ರಣಭೀಕರ ವೇಗದಲ್ಲಿ ಬಸ್‌ನಿಂದ ರೆಡ್ ಲೈಟ್ ಜಂಪ್: ಕೆಲಕ್ಷಣದಲ್ಲೇ.. ಮುಂದೇನಾಯ್ತು? ವಿಡಿಯೋ ನೋಡಿ
ದೇಶದಲ್ಲಿ ಪ್ರತಿದಿನ ನಾನಾ ಕಾರಣಗಳಿಗೆ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ, ಆ ಘಟನೆಯಲ್ಲಿ ತಮ್ಮ ಪಾತ್ರ ಇಲ್ಲದಿದ್ದರೂ ಕೆಲವರೂ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಮತ್ತೆ ಹಲವು ಮಂದಿ ಬೇಕಂತಲೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಪಘಾತಕ್ಕೆ ಕಾರಣರಾಗುತ್ತಾರೆ. ಅಂತಹದ್ದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಸ್ತೆಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಕಾರಿಗೆ, ಖಾಸಗಿ ಬಸ್ ಡಿಕ್ಕಿ ಹೊಡೆದು ಭೀಕರ ಅಪಘಾತವಾಗಿರುವ ಘಟನೆ ಕೋಲ್ಕತ್ತಾದಲ್ಲಿ ಸೋಮವಾರ (ಅ.2) ವರದಿಯಾಗಿದೆ. ಲೇಕ್ ಸೆಕ್ಟರ್ 5ರ ಕಾಲೇಜು ಜಂಕ್ಷನ್‌ನಲ್ಲಿ ಈ ಅಪಘಾತವಾಗಿದ್ದು, ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವೇಗವಾಗಿ ಬಂದ ಖಾಸಗಿ ಬಸ್ ರೆಡ್ ಲೈಟ್ ಜಂಪ್ ಮಾಡಿ, ಕಾರಿಗೆ ಡಿಕ್ಕಿ ಹೊಡೆದ ನಂತರ ಪಲ್ಟಿಯಾಗಿದೆ. ಸದ್ಯ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಇಬ್ಬರು ದ್ವಿಚಕ್ರವಾಹನ ಸವಾರರು, ಬಸ್ ಹಾಗೂ ಕಾರು ತಮ್ಮೆಡೆಗೆ ಬರುತ್ತಿರವುದನ್ನು ಕಂಡು ಓಡಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಯಾಣಿಕರನ್ನು ರಕ್ಷಿಸಲು ಬಸ್ ಹಾಗೂ ಕಾರಿನೆಡೆಗೆ ಸ್ಥಳೀಯರು ಓಡಿಬರುತ್ತಿರುವ ದೃಶ್ಯಗಳನ್ನು ಸಿಸಿಟಿವಿ ವಿಡಿಯೋದಲ್ಲಿ ಕಾಣಬಹುದು. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದ್ದರಿಂದ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಕಾರಿನಲ್ಲಿ ಏರ್‌ಬ್ಯಾಗ್ ಇದ್ದ ಹಿನ್ನೆಲೆ, ಅದರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುರಕ್ಷಿತರಾಗಿದ್ದಾರೆ ಎಂದು ಹೇಳಿವೆ.

ಬಸ್ ನಲ್ಲಿ 30 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದ್ದು, ಈ ಅಪಘಾತದಲ್ಲಿ ಚಾಲಕ ಸೇರಿ 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಅಲ್ಲಿಯೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಕ್ರೇನ್‌ಗಳ ಸಹಾಯದಿಂದ ಪಲ್ಟಿಯಾಗಿದ್ದ ಬಸ್ ಅನ್ನು ಬೇರೆಡೆಗೆ ಸ್ಥಳಾಂತರಿಸಿಸುದ್ದು, ಘಟನಾ ಸ್ಥಳದಲ್ಲಿ 40 ನಿಮಿಷಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಇನ್ನು, ಈ ಘಟನೆಯನ್ನು ಗಮನಿಸಿದಾಗ ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣವಾಗಿದೆ
ಎಂಬುದು ಗೊತ್ತಾಗುತ್ತದೆ. ಆತ, ಸಂಚಾರಿ ನಿಯಮ ಪಾಲಿಸಲು ರೆಡ್ ಸಿಗ್ನಲ್ ಬಿದ್ದಿದ್ದಾಗ ನಿಂತಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಅದೃಷ್ಟವಶಾತ್ ಗಾಯಗಳಾಗಿರುವುದು ಬಿಟ್ಟರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಾವು ತಪ್ಪು ಮಾಡದಿದ್ದರೂ ಬಸ್ ನಲ್ಲಿದ್ದ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು, ಕಾರಿನಲ್ಲಿದ್ದವರೂ ಗಾಯಗೊಳ್ಳಬೇಕಾಯಿತು. ಪೋಲೀಸರ ತನಿಖೆಯಿಂದ ಸತ್ಯಸತ್ಯತೆ ಹೊರಬರಬೇಕಾಗಿದೆ.
ರಸ್ತೆ ಅಪಘಾತ ತಪ್ಪಿಸುವುದು ಹೇಗೆ? ಯಾವುದೇ ಸಂದರ್ಭದಲ್ಲೂ ಸಂಚಾರಿ ನಿಯಮಗಳನ್ನು ಪಾಲಿಸುವುದನ್ನು ಮರೆಯದಿರಿ. ನಿಗದಿತ ವೇಗಮಿತಿಯಲ್ಲಿ ನಿಮ್ಮ ವಾಹನಗಳನ್ನು ಚಲಾಯಿಸಿ, ಕಾರು ಓಡಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ, ದ್ವಿಚಕ್ರ ವಾಹನ ಓಡಿಸುವಾಗ ತಲೆಗೆ ಹೆಲ್ಮೆಟ್ ತಪ್ಪದೆ ಹಾಕಿರಿ. ಜೊತೆಗೆ ಮಧ್ಯಪಾನ ಮಾಡಿ, ಅಥವಾ ಫೋನ್ ನಲ್ಲಿ ಮಾತನಾಡಿಕೊಂಡು ವಾಹನಗಳನ್ನು ಓಡಿಸಬೇಡಿ. ಈ ಮೂಲಕ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications