಯುವಿ ಹ್ಯುಂಡೈ ಮೋಟಾರ್ ಗ್ರೂಪ್‌ನ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ಅನ್ನು ಆಧರಿಸಿದೆ.
ಜಾಕ್ವೆಲಿನ್ ಫೆರ್ನಾಂಡಿಸ್: ಜನಪ್ರಿಯ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಇತ್ತೀಚೆಗೆ BMW 5-ಸೀರಿಸ್ ಅದರ M ಬ್ರೂಕ್ಲಿನ್ ಗ್ರೇ ಮೆಟಾಲಿಕ್ ಶೇಡ್‌ನಲ್ಲಿ ಹೊಸ BMW i7 ಎಲೆಕ್ಟ್ರಿಕ್ ಐಷಾರಾಮಿ ಸಲೂನ್‌ಗೆ ಅಪ್‌ಗ್ರೇಡ್ ಮಾಡಿದ್ದಾರೆ. ಈ ಕಾರಿನಲ್ಲಿ ಮುಂಭಾಗದಲ್ಲಿ ಡ್ಯುಯಲ್ ಸ್ಕ್ರೀನ್‌ಗಳು, ಎಕ್ಸಿಕ್ಯೂಟಿವ್ ಲೌಂಜ್ ಸೀಟುಗಳು, ಮಸಾಜ್ ಮಾಡುವ ಸೀಟುಗಳು, ಹಿಂಬದಿ ಸೀಟ್ ಥಿಯೇಟರ್ ಸ್ಕ್ರೀನ್, ಬೋವರ್ಸ್ ಮತ್ತು ವಿಲ್ಕಿನ್ಸ್ ಡೈಮಂಡ್ ಆಡಿಯೊ ಸಿಸ್ಟಮ್ ಅನ್ನು ಹೊಂದಿದೆ.
ಕಿಮ್ ಶರ್ಮಾ: ಬಾಲಿವುಡ್ ನಟಿ ಕಿಮ್ ಶರ್ಮಾ ಅವರು ತಮ್ಮ ದೈನಂದಿನವಾಗಿ ಟಾಟಾ ನ್ಯಾನೋ ಆಟೋಮ್ಯಾಟಿಕ್ ಅನ್ನು ಚಾಲನೆ ಮಾಡುತ್ತಿದ್ದರು, ಇತ್ತೀಚೆಗೆ ಮಿನರಲ್ ವೈಟ್ ಮೆಟಾಲಿಕ್‌ನ ಬಣ್ಣದ ಹೊಚ್ಚ ಹೊಸ BMW i7 ಕಾರನ್ನು ಖರೀದಿಸಿದ್ದಾರೆ. BMW i7 ಕಾರಿನಲ್ಲಿ ಡ್ಯುಯಲ್ ಸ್ಕ್ರೀನ್‌ಗಳು, ಎಕ್ಸಿಕ್ಯೂಟಿವ್ ಲೌಂಜ್ ಸೀಟುಗಳು, ಮಸಾಜ್ ಮಾಡುವ ಸೀಟುಗಳು, ಹಿಂಬದಿ ಸೀಟ್ ಥಿಯೇಟರ್ ಸ್ಕ್ರೀನ್, ಬೋವರ್ಸ್ ಮತ್ತು ವಿಲ್ಕಿನ್ಸ್ ಡೈಮಂಡ್ ಆಡಿಯೊ ಸಿಸ್ಟಮ್ ಅನ್ನು ಹೊಂದಿದೆ.
ಮಂದಿರಾ ಬೇಡಿ: ಖ್ಯಾತ ಟಿವಿ ನಿರೂಪಕಿ ಮತ್ತು ಬಾಲಿವುಡ್ ನಟಿ ಮಂದಿರಾ ಬೇಡಿ ಅವರು ಇಂಟೆನ್ಸಿ ಟೀಲ್‌ನ ಬಣ್ಣದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ಟಾಟಾ ನೆಕ್ಸಾನ್ ಇವಿ ಮಾದರಿಯು ಎಂಆರ್ ರೂಪಾಂತರ 30 kWh ಹಾಗೂ ಎಲ್ಆರ್ ರೂಪಾಂತರ 40.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಜನರೇಷನ್ 2 ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಲಿದೆ.
