ವಿಮಾನ ಅಗ್ನಿ ಅನಾಹುತ; 172 ಯಾತ್ರಿಕರು ಪವಾಡ ಸದೃಶ ಪಾರು!

By Nagaraja

ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ 172 ಪ್ರಯಾಣಿಕರನ್ನು ಹೊತ್ತುಕೊಂಡು ಅಮೆರಿಕದ ಲಾಸ್ ವೇಗಾಸ್ ನಿಂದ ಬ್ರಿಟನ್‌ನ ಲಂಡನ್ ‌ನತ್ತ ಹಾರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದ ಬ್ರಿಟಿಷ್ ಏರ್ ವೇಸ್ ನ ವಿಮಾನವೊಂದರಲ್ಲಿ ಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಂಡಿದ್ದರೂ ಸಹ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಸಂಭವನೀಯ ಭಾರಿ ದುರಂತವೊಂದು ತಪ್ಪಿದೆ.

ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖಾ ವರದಿಗಳು ತಿಳಿಸುತ್ತಿದ್ದು, ತಾವೆಲ್ಲ ಪವಾಡ ಸದೃಶ ಅಪಾಯದಿಂದ ಪಾರಾಗಿದ್ದೇವೆ ಎಂದು ಪ್ರಯಾಣಿಕರು ತಮಗೆದುರಾದ ಅಪಾಯಕಾರಿ ಸನ್ನಿವೇಶದ ಬಗ್ಗೆ ವಿವರಿಸುತ್ತಾರೆ. [ಚಿತ್ರಪುಟದ ಕೊನೆಯಲ್ಲಿ ವಿಡಿಯೋ ಕೊಡಲಾಗಿದೆ.]

ವಿಮಾನ ಅಗ್ನಿ ಅನಾಹುತ; 172 ಯಾತ್ರಿಕರು ಪವಾಡ ಸದೃಶ ಪಾರು!

ಲಾಸ್ ವೇಗಾಸ್‌ನ ಮೆಕ್‌ಕ್ಯಾರನ್ (McCarran) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ 257 ಆಸನ ಸಾಮರ್ಥ್ಯದ ಬೋಯಿಂಗ್ 777 ವಿಮಾನ ಇನ್ನೇನು ಕೆಲವೇ ನಿಮಿಷಗಳಲ್ಲಿ ಟೇಕ್ ಆಫ್ ಆಗಬೇಕಿತ್ತು.

ವಿಮಾನ ಅಗ್ನಿ ಅನಾಹುತ; 172 ಯಾತ್ರಿಕರು ಪವಾಡ ಸದೃಶ ಪಾರು!

ಇದರಂತೆ ಎಲ್ಲ 159 ಪ್ರಯಾಣಿಕರು ಹಾಗೂ 13 ಮಂದಿ ಸಿಬ್ಬಂದಿ ವರ್ಗದವರು ವಿಮಾನದೊಳಗೆ ಪ್ರವೇಶಿಸಿದ್ದರು ಎಂದು ವಿಮಾನ ಅಧಿಕಾರಿಗಳು ತಿಳಿಸುತ್ತಾರೆ.

ವಿಮಾನ ಅಗ್ನಿ ಅನಾಹುತ; 172 ಯಾತ್ರಿಕರು ಪವಾಡ ಸದೃಶ ಪಾರು!

ಪ್ರಸ್ತುತ ಪ್ರಯಾಣಿಕ ವಿಮಾನ ಲಾಸ್ ವೇಗಾಸ್ ನಿಂದ ಲಂಡನ್‌ನ ಗಾಟ್ವಿಕ್ ವಿಮಾನ ನಿಲ್ದಾಣಕ್ಕೆ ಪಯಣಿಸಬೇಕಿತ್ತು. ಆದರೆ ಸಡನ್ ಕಾಣಿಸಿಕೊಂಡ ಬೆಂಕಿಯು ಪ್ರಯಾಣಿಕರನ್ನು ಗಲಿಬಿಲಿಗೊಳಿಸಿತ್ತು.

ವಿಮಾನ ಅಗ್ನಿ ಅನಾಹುತ; 172 ಯಾತ್ರಿಕರು ಪವಾಡ ಸದೃಶ ಪಾರು!

ಬಳಿಕ ಕೈಗೊಂಡ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದೆ. ಆದರೂ 14 ಪ್ರಯಾಣಿಕರಿಗೆ ಸಣ್ಣ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿವೆ.

ವಿಮಾನ ಅಗ್ನಿ ಅನಾಹುತ; 172 ಯಾತ್ರಿಕರು ಪವಾಡ ಸದೃಶ ಪಾರು!

ಪ್ರಸ್ತುತ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ತಾಂತ್ರಿಕ ವೈಫಲ್ಯ ಸಂಭವಿಸಿದೆಯೇ ಎಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆಹಾಕುತ್ತಿದೆ.

ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ವಿಮಾನ ದುರಂತ - ವಿಡಿಯೋ ವೀಕ್ಷಿಸಿ

More from DriveSpark

Article Published On: Wednesday, September 9, 2015, 14:09 [IST]
English summary
British Airways plane catches fire at Las Vegas airport
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+