4.5 ತಾಸಿನಲ್ಲಿ ಮುಂಬೈನಿಂದ ನ್ಯೂಯಾರ್ಕ್‌ನತ್ತ ಜಿಗಿತ..!
ಹರಿಯುವ ನೀರಿನಂತೆ ವ್ಯೋಮಯಾನ ತಂತ್ರಜ್ಞಾನವು ನಿರಂತರ ಪ್ರಗತಿಯಲ್ಲಿದೆ. ಬೂಮ್ ಸಂಸ್ಥೆಯೀಗ 13 ವರ್ಷಗಳ ಹಿಂದೆ ಕಾಂಕಾರ್ಡ್ ನಿಲ್ಲಿಸಿ ಹೋಗಿರುವ ಸೂಪರ್ ಸೋನಿಕ್ ಜೆಟ್ ವಿಮಾನದ ಕನಸನ್ನು ಕೈಗೆತ್ತಿಕೊಂಡಿದೆ.
ಬೂಮ್ ಸಂಸ್ಥೆಯು ಸೂಪರ್ ಸೋನಿಕ್ ಪ್ರಯಾಣಿಕ ಜೆಟ್ ವಿಮಾನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು, ಮ್ಯಾಕ್ 2.2 ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಅಂದರೆ ಮುಂಬೈನಿಂದ ನ್ಯೂಯಾರ್ಕ್ ಗೆ ಕೇವಲ 4.5 ತಾಸಿನಲ್ಲೇ ತಲುಪಬಹುದಾಗಿದೆ.

ಏರೋನಾಟಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಗಾಧ ಅನುಭವ ಸಂಪತ್ತನ್ನು ಹೊಂದಿರುವ 11 ಮಂದಿಯ ತಂಡವು ಮುಂದಿನ ವರ್ಷಾರಂಭದಲ್ಲಿ ಸೂಪರ್ ಸೋನಿಕ್ ಜೆಟ್ ನ ಮೊದಲ ಮಾದರಿಯೊಂದಿಗೆ ರಂಗಪ್ರವೇಶ ಮಾಡಲಿದೆ.

ಪ್ರಯಾಣಿಕರು ಕಡಿಮೆ ವೆಚ್ಚದಲ್ಲಿ ಅತಿ ದೂರ ಸಂಚರಿಸುವಂತೆ ಮಾಡುವುದು ಯೋಜನೆಯ ಗುರಿಯಾಗಿದೆ. ಪ್ರತಿಯೊಂದು ಟಿಕೆಟ್ ದರ 5000 ಅಮೆರಿಕನ್ ಡಾಲರ್ ಅಥವಾ ಕೇವಲ 3.34 ಲಕ್ಷ ರು.ಗಳಾಗಿರಲಿದೆ.

ಈ ಎಲ್ಲ ಯೋಜನೆಗಳಿಗೆ ಭಾರಿ ಹೂಡಿಕೆಯ ಅವಶ್ಯಕತೆ ಇರುವುದರಿಂದ ಅಮೆರಿಕ ಮೂಲದ ಮಗದೊಂದು ವರ್ಜಿನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಸದ್ಯ ಯೋಜನೆಯು ಪ್ರಾಥಮಿಕ ಹಂತದಲ್ಲಿದೆ. ಈ ಸೂಪರ್ ಸೋನಿಕ್ ಜೆಟ್ ವಿಮಾನದಲ್ಲಿ 40 ಮಂದಿ ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದಾದ ರೀತಿಯಲ್ಲಿ ಆಸನ ವ್ಯವಸ್ಥೆ ರಚಿಸಲಾಗುವುದು.

ನಾಸಾ, ಬೋಯಿಂಗ್ ಮತ್ತು ಲಾಕ್ ಹೀಡ್ ಗಳಂತಹ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ಬೂಮ್ ಸೂಪರ್ ಸೋನಿಕ್ ಜೆಟ್ ವಿಮಾನವು ಶಬ್ದಕ್ಕಿಂತ 2.6 ಪಟ್ಟು ಜಾಸ್ತಿ ವೇಗದಲ್ಲಿ ಸಂಚರಿಸಲಿದೆ.

ಅಂದರೆ ಗಂಟೆಗೆ 3210 ಕೀ.ಮೀ. ವೇಗದಲ್ಲಿ ಸಂಚರಿಸಲಿದ್ದು, ಲಂಡನ್ ನಿಂದ ನ್ಯೂಯಾರ್ಕ್ ಗೆ 3.5 ತಾಸು, ಟೊಕಿಯೊದಿಂದ ಸ್ಯಾನ್ ಫ್ರಾನ್ಸಿಸ್ಕೊಗೆ 4.5 ಗಂಟೆಗಳಲ್ಲಿ ತಲುಪುಬಹುದಾಗಿದೆ.

ಇದು ಯಾವುದೇ ವಿಜ್ಞಾನದ ಕಟ್ಟುಕಥೆಯಲ್ಲ. ಕನಿಷ್ಠ ಪ್ರಯಾಣಿಕರ ಬಜೆಟ್ ನಲ್ಲಿ ಕೈಗೆಟುಕುವಂತಹ ಬ್ಯುಸಿನೆಸ್ ಕ್ಲಾಸ್ ದರದಲ್ಲಿ ಸೂಪರ್ ಸೋನಿಕ್ ಜಟ್ ವಿಮಾನಗಳನ್ನು ತಯಾರಿಸುವುದು ಸಂಸ್ಥೆಯ ಉದ್ದೇಶವಾಗಿದೆ.

ಈ ಹಿಂದೆ ಬಹಳ ದುಂದುವೆಚ್ಚವಾಗಿರುವುದರಿಂದ ಕಾಂಕಾರ್ಡ್ ಯೋಜನೆಯನ್ನು ಹಿಂಪಡೆಯಲಾಗಿತ್ತು. ಇದು ಮ್ಯಾಕ್ 2.0 ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.

ಒಟ್ಟಾರೆಯಾಗಿ ಈ ಯೋಜನೆಯು ನನಸಾದ್ದಲ್ಲಿ ವಿಶ್ವದ ಯಾವುದೇ ಕೊನೆಗೂ ಬೇಕಾದರೂ ಸಂಚರಿಸಿ ಕೆಲಸ ಕಾರ್ಯಗಳನ್ನು ಮುಗಿಸಿದ ಬಳಿಕ ಅದೇ ದಿನದಲ್ಲಿ ನೀವು ಸ್ವದೇಶಕ್ಕೆ ಮರಳಬಹುದಾಗಿದೆ.


Click it and Unblock the Notifications








