ಕಾರಿನೊಳಗೆ ಕೂತಿದ್ದ ಸಿಇಒ ಮೇಲೆ ಸತತ ಗುಂಡಿನ ದಾಳಿ

By Nagaraja

ಜರ್ಮನಿಯ ಮರ್ಸಿಡಿಸ್ ಬೆಂಝ್‌ನಂತಹ ಕೆಲವೇ ಕೆಲವು ಬೆರಳಣಿಕೆಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಗಳು ಮಾತ್ರ ಶಸ್ತ್ರಸಜ್ಜಿತ ಬುಲೆಟ್ ಪ್ರೂಫ್ ವಾಹನಗಳನ್ನು ನಿರ್ಮಾಣ ಮಾಡುತ್ತಿದ್ದು, ಇದನ್ನು ಜಗತ್ತಿನ ಗಣ್ಯ ವ್ಯಕ್ತಿಗಳು ಬಳಕೆ ಮಾಡುತ್ತಾರೆ.

ಇಂತಹ ಕಾರುಗಳಲ್ಲಿ ಬುಲೆಟ್ ಪ್ರೂಫ್ ಗಾಜನ್ನು ಜೋಡಣೆ ಮಾಡುವ ಕಾರ್ಯವನ್ನು ಬಾಹ್ಯ ಸಂಸ್ಥೆಗಳು ಮಾಡುತ್ತವೆ ಎಂಬುದು ಅಷ್ಟೇ ಪ್ರಾಮುಖ್ಯವೆನಿಸುತ್ತದೆ.

ಇಲ್ಲಿ ಅಮೆರಿಕ ಮೂಲದ ಆರ್ಮರ್ ಸಂಸ್ಥೆಯೊಂದು ತಮ್ಮ ಬುಲೆಟ್ ಪ್ರೂಫ್ ಸಾಮರ್ಥ್ಯವನ್ನು ಸಾಬೀತುಪಡಿಸುವ ಸಲುವಾಗಿ ಸ್ವತ: ಸಂಸ್ಥೆಯ ಸಿಇಒ ಅವರನ್ನೇ ಕಾರಿನೊಳಗೆ ಕೂರಿಸಿಕೊಂಡು ಹೊರಗಡೆಯಿಂದ ಶೂಟರ್‌ನಿಂದ ಸತತ ಗುಂಡಿನ ದಾಳಿಗೈದಿದ್ದಾರೆ.

ಟೆಕ್ಸಾಸ್ ಆರ್ಮರಿಂಗ್ ಕಾರ್ಪೋರೇಷ್ ಸಿಇಒ ಟ್ರೆಂಟ್ ಕಿಮ್‌ಬಾಲ್ ತೋರಿರುವ ಧೈರ್ಯವನ್ನು (ವೀಡಿಯೋ ನೋಡಲು ಮರೆಯದಿರಿ) ನಾವಿಲ್ಲಿ ಮೆಚ್ಚಲೇಬೇಕಾಗಿದ್ದು, ಅವರು ತೋರಿರುವ ಆತ್ಮಸ್ಥೈರ್ಯವನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗುತ್ತದೆ.

Bullet proof

ಬುಲೆಟ್ ಪ್ರೂಫ್ ಪರೀಕ್ಷೆ...
ಮರ್ಸಿಡಿಸ್ ಬೆಂಝ್ ಎಸ್‌ಯುವಿ ಕಾರಿನೊಳಗೆ ಕೂತಿದ್ದ ಸಿಇಒ ಮೇಲೆ ಎಕೆ 47 ಗನ್‌ನಿಂದ ಯದ್ವಾ ತದ್ವಾ ಗುಂಡಿನ ಮಳೆ ಹಾರಿಸಲಾಗಿತ್ತು. ಆದರೆ ಶೂಟರ್‌ಗೆ ಬೆಂಝ್ ಕಾರಿನಲ್ಲಿ ಆಳವಡಿಸಲಾಗಿರುವ ಬುಲೆಟ್ ಪ್ರೂಫ್ ಗಾಜನ್ನು ಕಿಂಚಿತ್ತಾದರೂ ಒಡೆಯಲು ಸಾಧ್ಯವಾಗಲಿಲ್ಲ.

ಈ ರೋಚಕ ವೀಡಿಯೋ ಈಗ ವೈರಲ್ ಆಗಿ ಪಸರಿಸುತ್ತಿದ್ದು, ವಾಹನ ಪ್ರೇಮಿಗಳಲ್ಲಿ ಒಂದು ಕ್ಷಣಕ್ಕೆ ಮೈ ಜುಮ್ ಎನಿಸುವಂತೆ ಮಾಡುತ್ತದೆ. ಅಲ್ಲದೆ ಪ್ರಾಣ ಭಯವಿರುವ ಯಾರೇ ಆಗಲಿ ತಮ್ಮ ಕೆಲಸ ಹೋದರೂ ಪರವಾಗಿಲ್ಲ ಇಂತಹ ಸಾಹಸಕ್ಕೆ ಕೈಹಾಕಲ್ಲ ಎಂಬ ಅಭಿಮತ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಕಾರಿನೊಳಗೆ ಕೂತಿದ್ದ ಸಿಇಒ ಮೇಲೆ 12 ಸುತ್ತಿನ ಗುಂಡಿನ ದಾಳಿಯನ್ನು ಹಾರಿಸಲಾಗಿತ್ತು ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಇಲ್ಲಿದೆ ನೋಡಿ ರೋಚಕ ವೀಡಿಯೋ...

<iframe width="600" height="450" src="//www.youtube.com/embed/J8i5d5toEDk?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Saturday, November 15, 2014, 8:02 [IST]
English summary
At Texas Armoring Corporation (TAC) we take product testing EXTREMELY SERIOUSLY. Assuring our clients' safety is paramount to success in our industry, and batch-testing ballistic materials is critical in our QA process. Watch our latest video where TAC President and CEO Trent Kimball takes product testing to a whole new level.&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+