ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ಬಾಲಿವುಡ್ ಸಿನಿಮಾ ರಂಗ ಕಲರ್‍‍ಫುಲ್ ದುನಿಯಾ. ಈ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಯಾವೆಲ್ಲಾ ಬಾಲಿವುಡ್ ತಾರೆಯರು ಹೊಸ ಕಾರುಗಳನ್ನು ಖರೀದಿಸಿದ್ದಾರೆ ಎಂಬುದರ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ರಿಯಾ ಚಕ್ರವರ್ತಿ

ಜೀಪ್ ಕಂಪಾಸ್

ಬಾಲಿವುಡ್ ಚೆಲುವೆ ರಿಯಾ ಚಕ್ರವರ್ತಿ ಅವರು ಕೆಲವು ತಿಂಗಳ ಹಿಂದೆ ಜೀಪ್ ಕಂಪಾಸ್ ಖರೀದಿಸಿದರು. ಈ ನಟಿ ಹಲವು ಕಾರ್ಯಕ್ರಮಗಳಿಗೆ ಈ ಕಾರಿನಲ್ಲಿ ತೆರಳಿದ್ದರು. ಜೀಪ್ ಕಂಪಾಸ್ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಅಕ್ಷಯ್ ಕುಮಾರ್ ಕೂಡ ಜೀಪ್ ಕಂಪಾಸ್ ಅನ್ನು ಹೊಂದಿದ್ದಾರೆ. ರಿಯಾ ಖರೀದಿಸಿದ ಜೀಪ್ ಕಾಂಪಾಸ್‍‍ನ ನಿಖರವಾದ ರೂಪಾಂತರದ ವಿವರಗಳು ತಿಳಿದಿಲ್ಲ ಆದರೆ ಈ ವಾಹನವು ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ತಾಪ್ಸಿ ಪನ್ನು

ಜೀಪ್ ಕಂಪಾಸ್

ಪ್ರಸಿದ್ದ ನಟಿ ತಾಪ್ಸಿ ಪನ್ನು ಅವರು ಇತ್ತೀಚೆಗೆ ಮ್ಯಾಗ್ನೇಶಿಯೊ ಗ್ರೇ ಜೀಪ್ ಕಂಪಾಸ್ ಅನ್ನು ಖರೀದಿಸಿದ್ದಾರೆ. ಈ ಎಸ್‍‍ಯು‍ವಿಯನ್ನು ನಟಿ ತನ್ನ ಸಹೋದರಿ ಶಗುನ್ ಅವರಿಗೆ ಸರ್ಫೈಸ್ ಗಿಫ್ಟ್ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಇವರ ಬಳಿ ಇರುವ ಜೀಪ್ ಕಂಪಾಸ್ ರಿಯಾ ಚಕ್ರವರ್ತಿ ಅವರ ಬಳಿ ಇರುವ ಮಾದರಿ ಒಂದೇ ಆಗಿದೆ.

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ಕಂಗನಾ ರನೌತ್

ಮರ್ಸಿಡಿಸ್ ಬೆಂಜ್ ಜಿಎಲ್ಇ-ಕ್ಲಾಸ್

ಬಿಟೌನ್ ಬೆಡಗಿ ಕಂಗನಾ ರನೌತ್ ಕಳೆದ ಜ್ಯುಲೈ ತಿಂಗಳಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಇ-ಕ್ಲಾಸ್ ಎಸ್‍‍ಯು‍ವಿಯನ್ನು ಖರೀದಿಸಿದರು. ಭಾರತದಲ್ಲಿ ಜರ್ಮನ್ ತಯಾರಕರ ಮಾದರಿ ಶ್ರೇಣಿಯಲ್ಲಿ ಜಿಎಲ್ಇ ಮಧ್ಯಮ ಶ್ರೇಣಿಯ ಎಸ್‍‍ಯುವಿ ಸ್ಥಾನವನ್ನು ಪಡೆದುಕೊಂಡಿದೆ. ಕಂಗನಾ ಬಲಿ ಇರುವ ಮರ್ಸಿಡಿಸ್ ಎಸ್‍‍ಯು‍ವಿಯ ಡಿ ರೂಪಾಂತರಕ್ಕೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.61.75 ಲಕ್ಷ ಬೆಲೆ ಹೊಂದಿದೆ.

