ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಹೊಸ 'Hyundai Exter' ಕಾರು ಅಪಘಾತಕ್ಕೆ ತುತ್ತು: ವಿಡಿಯೋ

ಟಾಟಾ ಪಂಚ್ ಪ್ರತಿಸ್ಪರ್ಧಿ ಎಂದು ದೊಡ್ಡಮಟ್ಟದಲ್ಲಿ ಕ್ರೇಜ್ ಹುಟ್ಟುಹಾಕಿದ್ದ ನೂತನ ಹ್ಯುಂಡೈ ಎಕ್ಸ್‌ಟರ್ (Hyundai Exter) ಎಸ್‌ಯುವಿ, ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಗೊಂಡಿದೆ. ಸದ್ಯ, ಈ ಕಾರು ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭವಾಗಿದ್ದು, ವಿತರಣೆಗಳು ಶುರುವಾಗಿವೆ. ಇದೀಗ, ಅಪಘಾತಕ್ಕೆ ಒಳಗಾಗಿದೆ ಎಂದು ವರದಿಯಾಗಿದೆ.

ಯೂಟ್ಯೂಬ್ ವಾಹಿನಿಯೊಂದರಲ್ಲಿ ಹೊಚ್ಚ ಹೊಸ ಎಕ್ಸ್‌ಟರ್ ಎಸ್‌ಯುವಿ ಚಾಲಕನ ನಿಯಂತ್ರಣ ಕಳೆದುಕೊಂಡು, ಡಿವೈಡರ್‌ ಮೇಲೆ ಹತ್ತಿರುವ ವಿಡಿಯೋ (Video)ವನ್ನು ಪೋಸ್ಟ್ ಮಾಡಲಾಗಿದೆ. ಗುಜರಾತ್ ರಾಜ್ಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಆದರೆ, ನಿಖರವಾದ ಸ್ಥಳದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಗ್ರಾಹಕ, ಈ ಕಾರನ್ನು ಟೆಸ್ಟ್ ಡ್ರೈವ್ ಮಾಡಲು ತೆಗೆದುಕೊಂಡು ಹೋಗಿದ್ರಾ ಅಥವಾ ಈಗಾಗಲೇ ಡಿಲೆವರಿ ಮಾಡಲಾಗಿತ್ತೆ ಎಂಬುದು ಗೊತ್ತಾಗಿಲ್ಲ.

ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಹೊಸ Hyundai Exter ಕಾರು ಅಪಘಾತಕ್ಕೆ ತುತ್ತು: ವಿಡಿಯೋ

ಈ ಘಟನೆಯ ಕುರಿತ ಚಿತ್ರವೊಂದು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ರಸ್ತೆಯ ಇನ್ನೊಂದು ಬದಿಯಲ್ಲಿ ಬಸ್ ಕಾಣುತ್ತದೆ. ಬಹುಶಃ ನಿಲ್ದಾಣದೊಳಗೆ ನಿಧಾನವಾಗಿ ಬರುತ್ತಿದ್ದ ಬಸ್ ಹಾಗೂ ಹ್ಯುಂಡೈ ಎಕ್ಸ್‌ಟರ್ ನಡುವೆ ಸಣ್ಣ ಅಪಘಾತವಾಗಿರಬಹುದು. ಕಾರಿನ ಬಾನೆಟ್‌ನಲ್ಲಿ ಪುಟ್ಟ ಡೆಂಟ್ ಇರುವುದನ್ನು ನೋಡಬಹುದು. ಅಲ್ಲಿನ ಸ್ಥಳೀಯರು ಸಹ ಕಾರನ್ನು ಡಿವೈಡರ್‌ ಮೇಲಿಂದ ಹಿಂತೆಗೆದುಕೊಳ್ಳಲು ಚಾಲಕನಿಗೆ ನೆರವು ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು, ಪುಟ್ಟದಾಗಿ ನಡೆದ ಅಪಘಾತವಾಗಿರುವುದರಿಂದ ಚಾಲಕನಿಗೆ ಗಾಯಗಳಾಗಿರುವ ಬಗ್ಗೆ ಯಾವುದೇ ವಿವರಗಳಿಲ್ಲ.

