ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ; ಎಕ್ಸ್ ಕ್ಲೂಸಿವ್ ಚಿತ್ರಗಳು
ಹೃದಯ ವಿದ್ರಾವಕ ಘಟನೆಯೊಂದರಲ್ಲಿ ಮುಂಬೈನಿಂದ ಸರಿ ಸುಮಾರು 170 ಕೀ.ಮೀ. ದೂರದ ಮಹಾಡ್ ಎಂಬಲ್ಲಿ ಗೋವಾ-ಮುಂಬೈ ನಡುವಣ ಹಾದು ಹೋಗುವ ಸಾವಿತ್ರಿ ನದಿಗೆ ನಿರ್ಮಿಸಲಾಗಿರುವ ಬ್ರಿಟಿಷ್ ಕಾಲದ ಸೇತುವೆ ಮಂಗಳವಾರ ರಾತ್ರಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಎರಡು ಬಸ್ಸು ಸೇರಿದಂತೆ 20 ವಾಹನಗಳು ನಾಪತ್ತೆಯಾಗಿವೆ.
ದುರಂತ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಪ್) 100ರಷ್ಟು ಯೋಧರು ಧಾವಿಸಿ ಬಂದಿದ್ದು, ನಾಪತ್ತೆಯಾದವರಿಗಾಗಿ ನಿರಂತರ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಕರಾವಳಿ ರಕ್ಷಣಾ ಪಡೆಯ 25ರಷ್ಟು ಸಿಬ್ಬಂದಿಗಳು ಸಾಥ್ ನೀಡುತ್ತಿದ್ದಾರೆ. ಇದುವರಗೆ ಮೂರು ಶವಗಳನ್ನು ಹೊರತೆಗೆಯಲಾಗಿದ್ದು, 40ರಷ್ಟು ಮಂದಿ ನಾಪತ್ತೆಯಾಗಿರುವುದರ ಬಗ್ಗೆ ಶಂಕೆ ಮೂಡಿ ಬಂದಿದೆ.

ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿರುವ ಅಂದಾಜು 100 ವರ್ಷದಷ್ಟು ಹಳೆಯದಾದ ಸೇತುವೆ ಕಾರ್ಯ ಕ್ಷಮತೆಯ ಬಗ್ಗೆ ಆತಂಕವಿದ್ದರೂ ಮೂರು ತಿಂಗಳುಗಳ ಹಿಂದೆಯಷ್ಟೇ ಸೇತುವೆಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರುವುದು ಅಧಿಕೃತರ ಲೋಪಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಲ್ಲಿ ಹಾದು ಹೋಗುವ ಸಾವಿತ್ರಿ ನದಿಯು ಭಾರಿ ಮಳೆ ಸುರಿಯುತ್ತಿದ್ದರಿಂದ ಪ್ರವಾಹದ ಪರಿಸ್ಥಿತಿಯುಂಟಾಗಿತ್ತು. ಇದರಿಂದಾಗಿ ನೀರಿನ ಸೆಳೆತವು ಜಾಸ್ತಿಯಾಗಿದೆ.

ಶೋಧ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಹಾಗೂ ಬೋಟ್ ಗಳ ಸಹಾಯವನ್ನು ಪಡೆಯಲಾಗಿದೆ. ಆದರೆ ಕೆಟ್ಟ ಹವಾಮಾನ ಪರಿಸ್ಥಿತಿಯು ಕಾರ್ಯಾಚರಣೆಗೆ ಹಿನ್ನಡೆಯನ್ನುಂಟು ಮಾಡುತ್ತಿದೆ.

ಕೊಚ್ಚಿ ಹೋಗಿರುವ ಸೇತುವೆಯ ಸಮೀಪದಲ್ಲೇ ಮಗದೊಂದು ಸೇತುವೆ ಹಾದು ಹೋಗುತ್ತಿದೆ. ಇದನ್ನು 2001ನೇ ಇಸವಿಯಲ್ಲಿ ತೆರೆಯಲಾಗಿತ್ತು. ಆದರೆ ವಾಹನ ಸಂಚಾರಕ್ಕಾಗಿ ಎರಡು ಸೇತುವೆಗಳನ್ನು ಬಳಕೆ ಮಾಡಲಾಗುತ್ತಿತ್ತು.

ಪ್ರವಾಹದಲ್ಲಿ ಮುಳುಗಿ ಹೋಗಿರುವ ಬಸ್ಸನ್ನು ಪತ್ತೆ ಹಚ್ಚುವ ಸಲುವಾಗಿ ಕ್ರೇನ್ ಸಹಾಯದಿಂದ 300 ಕೆ.ಜಿ ಭಾರದ ಅಯಸ್ಕಾಂತವನ್ನು ನದಿಗಿಳಿಸಲಾಗಿದೆ.

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು

ಎಕ್ಸ್ ಕ್ಲೂಸಿವ್ ಚಿತ್ರಗಳು


Click it and Unblock the Notifications








