ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಕೇರಳದ ಬಸ್‍‍ವೊಂದು ಶಾಲಾ ಮೈದಾನದಲ್ಲಿ ಸ್ಟಂಟ್ ಮಾಡುತ್ತಿರುವ ವೀಡಿಯೊ ಇಂಟರ್‍‍ನೆಟ್‍‍ನಲ್ಲಿ ವೈರಲ್ ಆಗಿದೆ. ಈ ಟೂರಿಸ್ಟ್ ಬಸ್ ಅನ್ನು ಶಾಲೆಯೊಂದು ಬಾಡಿಗೆಗೆ ಪಡೆದಿತ್ತು. ಈ ಬಸ್ ಶಾಲಾ ಮೈದಾನದಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ.

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಈ ಬಸ್‍‍ನ ನಂತರ ಕೆಲವು ಬೈಕ್ ಹಾಗೂ ಕಾರುಗಳು ಇದೇ ಜಾಗದಲ್ಲಿ ಸ್ಟಂಟ್‍‍ಗಳನ್ನು ಮಾಡಿವೆ. ಕೇರಳ ಪೊಲೀಸರು ಸ್ಟಂಟ್ ಮಾಡಿದ ಬಸ್ ಚಾಲಕ ಹಾಗೂ ಕಾರು ಚಾಲಕನನ್ನು ಬಂಧಿಸಿದ್ದಾರೆ. ಈ ಘಟನೆಯು ಕೇರಳದ ವೆಂದರ್‌ನಲ್ಲಿ ನಡೆದಿದೆ.

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ವಿದ್ಯಾಧಿರಾಜ ಸ್ಕೂಲ್ ಬಾಡಿಗೆಗೆ ಪಡೆದಿದ್ದ ಟೂರಿಸ್ಟ್ ಬಸ್‍‍ನಲ್ಲಿ ಈ ರೀತಿಯ ಸ್ಟಂಟ್‍‍ಗಳನ್ನು ಮಾಡಲಾಗಿದೆ. ವೀಡಿಯೋ ವೈರಲ್ ಆದ ನಂತರ, ಕೇರಳದ ಮೋಟಾರು ವಾಹನ ಇಲಾಖೆ ಬಸ್ ಚಾಲಕನ ಮೇಲೆ ಕ್ರಮ ಕೈಗೊಂಡು ಆತನನ್ನು ಬಂಧಿಸಿದೆ. ಬಂಧಿತ ಚಾಲಕನನ್ನು ರಂಜು ಎಂದು ಗುರುತಿಸಲಾಗಿದೆ.

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಇದೇ ಜಾಗದಲ್ಲಿ ಸೆಡಾನ್ ಕಾರಿನಲ್ಲಿ ಸ್ಟಂಟ್ ಮಾಡುತ್ತಿದ್ದವವನ್ನು ಸಹ ಬಂಧಿಸಲಾಗಿದೆ. ಆತನನ್ನು 22 ವರ್ಷದ ಅಭಿಷೇತ್ ಎಂದು ಗುರುತಿಸಲಾಗಿದೆ. ಜಾಮೀನು ಪಡೆದ ನಂತರ ಇಬ್ಬರೂ ಚಾಲಕರನ್ನು ಬಿಡುಗಡೆಗೊಳಿಸಲಾಗಿದೆ. ಸಾರಿಗೆ ಇಲಾಖೆಯು ಬಸ್ ಅನ್ನು ವಶಪಡಿಸಿಕೊಂಡಿದ್ದು, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದೆ.

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಈ ಬಸ್ ಅನ್ನು ಸ್ಟಡಿ ಟೂರ್‍‍ನಲ್ಲಿದ್ದ ಶಾಲಾ ವಿದ್ಯಾರ್ಥಿಗಳಿಗಾಗಿ ಬಾಡಿಗೆಗೆ ಪಡೆಯಲಾಗಿತ್ತು. ಬಸ್ ಚಾಲಕನು ಸ್ಟಂಟ್ ಮಾಡುವ ವೀಡಿಯೋ ವೈರಲ್ ಆದ ನಂತರ, ಸಾರಿಗೆ ಇಲಾಖೆ ಅಧಿಕಾರಿಗಳ ತಂಡವು ಬಸ್ ಶಾಲೆಗೆ ಹಿಂತಿರುಗುವವರೆಗೆ ಕಾದು, ಹಿಂದಿರುಗಿದ ಕೂಡಲೇ ಬಸ್ ಅನ್ನು ವಶಕ್ಕೆ ಪಡೆದಿದೆ.

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಇದರ ಜೊತೆಗೆ ಸಾರಿಗೆ ಅಧಿಕಾರಿಗಳು ಬಸ್‌ನ ಆರ್‌ಸಿ ಬುಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಚಾಲಕನ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಿದ್ದಾರೆ. ಸಾರಿಗೆ ಇಲಾಖೆಯು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ. ವಶಕ್ಕೆ ಪಡೆದಿರುವ ಬಸ್ ಅನ್ನು ಸದ್ಯಕ್ಕೆ ಪುಥೂರ್ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಗಿದೆ.