ಮಳೆಗಾಲದ ಹಿನ್ನೆಲೆ, ಕಾರು ರಸ್ತೆಯಲ್ಲಿ ಸ್ಕಿಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಘಟನೆಯಿಂದ ಕಾರಿನ ನಿರ್ಮಾಣ ಗುಣಮಟ್ಟ ಉತ್ತಮವಾಗಿಲ್ಲವೆಂದು ಏನನ್ನು ಹೇಳಲು ಸಾಧ್ಯವಿಲ್ಲ. ಅಪಘಾತವು ಚಾಲಕನ ಅಜಾಗರೂತೆಯಿಂದಲ್ಲೂ ಸಂಭವಿಸಿರಬಹುದು. ಇದಕ್ಕೆ ಸ್ಪಷ್ಟ ಕಾರಣ ದೊರೆತಾಗ ಎಲ್ಲ ಗೊಂದಲಗಳಿಗೂ ತೆರೆಬೀಳಲಿದೆ.

ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ದೇಶೀಯ ಮಾರುಕಟ್ಟೆಯಲ್ಲಿ ರೂ.5,99,900 ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ. 6 ಏರ್‌ಬ್ಯಾಗ್ಸ್, ಎಲ್ಲ ಆಸನಗಳಿಗೆ 3 ಪಾಯಿಂಟ್ ಸೀಟ್ ಬೆಲ್ಟ್ಸ್, ಸೀಟ್ ಬೆಲ್ಟ್ ರಿಮೈಂಡರ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಅಸಿಸ್ಟ್ ಕಂಟ್ರೋಲ್ ಹೊಂದಿದೆ.

ಇದಿಷ್ಟೇ ಅಲ್ಲದೆ, ISOFIX ಚೈಲ್ಡ್ ಸೀಟ್ ಮೌಂಟ್ಸ್, ಡ್ಯಾಶ್‌ಬೋರ್ಡ್ ಕ್ಯಾಮೆರಾ ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಪಡೆದಿದೆ. ಬೆಲೆಗೆ ತಕ್ಕಂತೆ ಈ ಕಾರು, ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿರುವುದರಿಂದ, ಗ್ಲೋಬಲ್ NCAP ನಡೆಸುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಅಥವಾ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯಬಹುದು ಎಂದು ಬಹಳ ದಿನಗಳ ಹಿಂದೆಯೇ ಹ್ಯುಂಡೈ ಮೋಟಾರ್ ಇಂಡಿಯಾ ವಿಶ್ವಾಸವನ್ನು ವ್ಯಕ್ತಪಡಿಸಿತ್ತು.

ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರ, 1.2-ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್‌, 81.8 bhp ಗರಿಷ್ಠ ಪವರ್ ಮತ್ತು 113.8 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. CNG ಆವೃತ್ತಿಯು 67.7 bhp ಪವರ್ ಹಾಗೂ 95.2 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 5 ಸ್ಪೀಡ್ ಮ್ಯಾನುವಲ್/ AMT ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, 19.2 ರಿಂದ 27.1 kmpl ಮೈಲೇಜ್ ನೀಡುತ್ತದೆ.

ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲೂ ಈ ಕಾರು, ಅತ್ಯಾಧುನಿಕವಾಗಿದ್ದು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಎಲ್‌ಇಡಿ ಡಿಆರ್‌ಎಲ್‌ ಹಾಗೂ ಕ್ಲಾಮ್‌ಶೆಲ್ ಬಾನೆಟ್ ಹೊಂದಿದೆ. ಜೊತೆಗೆ 4.2 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಅತ್ಯಾಧುನಿಕ ಫೀಚರ್ಸ್ ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, July 26, 2023, 18:56 [IST]
English summary
Brand new hyundai exter loses control hits divider details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+