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ರಣವೀರ್ ಸಿಂಗ್‍

ಲ್ಯಾಂಬೊರ್ಗಿನಿ ಉರುಸ್

ಬಾಲಿವುಡ್ ನಟ ರಣವೀರ್ ಸಿಂಗ್‍‍ರವರು ವಿಶ್ವದ ಅತಿ ವೇಗದ ಎಸ್‍‍ಯುವಿ‍‍ಗಳಲ್ಲಿ ಒಂದಾದ ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯನ್ನು ಖರೀದಿಸಿದ್ದಾರೆ. ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 3 ಕೋಟಿಗಳಾಗಿದೆ. ಲ್ಯಾಂಬೊರ್ಗಿನಿ ಉರುಸ್‍‍ನಲ್ಲಿ ಹೊಸ 4.0 ಲೀಟರಿನ ವಿ8 ಟ್ವಿನ್ ಟರ್ಬೊ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 650 ಬಿ‍‍ಹೆಚ್‍‍ಪಿ ಪವರ್ ಹಾಗೂ 2,250 ಆರ್‍‍ಪಿಎಂನಲ್ಲಿ 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ಫಾತಿಮಾ ಸನಾ ಶೇಖ್

ಟಾಟಾ ಹ್ಯಾರಿಯರ್

ಫಾತಿಮಾ ಸನಾ ಶೇಖ್ ಅವರು ದಂಗಲ್ ಚಿತ್ರದ ಮೂಲಕ ಎಲ್ಲರ ಮನ ಗೆದ್ದ ನಟಿ. ಯುವ ನಟಿ ಕೆಲವು ತಿಂಗಳ ಹಿಂದೆ ಟಾಟಾ ಟಿವಿಸಿ ಅಲ್ಲ ತಿರುಗಾಡುತ್ತಿದ್ದರು. ಆದರೇ ಇತ್ತೀಚಿಗೆ ಅವರು ಟಾಟಾ ಹ್ಯಾರಿಯರ್ ಕಾರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟಾಟಾ ಸಂಸ್ಥೆಯ ಅತ್ಯಾಧುನಿಕ ಕಾರುಗಳಲ್ಲಿ ಒಂದಾಗಿದೆ. ಆದರೇ ಸನಾ ಅವರು ಕಾರನ್ನು ಖರೀದಿಸಿದ್ದಾರೂ ಅಥವಾ ಕಂಪನಿಯ ರಾಯಭಾರಿ ಆಗಿರುವುದಕ್ಕೆ ಉಡುಗೊರೆಯಾಗಿ ನೀಡಲಾಗಿದಿಯಾ ಎಂಬುವುದರ ಕುರಿತು ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ಅಜಯ್ ದೇವಗನ್

ರೋಲ್ಸ್ ರಾಯ್ಸ್ ಕುಲ್ಲಿನಾನ್

ಕಾರುಗಳು ಎಂದರೆ ಅಜಯ್ ದೇವಗನ್‍ಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಈ ಸಲ ದುಬಾರಿ ಕಾರು ರೋಲ್ಸ್ ರಾಯ್ಸ್ ಕುಲ್ಲಿನಾನ್ ಖರೀದಿಸಿದ್ದಾರೆ. ಈ ಕಾರನ್ನು ಹೊಂದಿರುವ ಭಾರತದ ಮೂವರು ವ್ಯಕ್ತಿಗಳಲ್ಲಿ ಇವರೂ ಒಬ್ಬರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಅಜಯ್ ದೇವಗನ್. ಅಜಯ್ ದೇವಗನ್ ಅವರ ಗ್ಯಾರೇಜ್‍‍ನಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್, ಮಿನಿ ಕೂಪರ್ ಮತ್ತು ಬಿಎಂಡಬ್ಲ್ಯು ಕಾರುಗಳಿವೆ. ಈ ಸಾಲಿಗೆ ಇತ್ತೀಚಿಗೆ ಖರೀದಿಸಿದ ರೋಲ್ಸ್ ರಾಯ್ಸ್ ಕುಲ್ಲಿನಾನ್ ಸೇರ್ಪಡೆಯಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ಇಮ್ರಾನ್ ಹಶ್ಮಿ

