Tata Nexon: ಟಾಟಾ ನೆಕ್ಸಾನ್ ಗುಣಮಟ್ಟಕ್ಕೆ ಸರಿ ಸಾಟಿಯಿಲ್ಲ, ಬಸ್ ಗುದ್ದಿದರೂ ಅಲ್ಲಾಡಲಿಲ್ಲ!
ಟಾಟಾ (Tata) ಕಾರುಗಳು ನಿರ್ಮಾಣ ಗುಣಮಟ್ಟದಿಂದ ಹೆಸರುವಾಸಿಯಾಗಿದ್ದು, ಸುರಕ್ಷತೆಯಲ್ಲಿ ಅವುಗಳಿಗೆ ಸರಿ ಸಾಟಿಯಿಲ್ಲ. ಈಗಾಗಲೇ, ಹಲವು ಬಾರಿ ಅಪಘಾತಕ್ಕೆ ತುತ್ತಾದರೂ ತನ್ನ ನಂಬಿದ ಪ್ರಯಾಣಿಕರ ಪ್ರಾಣ ಉಳಿಸಿರುವ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. ಅದರಲ್ಲೂ ಕಂಪನಿಯ ನೆಕ್ಸಾನ್ (Nexon) ಎಸ್‌ಯುವಿ ಸೇಫ್ಟಿಗಾಗಿ ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.
ಸದ್ಯ, ಟಾಟಾ ನೆಕ್ಸಾನ್ ಕಾರು ಅಪಘಾತಕ್ಕೆ ತುತ್ತಾಗಿರುವ ಎರಡು ಪ್ರತ್ಯೇಕ ಘಟನೆಗಳ ಬಗ್ಗೆ ವಿವರಿಸಿದ್ದೇವೆ. ಮೊದಲಿಗೆ ಗುಜರಾತ್‌ನಲ್ಲಿ ಸಂಭವಿಸಿರುವ ಅಪಘಾತದ ಕುರಿತು ತಿಳಿಯೋಣ. ಯೂಟ್ಯೂಬ್ ವಾಹಿನಿಯೊಂದರಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅಹಮದಾಬಾದ್‌ನಲ್ಲಿ ಘಟನೆ ನಡೆದಿದ್ದು, ಟಾಟಾ ನೆಕ್ಸಾನ್ ಇವಿ ಜಂಕ್ಷನ್ ಯೊಂದರಲ್ಲಿ ಹೋಗುವಾಗ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಇಲ್ಲಿ ಕಾರಿನ ಚಾಲಕನ ತಪ್ಪಿಲ್ಲವೆಂದು ಸ್ಥಳೀಯರು ಹೇಳಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ರಭಸಕ್ಕೆ ನೆಕ್ಸಾನ್ ಇವಿಯ ಬಂಪರ್, ಫೆಂಡರ್ ಮತ್ತು ಡೋರ್‌ಗಳಿಗೆ ಹಾನಿಯಾಗಿದೆ. ಎಡಭಾಗದ ಫ್ರಂಟ್ ವೀಲ್ಸ್ ಕೂಡ ಡ್ಯಾಮೇಜ್ ಆಗಿದ್ದು, ಕಾರಿನ ಒಳಭಾಗದಲ್ಲಿ ಯಾವುದೇ ರೀತಿಯಲ್ಲಿ ಹಾನಿಯಾಗಿದೆಯೇ ಎಂಬುದರ ಬಗ್ಗೆ ತಿಳಿದಿಲ್ಲ. ತಕ್ಷಣಕ್ಕೆ ಏರ್‌ಬ್ಯಾಗ್ ತೆರೆದುಕೊಂಡ ಹಿನ್ನೆಲೆ, ಮುಂದಿನ ಆಸನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುರಕ್ಷಿತರಾಗಿದ್ದಾರೆ. ಅಪಘಾತ ಮಾಡಿದ ಬಸ್ಸಿನ ಬಂಪರ್ ಹಾನಿಯಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮತ್ತೊಂದು ಘಟನೆಯಲ್ಲೂ ಇಂಧನ ಚಾಲಿತ ನೆಕ್ಸಾನ್ ಕಾರು ಅಪಘಾತಕ್ಕೆ ಒಳಾಗಾಗಿದೆ. ಕೇರಳದಲ್ಲಿ ಈ ದುರ್ಘಟನೆ ನಡೆದಿದ್ದು, ನಿಖರವಾದ ಸ್ಥಳದ ಬಗ್ಗೆ ತಿಳಿದುಬಂದಿಲ್ಲ. ಇಲ್ಲಿ ಟಾಟಾ ನೆಕ್ಸಾನ್ ಹಿಂಭಾಗಕ್ಕೆ ಬಸ್ ಬಂದು ಅಪ್ಪಳಿಸಿದೆ. ಖಾಸಗಿ ಬಸ್ ಎಡಭಾಗದ ಫ್ರಂಟ್ ಭಾಗಕ್ಕೆ ಹಾನಿಯಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನೆಕ್ಸಾನ್ ಕಾರಿಗೆ ಅಷ್ಟೊಂದು ಡ್ಯಾಮೇಜ್ ಆಗಿಲ್ಲ.

ಈ ಘಟನೆಯಲ್ಲಿ ನೆಕ್ಸಾನ್ ಚಾಲಕ ಇದ್ದಕ್ಕಿಂದಂತೆ ಬ್ರೇಕ್ ಹಾಕಿದ್ದು, ಅಪಘಾತಕ್ಕೆ ಕಾರಣವಾಯಿತೇ.. ಬಸ್ ಚಾಲಕನ ವೇಗದ ಚಾಲನೆ ಅಪಘಾತಕ್ಕೆ ಕಾರಣವೇ? ಎಂಬುದು ತಿಳಿದುಬಂದಿಲ್ಲ. ಭಾರತದಲ್ಲಿ ಖರೀದಿಗೆ ಸಿಗುವ ನವೀಕರಿಸಿದ ಟಾಟಾ ನೆಕ್ಸಾನ್ ಇವಿ ರೂ.15.52 ಲಕ್ಷ (ದೆಹಲಿ) ಆನ್-ರೋಡ್ ಬೆಲೆಯನ್ನು ಹೊಂದಿದ್ದು, 30kWh ಹಾಗೂ 40.5kWh ಬ್ಯಾಟರಿ ಪ್ಯಾಕ್ ಪಡೆದಿದ್ದು, 325 km - 465 km ರೇಂಜ್ ನೀಡುತ್ತದೆ.
ಸುರಕ್ಷತೆಯ ದೃಷ್ಟಿಯಿಂದ ಈ ಕಾರು ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಜೊತೆಗೆ . 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 - ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇಂಧನ ಚಾಲಿತ ಹೊಸ ಟಾಟಾ ನೆಕ್ಸಾನ್ ಎಸ್‍ಯುವಿ ಬಗ್ಗೆ ಮಾತನಾಡುವುದಾದರೆ, ಇದು ರೂ.8.09 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್, 1.5-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಕನೆಕ್ಟ್ ಕಾರ್ ಟೆಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆ ಸಲುವಾಗಿ 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ISOFIX ಚೈಲ್ಡ್‌ಸೀಟ್ ಆಂಕರ್ರಿಂಗ್ ಪಾಯಿಂಟ್, ಪಾರ್ಕಿಂಗ್ ಸೆನ್ಸರ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ. ಇನ್ನು, ಸೇಫ್ಟಿ ವಿಚಾರದಲ್ಲಿ ಟಾಟಾ ನೆಕ್ಸಾನ್ ಕಾರುಗಳಿಗೆ ಸರಿ ಸಾಟಿಯೇ ಇಲ್ಲದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications