ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಕೆಲವು ದಿನಗಳ ಹಿಂದಷ್ಟೇ ಕೇರಳದ ಬಸ್ ಚಾಲಕನೊಬ್ಬ ಕಾಲೇಜು ವಿದ್ಯಾರ್ಥಿನಿಯರಿಗೆ ತಾನು ಚಲಾಯಿಸುತ್ತಿದ್ದ ಬಸ್ಸಿನ ಗೇರ್ ಬದಲಿಸಲು ಅವಕಾಶ ಮಾಡಿಕೊಟ್ಟು ಅಮಾನತುಗೊಂಡ ಘಟನೆ ವರದಿಯಾಗಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ.

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಕೇರಳದ ಬಸ್ಸ್ ಡ್ರೈವರ್ ಒಬ್ಬ ಬಾಲಕನಿಗೆ ತಾನು ಚಲಾಯಿಸುತ್ತಿದ್ದ ಬಸ್ಸಿನ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ಕೊಟ್ಟು ಆರು ತಿಂಗಳು ಅಮಾನತುಗೊಂಡಿದ್ದಾನೆ. ಕೆ ವಿ ಸುಧೀಶ್ ಎಂಬಾತನೇ ಅಮಾನತುಗೊಂಡ ಬಸ್ ಚಾಲಕ.

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಬಸ್ ಚಾಲಕನು ತನ್ನ ಈ ಕಾರ್ಯವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಹಾಗೂ ಬಾಲಕನನ್ನು ಖುಷಿಪಡಿಸಲು ಮಾಡಿದ್ದಾನೆ. ಈ ಘಟನೆಯನ್ನು ಸೆರೆಹಿಡಿದಿದ್ದವರು ವೀಡಿಯೊವನ್ನು ಇಂಟರ್‍‍ನೆಟ್‍‍ನಲ್ಲಿ ಅಪ್‍‍ಲೋಡ್ ಮಾಡಿದ್ದರು.

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಈ ವೀಡಿಯೊ ವೈರಲ್ ಆದ ನಂತರ ಘಟನೆಯು ಬೆಳಕಿಗೆ ಬಂದಿದೆ. ಈ ವೀಡಿಯೊದಲ್ಲಿ ಬಾಲಕನು ಬಸ್ಸಿನ ಟ್ರಾನ್ಸ್ ಮಿಷನ್ ಬಾಕ್ಸ್ ಮೇಲೆ ಕುಳಿತು ಚಾಲಕನು ಹೇಳಿದಾಗ ಗೇರ್‍‍ಗಳನ್ನು ಬದಲಿಸಿದ್ದಾನೆ. ಬಾಲಕನು ಈ ರೀತಿ ಬಸ್ಸಿನ ಗೇರ್ ಬದಲಿಸುತ್ತಿದ್ದಾಗ ಬಸ್ಸು ಚಾಲನೆಯಲ್ಲಿತ್ತು. ಬಸ್ಸಿನಲ್ಲಿ ಇತರ ಪ್ರಯಾಣಿಕರಿದ್ದರು.

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಕೆ ವಿ ಸುಧೀಶ್ ಟೂರಿಸ್ಟ್ ಬಸ್ ಚಾಲಕನಾಗಿದ್ದು, ಬಾಲಕನಿಗೆ ಪತನಂತಿಟ್ಟಾ ಜಿಲ್ಲೆಯ ತಿರುವಲ್ಲಾ - ಮಲ್ಲಪಳ್ಳಿ ರಸ್ತೆಯಲ್ಲಿರುವ ಪಮೇಲಾ ಎಂಬ ಪ್ರದೇಶದಲ್ಲಿ ಬಸ್ಸಿನ ಗೇರ್ ಬದಲಿಸಲು ಅವಕಾಶ ಮಾಡಿಕೊಟ್ಟಿದ್ದಾನೆ.

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಈ ವೀಡಿಯೊ ಸ್ಥಳೀಯ ಆರ್‍‍ಟಿಒ ಜಿಜಿ ಜಾರ್ಜ್‍‍ರವರ ಗಮನಕ್ಕೆ ಬಂದು ಘಟನೆಯ ಬಗ್ಗೆ ವಿವರಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಈ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಚಾಲಕನು ಬಸ್ ಅನ್ನು ಖಾಲಿ ಮೈದಾನದಲ್ಲಿ ಚಲಾಯಿಸಲಾಗಿದೆ, ಸಾರ್ವಜನಿಕ ರಸ್ತೆಯಲ್ಲಿ ಅಲ್ಲ ಎಂದು ಹೇಳಿದ್ದಾನೆ.

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಆದರೆ ಆರ್‍‍ಟಿ‍ಒ ಅಧಿಕಾರಿಗಳ ತನಿಖೆಯ ನಂತರ ಬಸ್ ಅನ್ನು ಸಾರ್ವಜನಿಕ ರಸ್ತೆಯಲ್ಲಿ ಚಾಲನೆ ಮಾಡಿರುವುದು ಕಂಡು ಬಂದಿದೆ. ನಂತರ ಬಸ್ ಚಾಲಕನನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಇದರ ಜೊತೆಗೆ ಚಾಲಕನ ಡ್ರೈವಿಂಗ್ ಲೈಸೆನ್ಸ್ ಅನ್ನು ಆರ್‍‍ಟಿ‍ಒ ವಶಕ್ಕೆ ಪಡೆದಿದೆ. ಚಾಲಕನ ಮೇಲೆ ಯಾವುದಾದರೂ ದಂಡವನ್ನು ವಿಧಿಸಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ರೀತಿಯ ಘಟನೆಗಳು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಜೀವವನ್ನು ತೆಗೆಯುವ ಸಾಧ್ಯತೆಗಳಿರುತ್ತವೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಬಾಲಕನು ಅಪ್ರಾಪ್ತ ವಯಸ್ಸಿನವನಾಗಿದ್ದು, ಬಸ್ ಚಾಲನೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಗೇರುಗಳನ್ನು ಸರಿಯಾದ ರೀತಿಯಲ್ಲಿ ಬದಲಿಸುವುದು ಕೂಡ ಸವಾಲಿನ ಕೆಲಸವಾಗಿದೆ. ಬಸ್ಸಿನಂತಹ ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡುವುದು ಚಿಕ್ಕ ವಾಹನಗಳನ್ನು ಚಾಲನೆ ಮಾಡಿದಷ್ಟು ಸುಲಭವಲ್ಲ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಭಾರತದಲ್ಲಿ ಗೇರ್ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ವರ್ಷ ವಯಸ್ಸಾಗಿರಬೇಕು. ಸರಿಯಾಗಿ ಗೇರ್ ಬದಲಿಸದಿದ್ದರೆ ವಾಹನವು ಸಡನ್ ಆಗಿ ನಿಂತು ದುರ್ಘಟನೆ ಸಂಭವಿಸಬಹುದು. ಬಸ್ಸಿನಲ್ಲಿರುವವರಿಗೂ ಸಹ ತೊಂದರೆಯಾಗಬಹುದು.

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಚಿಕ್ಕ ವಯಸ್ಸಿನ ಮಕ್ಕಳು ಯಾವುದೇ ರೀತಿಯ ವಾಹನಗಳನ್ನು ನಿಯಂತ್ರಿಸುವ, ಚಾಲನೆ ಮಾಡುವ ದುಸ್ಸಾಹಸಕ್ಕೆ ಕೈಹಾಕಬಾರದು. ಈ ಹಿಂದೆ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿ ಹಲವು ಅಪಘಾತಗಳು ಸಂಭವಿಸಿವೆ.

ಬಸ್ ಗೇರ್ ಬದಲಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‍‍ಗೆ ಬಿತ್ತು ಶಿಕ್ಷೆ..!

ಈ ನಿಟ್ಟಿನಲ್ಲಿ ವಾಹನ ಚಾಲನೆ ಮಾಡುವ ಅಪ್ರಾಪ್ತ ವಯಸ್ಸಿನ ಮಕ್ಕಳ ತಂದೆ ತಾಯಿ ಹಾಗೂ ಪೋಷಕರ ವಿರುದ್ಧ ಮೋಟಾರು ವಾಹನ ಕಾಯಿದೆಯನ್ವಯ ಜೈಲು ಶಿಕ್ಷೆಯಂತಹ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.

Source: English.manoramaonline

Article Published On: Monday, December 2, 2019, 11:22 [IST]
English summary
Bus driver in kerala suspended 6 months after allowing child to shift gears details - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+