ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಬಾಲಿವುಡ್‌ನ ಜನಪ್ರಿಯ ಸೆಲಬ್ರಿಟಿ ದಂಪತಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮರ್ಸಿಡಿಸ್-ಬೆನ್ಜ್‌ನಿಂದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಎಸ್‌ಯುವಿಯೊಂದನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ನಟಿ-ನಟರಾದ ಹಾಗೂ ದಂಪತಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಹೊಚ್ಚಹೊಸ ಮರ್ಸಿಡಿಸ್-ಮೇಬ್ಯಾಕ್ GLS600 4ಮ್ಯಾಟಿಕ್ SUV ಅನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆಯು ಬರೋಬ್ಬರಿ 2.8 ಕೋಟಿ ರೂ. (ಎಕ್ಸ್ ಶೋರೂಂ) ಎಂದು ತಿಳಿದುಬಂದಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಈ ಹೊಸ ಮರ್ಸಿಡಿಸ್-ಮೇಬ್ಯಾಕ್ GLS600 4ಮ್ಯಾಟಿಕ್ SUV ಕಾರನ್ನು ದೀಪಿಕಾ ಪ್ರಕಾಶ್ ಪಡುಕೋಣೆ ಹೆಸರಿನಲ್ಲಿ ಸೆಪ್ಟೆಂಬರ್ 2, 2022 ರಂದು ಮುಂಬೈ RTO ನಲ್ಲಿ ನೋಂದಾಯಿಸಲಾಗಿದೆ. ಮರ್ಸಿಡಿಸ್-ಮೇಬ್ಯಾಕ್ GLS600 ಜರ್ಮನ್ ಕಾರು ತಯಾರಕರ ಅತ್ಯಂತ ದುಬಾರಿ ಮತ್ತು ಐಷಾರಾಮಿ SUV ಆಗಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಕುತೂಹಲಕಾರಿಯಾಗಿ ರಣವೀರ್ ಸಿಂಗ್ ಕಳೆದ ಜೂನ್ 2021 ರಲ್ಲಿ ತಮ್ಮ 36ನೇ ಹುಟ್ಟುಹಬ್ಬದಂದು ಮರ್ಸಿಡಿಸ್-ಮೇಬ್ಯಾಕ್ GLS600 ಅನ್ನು ಖರೀದಿಸಿದ್ದರು ಎಂದು ವರದಿಯಾಗಿತ್ತು. ಆದರೆ ಈ ಕುರಿತು ಪರಿವಾಹನ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಅದು ಬೇರೆ ಯಾರದೋ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಬಹಿರಂಗವಾಗಿದೆ. ಇದೀಗ ಖರೀದಿಸಿರುವ ಕಾರು ಹಾಗು ಈ ಹಿಂದೆ ಸುದ್ದಿಯಾಗಿದ್ದ ಎರಡೂ SUV ಗಳು ಒಂದೇ ನೀಲಿ ಬಣ್ಣದಲ್ಲಿವೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಇನ್ನು ಕಾರಿನ ಬಗ್ಗೆ ಮಾತನಾಡುವುದಾದರೆ, ಈ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಆಗಿದೆ. ಇದರಲ್ಲಿ ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ಟ್ ನೋಟ್ ಹೊಂದಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಈ ಹೊಸ ಪ್ರೀಮಿಯಂ ಐಷಾರಾಮಿ ಎಸ್‌ಯುವಿ ಕಾರಿನ ವಿನ್ಯಾಸಕ್ಕೆ ತಕ್ಕಂತೆ 23 ಇಂಚಿನ ಬ್ರಷ್ಡ್ ಮಲ್ಟಿ-ಸ್ಪೋಕ್ ವೀಲ್ಹ್ ಆಯ್ಕೆ ಜೊತೆಗೆ ವಿಂಡೋ ಪಿಲ್ಲರ್, ರೂಫ್ ಮೇಲೆ ಕಪ್ಪು ಬಣ್ಣದ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್ ಮತ್ತು 'ಮೇಬ್ಯಾಕ್' ಬ್ರಾಂಡ್ ಬ್ಯಾಡ್ಜ್ ಹೊಂದಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಈ ಎಸ್‍ಯುವು ಕಾರು ಮಾದರಿಯ ಪ್ರತಿ ಸೀಟ್ ವೆಂಟಿಲೆಟರ್ ಮತ್ತು ಮಸಾಜ್ ಫಂಕ್ಷನ್ ವೈಶಿಷ್ಟ್ಯತೆ ಒಳಗೊಂಡಿದ್ದು, ಪ್ರತಿ ಸೀಟ್ ನಲ್ಲೂ ಆಡಿಯೋ, ಹವಾಮಾನ ನಿಯಂತ್ರಣ, ಆಂಬಿಯೆಂಟ್ ಲೈಟಿಂಗ್, ಸನ್ಶೇಡ್ಸ್ ಮತ್ತು ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಫೋರ್ಡರ್‌ಗಳಲ್ಲಿ ರೆಫ್ರಿಜರೇಟರ್ ಅನ್ನು ಸಹ ಒಳಗೊಂಡಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಇನ್ನು ದೊಡ್ಡದಾದ ಪನೋರಮಿಕ್ ಮೂನ್‌ರೂಫ್, 12.3-ಇಂಚಿನ ಎಂಬಿಯುಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್, 64 ಬಣ್ಣ ಮತ್ತು ಹೆಚ್ಚಿನ ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಈ ಎಸ್‍ಯುವಿ ಮಾದರಿಯಲ್ಲಿ ವಿಶೇಷ ತಂತ್ರಜ್ಞಾನ ಪ್ರೇರಿತ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಸ್ಪೆಂಕ್ಷನ್ ಸಿಸ್ಟಂ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಮೂಲಕ ಕಾರು ಚಾಲನೆಯಲ್ಲಿರುವಾಗ ರಸ್ತೆಯನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ಸಸ್ಪೆಂಕ್ಷನ್ ಹೊಂದಾಣಿಕೆಯೊಂದಿಗೆ ಅಂಡರ್ ಬಾಡಿ ಡ್ಯಾಮೆಜ್ ತಪ್ಪಿಸಲು ನೆರವಾಗುತ್ತದೆ. ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಈ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ದೀಪಿಕಾ-ರಣವೀರ್ ಸಿಂಗ್‌ರ ಇತರ ಕಾರುಗಳು

ಮರ್ಸಿಡಿಸ್-ಮೇಬ್ಯಾಕ್ GLS600 ಹೊರತಾಗಿ, ರಣವೀರ್ ಸಿಂಗ್ ಲಂಬೋರ್ಘಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯನ್ನು ಸಹ ಹೊಂದಿದ್ದಾರೆ, ಇದು ಮುಂಬೈ ರಸ್ತೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅವರು ತಮ್ಮ ಗ್ಯಾರೇಜ್‌ನಲ್ಲಿ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ಆಡಿ ಕ್ಯೂ5, ಜಾಗ್ವಾರ್ ಎಕ್ಸ್‌ಜೆ ಎಲ್‌ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಮರ್ಸಿಡಿಸ್-ಮೇಬ್ಯಾಕ್ GLS600 ಮಾಲೀಕರು

ಮರ್ಸಿಡಿಸ್-ಮೇಬ್ಯಾಕ್ GLS600 ಕಾರನ್ನು ಬಾಲಿವುಡ್‌ ಹಲವರು ನಟರು ಹೊಂದಿದ್ದಾರೆ. ಇದರ ಪ್ರೀಮಿಯಂ ವೈಶಿಷ್ಟ್ಯಗಳಿಗೆ ಮನಸೋತಿರುವ ಹವಲರು ಸೆಲೆಬ್ರಿಟಿಗಳು ಈ SUV ಅನ್ನು ತಮ್ಮ ಗ್ಯಾರೇಜ್‌ನಲ್ಲಿ ಉಳಿಸಿಕೊಂಡಿದ್ದಾರೆ. ಈ ಹಿಂದೆ ಕೃತಿ ಸನೋನ್, ಅರ್ಜುನ್ ಕಪೂರ್ ಹಲವರು ನಟರು ಇದೇ ವಾಹನವನ್ನು ಖರೀದಿಸಿದ್ದರು.

ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್‌ನ ಟಾಪ್ ಕನ್ನಡ ನಟಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಾಲಿವುಡ್‌ನ ಬಹುತೇಕ ಸೆಲೆಬ್ರಿಟಿಗಳ ಬಳಿ ಬೆಂಝ್ ಕಾರುಗಳಿವೆ. ಸ್ಟಾರ್‌ ನಟರೆಲ್ಲರೂ ಬೆಂಝ್ ಕಾರುಗಳನ್ನು ಖರೀದಿಸುವ ಮುಖ್ಯ ಉದ್ದೇಶವೆಂದರೆ ತಮ್ಮ ಸ್ಟೇಟಸ್ ಅನ್ನು ಹೆಚ್ಚಿಸಿಕೊಳ್ಳುವುದಾಗಿದೆ. ಈ ಕಾರು ಸಾಕಷ್ಟು ಪ್ರೀಮಿಯಂ ವೈಶಿಷ್ಟ್ಯಗಳು ಹಾಗೂ ಐಷಾರಾಮಿ ಅನುಭವ ನೀಡುವುದರಿಂದ ಮಾರುಕಟ್ಟೆಯಲ್ಲಿ ಉದ್ಯಮಿಗಳಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಎಲ್ಲರೂ ಖರೀದಿಸುತ್ತಾರೆ.

Most Read Articles

Kannada
English summary
Bollywoods top Kannada actress who bought an expensive luxury car
Story first published: Tuesday, September 6, 2022, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X