ಮರ್ಸಿಡಿಸ್ ಬೆಂಜ್ ಎಸ್ 560 ಮರ್ಸಿಡಿಸ್ ಮೇಬ್ಯಾಕ್ ಸೆಡಾನ್

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಹೊಸ ಮರ್ಸಿಡಿಸ್ ಬೆಂಜ್ ಎಸ್ 560 ಮರ್ಸಿಡಿಸ್ ಮೇಬ್ಯಾಕ್ ಸೆಡಾನ್ ಅನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಖರೀದಿಸಿದ್ದಾರೆ. ಈ ಐಷಾರಾಮಿ ಕಾರಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2 ಕೋಟಿ ಬೆಲೆ ಇದೆ. ಈ ಕಾರು 3982 ಸಿಸಿ ವಿ8 ಟರ್ಬೋ ಪೆಟ್ರೋಲ್ ಎಂಜಿನ್ 463 ಬಿಎಚ್‍‍ಪಿ ಪವರ್ ಮತ್ತು 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ತಾರಾ ಸುತಾರಿಯಾ

ಆಡಿ ಕ್ಯೂ 3

ಬಾಲಿವುಡ್ ನಟಿ ತಾ ಸುತಾರಿಯಾ ಕೆಂಪು ಬಣ್ಣದ ಆಡಿ ಕ್ಯೂ 3 ಎಸ್‍ಯುವಿಯನ್ನು ಖರೀದಿಸಿದ್ದಾರೆ. ಆಡಿ ಕ್ಯೂ 3 ಜರ್ಮನ್ ಉತ್ಪಾದಕರ ಎಸ್‍ಯು‍ವಿ ಶ್ರೇಣಿಯಲ್ಲಿ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಇದಲ್ಲದೆ ನಟಿಯ ಜೊತೆ ಒಂದೆರಡು ಸ್ಕೋಡಾ ಕಾರುಗಳನ್ನು ಹೊಂದಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ಜಾನ್ ಅಬ್ರಹಾಂ

ಪೋರ್ಷೆ ಕೇಯೆನ್

ಬಾಲಿವುಡ್ ಪ್ರಸಿದ್ದ ನಟ ಜಾನ್ ಅಬ್ರಹಾಂ ಹೊಸ ಪೋರ್ಷೆ ಕೇಯೆನ್ ಕಾರನ್ನು ಕೆಲವು ತಿಂಗಳ ಹಿಂದೆ ಖರೀದಿಸಿದ್ದಾರೆ. ಇವರು ಕಾರು ಪ್ರಿಯರು ಆಗಿರುದರಿಂದ ಇವರ ಬಳಿ ಹಲವಾರು ದುಬಾರಿ ಕಾರುಗಳಿವೆ. ಈ ಹೊಸ ಕಾರಿನ ಮೂಲ ಬೆಲೆಯು 1.2 ಕೋಟಿಯಿಂದ ಪ್ರಾರಂಭವಾಗುತ್ತದೆ. ಈ ಕಾರು 3.0 ಲೀಟರ್ ಸಿಂಗಲ್ ಟರ್ಬೊ ವಿ6 ಎಂಜಿನ್ 335 ಬಿಎಚ್‍ಪಿ ಪವರ್ ಮತ್ತು 450 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

source: 1, 2, 3

Article Published On: Wednesday, October 9, 2019, 12:33 [IST]
English summary
Bollywood stars & their new cars: Ranveer Singh’s Lamborghini Urus to Ajay Devgn’s Rolls Royce Cullinan - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+