-25 ಡಿಗ್ರಿ ಕೊರೆಯುವ ಚಳಿಯಲ್ಲೊಂದು ಮದುವೆ: ಇದರಲ್ಲಿ ಮಹೀಂದ್ರಾ ಥಾರ್‌ ಪಾತ್ರವೇನು ಗೊತ್ತಾ?

ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ನಾವಿಲ್ಲಿ ಏನೇ ಸರ್ಕಸ್‌ ಮಾಡಿದರೂ, ನಮ್ಮ ಹಣೆಯಲ್ಲಿ ಬರೆದಿರುವಂತೆಯೇ ನಡೆಯುತ್ತದೆ. ಅದು ಒಂದೋ ತುಂಬಾ ಅದ್ದೂರಿಯಾಗಿರಬಹುದು, ಅಥವಾ ತೀರಾ ಯಾರಿಗೂ ತಿಳಿಯದೆಯೂ ಹೋಗಬಹುದು. ಇನ್ನು ಕೆಲವೊಮ್ಮೆ ಅದು ವಿಶ್ವವೇ ಗಮನ ಹರಿಸುವ ರೀತಿಯಲ್ಲಿಯೂ ಇರಬಹುದು.

ಇಲ್ಲೊಂದು ಕಡೆ ಮದುವೆಯೊಂದು ಸುಮಾರು -25 ಡಿಗ್ರಿ ಕೊರೆಯುವ ಚಳಿಯಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೌದು, ಪ್ರವಾಸಿಗರ ನೆಚ್ಚಿನ ತಾಣವಾದ ಹಿಮಾಚಲ ಪ್ರದೇಶದ ಸ್ಪಿತಿ ವ್ಯಾಲಿಯಲ್ಲಿ ಈ ಮದುವೆ ನಡೆದಿದ್ದು, ಇಲ್ಲಿ ತನಕ ಕಂಡಂತಹ ಅತೀ ವಿಲಕ್ಷಣವಾದ ಮದುವೆಗಳ ಪಟ್ಟಿಗೆ ಇದೂ ಸಹ ಸೇರ್ಪಡೆಯಾಗುತ್ತದೆ.

Bride Arrives To Shimla Spiti Valley Wedding In Mahindra Thar

ಈ ಮದುವೆಯ ಹೈಲೈಟ್‌ ಏನೆಂದರೆ ಒಂದು ಈ ಕೊರೆಯುವ -25 ಡಿಗ್ರಿ ಚಳಿ. ಇನ್ನೊಂದು ಈ ಮದುವೆಗೆ ವಧು ಆಗಮಿಸಿದ್ದು ವಾಹನ, ಅದುವೇ ಮಹೀಂದ್ರಾ ಥಾರ್‌. ಸಂಪೂರ್ಣವಾಗಿ ಸಿಂಗಾರಗೊಂಡು ಮಾದುವೆಗೆ ಆಗಮಿಸಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ಮಾಂಗಲ್ಯ ಡೆಸ್ಟಿನೇಷನ್‌ ವೆಡ್ಡಿಂಗ್‌ ಎಂಬ ಕಂಪನಿ ತಮ್ಮ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದು, ಹತ್ತು ಜನ್ಮ ಕಳೆದರೂ ನೆನಪಿನಲ್ಲಿ ಉಳಿಯುವ ರೀತಿ ಈ ಜೋಡಿ ತಮ್ಮ ಮದುವೆಯನ್ನು ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಕಾಣುವಂತೆ ವಧು, ಮಹೀಂದ್ರಾ ಥಾರ್‌ನಿಂದ ಇಳಿದು ಸುತ್ತಲೂ ಮಂಜಿನಿಂದ ಕೂಡಿದ್ದ ಮಂಟಪದಲ್ಲಿ ಬಂದು ನಿಂತು ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ವಧು ಮತ್ತು ವರರು ವಿಡಿಯೋದಲ್ಲಿ ಅಪ್ಪಿಕೊಳ್ಳುತ್ತಿದ್ದು, ನಂತರದಲ್ಲಿ ಮದುವೆಯ ಶಾಸ್ತ್ರಗಳಿಗೆ ಸಿದ್ದರಾಗುತ್ತಿರುವುದನ್ನು ಕಾಣಬಹುದು. ಬೆರಳೆಣಿಕೆಯ ಜನರಷ್ಟೇ ಮದುವೆಗೆ ಬಂದಿದ್ದರೂ, ಮದುವೆಯ ನೆನಪುಗಳು ಮಾತ್ರ ಕೊಟಿ ಬೆಲೆಗೂ ಅಧಿಕ.

ಕಳೆದ ಎರಡು ವರ್ಷ ಹಿಂದೆಯೂ, ಮದುವೆಯೊಂದರಲ್ಲಿ ಮಹೀಂದ್ರಾ ಥಾರ್‌ ಭಾರೀ ಸದ್ದು ಮಾಡಿತ್ತು. ಮದುಮಗಳು ಮದುವೆ ಮುಗಿಸಿ ನೇರವಾಗಿ ತನ್ನ ಅತ್ತೆ ಮೆನೆಗ ಬರುವಾಗ ಮಹೀಂದ್ರಾ ಥಾರ್‌ ಓಡಿಸಿಕೊಂಡು ಬಂದಿದ್ದಳು. ಇದರ ವಿಡೊಯೋ ಮತ್ತು ಪೋಟೋಗಳು ಆ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದವು. ಇಂದು ಈ ಮದುವೆಯಲ್ಲೂ ಮಹೀಂದ್ರಾ ಥಾರ್‌ ಸದ್ದು ಮಾಡಿದ್ದು, ಥಾರ್‌ ಪ್ರೀಯರು ಸಂತಸಗೊಂಡಿದ್ದಾರೆ.

ಮಹೀಂದ್ರಾ ಥಾರ್‌ (Mahindra Thar) ಬಗ್ಗೆ ನೊಡುವುದಾದರೆ, 3-ಡೋರ್ ಮಹೀಂದ್ರಾ ಥಾರ್ ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು 3 ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.5 - ಲೀಟರ್ ಡೀಸೆಲ್, 2.2 - ಲೀಟರ್ ಡೀಸೆಲ್ ಹಾಗೂ 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಜೊತೆಗೆ 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

Bride Arrives To Shimla Spiti Valley Wedding In Mahindra Thar

2024ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಮಹೀಂದ್ರಾ ಥಾರ್ 5-ಡೋರ್, ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ 3-ಡೋರ್ ಥಾರ್ ಎಸ್‌ಯುವಿಯಂತೆ 2.0 ಲೀಟರ್ ಪೆಟ್ರೋಲ್, 2.2 - ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ನೀರಿಕ್ಷೆಯಿದೆ. ಜೊತೆಗೆ ಪರಿಷ್ಕೃತ ಬಂಪರ್ ಹಾಗೂ ಹೊಸ ಬಣ್ಣದ ಆಯ್ಕೆಯನ್ನು ಸಿಗಬಹುದು ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 29, 2024, 11:34 [IST]
English summary
Bride arrives to shimla spiti valley wedding in mahindra thar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+