Budget 2024: ಇನ್ನೂ ರೈಲುಗಳಲ್ಲಿ ಪ್ರಯಾಣ ಬಲು ಆರಾಮ.. 40000 ರೈಲು ಕೋಚ್‌ಗಳು ವಂದೇ ಭಾರತ್‍ನಂತೆ ನವೀಕರಣ

ಸಾರಿಗೆ ಸಂಪರ್ಕ ಹಾಗೂ ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಹೇಳಿದರು. ಗುರುವಾರ 2024 ರ ಮಧ್ಯಂತರ ಬಜೆಟ್ (Interim Budget) ಅನ್ನು ಮಂಡಿಸಿದರು.

ಪ್ರಯಾಣಿಕರಿಗೆ ರೈಲುಗಳಲ್ಲಿ ಉತ್ತಮ ಗುಣಮಟ್ಟದ ಸೌಕರ್ಯ ನೀಡಲು 40,000 ಸಾಮಾನ್ಯ ರೈಲು ಕೋಚ್‌ಗಳನ್ನು ವಂದೇ ಭಾರತ್‍ (Vande Bharat) ರೀತಿಯಲ್ಲಿ ನವೀಕರಣಗೊಳಿಸಲಾಗುವುದು ಎಂದು ಘೋಷಣೆ ಮಾಡಿದರು. ರೈಲ್ವೆ ಸಂಪರ್ಕ ಜಾಲವನ್ನು ಬಲಪಡಿಸಲು ಖನಿಜ ಶಕ್ತಿ, ಸಿಮೆಂಟ್ ಕಾರಿಡಾರ್ (Energy Mineral, Cement Corridor), ಹೆಚ್ಚಿನ ಸಂಚಾರ ಸಾಂದ್ರತೆ ಕಾರಿಡಾರ್ (High Traffic Density Corridors), ಬಂದರು ಸಂಪರ್ಕ ಕಾರಿಡಾರ್ (Port Connectivity Corridors) ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

Budget 2024: 40,000 train Coaches Upgraded Like Vande Bharat, 3 New Railway Corridor Announced

ಈ ಕಾರಿಡಾರ್ ಮಾದರಿಗಳನ್ನು ಜಾರಿಗೊಳಿಸುವುದರಿಂದ ಸಾರಿಗೆ ಸಂಪರ್ಕ ಸುಧಾರಿಸುತ್ತದೆ. ಸರಕು ಸಾಗಾಟದಲ್ಲಿ ಹೆಚ್ಚಿನ ಸುಧಾರಣೆ ತರಲು ಸಾಧ್ಯವಾಗುತ್ತದೆ. ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯಲ್ಲಿ ಬದಲಾವಣೆ ತರಬಹುದು. ಪರಿಣಾಮ ಪ್ರಯಾಣಿಕರು ಹೆಚ್ಚಿನ ಸುರಕ್ಷತೆಯಿಂದ ವೇಗವಾಗಿ ಗಮ್ಯ ಸ್ಥಾನಕ್ಕೆ ತೆರಳಬಹುದು. ಇದು ದೇಶ ಜಿಡಿಪಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ವಿಮಾನಯಾನ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಕಳೆದ 10 ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ. 149ಕ್ಕೆ ಏರಿಕೆಯಾಗಿದೆ ಅವರು ಮಾಹಿತಿ ನೀಡಿದರು. ಉಡಾನ್ (UDAN) ಯೋಜನೆಯಡಿ ದೇಶದ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೂ ವಿಮಾನ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.

Budget 2024: 40,000 train Coaches Upgraded Like Vande Bharat, 3 New Railway Corridor Announced

ಭಾರತೀಯ ವಿಮಾನಯಾನ ಸಂಸ್ಥೆಗಳು 1,000ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸಲು ಈಗಾಗಲೇ ಆರ್ಡರ್ ಮಾಡಿವೆ ಎಂದು ಅವರು ಉಲ್ಲೇಖಿಸಿದರು. ಪ್ರಸ್ತುತವಿರುವ ವಿಮಾನ ನಿಲ್ದಾಣಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಚಿವರು ಬಜೆಟ್ ಭಾಷಣದಲ್ಲಿ ಹೇಳಿದರು.

ಭಾರತದಲ್ಲಿ ಕ್ಷಿಪ್ರವಾಗಿ ನಗರೀಕರಣ ನಡೆಯುತ್ತಿದ್ದು, ಅದಕ್ಕೆ ಸಾರ್ವಜನಿಕ ಸಾರಿಗೆಯ ಅಗತ್ಯವಿದೆ. ಮೆಟ್ರೋ ರೈಲು ಮತ್ತು ನಮೋ ಭಾರತ್ ರೈಲುಗಳನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೂ ಹೆಚ್ಚಿನ ಒತ್ತು ಕೊಡಲಾಗಿದ್ದು, ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರೂ.75,000 ಕೋಟಿ ಹಣವನ್ನು ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುವ ಸಾರಿಗೆ ಸಂಪರ್ಕಕ್ಕೆ ಭಾರೀ ಅನುದಾನವನ್ನು ಮೀಸಲಿಟ್ಟಿದೆ. ಅದರಲ್ಲೂ ಭಾರತೀಯ ರೈಲ್ವೆಗೆ ಬರೋಬ್ಬರಿ ರೂ.2.55 ಲಕ್ಷ ಕೋಟಿ ದೊರೆತಿದೆ ಎಂದು ವರದಿಯಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ 40,000 ಸಾಮಾನ್ಯ ರೈಲು ಕೋಚ್‌ಗಳು ವಂದೇ ಭಾರತ್‍ನಂತೆ ಮೇಲ್ದರ್ಜೆಗೆ ಏರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, February 1, 2024, 13:37 [IST]
English summary
Budget 2024 40000 train coaches upgraded like vande bharat 3 new railway corridor announced
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+