ನುಶ್ರತ್ ಬರೂಚಾ: ಬಾಲಿವುಡ್‌ನಲ್ಲಿ ತಮ್ಮ ಹಾಟ್ ಲುಕ್ ಹಾಗೂ ಬೋಲ್ಡ್ ಪಾತ್ರಗಳಲ್ಲಿನ ಅಭಿನಯದಿಂದಲೇ ನಟಿ ನುಶ್ರತ್ ಬರೂಚಾ ಹೆಸರುವಾಸಿಯಾಗಿದ್ದಾರೆ. ನಟಿ ಕಾಣಿಸಿಕೊಂಡ ಕಾರಿನ ಬಗ್ಗೆ ಹೇಳುವುದಾದರೆ, ಬಿಎಂಡಬ್ಲ್ಯು ಕಂಪನಿಯು ಐಎಕ್ಸ್ ಎಕ್ಸ್‌ಡ್ರೈವ್40 ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದಕ್ಕಾಗಿ ಕಂಪನಿಯು ಹೊಸ ಕಾರಿನಲ್ಲಿ 76.6kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ.
ನಟ ರಿತೇಶ್ ದೇಶಮುಖ್: ನುಶ್ರತ್ ಭರುಚಾ ಮೊದಲು, ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರು ಬಾಲಿವುಡ್‌ನಲ್ಲಿ BMW iX ಅನ್ನು ಖರೀದಿಸಿದ್ದಾರೆ. ಅವರು ಅದೇ ಅವೆಂಚುರಿನ್ ರೆಡ್ ಮೆಟಾಲಿಕ್ ಬಣ್ಣದಲ್ಲಿ iX ಅನ್ನು ಹೊಂದಿದ್ದಾರೆ. ಬಾಲಿವುಡ್ ನಟ ಮತ್ತು ಅವರ ನಟಿ ಪತ್ನಿ ಜೆನಿಲಿಯಾ ದೇಶ್‌ಮುಖ್ ಅವರು ಯುಎಸ್‌ನಲ್ಲಿರುವ ಮನೆಯಲ್ಲಿ ಟೆಸ್ಲಾ ಮಾಡೆಲ್ ಎಕ್ಸ್ ಅನ್ನು ಹೊಂದಿದ್ದಾರೆ.
ಸುನೀಲ್ ಶೆಟ್ಟಿ: ಸುನೀಲ್ ಶೆಟ್ಟಿ ಅವರಿಗೆ ಕಾರುಗಳ ವಿಶೇಷ ಪ್ರೀತಿಯಿದ್ದು, ಅವರ ಗ್ಯಾರೇಜ್ ನಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವೆ. ಅವರು ಕ್ಕೈಗೆಟುಕುವ ಬೆಲೆಯ ಹೊಚ್ಚ ಹೊಸ ಎಂಜಿ ಕಾಮೆಟ್ ಇವಿ (MG Comet EV)ಯನ್ನು ಕೊಂಡುಕೊಂಡಿದ್ದಾರೆ. 2 ಡೋರ್ ಆಯ್ಕೆಯಲ್ಲಿ ಸಿಗುವ ಈ ಕಾರಿನಲ್ಲಿ 4 ಜನ ಆರಾಮದಾಯಕವಾಗಿ ಕುಳಿತುಕೊಂಡು ಹೋಗಬಹುದು.
ಗುಲ್ ಪನಾಗ್: ಗುಲ್ ಪನಾಗ್ ಇತ್ತೀಚೆಗಷ್ಟೇ ಮಹೀಂದ್ರಾ ಝೋರ್ ಗ್ರಾಂಡ್ ಇವಿ 3-ವೀಲರ್ ಅನ್ನು ಮುಲ್ಶಿಯಲ್ಲಿರುವ ತನ್ನ ಫಾರ್ಮ್‌ಹೌಸ್‌ಗಾಗಿ ಖರೀದಿಸಿದ್ದಾರೆ. ಜಮೀನಿನ ಸುತ್ತಲೂ ಹೋಗಿ ತಾಜಾ ಉತ್ಪನ್ನಗಳನ್ನು ತರಲು ನಟಿ ಗುಲ್ ಪನಾಗ್ ಈ ಮಹೀಂದ್ರಾ ಝೋರ್ ಗ್ರಾಂಡ್ ಇವಿ 3-ವೀಲರ್ ಅನ್ನು ಬಳಸುತ್ತಾರೆ


Click it and Unblock the Notifications