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಸಾರಿಗೆ ಇಲಾಖೆ ಅಧಿಕಾರಿಗಳು ಬಸ್‌ನ ಮೆಕ್ಯಾನಿಕ್‌ಗಳ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಈ ತನಿಖೆಯಲ್ಲಿ ಬಸ್‍‍ನಲ್ಲಿ ಅಳವಡಿಸಲಾಗಿದ್ದ ಸ್ಪೀಡ್ ಗವರ್ನರ್‌ಗಳನ್ನು ತೆಗೆದು ಹಾಕಿರುವುದು ಕಂಡು ಬಂದಿದೆ. ಭಾರತದಲ್ಲಿ ಭಾರೀ ವಾಹನಗಳಲ್ಲಿ ಸ್ಪೀಡ್ ಗವರ್ನರ್‌ಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಈ ಗವರ್ನರ್‍‍ಗಳು ಬಸ್ ನಿಗದಿ ಪಡಿಸಿರುವ ವೇಗವನ್ನು ದಾಟದಂತೆ ನೋಡಿಕೊಳ್ಳುತ್ತವೆ. ಬಸ್‌ನಲ್ಲಿ ಹಾರ್ನ್‍‍ಗಳು, ಫ್ಯಾನ್ಸಿ ಲೈಟ್‍‍ಗಳು ಹಾಗೂ ಲೌಡ್‍‍ಸ್ಪೀಕರ್‍‍ಗಳನ್ನು ಅಳವಡಿಸಿರುವುದು ಕಂಡು ಬಂದಿದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಇವುಗಳನ್ನು ಅಳವಡಿಸುವುದು ಕಾನೂನುಬಾಹಿರ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಇವುಗಳನ್ನು ಅಕ್ರಮವಾಗಿ ಅಳವಡಿಸಿದ್ದ ಕಾರಣಕ್ಕೆ ಬಸ್‌ನ ಫಿಟ್‌ನೆಸ್ ಸರ್ಟಿಫಿಕೇಟ್ ಅನ್ನು ರದ್ದುಪಡಿಸಲಾಗಿದೆ. ಈ ವೀಡಿಯೊದಲ್ಲಿ, ಹಲವಾರು ಬೈಕ್‌ಗಳು ಸ್ಟಂಟ್ ಮಾಡುತ್ತಿರುವುದನ್ನು ಸಹ ಕಾಣಬಹುದು. ಸಾರಿಗೆ ಇಲಾಖೆಯು ಈ ವೀಡಿಯೊವನ್ನು ಪರಿಶೀಲಿಸಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಪರಿಶೀಲನೆಯ ನಂತರ ಅಪಾಯಕಾರಿ ಸ್ಟಂಟ್‍‍ನಲ್ಲಿ ತೊಡಗಿದ್ದ ಏಳು ಬೈಕುಗಳನ್ನು ವಶಪಡಿಸಿಕೊಂಡಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ವೀಡಿಯೊದಲ್ಲಿರುವ ಉಳಿದ ಬೈಕ್‍‍ಗಳ ರಿಜಿಸ್ಟ್ರೇಷನ್ ನಂಬರ್ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಪತ್ತೆ ಹಚ್ಚಿದ ನಂತರ ಉಳಿದ ಬೈಕುಗಳನ್ನೂ ಸಹ ವಶ ಪಡಿಸಿಕೊಳ್ಳುವ ಸಾಧ್ಯತೆಗಳಿವೆ.

ಈ ವೀಡಿಯೊದಲ್ಲಿ ಕಾಣುವ ಕಾರಿನ ಸನ್‍‍ರೂಫ್ ಅನ್ನು ಹೊರಗೆ ತೆಗೆದು, ಹುಡುಗಿಯೊಬ್ಬಳು ಬಾವುಟ ಹಾರಿಸಿದ್ದಾಳೆ. ಈ ಕಾರಿನಲ್ಲಿದ್ದವರನ್ನು ಪತ್ತೆ ಹಚ್ಚಿದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಹೇಳಿದೆ.

ಸ್ಕೂಲ್ ಬಸ್‍‍ನಲ್ಲಿ ಸ್ಟಂಟ್ ಮಾಡಿ ಕೆಲಸ ಕಳೆದುಕೊಂಡ ಡ್ರೈವರ್

ಸಾರಿಗೆ ಇಲಾಖೆಯು ಬಸ್ ಮಾಲೀಕರನ್ನು ತನಿಖೆಗೆ ಹಾಜರಾಗಲು ಸೂಚಿಸಿದೆ. ಇದರ ಜೊತೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಇತರ ಬಸ್‌ಗಳ ಬಗ್ಗೆ ತನಿಖೆ ನಡೆಸಿ ಅಕ್ರಮವಾಗಿ ಮಾಡಿಫೈಗೊಳಿಸಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Source: Mathrubhumi News/YouTube

Most Read Articles

Kannada
English summary
Bus driver performs stunts while on school duty gets arrested - Read in Kannada
Story first published: Saturday, November 30, 2019, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X